ಭಾರತೀಯ ರೈಲ್ವೇಯಲ್ಲಿ ಕಾನ್‌ಸ್ಟೆಬಲ್‌ಗಳು ಮತ್ತು ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿಯ ವೈರಲ್ ಸುತ್ತೋಲೆ ಫೇಕ್ ಆಗಿದೆ

ಮೂಲಕ: ರಾಜೇಶ್ವರಿ ಪರಸ
ಮಾರ್ಚ್ 1 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಭಾರತೀಯ ರೈಲ್ವೇಯಲ್ಲಿ ಕಾನ್‌ಸ್ಟೆಬಲ್‌ಗಳು ಮತ್ತು ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿಯ ವೈರಲ್ ಸುತ್ತೋಲೆ ಫೇಕ್ ಆಗಿದೆ

ವೈರಲ್ ಅಧಿಸೂಚನೆಯನ್ನು ಹಂಚಿಕೊಳ್ಳುವ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಈ ಸುತ್ತೋಲೆಯನ್ನು ಎಡಿಟ್ ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ಲಾಜಿಕಲಿ ಫ್ಯಾಕ್ಟ್ಸ್‌ಗೆ ತಿಳಿಸಿದ್ದಾರೆ. ಸಚಿವಾಲಯವು ಪತ್ರಿಕಾ ಟಿಪ್ಪಣಿಯನ್ನು ಸಹ ಬಿಡುಗಡೆ ಮಾಡಿದೆ.

ಕ್ಲೈಮ್ ಐಡಿ 122c9ce9

ಹೇಳಿಕೆ ಏನು?

ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಸುದ್ದಿವಾಹಿನಿಗಳು ರೈಲ್ವೇ ಪ್ರಯಾಣಿಕರು ಮತ್ತು ರೈಲ್ವೆ ಆಸ್ತಿಯ ಸುರಕ್ಷತೆಗೆ ಜವಾಬ್ದಾರರಾಗಿರುವ ಭಾರತೀಯ ಕಾನೂನು ಜಾರಿ ಸಂಸ್ಥೆಯಾದ ರೈಲ್ವೆ ರಕ್ಷಣಾ ಪಡೆ (RPF) ನಲ್ಲಿ ಕಾನ್ಸ್‌ಟೇಬಲ್ ಮತ್ತು ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಉದ್ಯೋಗಾವಕಾಶಗಳನ್ನು ಪ್ರಕಟಿಸುವ ಉದ್ದೇಶಿತ ಅಧಿಕೃತ ಅಧಿಸೂಚನೆಯನ್ನು ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಅಧಿಸೂಚನೆ ಭಾರತೀಯ ರೈಲ್ವೇಯ ಉದ್ಯೋಗ ನೇಮಕಾತಿಗಳನ್ನು ನಿರ್ವಹಿಸುವ ರೈಲ್ವೆ ನೇಮಕಾತಿ ಮಂಡಳಿ (RRB) ಇಂದ ಬಂದಿದೆ ಎಂದು ಹೇಳಲಾಗಿದೆ. ಅಧಿಸೂಚನೆಯಲ್ಲಿ 'ಭಾರತ ಸರ್ಕಾರ, ರೈಲ್ವೆ ಸಚಿವಾಲಯ' (ಯಾರ ಆಶ್ರಯದಲ್ಲಿ RRB ಕಾರ್ಯ ನಿರ್ವಹಿಸುತ್ತದೆ) ಎಂದು ಉಲ್ಲೇಖಿಸಲಾಗಿದೆ. 

ಫೇಸ್‌ಬುಕ್ (ಇಲ್ಲಿ, ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) ನಂತಹ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಹಂಚಿಕೊಳ್ಳಲಾದ ಉದ್ದೇಶಿತ ಸುತ್ತೋಲೆಯು ಏಪ್ರಿಲ್ ೧೫ ಮತ್ತು ಮೇ ೧೪, ೨೦೨೪ ರ ನಡುವೆ ೪, ೨೦೮ ಕಾನ್ಸ್‌ಟೇಬಲ್ ಮತ್ತು ೪೫೨ ಸಬ್-ಇನ್ಸ್‌ಪೆಕ್ಟರ್ ಉದ್ಯೋಗಾವಕಾಶಗಳಿಗಾಗಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಹೇಳುತ್ತದೆ.

ನ್ಯೂಸ್೧೮, ಲೈವ್ ಮಿಂಟ್, ಮತ್ತು ಝೀ ನ್ಯೂಸ್ ನಂತಹ ಹಲವಾರು ಸುದ್ದಿ ವೇದಿಕೆಗಳು, RPF ಗಾಗಿ ಪ್ರಾಧಿಕಾರವು ಹಲವಾರು ಉದ್ಯೋಗಾವಕಾಶಗಳನ್ನು ಪಟ್ಟಿ ಮಾಡಿದೆ ಎಂದು ವರದಿ ಮಾಡಲು ಭಾರತೀಯ ರೈಲ್ವೇಯ ಅಧಿಕೃತ ಸಂವಹನದಂತೆ ಉದ್ದೇಶಿತ ಅಧಿಸೂಚನೆಯನ್ನು ಉಲ್ಲೇಖಿಸಿದೆ.

ಸಾಮಾಜಿಕ ಮಾಧ್ಯಮದ  ಮತ್ತು ಸುದ್ದಿ ವರದಿಗಳ ಮುಖ್ಯಾಂಶಗಳು ಎಡಿಟ್ ಆಗಿರುವ ಸುತ್ತೋಲೆಯನ್ನು ಹಂಚಿಕೊಂಡಿರುವ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಝೀ ನ್ಯೂಸ್/ನ್ಯೂಸ್೧೮/ಲೈವ್ ಮಿಂಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೈರಲ್ ಅಧಿಸೂಚನೆ ಫೇಕ್.

ಸತ್ಯ ಏನು?

ಪ್ರಶ್ನೆಯಲ್ಲಿರುವ ಅಧಿಸೂಚನೆಯು ನಿಜವೇ ಎಂದು ಪರಿಶೀಲಿಸಲು, RRB ವೆಬ್‌ಸೈಟ್‌ನಲ್ಲಿ ನಾವು ಅದನ್ನು ಹುಡುಕಿದೆವು, ಏಕೆಂದರೆ ಅಂತಹ ಎಲ್ಲಾ ಅಧಿಕೃತ ಸಂವಹನಗಳನ್ನು ಸಾಮಾನ್ಯವಾಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಆದರೆ, ವೈರಲ್ ಸುತ್ತೋಲೆಯಂತೆಯೇ ಅದೇ ವಿವರಗಳನ್ನು ಉಲ್ಲೇಖಿಸಿರುವ ಯಾವುದೇ ಸೂಚನೆಯನ್ನು ನಾವು ನೋಡಿಲ್ಲ.

ನಾವು ನಂತರ ವೈರಲ್ ನೋಟಿಫಿಕೇಶನ್‌ನಲ್ಲಿ ಉಲ್ಲೇಖಿಸಲಾದ ಸರಣಿ ಸಂಖ್ಯೆಯನ್ನು ಹುಡುಕಿದೆವು- ‘CEN no.1/2024’ ಮತ್ತು ‘CEN no. 2/2024.’ CEN ಕೇಂದ್ರೀಕೃತ ಉದ್ಯೋಗ ಸೂಚನೆ ಸಂಖ್ಯೆಗಳನ್ನು ಉಲ್ಲೇಖಿಸುತ್ತದೆ, ಇದು ಪ್ರತಿ ಅಧಿಸೂಚನೆಗೆ ವಿಶಿಷ್ಟವಾಗಿದೆ. ವೈರಲ್ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಉದ್ಯೋಗಾವಕಾಶಗಳ ಕುರಿತು ವಿವರಗಳನ್ನು RRB ವೆಬ್‌ಸೈಟ್‌ನಲ್ಲಿ 'CEN no.1/2024' ಮತ್ತು 'CEN no. 2/2024.’

ನಾವು ನಂತರ RRB ವೆಬ್‌ಸೈಟ್‌ನಲ್ಲಿ ಈ ವಿಶಿಷ್ಟ ಸಂಖ್ಯೆಗಳೊಂದಿಗೆ ನೋಟೀಸ್‌ಗಳನ್ನು ಹುಡುಕಿದೆವು. ಕೆಳಗಿನ ಚಿತ್ರದಲ್ಲಿ ನೋಡಿರುವಂತೆ 'CEN no.1/2024 ಅಧಿಸೂಚನೆ' ಮೂಲತಃ ಸಹಾಯಕ ಲೋಕೋ-ಪೈಲಟ್‌ಗಳ ಖಾಲಿ ಹುದ್ದೆಗಳನ್ನು ಪಟ್ಟಿ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಅಧಿಸೂಚನೆ ‘CEN no. 2/2024’ ತಂತ್ರಜ್ಞರನ್ನು ನೇಮಿಸಿಕೊಳ್ಳಲು ತಾತ್ಕಾಲಿಕ ವೇಳಾಪಟ್ಟಿಯನ್ನು ಪಟ್ಟಿಮಾಡುತ್ತದೆ.

ವೈರಲ್ ಅಧಿಸೂಚನೆ ಮತ್ತು 'CEN no.1/2024' ಸರಣಿ ಸಂಖ್ಯೆಯನ್ನು ಹೊಂದಿರುವ ಮೂಲ ಅಧಿಸೂಚನೆಯ ನಡುವಿನ ಹೋಲಿಕೆ. (ಮೂಲ: ಫೇಸ್‌ಬುಕ್/RRB ವೆಬ್‌ಸೈಟ್)

ಭಾರತೀಯ ರೈಲ್ವೇಯ ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ವೈರಲ್ ಅಧಿಸೂಚನೆಯು ನಕಲಿ ಎಂದು ಲಾಜಿಕಲ್ಯ್ ಫ್ಯಾಕ್ಟ್ಸ್ ಗೆ ದೃಢಪಡಿಸಿದರು. ೪,೨೦೮ ಕಾನ್ಸ್‌ಟೇಬಲ್ ಮತ್ತು ೪೫೨ ಸಬ್ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ಕುರಿತು ರೈಲ್ವೆ ಸಚಿವಾಲಯ ಯಾವುದೇ ಸಂವಹನವನ್ನು ನೀಡಿಲ್ಲ ಎಂದು ದಕ್ಷಿಣ ಮಧ್ಯ ರೈಲ್ವೆಯ (ಎಸ್‌ಸಿಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಚೆರುಕು ರಮೇಶ್ ಪತ್ರಿಕಾ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. ಉದ್ಯೋಗ ಆಕಾಂಕ್ಷಿಗಳು ವಂಚಕರ ಬಗ್ಗೆ ಜಾಗೃತರಾಗಬೇಕು ಎಂದು ಟಿಪ್ಪಣಿಯಲ್ಲಿ ಒತ್ತಾಯಿಸಲಾಗಿದೆ.

ಭಾರತೀಯ ರೈಲ್ವೆ ಹೊರಡಿಸಿದ ಪತ್ರಿಕಾ ಟಿಪ್ಪಣಿಯ ಸ್ಕ್ರೀನ್‌ಶಾಟ್. (ಮೂಲ: ದಕ್ಷಿಣ ಮಧ್ಯ ರೈಲ್ವೆ)

ರೈಲ್ವೇ ನೇಮಕಾತಿ ಮಂಡಳಿಯು ತನ್ನ ವೆಬ್‌ಸೈಟ್‌ನಲ್ಲಿ ಉದ್ಯೋಗ ಆಕಾಂಕ್ಷಿಗಳಿಗೆ ಎಚ್ಚರಿಕೆ ನೀಡುವ ಸೂಚನೆಯನ್ನು ಪ್ರದರ್ಶಿಸುತ್ತದೆ, “ನಿರ್ಲಜ್ಜ ಅಂಶಗಳು/ಟೌಟ್‌ಗಳಿಂದ ಹಾಕಲಾದ ನಕಲಿ ವೆಬ್‌ಸೈಟ್‌ಗಳಿಗೆ ಬೀಳಬೇಡಿ. ” "ಆರ್‌ಆರ್‌ಬಿಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಯಾವುದೇ ಮಾಹಿತಿ / ಸೂಚನೆಗಳನ್ನು ದಯವಿಟ್ಟು ನಿರ್ಲಕ್ಷಿಸಬಹುದು" ಎಂದು ವೆಬ್‌ಸೈಟ್ ಸೇರಿಸಲಾಗಿದೆ.”

ತೀರ್ಪು

ರೈಲ್ವೇ ಪ್ರೊಟೆಕ್ಷನ್ ಫೋರ್ಸ್‌ನಲ್ಲಿ (RPF) ಕಾನ್ಸ್‌ಟೇಬಲ್‌ಗಳು ಮತ್ತು ಸಬ್-ಇನ್‌ಸ್ಪೆಕ್ಟರ್‌ಗಳ ಹುದ್ದೆಗಳಿಗೆ RRB ಬಿಡುಗಡೆ ಮಾಡಿದ ನೇಮಕಾತಿ ಪ್ರಕಟಣೆಯಂತೆ ಫ್ಯಾಬ್ರಿಕೇಟೆಡ್ ಸುತ್ತೋಲೆಯನ್ನು ಹಂಚಿಕೊಳ್ಳಲಾಗುತ್ತಿದೆ. ಭಾರತೀಯ ರೈಲ್ವೆ ಅಧಿಕಾರಿಗಳು ಅಂತಹ ಯಾವುದೇ ಅಧಿಸೂಚನೆಯನ್ನು ಬಿಡುಗಡೆ ಮಾಡಿಲ್ಲ ಎಂದು ಖಚಿತಪಡಿಸಿದ್ದಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸುತ್ತೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read our fact-check in English here. 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.