ಸರತಿ ಸಾಲನ್ನು ಜಂಪ್ ಮಾಡಿದ್ದಕ್ಕೆ ಭಾರತೀಯ ನಟ ಚಿರಂಜೀವಿ ಅವರನ್ನು ಮತದಾರರು ನಿಂದಿಸುತ್ತಿರುವ ೨೦೧೪ ರ ವೀಡಿಯೋವನ್ನು ಇತ್ತೀಚಿನದೆಂದು ಹಂಚಿಕೊಳ್ಳಲಾಗಿದೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಮೇ 15 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಸರತಿ ಸಾಲನ್ನು ಜಂಪ್ ಮಾಡಿದ್ದಕ್ಕೆ ಭಾರತೀಯ ನಟ ಚಿರಂಜೀವಿ ಅವರನ್ನು ಮತದಾರರು ನಿಂದಿಸುತ್ತಿರುವ ೨೦೧೪ ರ ವೀಡಿಯೋವನ್ನು ಇತ್ತೀಚಿನದೆಂದು ಹಂಚಿಕೊಳ್ಳಲಾಗಿದೆ

೨೦೨೪ ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತಗಟ್ಟೆಯಲ್ಲಿ ಸರತಿ ಸಾಲನ್ನು ಜಂಪ್ ಮಾಡಿದ್ದಕ್ಕಾಗಿ ಮತದಾರರು ಚಿರಂಜೀವಿಯನ್ನು ಛೀಮಾರಿ ಹಾಕುತ್ತಿರುವುದನ್ನು ವೀಡಿಯೋ ತೋರಿಸುತ್ತಿದೆ ಎಂಬ ವೈರಲ್ ಕ್ಲೈಮ್‌ನ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ನಟ ಇತ್ತೀಚೆಗೆ ಮತಗಟ್ಟೆಯಲ್ಲಿ ಸರತಿ ಸಾಲನ್ನು ಬೈಪಾಸ್ ಮಾಡಿದ್ದಾರೆ ಎಂದು ಹಂಚಿಕೊಂಡ ಕ್ಲಿಪ್, ವಾಸ್ತವವಾಗಿ ೨೦೧೪ ರ ಲೋಕಸಭಾ ಚುನಾವಣೆಯದ್ದು.

ಕ್ಲೈಮ್ ಐಡಿ 72e19673

ಹೇಳಿಕೆ ಏನು?

ನಡೆಯುತ್ತಿರುವ ಭಾರತೀಯ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ತೆಲುಗು ಭಾಷೆಯ ಟಿವಿ ಸುದ್ದಿ ಪ್ರಸಾರದ ವೀಡಿಯೋ ವಿಭಾಗವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ೨ ನಿಮಿಷದ ೨೦ ಸೆಕೆಂಡುಗಳ ವೀಡಿಯೋ ನಟ ಮತ್ತು ಮಾಜಿ ರಾಜಕಾರಣಿ ಚಿರಂಜೀವಿ ಒಳಗೊಂಡ ಘಟನೆಯನ್ನು ತೋರಿಸುತ್ತದೆ.

ವೀಡಿಯೋ ಕಾಮೆಂಟರಿ ಹೆಚ್ಚುತ್ತಿರುವ ಮತದಾರರ ಜಾಗೃತಿಯನ್ನು ಚರ್ಚಿಸುತ್ತದೆ ಮತ್ತು ಪ್ರಾಥಮಿಕವಾಗಿ ತೆಲುಗು ಚಿತ್ರರಂಗದಲ್ಲಿ ತನ್ನ ಕೆಲಸಕ್ಕಾಗಿ ಹೆಸರುವಾಸಿಯಾದ ಚಿರಂಜೀವಿ ತನ್ನ ಕುಟುಂಬದೊಂದಿಗೆ ಮತದಾನ ಕೇಂದ್ರಕ್ಕೆ ಆಗಮಿಸಿ ಸರದಿಯಲ್ಲಿ ಬೈಪಾಸ್ ಮಾಡಲು ಪ್ರಯತ್ನಿಸಿದ ಘಟನೆಯನ್ನು ವಿವರಿಸುತ್ತದೆ.  ಈ ಘಟನೆಯು, ಒಬ್ಬ ಮತದಾರರು ನಟನನ್ನು ಪ್ರಶ್ನಿಸಲು ಕಾರಣವಾಯಿತು.

ಚಿರಂಜೀವಿ ಸ್ವತಃ ವಿವರಿಸಲು ಪ್ರಯತ್ನಿಸಿದರು ಆದರೆ, ಮತದಾರರ ಮನವೊಲಿಸಲು ವಿಫಲವಾದ ಅವರು ಹಿಂತಿರುಗಿ ತಮ್ಮ ಕುಟುಂಬವನ್ನು ಸರದಿಯಲ್ಲಿ ಸೇರಿಕೊಂಡರು ಎಂದು ಸುದ್ದಿ ವಿಭಾಗ ವರದಿ ಮಾಡಿದೆ. ಚಿರಂಜೀವಿ ಅವರು ಕೇಂದ್ರ ಸಚಿವರಾಗಿ ಅಲ್ಲ, ಕುಟುಂಬ ಸಮೇತ ಮತದಾರರಾಗಿ ಆಗಮಿಸಿದ್ದರಿಂದ ಮತದಾರರು ಚಿರಂಜೀವಿ ಅವರ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ ಎಂದು ಆಡಿಯೋ ಹೇಳುತ್ತದೆ.

ವೈರಲ್ ಆಗಿರುವ ವೀಡಿಯೋದಲ್ಲಿ ೩೦ ಸೆಕೆಂಡ್‌ಗೆ ಮತದಾರ ಚಿರಂಜೀವಿಗೆ ಹೇಳುತ್ತಾನೆ, "ನಾವು ಒಂದೂವರೆ ಗಂಟೆಗಳ ಕಾಲ ಸರದಿಯಲ್ಲಿ ಇದ್ದೇವೆ. ನಿಮಗೆ ವಿಶೇಷ ಚಿಕಿತ್ಸೆ ಬೇಕೇ? ಇಲ್ಲ, ಇಲ್ಲ, ಇಲ್ಲ, ನಿಮ್ಮ ಮಗ ಇಲ್ಲಿದ್ದಾನೆ; ನೀವು ಸರದಿಯಲ್ಲಿ ಇರಬೇಕು, ಸರಿ?" ಚಿರಂಜೀವಿ ಅಂತಿಮವಾಗಿ ತಮ್ಮ ಕುಟುಂಬದೊಂದಿಗೆ ಸಾಲಿಗೆ ಸೇರಲು ಮರಳಿದರು ಎಂದು ಸುದ್ದಿಯ ಆಡಿಯೋ ಉಲ್ಲೇಖಿಸುತ್ತದೆ ಮತ್ತು ಮತದಾರನ ಕಾರ್ಯಗಳು ನಂತರ ಇತರ ಮತದಾರರಿಂದ ಶ್ಲಾಘಿಸಲ್ಪಟ್ಟವು, ಎಂದು ದೃಶ್ಯಗಳಲ್ಲಿ ಕಂಡುಬರುವ ಚಪ್ಪಾಳೆಯಿಂದ ಸೂಚಿಸಲಾಗಿದೆ. ತುಣುಕಿನಲ್ಲಿ ಚಿರಂಜೀವಿ ಅವರ ಕಾರ್ಯಗಳನ್ನು ವಿವರಿಸುವ ಸಂಕ್ಷಿಪ್ತ ಕ್ಲಿಪ್ ಕೂಡ ಸೇರಿದೆ.

ವೈರಲ್ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. ಮೂಲ: (ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಈ ಘಟನೆಯನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ, "ಚಿರಂಜೀವಿ ಜುಬಿಲಿ ಹಿಲ್ಸ್ ಮತಗಟ್ಟೆಯಲ್ಲಿ ಸರತಿ ಸಾಲನ್ನು ಜಂಪ್ ಮಾಡಿದರು ಮತ್ತು ಅವರನ್ನು ವಾಪಾಸ್ ಕರೆದೊಯ್ಯಲಾಯಿತು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಬಳಕೆದಾರರು #APElections2024 ನಂತಹ ನಡೆಯುತ್ತಿರುವ ಚುನಾವಣೆಗಳಿಗೆ ಸಂಬಂಧಿಸಿದ ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಿದ್ದಾರೆ, ಇದು ಇತ್ತೀಚಿನ ಘಟನೆ ಎಂದು ಸೂಚಿಸುತ್ತದೆ.

ಸರಿಸುಮಾರು ೮೨,೪೦೦ ವೀಕ್ಷಣೆಗಳನ್ನು ಗಳಿಸಿರುವ ಇದೇ ರೀತಿಯ ಪೋಷ್ಟ್ ಅನ್ನು ಇಲ್ಲಿ ಆರ್ಕೈವ್ ಮಾಡುವುದರ ಜೊತೆಗೆ ಈ ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಭಾರತದ ಸಾರ್ವತ್ರಿಕ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ಎರಡಕ್ಕೂ ಮೇ ೧೩ ರಂದು ಮತದಾನ ನಡೆಯಿತು. ಆದರೆ, ವೀಡಿಯೋದಲ್ಲಿ ಕಂಡ ಘಟನೆ ೨೦೧೪ ರಲ್ಲಿ ನಡೆದಿದ್ದು, ಇದನ್ನು ಸಂದರ್ಭವಿಲ್ಲದೆ ಶೇರ್ ಮಾಡಲಾಗುತ್ತಿದೆ.

ನಾವು ಕಂಡುಕೊಂಡದ್ದು

ನಾವು V6 ನ್ಯೂಸ್, ಭಾರತೀಯ ತೆಲುಗು ಭಾಷೆಯ ವಾಹಿನಿಯ ಲೋಗೋವನ್ನು ಗಮನಿಸಿದ್ದೇವೆ, ದೃಶ್ಯಾವಳಿಯ ಉದ್ದಕ್ಕೂ ಎಡ ಮೂಲೆಯಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗಿದೆ. 

ಇದರಿಂದ ಸೂಚನೆಯನ್ನು ತೆಗೆದುಕೊಳ್ಳುತ್ತಾ, ಮೇ ೧, ೨೦೧೪ ರಂದು ತೆಲುಗಿನಲ್ಲಿ V6 ನ್ಯೂಸ್‌ನ ಅಧಿಕೃತ ಚಾನೆಲ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪ್ರಕಟವಾದ ವೈರಲ್ ವೀಡಿಯೋದ ವಿಸ್ತೃತ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ ಮತ್ತು ಅದರ ಶೀರ್ಷಿಕೆ ಹೀಗಿದೆ, "ಚಿರಂಜೀವಿ ಜುಬಿಲಿ ಹಿಲ್ಸ್ ಮತಗಟ್ಟೆಯಲ್ಲಿ ಸರತಿ ಸಾಲನ್ನು ಜಂಪ್ ಮಾಡಿದರು ಮತ್ತು ಅವರನ್ನು ವಾಪಾಸ್ ಕರೆದೊಯ್ಯಲಾಯಿತು."

(ಮೂಲ: ಯೂಟ್ಯೂಬ್)

ವೀಡಿಯೋದ ವಿಸ್ತೃತ ಆವೃತ್ತಿಯು ೨-ನಿಮಿಷ ೧೪-ಸೆಕೆಂಡ್ ಮಾರ್ಕ್‌ನಿಂದ ಪ್ರಾರಂಭವಾಗುವ ಚಿರಂಜೀವಿಯವರ ಸಂಪೂರ್ಣ ಸ್ಪಷ್ಟೀಕರಣವನ್ನು ಒಳಗೊಂಡಿದೆ. ಅವರು ಹೇಳುತ್ತಾರೆ, "ನಾನು ನಿಯಮಗಳನ್ನು ಉಲ್ಲಂಘಿಸುವ ರೀತಿಯ ವ್ಯಕ್ತಿ ಅಲ್ಲ ... ನನ್ನ ಹೆಸರನ್ನು ನೋಂದಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನಾನು ಮೇಜಿನ ಬಳಿಗೆ ಹೋಗಿದ್ದೆ..." ಠಾಣೆಯಲ್ಲಿ ತನ್ನ ನೋಂದಣಿಯನ್ನು ದೃಢೀಕರಿಸಲು ಅಧಿಕಾರಿಗಳನ್ನು ಸಂಪರ್ಕಿಸಿದನು, ಪ್ರಜಾಪ್ರಭುತ್ವದ ಮೇಲಿನ ಗೌರವವನ್ನು ಪ್ರತಿಪಾದಿಸುತ್ತೇನೆ ಮತ್ತು ಪ್ರೋಟೋಕಾಲ್ ಅನ್ನು ಉಲ್ಲಂಘಿಸುವ ಯಾವುದೇ ಪ್ರಯತ್ನವನ್ನು ನಿರಾಕರಿಸಿದರು ಎಂದು ಅವರು ವಿವರಿಸುತ್ತಾರೆ.

ಏಪ್ರಿಲ್ ೩೦, ೨೦೧೪ ರ ಏನ್ ಡಿ ಟಿವಿ ವರದಿಯು, “ಅನಿವಾಸಿ ಭಾರತೀಯರು ಚಿರಂಜೀವಿಯನ್ನು ವೋಟರ್ಸ್ ಕ್ಯೂನ ಜಂಪ್ ಮಾಡುವುದನ್ನು ನಿಲ್ಲಿಸುತ್ತಾರೆ” ಎಂಬ ಶೀರ್ಷಿಕೆಯಲ್ಲಿ ಮತದಾರರು ಚಿರಂಜೀವಿಯನ್ನು ಛೀಮಾರಿ ಹಾಕುವ ದೃಶ್ಯಗಳನ್ನು ಒಳಗೊಂಡಿದೆ. ಈ ವಿಭಾಗವು ೧೮-ಸೆಕೆಂಡ್ ಮಾರ್ಕ್‌ನಲ್ಲಿ ಪ್ರಾರಂಭವಾಗುತ್ತದೆ, "ನಟ-ರಾಜಕಾರಣಿ ಚಿರಂಜೀವಿ ಇಂದು ಆಂಧ್ರಪ್ರದೇಶದ ಮತದಾನ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ಬೈಪಾಸ್ ಮಾಡಲು ಪ್ರಯತ್ನಿಸಿದಾಗ ಮತದಾರರಿಂದ ಖಂಡನೆಯನ್ನು ಎದುರಿಸಿದರು" ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಂತರ ಕೇಂದ್ರ ಸಚಿವರಾಗಿದ್ದ ಕಾಂಗ್ರೆಸ್ ರಾಜಕಾರಣಿ, ತಮ್ಮ ಮಗ, ಮಗಳು ಮತ್ತು ಪತ್ನಿಯೊಂದಿಗೆ ಹೈದರಾಬಾದ್‌ನ ಖೈರತಾಬಾದ್ ವಿಧಾನಸಭಾ ಕ್ಷೇತ್ರದ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಲು ಆಗಮಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವರು ನೇರವಾಗಿ ಮುಂಭಾಗಕ್ಕೆ ಹೋಗಲು ಮತದಾರರ ಉದ್ದನೆಯ ಸರದಿಯನ್ನು ಬೈಪಾಸ್ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಚಿರಂಜೀವಿ ಕೇಂದ್ರ ಸಚಿವರಾಗಿ ಅಲ್ಲ, ಮತದಾರರಾಗಿ ಮತಗಟ್ಟೆಗೆ ಬಂದಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಉಲ್ಲೇಖಿಸಲಾಗಿದೆ.

ಚಿರಂಜೀವಿ ಅವರು ಅಕ್ಟೋಬರ್ ೨೦೧೨ ರಿಂದ ಮೇ ೨೦೧೪ ರವರೆಗೆ ಸ್ವತಂತ್ರ ಉಸ್ತುವಾರಿಯೊಂದಿಗೆ ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು ಮತ್ತು ಏಪ್ರಿಲ್ ೨೦೧೮ ರವರೆಗೆ ಸಂಸತ್ತಿನ (MP) ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಕಾಂಗ್ರೆಸ್ ತೊರೆದ ಬಗ್ಗೆ ಯಾವುದೇ ವರದಿಗಳಿಲ್ಲದಿದ್ದರೂ, ನಟ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.

ದಿ ಹಿಂದೂ ವರದಿಯ ಪ್ರಕಾರ, ಚಿರಂಜೀವಿಯನ್ನು ವಾಗ್ದಂಡನೆಗೆ ಗುರಿಪಡಿಸಿದ ವ್ಯಕ್ತಿಯನ್ನು ರಾಜಾ ಕಾರ್ತಿಕ್ ಗಂಟಾ ಎಂದು ಗುರುತಿಸಲಾಗಿದೆ, ಅವರು ಕೇಂಬ್ರಿಡ್ಜ್ ಮೂಲದ ಐಟಿ ವೃತ್ತಿಪರರು, ಅವರು ತಮ್ಮ ಮತ ಚಲಾಯಿಸಲು ಲಂಡನ್‌ನಿಂದ ಪ್ರಯಾಣಿಸಿದ್ದರು.

ಚಿರಂಜೀವಿ ಮತ್ತು ೨೦೨೪ ರ ಲೋಕಸಭೆ ಚುನಾವಣೆ

ಮೇ ೧೩ ರಂದು, ಚಿರಂಜೀವಿ ಮತ್ತು ಅವರ ಕುಟುಂಬ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡುತ್ತಿರುವುದು ಕಂಡುಬಂದಿತು. ಮಿರರ್ ನೌ ಎಂಬ ಸುದ್ದಿ ಚಾನೆಲ್‌ನ ವೀಡಿಯೋ, ಯೂಟ್ಯೂಬ್‌ನಲ್ಲಿ ಲಭ್ಯವಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಈ ಕ್ಷಣವನ್ನು ಸೆರೆಹಿಡಿಯುತ್ತದೆ. ವೀಡಿಯೋದಲ್ಲಿ, ಚಿರಂಜೀವಿ ಕಪ್ಪು ಬಟ್ಟೆಯನ್ನು ಧರಿಸಿ ಕಾಣಿಸಿಕೊಂಡಿದ್ದಾರೆ, ವೈರಲ್ ಕ್ಲಿಪ್‌ಗಳಲ್ಲಿ ಅವರು ಧರಿಸಿರುವ ಬಿಳಿ ಉಡುಗೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ.

(ಮೂಲ: ಯೂಟ್ಯೂಬ್)

ತೀರ್ಪು

೨೦೨೪ ರ ಲೋಕಸಭಾ ಚುನಾವಣೆಯ ಮಧ್ಯೆ, ಹಳೆಯ ವೀಡಿಯೋವೊಂದು ಮರುಕಳಿಸಿದೆ, ಇದು ಮತಗಟ್ಟೆಯಲ್ಲಿ ಸರದಿಯನ್ನು ಬೈಪಾಸ್ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಮತದಾರರಿಂದ ಚಿರಂಜೀವಿ ಅವರನ್ನು ಟೀಕಿಸಿದ ಇತ್ತೀಚಿನ ಘಟನೆಯನ್ನು ಚಿತ್ರಿಸುತ್ತದೆ ಎಂದು ಕೆಲವರು ನಂಬಿದ್ದಾರೆ. ಆದರೆ, ಈ ವೀಡಿಯೋ ೨೦೧೪ ರದ್ದು ಮತ್ತು ಪ್ರಸ್ತುತ ಭಾರತದ ಸಾರ್ವತ್ರಿಕ ಚುನಾವಣೆಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.