ಇಲ್ಲ, ಕರ್ನಾಟಕ ಸರ್ಕಾರವು ರಂಜಾನ್‌ಗಾಗಿ ಎಲ್ಲಾ ಶಾಲೆಗಳ ಸಮಯವನ್ನು ಮಾರ್ಪಡಿಸಿಲ್ಲ

ಮೂಲಕ: ಅಂಕಿತಾ ಕುಲಕರ್ಣಿ
ಮಾರ್ಚ್ 13 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಕರ್ನಾಟಕ ಸರ್ಕಾರವು ರಂಜಾನ್‌ಗಾಗಿ ಎಲ್ಲಾ ಶಾಲೆಗಳ ಸಮಯವನ್ನು ಮಾರ್ಪಡಿಸಿಲ್ಲ

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ರಂಜಾನ್‌ಗೆ ಮುಂಚಿತವಾಗಿ ಸರ್ಕಾರಿ ಉರ್ದು ಶಾಲೆಗಳಿಗೆ ಮಾತ್ರ ಶಾಲಾ ಸಮಯವನ್ನು ಬದಲಾಯಿಸಲಾಗಿದೆ; ನಿರ್ದೇಶನವು ಕರ್ನಾಟಕದ ಎಲ್ಲಾ ಶಾಲೆಗಳಿಗೆ ಅಲ್ಲ.

ಕ್ಲೈಮ್ ಐಡಿ e18ff2a0

ಹೇಳಿಕೆ ಏನು?

ಜಾಗತಿಕವಾಗಿ ಆಚರಿಸಲಾಗುವ ಇಸ್ಲಾಮಿಕ್ ತಿಂಗಳ ಉಪವಾಸದ ರಂಜಾನ್ ಅವಧಿಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಸಮಯವನ್ನು ಮಾರ್ಪಡಿಸಿದೆ ಎಂಬ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

ಅಂತಹ ಒಂದು ಪೋಷ್ಟ್ (ಆರ್ಕೈವ್ ಇಲ್ಲಿದೆ) 'Mr Sinha' ಎಂಬ ಎಕ್ಸ್ (ಹಿಂದೆ ಟ್ವಿಟ್ಟರ್), ಖಾತೆ ಇಂದ ಹಂಚಿಕೊಳ್ಳಲಾಗಿದೆ. ಈ ಖಾತೆಯು ತಪ್ಪುದಾರಿಗೆಳೆಯುವ ಹೇಳಿಕೆಗಳು ಮತ್ತು ತಪ್ಪು ಮಾಹಿತಿಯನ್ನು ಹರಡುವ ಇತಿಹಾಸವನ್ನು ಹೊಂದಿದೆ. ಈ ಪೋಷ್ಟ್ ನ ಶೀರ್ಷಿಕೆ "ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ #ರಂಜಾನ್‌ನಿಂದಾಗಿ ಶಾಲೆಯ ಸಮಯವನ್ನು ಬದಲಾಯಿಸಲಾಗಿದೆ" ಎಂಬ ಶೀರ್ಷಿಕೆಯನ್ನು ಪೋಸ್ಟ್ ಮಾಡಲಾಗಿದೆ, ಅದೇ ಸರ್ಕಾರವು ಹಿಂದೂಗಳಿಗೆ ಹನುಮಾನ್ ಧ್ವಜ (sic) ಹೊಂದುವುದನ್ನು ನಿಲ್ಲಿಸಿದೆ. ಪೋಷ್ಟ್ ಬರೆಯುವ ಸಮಯದಲ್ಲಿ ೧೪೧,೫೦೦ ವೀಕ್ಷಣೆಗಳನ್ನು ಗಳಿಸಿದೆ.

ಹೇಳಿಕೆಯನ್ನು ಅನ್ನು ಫೇಸ್‌ಬುಕ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ ಮತ್ತು ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಇದಲ್ಲದೆ, ಹಲವಾರು ಸ್ಥಳೀಯ ಮಾಧ್ಯಮಗಳು ಈ ಕಥೆಯನ್ನು ಒಳಗೊಂಡಿವೆ, ಈ ಹೇಳಿಕೆಗಳನ್ನು ಪ್ರತಿಧ್ವನಿಸುವ ಮುಖ್ಯಾಂಶಗಳನ್ನು ಪ್ರಕಟಿಸಿವೆ. ಅಂತಹ ವರದಿಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. 

 ವೈರಲ್  ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ನಾವು ಕಂಡುಹಿಡಿದದ್ದು ಏನು?

ನಿರ್ದಿಷ್ಟ ಕೀವರ್ಡ್‌ಗಳನ್ನು ಬಳಸಿಕೊಂಡು ವಿವರವಾದ ಹುಡುಕಾಟವು ಮಾರ್ಚ್ ೮, ೨೦೨೪ ರಂದು ಪ್ರಟಕವಾದ ಪ್ರಜಾವಾಣಿಯ ವರದಿಗೆ ನಮ್ಮನ್ನು ಕರೆದೊಯ್ಯಿತು. ಹಿಂದಿನ ವರ್ಷಗಳಿಗೆ ಅನುಗುಣವಾಗಿ, ರಂಜಾನ್‌ಗಾಗಿ ಉರ್ದು ಶಾಲೆಗಳ ಸಮಯವನ್ನು ಮಾತ್ರ ಬದಲಾಯಿಸಲಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ. ಹೊಸ ವೇಳಾಪಟ್ಟಿಯು ಶಾಲಾ ಸಮಯವನ್ನು ಬೆಳಿಗ್ಗೆ ೮:೦೦ ರಿಂದ ಮಧ್ಯಾಹ್ನ ೧೨:೪೫  ರವರೆಗೆ ನಿಗದಿಪಡಿಸುತ್ತದೆ, ಮೊದಲು ೯:೩೦ ರಿಂದ ಸಂಜೆ ೪:೦೦ ರವರೆಗೆ ನಡೆಸಲಾಗುತ್ತಿತ್ತು. ಶೈಕ್ಷಣಿಕ ದಿನಚರಿಗಳಿಗೆ ಅಡ್ಡಿಯಾಗದಂತೆ ತಿಂಗಳ ಆಚರಣೆಗೆ ಅವಕಾಶ ಕಲ್ಪಿಸಾಲು ಈ ಬದಲಾವಣೆಯನ್ನು ಮಾಡಲಾಗಿದೆ.

ನ್ಯೂಸ್ ೧೮ ಕನ್ನಡದ ವರದಿಯು ಈ ವಿವರಗಳೊಂದಿಗೆ ಹೊಂದಿಕೆಯಾಗುತ್ತದೆ, ಬದಲಾವಣೆಯು ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಪ್ರತ್ಯೇಕವಾಗಿದೆ ಮತ್ತು ಏಪ್ರಿಲ್ ೧೦, ೨೦೨೪ ರವರೆಗೆ ಇರುತ್ತದೆ ಎಂದು ಹೇಳುತ್ತದೆ. ಇತರ ಸಂಸ್ಥೆಗಳಿಗೆ ದೈನಂದಿನ ಶೈಕ್ಷಣಿಕ ಚಟುವಟಿಕೆಗಳಿಗಾಗಿ ನಿಯಮಿತ ಶಾಲಾ ಸಮಯವನ್ನು ಬೆಳಿಗ್ಗೆ ೧೦:೦೦ ರಿಂದ ೪:೨೦ ರವರೆಗೆ ನಿರ್ವಹಿಸಲಾಗುತ್ತದೆ. ಟಿವಿ೯ ಮತ್ತು ಉದಯವಾಣಿ ಸೇರಿದಂತೆ ಇತರ ಸ್ಥಳೀಯ ಮಾಧ್ಯಮಗಳು ಇದೇ ರೀತಿಯ ದೃಢೀಕರಣವನ್ನು ನೀಡಿವೆ.

ಹೆಚ್ಚಿನ ತನಿಖೆಯಲ್ಲಿ ಕರ್ನಾಟಕ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದಿಂದ ಸರ್ಕಾರದ ಸುತ್ತೋಲೆಯನ್ನು ಕಂಡುಕೊಂಡೆವು, ಅದು ಹೇಳುತ್ತದೆ, “ವಿಷಯ:ರಂಜಾನ್ ಮಾಹೆಯಲ್ಲಿ ರಾಜ್ಯದ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಾಲಾ ಅವಧಿ ಬದಲಾವಣೆ ಮಾಡುವ ಬಗ್ಗೆ."

ಸರ್ಕಾರದ ಸುತ್ತೋಲೆಯ ಸ್ಕ್ರೀನ್‌ಶಾಟ್. (ಮೂಲ: ವಿಶೇಷ ವ್ಯವಸ್ಥೆ)

ನಂತರ ಲಾಜಿಕಲಿ ಫ್ಯಾಕ್ಟ್ಸ್ ಕರ್ನಾಟಕದ ಉಡುಪಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಶಿಕ್ಷಕಿ ಡೋರಾ ಅವರನ್ನು ಸಂಪರ್ಕಿಸಿತು, ಅವರು ಹೀಗೆ ಸ್ಪಷ್ಟಪಡಿಸಿದರು, "ಇಲ್ಲ, ನಿರ್ದೇಶನವು ಉರ್ದು ಶಾಲೆಗಳಿಗೆ ಮಾತ್ರ ಅನ್ವಯಿಸುತ್ತದೆ. ನಮ್ಮ ಶಾಲೆಯು ಸಾಮಾನ್ಯ ವೇಳಾಪಟ್ಟಿಯಲ್ಲಿ ಬೆಳಿಗ್ಗೆ ೯:೩೦ ರಿಂದ ಸಂಜೆ ೪:೩೦ ರವರೆಗೆ ಕಾರ್ಯನಿರ್ವಹಿಸುತ್ತದೆ."

ಮತ್ತು, ನಾವು ಕರ್ನಾಟಕದ ದಾವಣಗೆರೆ ಜಿಲ್ಲೆಯ ಮತ್ತೊಂದು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗವೇಣಿ ಯೇರಿ ಅವರನ್ನು ಸಂಪರ್ಕಿಸಿದೆವು, ಅವರು ಹೀಗೆ ಹೇಳಿದರು, "ಸುತ್ತೋಲೆ ಬಂದಿದ್ದರೂ, ಅದು ಉರ್ದು ಶಾಲೆಗಳಿಗೆ ಮಾತ್ರ ಸಂಬಂಧಿಸಿದೆ. ಆದ್ದರಿಂದ, ನಮ್ಮ ವಿದ್ಯಾರ್ಥಿಗಳು ತಮ್ಮ ನಿಯಮಿತ ಶಾಲಾ ಸಮಯ ೯ ರಿಂದ ಸಂಜೆ  ೪:೨೦ ರವರೆಗೆ ಶಾಲೆಯಲ್ಲಿ ಇರುತ್ತಾರೆ. "

ತೀರ್ಪು

ರಂಜಾನ್ ಸಮಯದಲ್ಲಿ ಶಾಲಾ ಸಮಯದ ಬದಲಾವಣೆಯು ಕರ್ನಾಟಕದ ಉರ್ದು ಶಾಲೆಗಳಿಗೆ ಸೀಮಿತವಾಗಿದೆ. ಆದ್ದರಿಂದ, ರಾಜ್ಯದ ಎಲ್ಲಾ ಶಾಲೆಗಳು ತಮ್ಮ ವೇಳಾಪಟ್ಟಿಯನ್ನು ಮಾರ್ಪಡಿಸಿವೆ ಎಂಬ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ.

Read this fact-check in English here. 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.