Misleading: ಕರ್ನಾಟಕ ಸರ್ಕಾರವು ಮೈಸೂರು-ಬೆಂಗಳೂರು ನಡುವೆ ೬ ಪಥಗಳನ್ನು ನಿರ್ಮಿಸಿಲ್ಲ, ಆದರೆ ದಶ ಪಥಗಳ ಹೆದ್ದಾರಿಯನ್ನು ನಿರ್ಮಿಸಿದೆ

ಮೂಲಕ:
ಫೆಬ್ರವರಿ 23 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
Misleading: ಕರ್ನಾಟಕ ಸರ್ಕಾರವು ಮೈಸೂರು-ಬೆಂಗಳೂರು ನಡುವೆ ೬ ಪಥಗಳನ್ನು ನಿರ್ಮಿಸಿಲ್ಲ, ಆದರೆ ದಶ ಪಥಗಳ ಹೆದ್ದಾರಿಯನ್ನು ನಿರ್ಮಿಸಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು Misleading

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಆರು ಪಥದ ಮುಖ್ಯ ರಸ್ತೆ ಮತ್ತು ಎರಡು ಸೇವಾ ರಸ್ತೆಗಳಲ್ಲಿ ನಾಲ್ಕು ಪಥಗಳನ್ನು ಒಳಗೊಂಡಿದೆ, ಇದು ಭಾಗಗಳಲ್ಲಿ ಹತ್ತು ಪಥಗಳ ಹೆದ್ದಾರಿಯಾಗಿದೆ.

ಕ್ಲೈಮ್ ಐಡಿ ed9f8861

ಸಂದರ್ಭ 

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ ೧೦, ೨೦೨೩ ರಂದು ಟ್ವಿಟರ್‌ನಲ್ಲಿ ಮೈಸೂರು ಮತ್ತು ಬೆಂಗಳೂರು ನಡುವಿನ ಹೊಸ ಎಕ್ಸ್‌ಪ್ರೆಸ್‌ವೇಯ ವೀಡಿಯೋವನ್ನು ಹಂಚಿಕೊಂಡರು, ಅದು ಕಾರ್ಯನಿರ್ವಹಿಸುತ್ತಿದೆ ಆದರೆ ಇನ್ನೂ ಉದ್ಘಾಟನೆಯಾಗಬೇಕಿದೆ. ೧೧೭ ಕಿಲೋಮೀಟರ್ ಉದ್ದದ ಏನ್ ಎಚ್-೨೭೫ (NH-275) ಕರ್ನಾಟಕದಲ್ಲಿ ಬೆಂಗಳೂರು, ನಿಡಘಟ್ಟ ಮತ್ತು ಮೈಸೂರನ್ನು ಸಂಪರ್ಕಿಸುತ್ತದೆ. ಬೊಮ್ಮಾಯಿ ತಮ್ಮ ಟ್ವೀಟ್‌ನಲ್ಲಿ, “ಎಂತಹ ನೋಟ! ವಂದೇ ಭಾರತ್ ಎಕ್ಸ್‌ಪ್ರೆಸ್ ಜೊತೆಗೆ ೧೦-ಪಥದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಕರ್ನಾಟಕದ ಅಭೂತಪೂರ್ವ ಬೆಳವಣಿಗೆಯ ಕಥೆಯನ್ನು ಚಿತ್ರಿಸುವ ದೃಶ್ಯ” ಎಂದು ಬರೆದಿದ್ದರೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ಮಾರ್ಗದ ಡ್ರೋನ್ ದೃಶ್ಯಾವಳಿಗಳನ್ನು ವಿಡಿಯೋ ತೋರಿಸುತ್ತದೆ. ಕರ್ನಾಟಕದ ಮುಖ್ಯಮಂತ್ರಿಯವರ ಟ್ವೀಟ್ ಅನ್ನು ಪ್ರತಿಪಕ್ಷಗಳು ಮತ್ತು ಇತರ ರಾಜ್ಯ ನಾಯಕರು ಪ್ರಶ್ನಿಸಲು ಪ್ರಾರಂಭಿಸಿದರು. ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕ ವೈ ಸತೀಶ್ ರೆಡ್ಡಿ ಅವರು ಬೊಮ್ಮಾಯಿ ಅವರ ಟ್ವೀಟ್‌ನ ಸ್ಕ್ರೀನ್‌ಗ್ರಾಬ್ ಅನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, “ಹಾಗಾದರೆ, ೪೦% ಕಮಿಷನ್ ತೆಗೆದುಹಾಕಿದ ನಂತರ ೧೦-ಪಥ ಎಕ್ಸ್‌ಪ್ರೆಸ್‌ವೇ ೬-ಪಥ ಆಗಿ ಮಾರ್ಪಟ್ಟಿದೆಯೇ?” ಈ ಹೇಳಿಕೆಯನ್ನು ಇತರ ವಿರೋಧ ಪಕ್ಷಗಳ ಸದಸ್ಯರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ, ಅವರು ಎಕ್ಸ್‌ಪ್ರೆಸ್‌ವೇ ಕೇವಲ ಆರು-ಪಥದ ಹೆದ್ದಾರಿ ಎಂದು ಹೇಳಿದ್ದಾರೆ.

ಆದರೆ ಈ ಹೇಳಿಕೆ ಸಂದರ್ಭದಿಂದ ಹೊರಗಿಡಲಾಗಿದೆ.


ವಾಸ್ತವವಾಗಿ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಆರು ಪಥಗಳು ಮತ್ತು ಎರಡೂ ಬದಿಯಲ್ಲಿ ಎರಡು ಹೆಚ್ಚುವರಿ ಸೇವಾ ಪಥಗಳಿವೆ ಎಂದು ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳು ಲಾಜಿಕಲಿಗೆ ಹೇಳಿದ್ದಾರೆ. ಎರಡು ಹೆಚ್ಚುವರಿ ಸೇವಾ ಲೇನ್‌ಗಳು ತಾಂತ್ರಿಕವಾಗಿ ಹೆದ್ದಾರಿಯನ್ನು ಹತ್ತು ಪಥವನ್ನಾಗಿ ಮಾಡುತ್ತವೆ.

ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಜನವರಿ ೫, ೨೦೨೩ ರಂದು ಹೀಗೆ ಟ್ವೀಟ್ ಮಾಡಿದ್ದಾರೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯು ಹತ್ತು ಪಥಗಳನ್ನು ಹೊಂದಿರುತ್ತದೆ - ಆರು-ಪಥದ ಪ್ರವೇಶ-ನಿಯಂತ್ರಿತ ಮುಖ್ಯ ಕ್ಯಾರೇಜ್‌ವೇ ಹೆದ್ದಾರಿ ಟ್ರಾಫಿಕ್ ಆಗಿರುತ್ತದೆ ಮತ್ತು ಎರಡೂ ಬದಿಗಳಲ್ಲಿ ಎರಡು ದ್ವಿಪಥದ ಸೇವಾ ರಸ್ತೆಗಳು ಗ್ರಾಮೀಣ ಸಂಚಾರಕ್ಕಾಗಿ ಇರುತ್ತವೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ವೈಮಾನಿಕ ತಪಾಸಣೆಯನ್ನು ಪೂರ್ಣಗೊಳಿಸಿದ ನಂತರ, ಗಡ್ಕರಿ ಶೀರ್ಷಿಕೆಯೊಂದಿಗೆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ, “ಬೆಂಗಳೂರು-ಮೈಸೂರು ನಡುವಿನ ೧೧೭ ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ೮,೪೦೮ ಕೋಟಿ ವೆಚ್ಚದಲ್ಲಿ ೧೦-ಪಥಕ್ಕೆ ಅಭಿವೃದ್ಧಿಪಡಿಸಲಾಗುತ್ತಿದೆ.”

ಮಾರ್ಚ್ ೨೮, ೨೦೨೨ ರಂದು ಪತ್ರಿಕಾ ಮಾಹಿತಿ ಬ್ಯೂರೋ ಮತ್ತು ಜೂನ್ ೭, ೨೦೨೧ ರಂದು ಆಲ್ ಇಂಡಿಯಾ ರೇಡಿಯೋದ ಸುದ್ದಿ ವಿಭಾಗವಾದ ನ್ಯೂಸ್ ಆನ್ ಏರ್, ಹೆದ್ದಾರಿಯು ಆರು-ಪಥದ ಪ್ರವೇಶ-ನಿಯಂತ್ರಿತ ರಸ್ತೆಮಾರ್ಗವಾಗಿದ್ದು, ಸ್ಥಳೀಯ ಪ್ರಯಾಣಕ್ಕಾಗಿ ಎರಡೂ ಬದಿಗಳಲ್ಲಿ ಎರಡು-ಪಥದ ಸೇವಾ ರಸ್ತೆಗಳನ್ನು ಹೊಂದಿದೆ ಎಂದು ವರದಿ ಮಾಡಿವೆ.

ಟೈಮ್ಸ್ ಆಫ್ ಇಂಡಿಯಾ (TOI) ವರದಿಯು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಮಣೀಯ ನೋಟವನ್ನು ತೋರಿಸುತ್ತದೆ, ಅದರಲ್ಲಿ ಮುಖ್ಯ ರಸ್ತೆಯಲ್ಲಿ ಆರು ಪಥಗಳನ್ನು ಮತ್ತು ರಸ್ತೆಯ ಎರಡೂ ಬದಿಯಲ್ಲಿ ತಲಾ ಎರಡು ಪಥಗಳನ್ನು ನೋಡಬಹುದು.

ಬೊಮ್ಮಾಯಿ ಅವರು ಪೋಷ್ಟ್ ಮಾಡಿದ ವೀಡಿಯೋದ ಮೊದಲ ವಿಭಾಗದಲ್ಲಿ ಆರು ಪಥಗಳ ಎಲಿವೇಟೆಡ್ ರಸ್ತೆಯನ್ನು ನೋಡಿದಾಗ ಹೆದ್ದಾರಿಯ ಬಗ್ಗೆ ಗೊಂದಲ ಪ್ರಾರಂಭವಾಯಿತು ಎಂದು ನ್ಯೂಸ್ 9 ಲೈವ್ ವರದಿ ಮಾಡಿದೆ. ಆದರೆ, ವೀಡಿಯೋ ಕೊನೆಗೊಳ್ಳುವ ಸ್ವಲ್ಪ ಮೊದಲು, ಮುಖ್ಯ ಕ್ಯಾರೇಜ್‌ವೇಯ ಎರಡೂ ಬದಿಗಳಲ್ಲಿ ಎರಡು-ಪಥದ ಸೇವಾ ರಸ್ತೆಗಳೊಂದಿಗೆ ಹೆದ್ದಾರಿಯ ವಿಶಾಲ ದೃಷ್ಟಿಕೋನವನ್ನು ಬಹಿರಂಗಪಡಿಸಲು ಕ್ಯಾಮರಾ ಪ್ಯಾನ್ ಮಾಡುತ್ತದೆ. ಟ್ರಾಫಿಕ್ ಎಂಜಿನಿಯರಿಂಗ್ ಮತ್ತು ನಿರ್ವಹಣೆಯಲ್ಲಿ ನಾಲ್ಕು ದಶಕಗಳ ಅನುಭವ ಹೊಂದಿರುವ ತಜ್ಞ ಎಂಎನ್ ಶ್ರೀಹರಿ ನ್ಯೂಸ್ 9 ಲೈವ್ ಗೆ, “ಭಾರತ ಸರ್ಕಾರದ ನಿಯಮವಿದೆ, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳು ತುರ್ತು ಪರಿಸ್ಥಿತಿಗಾಗಿ ಮತ್ತು ರಸ್ತೆ ತಡೆಗಳು ಮತ್ತು ಸಂಚಾರ ದಟ್ಟಣೆಯ ಸಂದರ್ಭಗಳಲ್ಲಿ ಎರಡೂ ಬದಿಗಳಲ್ಲಿ ಸೇವಾ ರಸ್ತೆಗಳನ್ನು ಹೊಂದಿರಬೇಕು ಎಂದು ಹೇಳುತ್ತದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು ೧೦-ಪಥ ಎಕ್ಸ್‌ಪ್ರೆಸ್‌ವೇ ಎಂದು ಕರೆಯಲಾಗುತ್ತದೆ, ಇದರಲ್ಲಿ ಆರು ಮುಖ್ಯ ಪಥಗಳು ಮತ್ತು ಎರಡು ಸರ್ವಿಸ್ ರಸ್ತೆಗಳು ತಲಾ ಎರಡು ಪಥಗಳು ಹೊಂದಿವೆ” ಎಂದು ತಿಳಿಸಿದ್ದಾರೆ.


ತೀರ್ಪು

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಹತ್ತು ಪಥಗಳನ್ನು ಹೊಂದಿದೆ, ಮುಖ್ಯ ಕ್ಯಾರೇಜ್‌ವೇಯ ಆರು ಪಥಗಳು ಮತ್ತು ಎರಡು ಸರ್ವಿಸ್ ರಸ್ತೆಗಳಿಂದ ನಾಲ್ಕು ಪಥಗಳು ಸೇರಿವೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.