ಅಂಬಾನಿ, ಅದಾನಿ ಕಂಪನಿಗಳು ಎಲೆಕ್ಟೋರಲ್ ಬಾಂಡ್‌ಗಳ ಮೂಲಕ ದೇಣಿಗೆ ನೀಡಿಲ್ಲ ಎಂದು ಹೇಳುವ ಪೋಷ್ಟ್ ಸಂದರ್ಭರಹಿತವಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ಮಾರ್ಚ್ 26 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಅಂಬಾನಿ, ಅದಾನಿ ಕಂಪನಿಗಳು ಎಲೆಕ್ಟೋರಲ್ ಬಾಂಡ್‌ಗಳ ಮೂಲಕ ದೇಣಿಗೆ ನೀಡಿಲ್ಲ ಎಂದು ಹೇಳುವ ಪೋಷ್ಟ್ ಸಂದರ್ಭರಹಿತವಾಗಿ ಹಂಚಿಕೊಳ್ಳಲಾಗಿದೆ

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಇಸಿಐ ಡೇಟಾ ಪ್ರಕಾರ ಅಂಬಾನಿ ಮತ್ತು ಅದಾನಿ-ಸಂಬಂಧಿತ ಕಂಪನಿಗಳಿಂದ ಚುನಾವಣಾ ಬಾಂಡ್‌ಗಳ ಮೂಲಕ ಹಲವಾರು ದೇಣಿಗೆಗಳನ್ನು ನೀಡಲಾಗಿದೆ.

ಕ್ಲೈಮ್ ಐಡಿ 4c1f288b

ಹೇಳಿಕೆ ಏನು?
ಭಾರತೀಯ ಚುನಾವಣಾ ಆಯೋಗವು (ಇಸಿಐ), ಗುರುವಾರ, ಮಾರ್ಚ್ ೨೧ ರಂದು, ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಅನುಸಾರವಾಗಿ ಬಾಂಡ್ ಸಂಖ್ಯೆಗಳನ್ನು ಒಳಗೊಂಡಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಒದಗಿಸಿದ ಚುನಾವಣಾ ಬಾಂಡ್‌ಗಳ ಹೆಚ್ಚುವರಿ ಡೇಟಾ ಅನ್ನು ಬಿಡುಗಡೆ ಮಾಡಿದೆ. ಈ ನವೀಕರಿಸಿದ ಡೇಟಾಸೆಟ್ ಚುನಾವಣಾ ಬಾಂಡ್‌ಗಳ ಆಲ್ಫಾನ್ಯೂಮರಿಕ್ ಸಂಖ್ಯೆಗಳನ್ನು ಒಳಗೊಂಡಿರುತ್ತದೆ, ಇದು ದೇಣಿಗೆಗಳನ್ನು ಸ್ವೀಕರಿಸುವ ರಾಜಕೀಯ ಪಕ್ಷಗಳೊಂದಿಗೆ ಖರೀದಿದಾರರನ್ನು ಹೊಂದಾಣಿಕೆ ಮಾಡಲು ಅನುಕೂಲವಾಗುತ್ತದೆ. ಚುನಾವಣಾ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ದಾನಿಗಳ ಮತ್ತು ಸ್ವೀಕರಿಸುವವರ ಎರಡು ವಿಭಿನ್ನ ಪಟ್ಟಿಗಳನ್ನು ಪ್ರಕಟಿಸಿದೆ.

ಈ ಡೇಟಾವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ನಂತರ, ರಿಲಯನ್ಸ್ ಗ್ರೂಪ್‌ನ ಮಾಲೀಕ ಮುಖೇಶ್ ಅಂಬಾನಿ ಅಥವಾ ಅದಾನಿ ಗ್ರೂಪ್‌ನ ಸಂಸ್ಥಾಪಕ ಗೌತಮ್ ಅದಾನಿ ಅವರಿಂದ ಯಾವುದೇ ದೇಣಿಗೆಯನ್ನು ಚುನಾವಣಾ ಬಾಂಡ್‌ಗಳ ಪಟ್ಟಿಯಲ್ಲಿ ಸೂಚಿಸಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಪೋಷ್ಟ್ ಗಳು ತಪ್ಪಾಗಿ ಹೇಳಿದೆ. ಇದಲ್ಲದೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗಣನೀಯ ದೇಣಿಗೆಯನ್ನು ಪಡೆದ ಏಕೈಕ ರಾಜ್ಯ ಪಕ್ಷವಾಗಿದೆ ಎಂದು ಅದು ಹೇಳಿಕೊಂಡಿದೆ.  ಪೋಷ್ಟ್ ಮಾರ್ಚ್ ೨೨ ರಂದು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಪ್ರಸಾರವಾಯಿತು ಮತ್ತು ೨೩೦,೦೦೦  ವೀಕ್ಷಣೆಗಳು ಮತ್ತು ೪,೬೦೦ ಲೈಕ್ ಗಳನ್ನು ಗಳಿಸಿತು. ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಹೇಳಿಕೆ ನಿಖರವಾಗಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಮಾಹಿತಿಯು ಅದಾನಿ ಗ್ರೂಪ್‌ಗೆ ಸಂಬಂಧಿಸಿದ ನಾಲ್ಕು ಕಂಪನಿಗಳು ಮತ್ತು ರಿಲಯನ್ಸ್ ಗ್ರೂಪ್‌ಗೆ ಸಂಪರ್ಕ ಹೊಂದಿದ ಹಲವಾರು ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ನಿಜವಾಗಿಯೂ ಕೊಡುಗೆ ನೀಡಿವೆ ಎಂದು ಬಹಿರಂಗಪಡಿಸುತ್ತದೆ.

ಹಲವಾರು ಕಂಪನಿಗಳು ಅದಾನಿ ಗ್ರೂಪ್‌ಗೆ ಸಂಪರ್ಕ ಹೊಂದಿವೆ
ಅದಾನಿ ಗ್ರೂಪ್‌ಗೆ ಸಂಬಂಧಿಸಿದ ನಾಲ್ಕು ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ಒಟ್ಟು ೫೫.೪ ಕೋಟಿ ರೂ ಅನ್ನು ಖರೀದಿ ಮಾಡಿದೆ. ಈ ಕಂಪನಿಗಳು ಎಬಿಸಿ  ಇಂಡಿಯಾ ಲಿಮಿಟೆಡ್ ಮತ್ತು ವೆಲ್ಸ್ಫೂನ್ ಗ್ರೂಪ್‌ನ ಮೂರು ಅಂಗಸಂಸ್ಥೆಗಳನ್ನು ಒಳಗೊಂಡಿವೆ: ವೆಲ್ಸ್ಫೂನ್  ಎಂಟರ್ಪ್ರೈಸಸ್ ಲಿಮಿಟೆಡ್ , ವೆಲ್ಸ್ಫೂನ್ ಕಾರ್ಪ್ ಲಿಮಿಟೆಡ್, ಮತ್ತು ವೆಲ್ಸ್ಫೂನ್ ಲಿವಿಂಗ್ ಲಿಮಿಟೆಡ್.

ಎಬಿಸಿ ಇಂಡಿಯಾ ಲಿಮಿಟೆಡ್ ಏಪ್ರಿಲ್ ೨೦೧೯ ರಲ್ಲಿ ೪೦ ಲಕ್ಷ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸಂಗ್ರಹಿಸಿದೆ, ಸಂಪೂರ್ಣ ಮೊತ್ತವನ್ನು ಬಿಜೆಪಿ ರಿಡೀಮ್ ಮಾಡಿದೆ. ಅದಾನಿ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಎಬಿಸಿ ಇಂಡಿಯಾದಲ್ಲಿ ಮಾರ್ಚ್ ೨೦೧೬ ರಿಂದ ಸೆಪ್ಟೆಂಬರ್ ೨೦೨೩ ರವರೆಗೆ ೧.೨ ಪ್ರತಿಶತ ಪಾಲನ್ನು ಹೊಂದಿತ್ತು, ಕಂಪನಿಯು ಡಿಸೆಂಬರ್ ೨೦೨೩ ರಲ್ಲಿ ತನ್ನ ಷೇರುಗಳನ್ನು ಹಿಂತೆಗೆದುಕೊಂಡಿತು.

ವೆಲ್‌ಸ್ಪನ್ ಗ್ರೂಪ್ ಮತ್ತು ಅದಾನಿ ಗ್ರೂಪ್ ನಡುವಿನ ಜಂಟಿ ಉದ್ಯಮ, ಅದಾನಿ ವೆಲ್‌ಸ್ಪನ್ ಎಕ್ಸ್‌ಪ್ಲೋರೇಷನ್ ಲಿಮಿಟೆಡ್, ೨೦೦೫ ರಲ್ಲಿ ಪ್ರಾರಂಭವಾಯಿತು. ಅದಾನಿ ಗ್ರೂಪ್ ಈ ಸಾಹಸದಲ್ಲಿ ೬೫ ಪ್ರತಿಶತ ಪಾಲನ್ನು ಹೊಂದಿದೆ, ಆದರೆ ವೆಲ್‌ಸ್ಪನ್ ಎಂಟರ್‌ಪ್ರೈಸಸ್ ಲಿಮಿಟೆಡ್ ವೆಲ್‌ಸ್ಪನ್ ನ್ಯಾಚುರಲ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ ಮೂಲಕ ೩೫ ಪ್ರತಿಶತ ಪಾಲನ್ನು ಹೊಂದಿದೆ. ವೆಲ್‌ಸ್ಪನ್ ಎಂಟರ್‌ಪ್ರೈಸಸ್ ಲಿಮಿಟೆಡ್ ಏಪ್ರಿಲ್ ೨೦೧೯ ಮತ್ತು ನವೆಂಬರ್ ೨೦೨೨ ರ ನಡುವೆ ೧೩ ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸಂಗ್ರಹಿಸಿದೆ.

ಎರಡನೇ ಅಂಗಸಂಸ್ಥೆ, ವೆಲ್‌ಸ್ಪನ್ ಕಾರ್ಪ್ ಲಿಮಿಟೆಡ್, ಮೇ ೨೦೧೯ ಮತ್ತು ನವೆಂಬರ್ ೨೦೨೨ ರ ನಡುವೆ ರೂ ೨೭ ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ಹಿಂದೆ ವೆಲ್ಸ್ಫೂನ್ ಇಂಡಿಯಾ ಲಿಮಿಟೆಡ್ ಎಂದು ಕರೆಯಲಾಗುತ್ತಿದ್ದ, ಮೂರನೇ ಅಂಗಸಂಸ್ಥೆ, ವೆಲ್ಸ್ಫೂನ್ ಲಿವಿಂಗ್ ಲಿಮಿಟೆಡ್, ನವೆಂಬರ್ ೨೦೨೩ ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ರೂ ೫ ಕೋಟಿ ಮತ್ತು ನವೆಂಬರ್ ೨೦೨೨ ರಲ್ಲಿ ರೂ ೧೦ ಕೋಟಿ ದೇಣಿಗೆ ನೀಡಿದೆ. ನವೆಂಬರ್ ೨೦೨೨ ಖರೀದಿಯನ್ನು ವೆಲ್ಸ್ಫೂನ್ ಇಂಡಿಯಾ ಲಿಮಿಟೆಡ್ಹೆ ಸರಿನಲ್ಲಿ ಮಾಡಲಾಗಿದೆ.

ಅದಾನಿ ಗ್ರೂಪ್‌ಗೆ ಸಂಬಂಧಿಸಿದ ನಾಲ್ಕು ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ೫೫.೪ ಕೋಟಿ ರೂ ಖರೀದಿಸಿದೆ ಎಂದು ಡೇಟಾ ಹೇಳುತ್ತದೆ.

ಅಂಬಾನಿಗೆ ಲಿಂಕ್ ಹೊಂದಿರುವ ಕಂಪನಿಗಳು
ರಿಲಯನ್ಸ್-ಸಂಯೋಜಿತ ಕಂಪನಿಯಾದ ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್, ಜನವರಿ ೨೦೨೨ ಮತ್ತು ನವೆಂಬರ್ ೨೦೨೩ ರ ನಡುವೆ ರೂ ೪೧೦ ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸಂಗ್ರಹಿಸಿದೆ, ಬಿಜೆಪಿಗೆ ರೂ ೩೭೫ ಕೋಟಿ ಮತ್ತು ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಗೆ ರೂ ೩೫ ಕೋಟಿ ಕೊಡುಗೆ ನೀಡಿದೆ.

ರಾಯಿಟರ್ಸ್ ವರದಿಯ ಪ್ರಕಾರ, ಮಾರ್ಚ್ ೨೦೨೩ ಕ್ಕೆ ಕೊನೆಗೊಳ್ಳುವ ವರ್ಷದ ಇತ್ತೀಚಿನ ಹಣಕಾಸು ಹೇಳಿಕೆಯನ್ನು ಭಾರತ ಸರ್ಕಾರಕ್ಕೆ ಸಲ್ಲಿಸಲಾಗಿದೆ, ಕನಿಷ್ಠ ಮೂರು ಕಂಪನಿಗಳು-ರಿಲಯನ್ಸ್ ಗ್ರೂಪ್ ಸಪೋರ್ಟ್, ರಿಲಯನ್ಸ್ ಫೈರ್ ಬ್ರಿಗೇಡ್ ಮತ್ತು ರಿಲಯನ್ಸ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್-ಒಟ್ಟಾರೆಯಾಗಿ ೫೦.೦೪ ಪ್ರತಿಶತ ಪಾಲನ್ನು ಹೊಂದಿದೆ ಎಂದು ಬಹಿರಂಗಪಡಿಸುತ್ತದೆ.

ಕ್ವಿಕ್ ಸಪ್ಲೈ ಬಹುತೇಕ ಸಮಾನ ಪ್ರಮಾಣದಲ್ಲಿ ಆರು ಕಂಪನಿಗಳ ಒಡೆತನದಲ್ಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ: ಗುಜರಾತ್ ಪೆಟ್‌ಕೋಕ್ ಮತ್ತು ಪೆಟ್ರೋಪ್ರಾಡಕ್ಟ್ಸ್ ಸಪ್ಲೈ ಪ್ರೈವೇಟ್ ಲಿಮಿಟೆಡ್, ರಿಲಯನ್ಸ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ರಿಲಯನ್ಸ್ ಫೈರ್ ಬ್ರಿಗೇಡ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್, ರಿಲಯನ್ಸ್ ಗ್ರೂಪ್ ಸಪೋರ್ಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್, ವೈಬ್ರಂಟ್ ಅಡ್ವರ್ಟೈಸಿಂಗ್ , ಮತ್ತು ಇಮ್ಯಾಜಿನೇಶನ್ ವರ್ಕ್ಸ್  ಪ್ರೊಡಕ್ಷನ್  ಕಂಪನಿ ಪ್ರೈವೇಟ್ ಲಿಮಿಟೆಡ್. ವರದಿಯ ಪ್ರಕಾರ, ಈ ಆರು ಕಂಪನಿಗಳಲ್ಲಿ ಐದು ಕಂಪನಿಗಳು ಆರ್‌ಐಎಲ್(ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್) ನಲ್ಲಿ ಉನ್ನತ ಕಾರ್ಯನಿರ್ವಾಹಕರಾಗಿರುವ ನಿರ್ದೇಶಕರನ್ನು ಹೊಂದಿದ್ದರೆ, ಆರನೇ ಕಂಪನಿಯ ಸಂದರ್ಭದಲ್ಲಿ, ಒಬ್ಬ ನಿರ್ದೇಶಕರು ಹಿಂದೆ ಆರ್‌ಐಎಲ್ ನಲ್ಲಿ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಾಹಕರಾಗಿದ್ದರು. 

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರವೇಶಿಸಿದ ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯು, ಕಂಪನಿಯ ನಿರ್ದೇಶಕರಾದ ತಪಸ್ ಮಿತ್ರ ಅವರು ರಿಲಯನ್ಸ್ ಆಯಿಲ್ ಮತ್ತು ಪೆಟ್ರೋಲಿಯಂ ಪ್ರೈವೇಟ್ ಲಿಮಿಟೆಡ್, ರಿಲಯನ್ಸ್ ಫೋಟೋ ಸೇರಿದಂತೆ ಹಲವಾರು ಇತರ ಆರ್‌ಐಎಲ್ ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್, ರಿಲಯನ್ಸ್ ಗ್ರೂಪ್ ಸಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ರಿಲಯನ್ಸ್ ಫಸ್ಟ್ ಪ್ರೈವೇಟ್ ಲಿಮಿಟೆಡ್, ಮತ್ತು ರಿಲಯನ್ಸ್ ಫೈರ್ ಬ್ರಿಗೇಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್. ಹೆಚ್ಚುವರಿಯಾಗಿ, ಅವರನ್ನು ರಿಲಯನ್ಸ್ ಪಾಲಿಯೆಸ್ಟರ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಅಡಿಷನಲ್ ನಿರ್ದೇಶಕರಾಗಿ ನೇಮಿಸಲಾಗಿದೆ.

ಇಮೇಜ್ ತಪಸ್ ಮಿತ್ರ ಅವರು ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ರಿಲಯನ್ಸ್ ಕಂಪನಿಗಳ ಪಟ್ಟಿಯ ಸ್ಕ್ರೀನ್‌ಶಾಟ್. (ಮೂಲ: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ)

ಅಂಬಾನಿಯ ಮಾಜಿ ಬಿಸಿನೆಸ್  ಅಸೋಸಿಯೇಟ್ ಆಗಿದ್ದ ಸುರೇಂದ್ರ ಲೂನಿಯಾ ಅವರು ಮೇ ೨೦೧೯ ರಲ್ಲಿ ಹಲವಾರು ಸಂಸ್ಥೆಗಳ ಮೂಲಕ ಬಿಜೆಪಿಗೆ ೫೦ ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ ಎಂದು ನ್ಯೂಸ್‌ಲಾಂಡ್ರಿ ವರದಿ ಮಾಡಿದೆ. ಹನಿವೆಲ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಚಂದರ್ ಕಮರ್ಷಿಯಲ್ಸ್ ಪ್ರೈವೇಟ್ ಲಿಮಿಟೆಡ್ ಎಪ್ರಿಲ್ ೨೦೨೧ ರಲ್ಲಿ ಬಿಜೆಪಿಗೆ ೫೦ ಕೋಟಿ ರೂ ನೀಡಿದೆ. ಈ ಎರಡು ಕಂಪನಿಗಳ ನಿರ್ದೇಶಕ ಸತ್ಯನಾರಾಯಣಮೂರ್ತಿ ವೀರ ವೆಂಕಟ ಕೊರ್ಲೆಪ್ ಅವರು ಹಲವಾರು ರಿಲಯನ್ಸ್ ಸಂಸ್ಥೆಗಳ ಮಂಡಳಿಯ ಸದಸ್ಯರೂ ಆಗಿದ್ದಾರೆ.

ದಿ ಹಿಂದೂ ಬ್ಯುಸಿನೆಸ್ ಲೈನ್‌ನ ವರದಿಯ ಪ್ರಕಾರ, ಕೆ ರಾಮಚಂದ್ರನ್ ರಾಜಾ ಅವರ ಅಲಿಯಾಸ್ ಕೆಆರ್ ರಾಜಾ ಜೆಟಿ ಮತ್ತು ಲಕ್ಷ್ಮೀದಾಸ್ ವಲ್ಲಭದಾಸ್ ಅಸ್ಮಿತಾ ಮರ್ಚೆಂಟ್ ಅವರು ನವೆಂಬರ್ ೧೭, ೨೦೨೩ ರಂದು ತಲಾ ರೂ ೨೫ ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ್ದಾರೆ. ಸಾರ್ವಜನಿಕ ದಾಖಲೆಗಳು ಲಕ್ಷ್ಮೀದಾಸ್ ವಲ್ಲಭದಾಸ್ ಮರ್ಚೆಂಟ್ ಗುಂಪಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸೂಚಿಸುತ್ತವೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ನಿಯಂತ್ರಕ, ಕೆಆರ್ ರಾಜಾ ಆರ್‌ಐಎಲ್ ನ ಉದ್ಯೋಗಿ.

ಟಿಎಂಸಿ ಏಕೈಕ ರಾಜ್ಯ ಪಕ್ಷ ದೊಡ್ಡ ಮೊತ್ತವನ್ನು ಪಡೆಯುತ್ತಿದೆಯೇ?
ಸ್ಯಾಂಟಿಯಾಗೊ ಮಾರ್ಟಿನ್ ಅವರ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸೇವೆಗಳಿಂದ ಟಿಎಂಸಿ ೫೪೨ ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ಡೇಟಾ ಸೂಚಿಸುತ್ತದೆ, ಹಲ್ದಿಯಾ ಎನರ್ಜಿ ಲಿಮಿಟೆಡ್ ೨೮೧ ಕೋಟಿ ರೂಪಾಯಿ ಕೊಡುಗೆ ನೀಡಿದೆ. ಚುನಾವಣಾ ಬಾಂಡ್‌ಗಳ ಮೂಲಕ ಪಕ್ಷವು ಒಟ್ಟು ರೂ ೧,೬೦೯.೫೦ ಕೋಟಿ ತೆಗೆದುಕೊಂಡಿದೆ.

ಮತ್ತು, ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ (ಟಿ ಆರ್ ಎಸ್) ಎಂದು ಕರೆಯಲ್ಪಡುವ ಭಾರತ್ ರಾಷ್ಟ್ರ ಸಮಿತಿಯು ಒಟ್ಟು ೧,೨೧೪ ಕೋಟಿ ರೂಪಾಯಿಗಳನ್ನು ಎನ್‌ಕ್ಯಾಶ್ ಮಾಡಿದೆ, ಎಂಇಐಎಲ್ ೧೯೫ ಕೋಟಿ ರೂ., ಯಶೋಧ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ೯೪ ಕೋಟಿ ರೂ. ಮತ್ತು ಚೆನ್ನೈ ಗ್ರೀನ್ ವುಡ್ಸ್ ಪ್ರೈವೇಟ್ ಲಿಮಿಟೆಡ್ ೫೦ ರೂ ಕೋಟಿ.

ಬಿಜು ಜನತಾ ದಳ (ಬಿಜೆಡಿ) ೭೭೫ ಕೋಟಿ, ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ೩೩೭ ಕೋಟಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಒಟ್ಟು ೬೫೬.೫ ಕೋಟಿ ಪಡೆದಿವೆ.

ಈ ರಾಜ್ಯ ಪಕ್ಷಗಳಲ್ಲಿ ಟಿಎಂಸಿ ಅತ್ಯಧಿಕ ಮೊತ್ತವನ್ನು ಪಡೆದಿದ್ದರೆ, ಹಲವಾರು ಇತರ ಪಕ್ಷಗಳು ಸಹ ಗಣನೀಯ ದೇಣಿಗೆಯನ್ನು ಪಡೆದಿವೆ ಎಂದು ಈ ಡೇಟಾ ಸ್ಪಷ್ಟವಾಗಿ ಸೂಚಿಸುತ್ತದೆ.

ತೀರ್ಪು
ಟಿಎಂಸಿ, ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ಗಮನಾರ್ಹ ಮೊತ್ತವನ್ನು ಪಡೆದಿವೆ ಎಂದು ಇಸಿಐ ಬಿಡುಗಡೆ ಮಾಡಿದ ಡೇಟಾ ಬಹಿರಂಗಪಡಿಸುತ್ತದೆ. ಇದಲ್ಲದೆ, ಅಂಬಾನಿ ಮತ್ತು ಅದಾನಿಗೆ ಸಂಬಂಧಿಸಿದ ಹಲವಾರು ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.