ತೆಲಂಗಾಣ ಸಿಎಂ ಹೊಸ ಸೆಕ್ರೆಟರಿಯೇಟ್‌ನಲ್ಲಿ ಮಸೀದಿ ಮಾತ್ರವಲ್ಲದೆ ಮೂರು ಪ್ರಾರ್ಥನಾ ಸ್ಥಳಗಳನ್ನು ಉದ್ಘಾಟಿಸಿದರು

ಮೂಲಕ: ರಾಜೇಶ್ವರಿ ಪರಸ
ಸೆಪ್ಟೆಂಬರ್ 13 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ತೆಲಂಗಾಣ ಸಿಎಂ ಹೊಸ ಸೆಕ್ರೆಟರಿಯೇಟ್‌ನಲ್ಲಿ ಮಸೀದಿ ಮಾತ್ರವಲ್ಲದೆ ಮೂರು ಪ್ರಾರ್ಥನಾ ಸ್ಥಳಗಳನ್ನು ಉದ್ಘಾಟಿಸಿದರು

ಆನ್‌ಲೈನ್‌ನಲ್ಲಿ ಕಂಡ ಹೇಳಿಕೆಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್, ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ತೆಲಂಗಾಣ ಸರ್ಕಾರವು ಹೊಸ ಸೆಕ್ರೆಟರಿಯೇಟ್ ಸಂಕೀರ್ಣದಲ್ಲಿ ಮಸೀದಿಯ ಜೊತೆಗೆ ದೇವಾಲಯ ಮತ್ತು ಚರ್ಚ್ ಅನ್ನು ನಿರ್ಮಿಸಿ ಉದ್ಘಾಟನೆ ಮಾಡಿದೆ.

ಕ್ಲೈಮ್ ಐಡಿ 4f2d9365

ಏನೆಂದು ಹೇಳಲಾಗಿತ್ತಿದೆ?

ದಕ್ಷಿಣ ಭಾರತದ ರಾಜ್ಯವಾದ ತೆಲಂಗಾಣದಲ್ಲಿ ಸರ್ಕಾರವು ಹೊಸ ಸೆಕ್ರೆಟರಿಯೇಟ್ ಸಂಕೀರ್ಣದಲ್ಲಿ ಮಸೀದಿಯನ್ನು ಉದ್ಘಾಟಿಸಿದೆ ಎಂಬ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ರಾಜ್ಯ ಸರ್ಕಾರವು ಮುಸ್ಲಿಂ ಸಮುದಾಯದ ಸದಸ್ಯರನ್ನು "ಸಮಾಧಾನಗೊಳಿಸುತ್ತಿದೆ" ಎಂದು ಸೂಚಿಸುವ ಕೋಮುವಾದದ ಒಳಾರ್ಥಗಳೊಂದಿಗೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಉದ್ಘಾಟನಾ ಸಮಾರಂಭದ ದೃಶ್ಯಗಳನ್ನು ಹಂಚಿಕೊಳ್ಳುವ ಮೂಲಕ, ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಪೋಷ್ಟ್  ಒಂದರ ಶೀರ್ಷಿಕೆ ಮೂಲತಃ ಹಿಂದಿಯಲ್ಲಿ ಇದೆ, ಕನ್ನಡಕ್ಕೆ ಅನುವಾದಿಸಿದಾಗ, "ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ತೆಲಂಗಾಣ ಸೆಕ್ರೆಟರಿಯೇಟ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಮಸೀದಿಯನ್ನು ಉದ್ಘಾಟಿಸಿದರು. ನೀವು ಸ್ವಾರ್ಥಿ ಹಿಂದೂಗಳು ಮತ್ತು ಮುಸ್ಲಿಂ ಓಲೈಕೆ ಮಾಡುವ ಪಕ್ಷಗಳಿಗೆ ಮತ ಹಾಕಿದರೆ, ಇದನ್ನೇ ನೀವು ನೋಡುತ್ತೀರಿ, ಮುಂದೊಂದು ದಿನ ಪರಿಸ್ಥಿತಿ ಹೀಗಿರುತ್ತದೆ, ನೀವು ದೇಶವನ್ನು ತೊರೆಯಲು ಒತ್ತಾಯಿಸಲಾಗುತ್ತದೆ, ಆದರೆ ನೀವು ಎಲ್ಲಿಗೆ ಹೋಗುತ್ತೀರಿ? ನಿಮಗೆ ಎಲ್ಲಿ ಸ್ಥಾನ ಸಿಗುತ್ತದೆ, ಈಗ ಯೋಚಿಸಿ (sic)." ಹೀಗೆ ಹೇಳುತ್ತದೆ.

ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನ ಶಾಸಕ ಅಕ್ಬರುದ್ದೀನ್ ಓವೈಸಿ ಅವರು ತೆಲಂಗಾಣ ಅಸೆಂಬ್ಲಿಯಲ್ಲಿ ಸೆಕ್ರೆಟರಿಯೇಟ್‌ನಲ್ಲಿ ಮಸೀದಿಯನ್ನು ನಿರ್ಮಿಸಲಾಗುವುದು ಎಂಬ ಪಕ್ಷದ ನಂಬಿಕೆಯ ಬಗ್ಗೆ ಮಾತನಾಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ರಾಜ್ಯಪಾಲ ತಮಿಳಿಸೈ ಸೌಂದರರಾಜನ್, ಇತರ ನಾಯಕರು ಮತ್ತು ರಾಜ್ಯದ ಅಧಿಕಾರಿಗಳು ಭಾಗವಹಿಸಿದ್ದ ಉದ್ಘಾಟನಾ ಸಮಾರಂಭದ ದೃಶ್ಯಗಳನ್ನು ಹೊಂದಿದೆ. ಮಸೀದಿಯ ಉದ್ಘಾಟನೆ, ಭ್ರಾತೃತ್ವ ಮತ್ತು ಅದನ್ನು ಉಳಿಸಿಕೊಳ್ಳಲು ಸರ್ಕಾರದ ಪ್ರಯತ್ನಗಳ ಕುರಿತು ಕೆಸಿಆರ್ ಅವರ ಭಾಷಣದೊಂದಿಗೆ ವೀಡಿಯೋ ಕೊನೆಗೊಳ್ಳುತ್ತದೆ.

ಆನ್‌ಲೈನ್‌ನಲ್ಲಿ ಮಾಡಿದ ವೈರಲ್ ಹೇಳಿಕೆಗಳು. (ಮೂಲ:ಫೇಸ್‌ಬುಕ್/ಎಕ್ಸ್/ ಸ್ಕ್ರೀನ್‌ಶಾಟ್)

ಸೆಕ್ರೆಟರಿಯೇಟ್‌ನೊಳಗೆ ಮಸೀದಿಯನ್ನು ನಿರ್ಮಿಸುವ ಬಗ್ಗೆ ಕೋಮು ನಿರೂಪಣೆಯನ್ನು ಬಿಜೆಪಿಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಕನ್ನಡದಲ್ಲಿ ಹಂಚಿಕೊಂಡಿವೆ. ಇಂತಹ ಪೋಷ್ಟ್ ಗಳು ಸೆಕ್ರೆಟರಿಯೇಟ್‌ನಲ್ಲಿ ಮಸೀದಿಯನ್ನು ಮಾತ್ರ ನಿರ್ಮಿಸಲಾಗಿದೆ ಮತ್ತು ಇತರ ಧರ್ಮಗಳನ್ನು ಬದಿಗೊತ್ತಲಾಗಿದೆ ಎಂದು ಒಳಾರ್ಥವನ್ನು ತೋರುತ್ತವೆ. 

ಆದರೆ ಈ ಹೇಳಿಕೆಯ ಅರ್ಥವನ್ನು ಸಂದರ್ಭದಿಂದ ಹೊರಗಿಡಲಾಗಿದೆ.

ವಾಸ್ತವಾಂಶಗಳೇನು?

ಇಂಡಿಯಾ ಟುಡೇ ವರದಿಯ ಪ್ರಕಾರ, ಆಗಸ್ಟ್ ೨೫ ರಂದು ಮುಖ್ಯಮಂತ್ರಿಗಳು ಹೊಸದಾಗಿ ನಿರ್ಮಿಸಲಾದ ಸೆಕ್ರೆಟರಿಯೇಟ್ ಕಟ್ಟಡದ ಪಕ್ಕದಲ್ಲಿರುವ ಮಸೀದಿ, ದೇವಸ್ಥಾನ ಮತ್ತು ಚರ್ಚ್ ಅನ್ನು ಉದ್ಘಾಟಿಸಿದರು. ಮೂರು ಪೂಜಾಸ್ಥಳಗಳು ಒಂದೇ ದಿನ ಉದ್ಘಾಟನೆಗೊಂಡವು.

ಕಾರ್ಯಕ್ರಮವನ್ನು ಸ್ಥಳೀಯ ಮಾಧ್ಯಮ ಚಾನೆಲ್ ಟಿ ನ್ಯೂಸ್ ತೆಲುಗು ಲೈವ್-ಸ್ಟ್ರೀಮ್ ಮಾಡಿದೆ ಮತ್ತು ವರದಿಯಲ್ಲಿ ಕೆಸಿಆರ್ ಅವರು ಮಸೀದಿಯ ಹೊರತಾಗಿ ದೇವಾಲಯ ಮತ್ತು ಚರ್ಚ್ ಅನ್ನು ಉದ್ಘಾಟಿಸುತ್ತಿರುವುದನ್ನು ತೋರಿಸುತ್ತದೆ. ದೇವಾಲಯವನ್ನು ಉದ್ಘಾಟಿಸಲು ಹಿಂದೂ ಪ್ರಾರ್ಥನೆ ಸಮಾರಂಭದೊಂದಿಗೆ ಲೈವ್‌ಸ್ಟ್ರೀಮ್ ಪ್ರಾರಂಭವಾಗುತ್ತದೆ. ಮಸೀದಿಯನ್ನು ಉದ್ಘಾಟಿಸುವ ಸಮಾರಂಭವು ಸುಮಾರು ೩:೧೭:೦೮ ಟೈಮ್‌ಸ್ಟ್ಯಾಂಪ್‌ನಿಂದ ಪ್ರಾರಂಭವಾಗುತ್ತದೆ, ಮತ್ತು ಚರ್ಚ್ ಅನ್ನು ಉದ್ಘಾಟಿಸುವ ಸಮಾರಂಭವು ೭:೫೯:೩೮ ಮಾರ್ಕ್‌ನ ಸುತ್ತಲೂ ಸಂಕ್ಷಿಪ್ತವಾಗಿ ಕಂಡುಬಂದಿದೆ. 

ಮತ್ತೊಂದು ಪ್ರಾದೇಶಿಕ ಔಟ್ಲೆಟ್ ಎನ್ ಟಿವಿ  ತೆಲುಗು, ಆಗಸ್ಟ್ ೨೫ ರಂದು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಚರ್ಚ್ನಲ್ಲಿ ನಡೆದ ಸಮಾರಂಭದ ಸುದೀರ್ಘ ವೀಡಿಯೋವನ್ನು ಪ್ರಕಟಿಸಿದೆ. ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಸಮ್ಮುಖದಲ್ಲಿ ಪಾದ್ರಿಯೊಬ್ಬರು ಮಾತನಾಡುವುದನ್ನು ಕೇಳಬಹುದು.

ಅದಲ್ಲದೆ, ಉದ್ಘಾಟನೆಯ ಅಂಗವಾಗಿ ಎಲ್ಲಾ ಮೂರು ಪೂಜಾ ಸ್ಥಳಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಯಿತು ಎಂದು ಆಗಸ್ಟ್ ೨೫ ರಂದು ಎನ್ ಡಿ ಟಿವಿ  ವರದಿ ಮಾಡಿದೆ.

ಲಾಜಿಕಲಿ ಫ್ಯಾಕ್ಟ್ಸ್ ಸೆಪ್ಟೆಂಬರ್ ೧೧ ರಂದು ಹೈದರಾಬಾದ್‌ನ ಖೈರತಾಬಾದ್ ಪ್ರದೇಶದಲ್ಲಿ ನೆಲೆಗೊಂಡಿರುವ ಹೊಸ ಡಾ. ಬಿ.ಆರ್. ಅಂಬೇಡ್ಕರ್ ತೆಲಂಗಾಣ ಸೆಕ್ರೆಟರಿಯೇಟ್‌ನ ಸ್ಥಳಕ್ಕೆ ಭೇಟಿ ನೀಡಿತು. ಎಲ್ಲಾ ಮೂರು ಪೂಜಾ ಸ್ಥಳಗಳು ಸೆಕ್ರೆಟರಿಯೇಟ್‌ನ ಹೊರಭಾಗದಲ್ಲಿವೆ. ಮೂರು ರಚನೆಗಳು ಸಾರ್ವಜನಿಕರು ಸಹ ಪ್ರವೇಶಿಸಬಹುದಾಗಿದೆ.

ತೆಲಂಗಾಣ ಸೆಕ್ರೆಟರಿಯೇಟ್ ಸಂಕೀರ್ಣದ ಬಳಿ ಮಸೀದಿ ಮತ್ತು ಚರ್ಚ್. (ಲಾಜಿಕಲಿ ಫ್ಯಾಕ್ಟ್ಸ್ ಇಂದ ಸೆರೆಹಿಡಿಯಲಾದ ಚಿತ್ರ)

ಚರ್ಚ್ ಮತ್ತು ಮಸೀದಿಯು ಸೆಕ್ರೆಟರಿಯೇಟ್‌ನ ಮುಖ್ಯ ಕಟ್ಟಡದ ಹಿಂದೆ ನೆಲೆಗೊಂಡಿದ್ದರೆ, ದೇವಸ್ಥಾನವು ಕಾರ್ಯದರ್ಶಿಯ ಬಲಭಾಗದಲ್ಲಿ, ಖೈರತಾಬಾದ್ ರಸ್ತೆಯಲ್ಲಿದೆ. ತೆಲಂಗಾಣ ಸೆಕ್ರೆಟರಿಯೇಟ್ ಅಗ್ನಿಶಾಮಕ ಠಾಣೆ ಮತ್ತು ಸೆಕ್ರೆಟರಿಯೇಟ್ ಪೊಲೀಸರಿಗೆ ವಸತಿ ಸೌಕರ್ಯಗಳು ಚರ್ಚ್ ಮತ್ತು ಮಸೀದಿಯ ಹಾದಿಯಲ್ಲಿವೆ. ದೇವಾಲಯದ ಲೇನ್ ಎರಡು ಪ್ರಮುಖ ಬ್ಯಾಂಕ್‌ಗಳ ಕಚೇರಿಗಳನ್ನು ಹೊಂದಿದೆ.

ದೇವಸ್ಥಾನವು ತೆಲಂಗಾಣ ಸೆಕ್ರೆಟರಿಯೇಟ್ ಕಟ್ಟಡದ ಪಕ್ಕದಲ್ಲಿರುವುದನ್ನು ತೋರಿಸುವ ಚಿತ್ರ. (ಲಾಜಿಕಲಿ ಫ್ಯಾಕ್ಟ್ಸ್ ಇಂದ ಸೆರೆಹಿಡಿಯಲಾದ ಚಿತ್ರ)

ತೀರ್ಪು

ತೆಲಂಗಾಣ ಸರ್ಕಾರವು ಮಸೀದಿಯನ್ನು ನಿರ್ಮಿಸುವುದರ ಜೊತೆಗೆ ಹೊಸ ಸೆಕ್ರೆಟರಿಯೇಟ್ ಸಂಕೀರ್ಣದಲ್ಲಿ ದೇವಾಲಯ ಮತ್ತು ಚರ್ಚ್ ಅನ್ನು ಸಹ ನಿರ್ಮಿಸಿದೆ. ತೆಲಂಗಾಣ ಸರ್ಕಾರದಿಂದ ಮಸೀದಿಯನ್ನು ಮಾತ್ರ ಉದ್ಘಾಟಿಸಲಾಗಿದೆ ಎಂಬ ಹೇಳಿಕೆಗಳು ತಪ್ಪಾದ ಕೋಮು ನಿರೂಪಣೆಯನ್ನು ಹರಡುವ ಗುರಿಯನ್ನು ಹೊಂದಿವೆ. ಆದ್ದರಿಂದ, ನಾವು ಈ ಹೇಳಿಕೆಗಳನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತೇವೆ.

ಅನುವಾದಿಸಿದವರು: ಅಂಕಿತಾ ಕುಲಕರ್ಣಿ 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.