ಕರ್ನಾಟಕದ ಎಲ್ಲಾ ಮತದಾರರು ಪ್ರಧಾನಿ ನರೇಂದ್ರ ಮೋದಿ ಪರವಾಗಿ ಮಾತನಾಡಿದ್ದಾರೆಯೇ? ಇಲ್ಲ, ಈ ಕ್ಲಿಪ್ ಅನ್ನು ಎಡಿಟ್ ಮಾಡಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ಏಪ್ರಿಲ್ 24 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕರ್ನಾಟಕದ ಎಲ್ಲಾ ಮತದಾರರು ಪ್ರಧಾನಿ ನರೇಂದ್ರ ಮೋದಿ ಪರವಾಗಿ ಮಾತನಾಡಿದ್ದಾರೆಯೇ? ಇಲ್ಲ, ಈ ಕ್ಲಿಪ್ ಅನ್ನು ಎಡಿಟ್ ಮಾಡಲಾಗಿದೆ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಇಂಡಿಯಾ ಟುಡೇ ಮೂಲ ಬುಲೆಟಿನ್ ವೀಡಿಯೋ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಪರವಾಗಿ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದನ್ನು ಒಳಗೊಂಡಿದೆ.

ಕ್ಲೈಮ್ ಐಡಿ 19c3a090

ಹೇಳಿಕೆ ಏನು?

ಇಂಡಿಯಾ ಟುಡೆಯ ಸುದ್ದಿ ನಿರೂಪಕ ರಾಜ್‌ದೀಪ್ ಸರ್ದೇಸಾಯಿ ಅವರು ದಕ್ಷಿಣ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರದಲ್ಲಿ ಬಸ್‌ನೊಳಗೆ ಮತದಾರರೊಂದಿಗೆ ಮಾತನಾಡುವ ಒಂದು ನಿಮಿಷದ  ವೀಡಿಯೋವನ್ನು ಏಪ್ರಿಲ್ ೨೬ ರ ಎರಡನೇ ಹಂತದ ಮತದಾನಕ್ಕೆ ಮುಂಚಿತವಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜ್ಯ ಸವಲತ್ತುಗಳಿಗಿಂತ ಹೆಚ್ಚಿನ ಜನರು ಪ್ರಧಾನಿ ನರೇಂದ್ರ ಮೋದಿಯವರ ಭರವಸೆಗಳಿಗೆ ಆದ್ಯತೆ ನೀಡಿದ್ದಾರೆ ಎಂದು ವೀಡಿಯೋ ಸೂಚಿಸುವಂತಿದೆ. ವೀಡಿಯೋದಲ್ಲಿ, ಸರ್ದೇಸಾಯಿ ಅವರು "ಮೋದಿ ಮತ್ತು ಸಿದ್ದರಾಮಯ್ಯ ಅವರು ನೀಡುವ ಖಾತರಿಗಳ" ನಡುವಿನ ಆದ್ಯತೆಯ ಬಗ್ಗೆ ಸಾರ್ವಜನಿಕರನ್ನು ಕೇಳುತ್ತಾರೆ. 

ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ರಾಜ್‌ದೀಪ್‌ಗೆ ಮೋಯೆ ಮೋಯೆ ಕ್ಷಣ, ಏಕೆಂದರೆ ಕರ್ನಾಟಕದ ಪ್ರತಿಯೊಬ್ಬರೂ ಮೋದಿ ಕಿ ಗ್ಯಾರಂಟಿಯನ್ನು ಬಯಸುತ್ತಾರೆ!" ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು. ಅನೇಕ ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಈ ಕ್ಲಿಪ್ ಫೇಸ್‌ಬುಕ್‌ನಲ್ಲೂ ವೈರಲ್ ಆಗಿದೆ. ಆರ್ಕೈವ್ ಮಾಡಿದ ಇತರ ಆವರುತ್ತಿಗಳನ್ನು  ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರವನ್ನು ಜನರು ಅನುಮೋದಿಸಿದ ಭಾಗಗಳನ್ನು ಹೊರತುಪಡಿಸಿ ವೀಡಿಯೋವನ್ನು ಎಡಿಟ್ ಮಾಡಲಾಗಿದೆ.

ನಾವು ಏನು ಕಂಡುಕೊಂಡಿದ್ದೇವೆ?

ವೈರಲ್ ಕ್ಲಿಪ್‌ನಿಂದ ಸ್ಕ್ರೀನ್‌ಶಾಟ್‌ನ ರಿವರ್ಸ್ ಇಮೇಜ್ ಹುಡುಕಾಟವು ಏಪ್ರಿಲ್ ೧೬, ೨೦೨೪ ರಂದು ಎಕ್ಸ್‌ನಲ್ಲಿ ಇಂಡಿಯಾ ಟುಡೇ ಅಧಿಕೃತ ಖಾತೆಯಿಂದ ಹಂಚಿಕೊಂಡ ಪೋಷ್ಟ್‌ಗೆ ನಮ್ಮನ್ನು ಕರೆದೊಯ್ಯಿತು. “#ಕರ್ನಾಟಕದಲ್ಲಿ ಮೋದಿ Vs ಸಿದ್ದರಾಮಯ್ಯ. ರಾಜ್‌ದೀಪ್ ಸರ್ದೇಸಾಯಿ ನಿಮಗೆ ಗ್ರೌಂಡ್ ರಿಪೋರ್ಟ್ ತರುತ್ತಾರೆ" ಎಂದು ಶೀರ್ಷಿಕೆ ಹೇಳುತ್ತದೆ. ಪೋಷ್ಟ್ ಸುಮಾರು ಆರು ನಿಮಿಷಗಳ ಸುದೀರ್ಘ ವೀಡಿಯೋವನ್ನು ಒಳಗೊಂಡಿದೆ. 

ವೀಡಿಯೋದಲ್ಲಿ, ಮೊದಲ ಮಹಿಳೆ ಸರ್ದೇಸಾಯಿ ಅವರೊಂದಿಗೆ ಮಾತನಾಡುತ್ತಾ, ಉಚಿತ ಬಸ್ ಪ್ರಯಾಣದಿಂದ ನಾನು ಸಂತೋಷವಾಗಿದ್ದೇನೆ ಎಂದು ಹೇಳುತ್ತಾಳೆ. ಎರಡನೇ ಮಹಿಳೆಯೂ ಸಿದ್ದರಾಮಯ್ಯ ಅವರು ನಗದು ಸೌಲಭ್ಯ, ಉಚಿತ ಬಸ್‌ ಪ್ರಯಾಣ, ವಿದ್ಯುತ್‌ ಬಿಲ್‌ ಕಡಿತ ಮಾಡಿದ್ದರಿಂದ ಅವರಿಗೆ ಮತ ಹಾಕುವುದಾಗಿ ಘೋಷಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಅವರ ಬೆಂಬಲಕ್ಕೆ ಸುತ್ತಮುತ್ತಲಿನ ಜನರು ಸಹಮತ ವ್ಯಕ್ತಪಡಿಸುತ್ತಿದ್ದಾರೆ. ವೀಡಿಯೋದಲ್ಲಿರುವ ಮೂರನೇ ಮಹಿಳೆ ಕೂಡ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಾಗಿ ಸೂಚಿಸಿದ್ದಾರೆ. 

ಮುಂದಿನ ಮಹಿಳೆ ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತಾರೆ, ಇದನ್ನು ವೀಡಿಯೋದಲ್ಲಿ ಸುಮಾರು ೨:೦೦ ನಿಮಿಷಗಳಲ್ಲಿ ನೋಡಬಹುದು. ಇದು ಈಗ ಹಂಚಿಕೆಯಾಗುತ್ತಿರುವ ವೈರಲ್ ಕ್ಲಿಪ್ ನ ಭಾಗವಾಗಿದೆ. ಅದೇ ರೀತಿ, ವೀಡಿಯೋದಲ್ಲಿರುವ ಇತರರು ಅಭಿವೃದ್ಧಿಯಿಂದ ರಾಷ್ಟ್ರೀಯ ಭದ್ರತೆಯವರೆಗಿನ ಕಾರಣಗಳನ್ನು ಉಲ್ಲೇಖಿಸಿ ಮೋದಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಾರೆ. 

ವೀಡಿಯೋದ ಕೊನೆಯಲ್ಲಿ, ೨೦೨೪ ರ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ಮೈತ್ರಿ ಮಾಡಿಕೊಂಡಿರುವ ರಾಜ್ಯದಲ್ಲಿ ಜನತಾ ದಳ (ಜಾತ್ಯತೀತ) (ಜೆಡಿಎಸ್) ಪಕ್ಷವನ್ನು ಬೆಂಬಲಿಸುವ ವ್ಯಕ್ತಿಯ ಆಭಿಪ್ರಾಯವನ್ನು ನಾವು ಕೇಳಬಹುದು. ಹಾಗು, "ಸಿದ್ದರಾಮಯ್ಯನವರ ಉಚಿತ ಪ್ರಯೋಜನಗಳು ಒಳ್ಳೆಯದು ಆದರೆ ರಾಷ್ಟ್ರೀಯ ಭದ್ರತೆಗಾಗಿ ನಮಗೆ ಮೋದಿ ಬೇಕು" ಎಂದು ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಗಮನಿಸಬಹುದು.

ರಾಜ್‌ದೀಪ್ ಸರ್ದೇಸಾಯಿ ಅವರ ಎಲೆಕ್ಷನ್ಸ್ ಆನ್ ಮೈ ಪ್ಲೇಟ್ ಕಾರ್ಯಕ್ರಮದ ಭಾಗವಾಗಿ ಈ ಕೆಲವು ಮತದಾರರ ಪ್ರತಿಕ್ರಿಯೆಗಳನ್ನು ಇಂಡಿಯಾ ಟುಡೇ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. 

ವೈರಲ್ ವೀಡಿಯೋ ಕಾಣಿಸಿಕೊಂಡ ನಂತರ ಸರ್ದೇಸಾಯಿ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟೀಕರಣವನ್ನು ನೀಡಿದರು ಮತ್ತು ಹೀಗೆ ಬರೆದಿದ್ದಾರೆ, "ಕರ್ನಾಟಕದಲ್ಲಿ ನಾವು ಬಸ್‌ನಲ್ಲಿ ಮಾಡಿದ ಕಾರ್ಯಕ್ರಮದ ವೀಡಿಯೋವನ್ನು ಬಿಜೆಪಿ ಐಟಿ ಸೆಲ್ ಎಡಿಟ್ ಮಾಡಿದೆ! ಹೌದು, ಪ್ರಧಾನಿ ಮೋದಿ ಕರ್ನಾಟಕದಲ್ಲಿ ಭಾರಿ ಜನಪ್ರಿಯರಾಗಿದ್ದಾರೆ ಆದರೆ ನ್ಯಾಯಯುತವಾಗಿದೆ. ನಿಮ್ಮ ರಾಜಕೀಯ ಕಾರ್ಯಸೂಚಿಗಾಗಿ #ElectionsOnMyPlate ನಿಂದ ನೀವು ಕ್ಲಿಪ್ ಅನ್ನು ಎಡಿಟ್ ಮಾಡಬೇಡಿ ಎಂದು ಖಂಡಿತವಾಗಿ ಒತ್ತಾಯಿಸುತ್ತದೆ. ಸಿಎಂ ಸಿದ್ದರಾಮಯ್ಯ ಅವರನ್ನು ಅನುಮೋದಿಸಿದ ಧ್ವನಿಗಳನ್ನೂ ಏಕೆ ತೋರಿಸಬಾರದು? ಅಥವಾ ರಾಜಕೀಯದಲ್ಲಿ ಎಲ್ಲರಿಗೂ ನ್ಯಾಯವಿದೆಯೇ?”

೨೦೨೩ ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಪ್ರಾರಂಭಿಸಿತು ಮತ್ತು ಅವರಿಗೆ ಮಾಸಿಕ ₹ ೨೦೦೦ ರೂ ನೀಡಿತು ಎಂಬುದನ್ನು ಗಮನಿಸಬೇಕು.

ತೀರ್ಪು

ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂದು ಕೇಳಿದಾಗ ಜನರ ಮಿಶ್ರ ಪ್ರತಿಕ್ರಿಯೆಯನ್ನು ವೀಡಿಯೋ ತೋರಿಸಿದೆ. ಆದರೆ, ಜನರು ಕರ್ನಾಟಕದ ಮುಖ್ಯಮಂತ್ರಿಯನ್ನು ಅನುಮೋದಿಸುವ ಭಾಗವನ್ನು ಎಲ್ಲರೂ ಮೋದಿಯನ್ನು ಬೆಂಬಲಿಸಿದ್ದಾರೆ ಎಂದು ಹೇಳಲು ಎಡಿಟ್ ಮಾಡಲಾಗಿದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.