"ಜಿ೭ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಅವರನ್ನು ನಿಂದಿಸಲಾಯಿತು" ಎಂದು ಹೇಳಲು ಕ್ಲಿಪ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ವಿವೇಕ್ ಜೆ
ಜುಲೈ 4 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo

ಫ್ಯಾಕ್ಟ್ ಚೆಕ್ಸ್

ತೀರ್ಪು Misleading

ವೀಡಿಯೋದ ದೀರ್ಘ ಆವೃತ್ತಿಯು ಪಿಎಂ ಮೋದಿ ಅವರು ಫ್ರೆಂಚ್ ಅಧ್ಯಕ್ಷರೊಂದಿಗೆ ಮತ್ತು ನಂತರ ಜಪಾನ್ ಪ್ರಧಾನಿಯೊಂದಿಗೆ ಸಂವಾದ ನಡೆಸುವುದನ್ನು ತೋರಿಸುತ್ತದೆ.

ಕ್ಲೈಮ್ ಐಡಿ e381ef70

ಸಂದರ್ಭ

ಜಿ೭ ಶೃಂಗಸಭೆ, ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಜಪಾನ್, ಇಟಲಿ, ಕೆನಡಾ ಮತ್ತು ಯುರೋಪಿಯನ್ ಯೂನಿಯನ್ ರಾಜ್ಯಗಳನ್ನು ಒಳಗೊಂಡಿರುವ ಅಂತರಸರ್ಕಾರಿ ರಾಜಕೀಯ ವೇದಿಕೆಯಾಗಿದ್ದು, ಮೇ ೧೯ ರಿಂದ ಮೇ ೨೧, ೨೦೨೩ ರವರೆಗೆ ಜಪಾನ್‌ನ ಹಿರೋಷಿಮಾದಲ್ಲಿ ನಡೆಯಿತು.

ಭಾರತವೂ ಕೂಡ ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದು, ಅದರ ಹಿನ್ನಲೆಯಲ್ಲಿ ಜಪಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅನೇಕ ವೀಡಿಯೋಗಳು ಮತ್ತು ಚಿತ್ರಗಳು ಆನ್‌ಲೈನ್‌ನಲ್ಲಿ ಪ್ರಚರಿತಗೊಂಡವು. ಮೇ ೨೧, ೨೦೨೩ ರಂದು, ಭಾರತದ ವಿರೋಧ ಪಕ್ಷಗಳಲ್ಲಿ ಒಂದಾದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಸದಸ್ಯರಾದ ಜವಾಹರ್ ಸಿರ್ಕಾರ್, "ಹಿರೋಷಿಮಾದಲ್ಲಿ ನಡೆದ ಜಿ೭ ಶೃಂಗಸಭೆಯಲ್ಲಿ ನಮ್ಮ ಪ್ರಧಾನಿ ಏಕಾಂಗಿಯಾಗಿ ಮತ್ತು ಪ್ರತ್ಯೇಕವಾಗಿರುವಂತೆ ತೋರುತ್ತಿದೆ" ಎಂಬ ಶೀರ್ಷಿಕೆಯೊಂದಿಗೆ ಶೃಂಗಸಭೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

೧೨ ಸೆಕೆಂಡುಗಳ ವೀಡಿಯೋದಲ್ಲಿ ಮೋದಿಯವರು ಇತರ ದೇಶಗಳ ನಾಯಕರೊಂದಿಗೆ ವೇದಿಕೆಯ ಮೇಲೆ ನಿಂತಿದ್ದಾರೆ ಮತ್ತು ಫ್ರಾನ್ಸ್ ಪ್ರಧಾನಿ ಎಮ್ಯಾನುಯೆಲ್ ಮ್ಯಾಕ್ರನ್ ಅವರು ತಮ್ಮ ಎಡಭಾಗದಲ್ಲಿ ನಿಂತಿದ್ದ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಸಂವಾದ ನಡೆಸುತ್ತಿರುವುದನ್ನು ವೀಕ್ಷಿಸುತ್ತಿದ್ದಾರೆ. ಅವರು ಯಾರೊಂದಿಗೂ ಮಾತನಾಡದೆ ಇತರ ನಾಯಕರೊಂದಿಗೆ ವೇದಿಕೆಯಿಂದ ನಿರ್ಗಮಿಸುತ್ತಿರುವುದು ಕೂಡ ಕಂಡುಬಂದಿದೆ. ಇದೇ ವೀಡಿಯೋವನ್ನು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಮತ್ತು ವಕೀಲ ಮತ್ತು ಕಾರ್ಯಕರ್ತ ಪ್ರಶಾಂತ್ ಭೂಷಣ್ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತದ ಪ್ರಧಾನಿಯನ್ನು ಇತರ ನಾಯಕರು ಬದಿಗಿಟ್ಟಿದ್ದಾರೆ ಎಂಬ ಹೇಳಿಕೆಯೊಂದಿಗೆ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಆದರೆ ಈ ವೀಡಿಯೋ ಜಿ೭ ಶೃಂಗಸಭೆಯಲ್ಲಿನ ಒಂದು ಸಣ್ಣ ಕ್ಲಿಪ್ ಮಾತ್ರ. ಮೋದಿ ಅವರನ್ನು ಇತರ ನಾಯಕರು ಸ್ವಾಗತಿಸಿರುವುದನ್ನು ದೀರ್ಘವಾದ ವೀಡಿಯೋ ಹಾಗು ಶೃಂಗಸಭೆಯ ಮೂಲ ದೃಶ್ಯಾವಳಿ ತೋರಿಸುತ್ತದೆ.

ವಾಸ್ತವವಾಗಿ

ಜಿ೭ ಶೃಂಗಸಭೆಯ ಅಧಿಕೃತ ವೆಬ್‌ಸೈಟ್ ಅನ್ನು ನೋಡಿದಾಗ, ವೈರಲ್ ವೀಡಿಯೋವನ್ನು ಮೇ ೨೦, ೨೦೨೩ ರಂದು ಹಿರೋಷಿಮಾದ ಗ್ರ್ಯಾಂಡ್ ಪ್ರಿನ್ಸ್ ಹೋಟೆಲ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ವೆಬ್‌ಸೈಟ್‌ನಲ್ಲಿ ವೀಡಿಯೋ ಇಲ್ಲ, ಆದರೆ "ಫ್ಯಾಮಿಲಿ ಫೋಟೋ ವಿಥ್ ಜಿ೭ ಆಂಡ್ ಔಟ್ರೀಚ್ (ಗ್ರಾಂಡ್ ಪ್ರಿನ್ಸ್ ಹೋಟೆಲ್ ಹಿರೋಷಿಮಾ)" ಎಂಬ ಶೀರ್ಷಿಕೆಯಡಿಯಲ್ಲಿ ಮೋದಿಯವರ ಎರಡು ಫೋಟೋಗಳಿವೆ. ಫ್ರಾನ್ಸ್ ಪ್ರಧಾನಿ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮೋದಿ ಮಾತನಾಡುತ್ತಿರುವುದು ಫೋಟೋದಲ್ಲಿದೆ.

ನಾವು ಈ ಶೃಂಗಸಭೆಯ ವೀಡಿಯೋಗಳಿಗಾಗಿ ಹುಡುಕಿದಾಗ ಮೇ ೨೦ ರಂದು, ಪ್ರಧಾನಿ ಮೋದಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸುದೀರ್ಘ ವೀಡಿಯೋವೊಂದನ್ನು ಪೋಷ್ಟ್ ಮಾಡಿದ್ದರು ಮತ್ತು೦:೧೧ ಸೆಕೆಂಡ್ ಸಮಯದಲ್ಲಿ ಮ್ಯಾಕ್ರನ್ ಮೋದಿಯವರನ್ನು ಸ್ವಾಗತಿಸುತ್ತಾ ಅವರೊಂದಿಗೆ ವೇದಿಕೆಯತ್ತ ನಡೆಯುವುದನ್ನು ನಾವು ನೋಡಬಹುದು. ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಯುರೋಪಿಯನ್ ಕೌನ್ಸಿಲ್ (ಈಸಿ) ಅಧ್ಯಕ್ಷರಾದ ಚಾರ್ಲ್ಸ್ ಮಿಶೆಲ್ ಮತ್ತು ಇತರರು ಅವರನ್ನು ಅನುಸರಿಸುತ್ತಾರೆ. ವೀಡಿಯೋವಿನ ೨:೩೯ ನಿಮಿಷಗಳಲ್ಲಿ, ಫೋಟೋ ಸೆಷನ್‌ನ ನಂತರ, ವೇದಿಕೆಯಿಂದ ಹೊರಡುವಾಗ, ಮೋದಿ ಅವರು ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಮಾತನಾಡುತ್ತಿರುವುದು ಮತ್ತು ಇಬ್ಬರೂ ಹಸ್ತಲಾಘವ ಮಾಡುವುದು ಕೂಡ ನೋಡಬಹುದು.

ದಿ ಇಂಡಿಪೆಂಡೆಂಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿನ ಲೈವ್‌ಸ್ಟ್ರೀಮ್‌ನಲ್ಲಿ ಕೂಡ ಇದೇ ದೃಶ್ಯಗಳನ್ನು ನೋಡಬಹುದು.

ಪ್ರಧಾನಿ ಮೋದಿಯವರು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಇಯು ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್, ಇಯು ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮಿಶೆಲ್, ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಇತರ ನಾಯಕರೊಂದಿಗೆ ತಮ್ಮ ಸಂಭಾಷಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮೂರು ದಿನಗಳ ಟೋಕಿಯೋ ಸಂದರ್ಶನದ ವೇಳೆ ಮೋದಿಯವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೂ ಕೂಡ ಮಾತುಕತೆ ನಡೆಸಿದರು. 

ಎನ್ ಡಿ ಟಿವಿ ವರದಿಯ ಪ್ರಕಾರ, ಹಿರೋಷಿಮಾದಲ್ಲಿ ನಡೆದ ಜಿ೭ ಶೃಂಗಸಭೆಯಲ್ಲಿ ಬೈಡನ್ ರವರು ಮೋದಿಯವರನ್ನು ಹೊಗಳಿದರು ಮತ್ತು "ನೀವು ತುಂಬಾ ಜನಪ್ರಿಯರಾಗಿದ್ದೀರಿ ಮತ್ತು ನಾನು ನಿಮ್ಮ ಆಟೋಗ್ರಾಫ್ ತೆಗೆದುಕೊಳ್ಳಬೇಕು" ಎಂದು ಕೂಡ ಹೇಳಿದರು. ಜೂನ್ ೨೦೨೩ ರಲ್ಲಿ ಭಾರತ-ಯುಎಸ್ ಶೃಂಗಸಭೆಗಾಗಿ ಅಮೇರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರು ಮೋದಿ ಅವರನ್ನು ನೋಡಲು ಟಿಕೆಟ್‌ಗಾಗಿ ಹೇಗೆ ವಿನಂತಿಸಿದರು ಎಂಬುದರ ಕುರಿತು ಬೈಡನ್ ಮಾತನಾಡುತ್ತಿದ್ದರು.

ತೀರ್ಪು 

ಜಪಾನಿನ ಹಿರೋಷಿಮಾದಲ್ಲಿ ನಡೆದ ಜಿ೭ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಫೋಟೋ ಸೆಷನ್‌ನ ಸುದೀರ್ಘ ವೀಡಿಯೋದ ಒಂದು ಸಣ್ಣ ಆವೃತ್ತಿಯನ್ನು ಹಂಚಿಕೊಳ್ಳುವ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಇತರ ವಿಶ್ವ ನಾಯಕರು 'ಪಕ್ಕಕ್ಕೆ ತಳ್ಳಿದ್ದಾರೆ' ಮತ್ತು 'ನಿರ್ಲಕ್ಷಿಸಿದ್ದಾರೆ' ಎಂದು ಸಂದರ್ಭದಿಂದ ಹೊರಗಿಡಲಾದ ನಿರೂಪಣೆಗಳನ್ನು ಸೃಷ್ಟಿಸಲಾಗಿದೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.