ಇಲ್ಲ, ಕರ್ನಾಟಕ ಸರ್ಕಾರವು ಸಾರ್ವಜನಿಕ ಶಾಲಾ ಅಭಿವೃದ್ಧಿ ನಿಧಿಯನ್ನು ಕೇವಲ ೫೦ ಕೋಟಿಗೆ ಸೀಮಿತಗೊಳಿಸಿಲ್ಲ

ಮೂಲಕ: ಅಂಕಿತಾ ಕುಲಕರ್ಣಿ
ಫೆಬ್ರವರಿ 29 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಕರ್ನಾಟಕ ಸರ್ಕಾರವು ಸಾರ್ವಜನಿಕ ಶಾಲಾ ಅಭಿವೃದ್ಧಿ ನಿಧಿಯನ್ನು ಕೇವಲ ೫೦ ಕೋಟಿಗೆ ಸೀಮಿತಗೊಳಿಸಿಲ್ಲ

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಬಜೆಟ್‌ನಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರೂ. ೮೫೦ ಕೋಟಿಗೂ ಅಧಿಕ ಹಣವನ್ನು ಮೀಸಲಿಡಲಾಗಿದ್ದು, ವಿಜ್ಞಾನ, ಕಂಪ್ಯೂಟರ್ ಲ್ಯಾಬ್‌ಗಳು ಮತ್ತು ಇಂಟರ್ನೆಟ್ ಸೌಲಭ್ಯಗಳಿಗೆ ೫೦ ಕೋಟಿ ರೂ.

ಕ್ಲೈಮ್ ಐಡಿ b669ef75

ಹೇಳಿಕೆ ಏನು?

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ ೧೬, ೨೦೨೪ ರಂದು ೨೦೨೪-೨೫ನೇ ಆರ್ಥಿಕ ವರ್ಷದ ರಾಜ್ಯ ಬಜೆಟ್ ನಲ್ಲಿ ಒಟ್ಟು ೩.೭೧ ಲಕ್ಷ ಕೋಟಿ ಅನ್ನು ಅನಾವರಣಗೊಳಿಸಿದರು, ಈ ಹಿನ್ನಲೆಯಲ್ಲಿ ರಾಜ್ಯದೊಳಗಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಪೂರ್ಣ ಬಜೆಟ್‌ನಲ್ಲಿ ಕೇವಲ ೫೦ ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿ ಕಂಡುಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ, ವಕ್ಫ್ ಬೋರ್ಡ್ ಮತ್ತು ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ಕ್ರಮವಾಗಿ ೧೦೦ ಕೋಟಿ ಮತ್ತು ೨೦೦ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಎಂದು ಪೋಷ್ಟ್ ಗಳು ಹೇಳುತ್ತವೆ.

ಕನ್ನಡ ಸುದ್ದಿ ವರದಿಯ ಸ್ಕ್ರೀನ್‌ಶಾಟ್ ಒಳಗೊಂಡ ನಿರ್ದಿಷ್ಟ ಪೋಷ್ಟ್, “ಸರ್ಕಾರಿ ಪ್ರೌಢ  ಶಾಲೆಗಳ ಅಭಿವೃದ್ಧಿಗೆ ೫೦ ಕೋಟಿ” ಎಂಬ ಶೀರ್ಷಿಕೆಯ ಶಾಲಾ ಅಭಿವೃದ್ಧಿಯ ನಿರ್ಲಕ್ಷ್ಯವನ್ನು ಸೂಚಿಸುತ್ತದೆ.  ಸ್ಕ್ರೀನ್‌ಶಾಟ್‌ನ ಕೆಳಗಿನ ಪಠ್ಯವು ಹೀಗಿದೆ: "ಮಂದಿರದ ಬದಲು ಶಾಲೆ ಕಟ್ಟಿ ಅಂತ ಹೇಳಿದ ಮಹಾನ್ ವ್ಯಕ್ತಿಗಳು ಇವಾಗ ಕಾಣೆ ಆಗ್ತಾರೆ, ಯಾಕೆಂದರೆ ವಕ್ಸ್ ಬೋರ್ಡ್ ಅಭಿವೃದ್ಧಿಗೆ 100 ಕೋಟಿ ಕ್ರಿಶ್ಚಿಯನ್ ಮಿಷನರಿ ಅಭಿವೃದ್ಧಿಗೆ 200 ಕೋಟಿ, ಆದರೆ ಶಾಲೆಗೆ ಮಾತ್ರ 50 ಕೋಟಿ ಸಾಕಲ್ವಾ....?"  ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ಪೋಷ್ಟ್ ಗಳಲ್ಲಿ ಮಾಡಿದ ಹೇಳಿಕೆ ಸಂದರ್ಭದಿಂದ ಹೊರಗೆ ಪ್ರಸ್ತುತ ಪಡಿಸಲಾಗಿದೆ ; ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ, ಕಂಪ್ಯೂಟರ್ ಲ್ಯಾಬ್‌ಗಳು ಮತ್ತು ಇಂಟರ್ನೆಟ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ೫೦ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಮತ್ತು ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಗೆ ರೂ ೮೫೦ ಕೋಟಿಗಿಂತ ಹೆಚ್ಚು ವಿನಿಯೋಗಿಸಲಾಗಿದೆ.

ಸತ್ಯ ಏನು?

ಕರ್ನಾಟಕ ಆರ್ಥಿಕ ಇಲಾಖೆಯ ವೆಬ್ಸೈಟ್ ನಲ್ಲಿ ಕಾಣಬಹುದಾದ ಅಧಿಕೃತ ಬಜೆಟ್ ಡಾಕ್ಯುಮೆಂಟ್, “ಶಾಲಾ ಶಿಕ್ಷಣ ಮತ್ತು ಸಾಕ್ಷರತೆ” ವಿಭಾಗದ ಅಡಿಯಲ್ಲಿ ಪುಟ ೩೫ ರಿಂದ ವಿವರಗಳನ್ನು ಹೊಂದಿದೆ . ಹಿಂದಿನ ಆರ್ಥಿಕ ವರ್ಷದಲ್ಲಿ (೨೦೨೩-೨೪) ಸರ್ಕಾರಿ ಶಾಲೆ ಮತ್ತು ಪೂರ್ವ-ವಿಶ್ವವಿದ್ಯಾಲಯದ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ರೂ ೬೦೦ ಕೋಟಿಯನ್ನು ನೀಡಲಾಗಿತ್ತು. ಈ ಹಂಚಿಕೆಯನ್ನು ೨೦೨೪-೨೫ನೇ ಸಾಲಿಗೆ ರೂ ೮೫೦ ಕೋಟಿಗೆ ಹೆಚ್ಚಿಸಲಾಗಿದ್ದು, ಹೊಸ ತರಗತಿ ಕೊಠಡಿಗಳು ಮತ್ತು ಶೌಚಾಲಯ ಸೌಲಭ್ಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಅದಲ್ಲದೆ, ರೂ ೫೦ ಕೋಟಿಯನ್ನು ವಿಜ್ಞಾನ ಮತ್ತು ಕಂಪ್ಯೂಟರ್ ಲ್ಯಾಬ್‌ಗಳ ಆಧುನೀಕರಣವನ್ನು ಬೆಂಬಲಿಸುತ್ತದೆ. ಹಾಗು ೧೦ ಕೋಟಿ ರೂಪಾಯಿಗಳು ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು 'ಮರುಸಿಂಚನ ಕಾರ್ಯಕ್ರಮ'ಕ್ಕೆ ಧನಸಹಾಯ ನೀಡುತ್ತವೆ. ಪ್ರಿ-ಯೂನಿವರ್ಸಿಟಿ ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಹ ಹಣವನ್ನು ಮೀಸಲಿಡಲಾಗಿದೆ. 

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ನಿಗದಿಪಡಿಸಿದ ಮೊತ್ತವನ್ನು ಹೈಲೈಟ್ ಮಾಡುವ ರಾಜ್ಯ ಬಜೆಟ್ ದಾಖಲೆಯನ್ನು ಸ್ಕ್ರೀನ್‌ಶಾಟ್ ತೋರಿಸುತ್ತದೆ. (ಮೂಲ: ಕರ್ನಾಟಕ ಆರ್ಥಿಕ ಇಲಾಖೆ/ಸ್ಕ್ರೀನ್‌ಶಾಟ್)

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯು ಈ ಅಂಕಿಅಂಶಗಳನ್ನು ದೃಢೀಕರಿಸುತ್ತದೆ, ೨೦೨೪ ರ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರವು ಒಟ್ಟು ರೂ ೪೪,೪೨೨  ಕೋಟಿಯನ್ನು ನೀಡಲಾಗಿದೆ. ಇದಲ್ಲದೆ, ವೈರಲ್ ಪೋಷ್ಟ್ ನಲ್ಲಿ ಉಲ್ಲೇಖಿಸಲಾದ ಟಿವಿ೯ ಕನ್ನಡ ಸುದ್ದಿ ವಿಭಾಗವು ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು, ಅದು ರೂ ೫೦ ಕೋಟಿಯನ್ನು ಲ್ಯಾಬ್ ನವೀಕರಣಗಳಿಗಾಗಿ ಉದ್ದೇಶಿಸಲಾಗಿದೆ ಎಂದು ಸ್ಪಷ್ಟಪಡಿಸುತ್ತದೆ-ಈ ವಿವರವನ್ನು ತಪ್ಪುದಾರಿಗೆಳೆಯುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿ ಹೇಳಲಾಗಿಲ್ಲ. 

ವಕ್ಫ್ ಬೋರ್ಡ್ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಬಜೆಟ್ ಹಂಚಿಕೆಗಳ ಬಗ್ಗೆಯ ಹೇಳಿಕೆಗಳು ನಿಖರವಾಗಿವೆ, ಆದರೂ ಅವು ನಿರ್ಣಾಯಕ ಸಂದರ್ಭವನ್ನು ಬಿಟ್ಟುಹಾಕಿವೆ. "ಅಲ್ಪಸಂಖ್ಯಾತರ ಕಲ್ಯಾಣ" ವಿಭಾಗದೊಳಗೆ ಬಜೆಟ್ ದಾಖಲೆಯು ಹೇಳುತ್ತದೆ: "ರಾಜ್ಯದಲ್ಲಿನ  ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗು ಅಭಿವೃದ್ಧಿಗಾಗಿ ರೂ. ೧೦೦ ಕೋಟಿ  ಅನುದಾನ ಒದಗಿಸಲಾಗುವುದು" ಮತ್ತು " ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ರೂ. ೨೦೦ ಕೋಟಿ ಒದಗಿಸಲಾಗುವುದು. ವೈರಲ್ ಪೋಷ್ಟ್ ನಲ್ಲಿ ಉಲ್ಲೇಖಿಸಲಾದ ಅಂಕಿಅಂಶಗಳು ಸರಿಯಾಗಿದ್ದರೂ ಮತ್ತು ಬಜೆಟ್‌ನಲ್ಲಿ ಸೇರಿಸಿದ್ದರೂ, ಅವು ಶೈಕ್ಷಣಿಕ ಮೂಲಸೌಕರ್ಯಕ್ಕಾಗಿ ಮೀಸಲಿಟ್ಟ ಹೂಡಿಕೆಯನ್ನು ಮೀರುವುದಿಲ್ಲ.

ತೀರ್ಪು

೨೦೨೪-೨೫ ಕ್ಕೆ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಕಂಪ್ಯೂಟರ್ ಲ್ಯಾಬ್‌ಗಳಿಗೆ ೫೦ ಕೋಟಿ ರೂ. ಗಳ ಹಂಚಿಕೆಯು ಶೈಕ್ಷಣಿಕ ಅಭಿವೃದ್ಧಿ ಕಾರ್ಯತಂತ್ರದೊಳಗೆ ಉದ್ದೇಶಿತ ಹೂಡಿಕೆಯಾಗಿದೆ, ಇದು ೮೫೦ ಕೋಟಿ ರೂಪಾಯಿಗಳನ್ನು ಮೀರಿದ ಶಾಲಾ ಮೂಲಸೌಕರ್ಯಕ್ಕೆ ಪೂರ್ಣ ಪ್ರಮಾಣದ ಹಣವಲ್ಲ. ಆದ್ದರಿಂದ, ಬಜೆಟ್‌ನ ಉದ್ದೇಶಗಳು ಮತ್ತು ಹಂಚಿಕೆಗಳನ್ನು ತಪ್ಪಾಗಿ ಪ್ರತಿನಿಧಿಸುವುದರಿಂದ ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ. 

Read our fact-check in English here. 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.