ಇಲ್ಲ, ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನಕ್ಕೆ ತೆರಳುವ ನಡಿಗೆಯ ಮಾರ್ಗವನ್ನು ಮುಚ್ಚಿಲ್ಲ

ಮೂಲಕ: ರಾಜೇಶ್ವರಿ ಪರಸ
ಆಗಸ್ಟ್ 23 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನಕ್ಕೆ ತೆರಳುವ ನಡಿಗೆಯ ಮಾರ್ಗವನ್ನು ಮುಚ್ಚಿಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಆರು ವರ್ಷದ ಮಗುವಿನ ಮೇಲೆ ಚಿರತೆ ದಾಳಿ ಮಾಡಿದ ನಂತರ ನಡಿಗೆಯ ಮಾರ್ಗವನ್ನು ಬಳಸಲು ಕೆಲವು ಕ್ರಮಗಳನ್ನು ಘೋಷಿಸಲಾಗಿದೆ.

ಕ್ಲೈಮ್ ಐಡಿ 64c91546

ಸಂದರ್ಭ

ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ವೆಂಕಟೇಶ್ವರ ದೇವಸ್ಥಾನದ ಆಡಳಿತವಾದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ದೇವಸ್ಥಾನಕ್ಕೆ ಪಾದಚಾರಿ ಮಾರ್ಗವನ್ನು ಮುಚ್ಚುತ್ತಿದೆ ಎಂಬ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆಗಸ್ಟ್ ೧೩ ರಂದು ಫೇಸ್‌ಬುಕ್ ಬಳಕೆದಾರ ಸುಧಾ ಚಿಂತಾ ಅವರು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ಅವರ ಫೋಟೋವನ್ನು ತೆಲುಗು ಭಾಷೆಯಲ್ಲಿ ಪೋಷ್ಟ್ ಮಾಡಿದ್ದು, "ನಾವು ತಿರುಮಲ ನಡಿಗೆಯನ್ನು ಮುಚ್ಚಲು ಯೋಜಿಸುತ್ತಿದ್ದೇವೆ" ಎಂದು ರೆಡ್ಡಿ ಅವರು  ಹೇಳಿರುವಂತೆ ಹಂಚಿಕೊಳ್ಳಲಾಗಿದೆ. ತೆಲುಗಿನ ಪಠ್ಯವು "ನಾಶಮಾಡುವುದು, ಮುಚ್ಚುವುದು, ಇದನ್ನೇ ನೀವು ಮಾಡಲು ಸಮರ್ಥರು" ಎಂದು ವೈಎಸ್‌ಆರ್‌ಸಿಪಿ ಆಡಳಿತದ ಆಂಧ್ರಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ.

ಅದೇ ಪೋಷ್ಟ್ ಅನ್ನು ತೆಲುಗಿನ ಹಲವಾರು ಬಳಕೆದಾರರು ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಮತ್ತು ಇದು "ಹಿಂದೂಗಳ ವಿರುದ್ಧದ ನಿರ್ಧಾರ" ಎಂದು ಹೇಳಲಾಗುತ್ತಿದೆ.


ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಕ್ಲೈಮ್‌ಗಳ ಸ್ಕ್ರೀನ್‌ಗ್ರಾಬ್‌ಗಳು (ಮೂಲ: ವಾಟ್ಸ್ ಆಪ್, ಫೇಸ್ಬುಕ್/@Sudhachinta)

ಆಗಸ್ಟ್ ೧೧ ರಂದು ತನ್ನ ಹೆತ್ತವರೊಂದಿಗೆ ಅಲಿಪಿರಿ ನಡಿಗೆಯಲ್ಲಿ ಹೋಗುತ್ತಿದ್ದ ಆರು ವರ್ಷದ ಬಾಲಕಿ ಲಕ್ಷಿತಾ ಮೇಲೆ ಚಿರತೆ ದಾಳಿಯ ಹಿನ್ನೆಲೆಯಲ್ಲಿ ಈ ಊಹಾಪೋಹ ಬಂದಿದೆ. ಸ್ಥಳೀಯ ಸುದ್ದಿವಾಹಿನಿ ಸಾಕ್ಷಿ ವರದಿಯ ಪ್ರಕಾರ, ಆರು ವರ್ಷದ ಮಗು ಆಗಸ್ಟ್ ೧೧ ರಂದು ತಿರುಮಲಕ್ಕೆ ತೆರಳುತ್ತಿದ್ದಾಗ ನಾಪತ್ತೆಯಾಗಿದ್ದು, ಮರುದಿನ ಪೊಲೀಸರಿಗೆ ಕಾಡಿನಲ್ಲಿ ಮಗುವಿನ ಶವ ಸಿಕ್ಕಿತು.

ಆದರೆ, ನಡಿಗೆದಾರಿಯನ್ನು ಮುಚ್ಚಲಾಗಿದೆ ಎಂಬ ಹೇಳಿಕೆಯು ಸಂದರ್ಭದಿಂದ ಹೊರಗಿಡಲಾಗಿದೆ.

ವಾಸ್ತವವಾಗಿ

ತಿರುಪತಿ ದೇವಸ್ಥಾನವು ಬೆಟ್ಟದ ಮೇಲಿರುವುದರಿಂದ, ಭಕ್ತರು ದೇವಸ್ಥಾನಕ್ಕೆ ಚಾರಣ ಮಾಡಲು ಬಳಸಬಹುದಾದ ಎರಡು ನಡಿಗೆ ಮಾರ್ಗಗಳಿವೆ, ಅವುಗಳಲ್ಲಿ ಒಂದು ಜನಪ್ರಿಯ ಅಲಿಪಿರಿ ನಡಿಗೆ ಮಾರ್ಗವಾಗಿದೆ. ನಾವು ಟಿಟಿಡಿಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದ್ದೇವೆ ಮತ್ತು ಭಕ್ತರಿಗೆ ಪಾದಚಾರಿ ಮಾರ್ಗವನ್ನು ಮುಚ್ಚಲಾಗಿದೆ ಎಂದು ಘೋಷಿಸಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ.

ಲಾಜಿಕಲಿ ಫ್ಯಾಕ್ಟ್ಸ್ ನೊಂದಿಗೆ ಮಾತನಾಡಿದ ಟಿಟಿಡಿ ಉಪ ಕಾರ್ಯನಿರ್ವಹಣಾಧಿಕಾರಿ ಲೋಕನಾಧಂ, "ತಿರುಮಲಕ್ಕೆ ಪಾದಚಾರಿ ಮಾರ್ಗವನ್ನು ಮುಚ್ಚುವ ಯಾವುದೇ ಯೋಜನೆಯನ್ನು ನಾವು ಘೋಷಿಸಿಲ್ಲ, ಆದರೆ ಭಕ್ತರ ರಕ್ಷಣೆಗಾಗಿ ನಾವು ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದೇವೆ" ಎಂದು ಹೇಳಿದರು.

ಹ್ಯಾನ್ಸ್ ಇಂಡಿಯಾದ ವರದಿಯ ಪ್ರಕಾರ, ಆರು ವರ್ಷದ ಮಗುವಿನ ಮೇಲೆ ಚಿರತೆ ದಾಳಿಯ ನಂತರ, ಟಿಟಿಡಿ ಭಕ್ತರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಘೋಷಿಸಿತು, ಮಧ್ಯಾಹ್ನ ೨ ಗಂಟೆಯ ನಂತರ ೧೨ ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ನಿರ್ಬಂಧಿಸುವುದು, ಭಕ್ತರಿಗೆ ಕೋಲು ಹಂಚುವುದು, ಭದ್ರತಾ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸುವುದು. ದೇವಾಲಯದ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಉಲ್ಲೇಖಿಸಿ, ದಿ ನ್ಯೂಸ್ ಮಿನಿಟ್, ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಯಾತ್ರಾರ್ಥಿಗಳನ್ನು ಬೆಳಿಗ್ಗೆ ೫ ರಿಂದ ಮಧ್ಯಾಹ್ನ ೨ ರವರೆಗೆ ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಮಾರ್ಗಗಳಲ್ಲಿ - ದೇವಸ್ಥಾನಕ್ಕೆ ಹೋಗುವ ಎರಡೂ ಕಾಲುದಾರಿಗಳಲ್ಲಿ ಚಾರಣ ಮಾಡಲು ಅನುಮತಿಸಲಾಗುವುದು ಎಂದು ವರದಿ ಮಾಡಿದೆ. 

ತಿರುಪತಿಯ ಸ್ಥಳೀಯ ಪತ್ರಕರ್ತರೊಬ್ಬರು ಲಾಜಿಕಲಿ ಫ್ಯಾಕ್ಟ್ಸ್‌ಗೆ ತಿಳಿಸಿದರು, ವಿಶೇಷ ವಿನಂತಿಯ ಮೇರೆಗೆ ಮಕ್ಕಳು ತಮ್ಮ ಪೋಷಕರು ಅಥವಾ ಪೋಷಕರೊಂದಿಗೆ ದೇವಸ್ಥಾನಕ್ಕೆ ಹೋಗಲು ಅನುಮತಿಸಲಾಗಿದೆ.

ಆಗಸ್ಟ್ ೧೮ ರಂದು ಸ್ಥಳೀಯ ಸುದ್ದಿ ವಾಹಿನಿ ಟಿವಿ೫ ನ ವೀಡಿಯೋ ವರದಿಯ ಪ್ರಕಾರ, ಭಕ್ತರು ತಿರುಮಲಕ್ಕೆ ನಡಿಗೆಯನ್ನು ಬಳಸುವುದನ್ನು ಕಾಣಬಹುದು. ಆದರೆ, ಚಿರತೆ ದಾಳಿಯ ನಂತರ ಪಾದಯಾತ್ರೆಗೆ ತೆರಳುವ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.


ಜನರು ವಾಕ್‌ವೇ ಬಳಸುತ್ತಿರುವುದನ್ನು ತೋರಿಸುವ ಸುದ್ದಿ ವರದಿಯಿಂದ ಸ್ಕ್ರೀನ್‌ಗ್ರಾಬ್ (ಮೂಲ: ಯೂಟ್ಯೂಬ್/ಟಿವಿ೫)

ತಿರುಪತಿಯಿಂದ ತಿರುಮಲ ವೆಂಕಟೇಶ್ವರ ದೇವಸ್ಥಾನವನ್ನು ತಲುಪಲು ನಿಯಮಿತವಾದ ಬಸ್/ಜೀಪ್ ಸೇವೆಗಳು ಲಭ್ಯವಿವೆ ಎಂಬುದು ಗಮನಿಸಬೇಕಾದ ಸಂಗತಿ. ಕೆಲವು ಭಕ್ತರು ಬಸ್ ಸೇವೆಗಳನ್ನು ಬಳಸಿದರೆ, ಇತರರು ಮೆಟ್ಟಿಲುಗಳ ಮೂಲಕ ತೆರಳಲು ಬಯಸುತ್ತಾರೆ. ಆದರೆ, ದಿ ನ್ಯೂಸ್ ಮಿನಿಟ್ ವರದಿ ಪ್ರಕಾರ, ದೇವಾಲಯದ ಆಡಳಿತ ಮಂಡಳಿಯು ಕಾಡು ಪ್ರಾಣಿಗಳ ದಾಳಿಯ ಮುನ್ನೆಚ್ಚರಿಕೆಯಾಗಿ ಸಂಜೆ ೬ ರಿಂದ ಬೆಳಿಗ್ಗೆ ೬ ಗಂಟೆ ವರಗೆ ದ್ವಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ನಿರ್ಧರಿಸಿದೆ.

ತೀರ್ಪು

ಅಲಿಪಿರಿಯಿಂದ ತಿರುಮಲ ದೇವಸ್ಥಾನದವರೆಗಿನ ಪಾದಚಾರಿ ಮಾರ್ಗವನ್ನು ಮುಚ್ಚುವ ಯಾವುದೇ ಯೋಜನೆಯನ್ನು ಟಿಟಿಡಿ ಘೋಷಿಸಿಲ್ಲ. ಚಿರತೆ ದಾಳಿಯ ನಂತರ ದೇವಾಲಯದ ಟ್ರಸ್ಟ್ ಭದ್ರತಾ ಕ್ರಮವಾಗಿ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಆದ್ದರಿಂದ, ಈ ಹೇಳಿಕೆಯನ್ನು ನಾವು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತೆವೆ.

ಅನುವಾದಿಸಿದವರು: ರಜಿನಿ ಕೆ.ಜಿ 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.