ಪ್ರಧಾನಿ ಮೋದಿಯವರನ್ನು ಟೀಕಿಸುವ ನಟ ರಣವೀರ್ ಸಿಂಗ್ ಅವರ ವೀಡಿಯೋ ಎಡಿಟ್ ಮಾಡಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ಏಪ್ರಿಲ್ 18 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಪ್ರಧಾನಿ ಮೋದಿಯವರನ್ನು ಟೀಕಿಸುವ ನಟ ರಣವೀರ್ ಸಿಂಗ್ ಅವರ ವೀಡಿಯೋ ಎಡಿಟ್ ಮಾಡಲಾಗಿದೆ

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಮೂಲ ಕ್ಲಿಪ್‌ನಲ್ಲಿ ಸಿಂಗ್ ಅವರು ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ಅವರು ಕಾಂಗ್ರೆಸ್ ಅನ್ನು ಅನುಮೋದಿಸಿದ್ದಾರೆ ಎಂದು ತೋರಲು ವೀಡಿಯೋದಲ್ಲಿ ಎಐ ಧ್ವನಿಯನ್ನು ಬಳಸಲಾಗಿದೆ.

ಕ್ಲೈಮ್ ಐಡಿ 94783b5a

ಹೇಳಿಕೆ ಏನು? 

ಭಾರತದಲ್ಲಿ ೨೦೨೪ ರ ಲೋಕಸಭೆ ಚುನಾವಣೆಯ ಪ್ರಾರಂಭಿಕ ಹಂತದ ಒಂದು ದಿನದ ಮೊದಲು, ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಾರೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ ಸಿ) ಅನ್ನು ಅನುಮೋದಿಸಿದ್ದಾರೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಕ್ಲಿಪ್‌ನಲ್ಲಿ, ನಟ ಸುದ್ದಿ ಸಂಸ್ಥೆ ಎಎನ್ಐ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹಿಂದಿಯಲ್ಲಿ ಹೀಗೆ ಹೇಳಿದ್ದಾರೆ, “ಇದು ಮೋದಿ ಜಿ ಅವರ ಉದ್ದೇಶ. ನಮ್ಮ ದುಃಖದ ಜೀವನ, ನಮ್ಮ ಭಯ, ನಮ್ಮ ನಿರುದ್ಯೋಗ ಮತ್ತು ಹಣದುಬ್ಬರವನ್ನು ಆಚರಿಸುವುದು ಅವರ ಗುರಿಯಾಗಿತ್ತು. ಭಾರತವು ಕ್ಷಿಪ್ರಗತಿಯಲ್ಲಿ ಅನ್ಯಾಯದ ಯುಗಕ್ಕೆ ಹೋಗುತ್ತಿದೆ, ಆದರೆ ನಮ್ಮ ಅಭಿವೃದ್ಧಿ ಮತ್ತು ನಮ್ಮ ನ್ಯಾಯವನ್ನು ಕೇಳಲು ನಾವು ಎಂದಿಗೂ ಮರೆಯಬಾರದು. ಅದಕ್ಕಾಗಿಯೇ ನೀವು ಮತ ​​ಚಲಾಯಿಸುವ ಮೊದಲು ಯೋಚಿಸಿ. (ಹಿಂದಿಯಿಂದ ಅನುವಾದಿಸಲಾಗಿದೆ.)” "ನ್ಯಾಯಕ್ಕಾಗಿ ಮತ ಚಲಾಯಿಸಿ, ಕಾಂಗ್ರೆಸ್‌ಗೆ ಮತ ನೀಡಿ" ಎಂಬ ಪ್ರಚಾರದ ಸಂದೇಶದೊಂದಿಗೆ ವೀಡಿಯೋ ಕೊನೆಗೊಳ್ಳುತ್ತದೆ. 

ಕಾಂಗ್ರೆಸ್‌ಗೆ ಮತ ಹಾಕುವಂತೆ ಜನರನ್ನು ಪ್ರೋತ್ಸಾಹಿಸಲು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅಂತಹ ಪೋಸ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ಕ್ಲಿಪ್ ಅನ್ನು ಎಡಿಟ್ ಮಾಡಲಾಗಿದೆ ಮತ್ತು ನಟನ ವೀಡಿಯೋದಲ್ಲಿ ನಕಲಿ ಆಡಿಯೋವನ್ನು ಇರಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಸಿಂಗ್ ಅವರು ಪ್ರಧಾನಿಯನ್ನು ಈ ವೀಡಿಯೋದಲ್ಲಿ ಟೀಕಿಸಲಿಲ್ಲ, ಹಾಗು ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಅನ್ನು ಅನುಮೋದಿಸಲ್ಲ. ಈ ಕ್ಲಿಪ್ ಅನ್ನು ಐಎನ್ ಸಿ ವಕ್ತಾರರಾದ ಸುಜಾತಾ ಪಾಲ್ (ಇಲ್ಲಿ ಆರ್ಕೈವ್) ಅವರೂ ಸಹ ಹಂಚಿಕೊಂಡಿದ್ದಾರೆ, ಮತ್ತು ಅವರು ಕಾಮೆಂಟ್‌ಗಳಲ್ಲಿ ಇದು "ಡೀಪ್ ಫೇಕ್ ವೀಡಿಯೋ (sic)" ಎಂದು ಹೇಳಿದ್ದಾರೆ.

ವೀಡಿಯೋದ ಮೂಲ ಯಾವುದು?

ಸಿಂಗ್ ಅವರು ಭಾರತೀಯ ಸುದ್ದಿ ಸಂಸ್ಥೆ ಎಎನ್ಐ ಯೊಂದಿಗೆ ಮಾತನಾಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದರಿಂದ ಸೂಚನೆಯನ್ನು ತೆಗೆದುಕೊಂಡು, ಏಪ್ರಿಲ್ ೧೬, ೨೦೨೪ ರಂದು ಎಎನ್‌ಐ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ಕ್ಲಿಪ್‌ನ ಮೂಲ ಆವೃತ್ತಿಯನ್ನು ನಾವು ಕಂಡುಕೊಂಡೆವು. ಅದರ ಶೀರ್ಷಿಕೆ ಹೀಗಿದೆ, “ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಪ್ರಧಾನಿ ಮೋದಿಯವರ ‘ವಿಕಾಸ್ ಭಿ, ವಿರಾಸತ್ ಭಿ’ ದೃಷ್ಟಿಕೋನವನ್ನು ಶ್ಲಾಘಿಸಿದ್ದಾರೆ”.

ಸ್ವಲ್ಪ ಉದ್ದವಾದ ಈ ಕ್ಲಿಪ್‌ನಲ್ಲಿ, ನಟ  ಹೀಗೆ ಹೇಳಿದ್ದಾರೆ, “ಇದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ… ಇದು ಮೋದಿ ಜಿ ಅವರ ಉದ್ದೇಶವಾಗಿತ್ತು. ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ನಮ್ಮ ಇತಿಹಾಸ ಮತ್ತು ನಮ್ಮ ಪರಂಪರೆಯನ್ನು ಆಚರಿಸುವುದು ಅವರ ಗುರಿಯಾಗಿತ್ತು. ಈಗ ಭಾರತವು ಆಧುನಿಕತೆಯತ್ತ ಕ್ಷಿಪ್ರಗತಿಯಲ್ಲಿ ಸಾಗುತ್ತಿರುವಾಗ, ನಾವು ನಮ್ಮ ಬೇರುಗಳು ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎಂದಿಗೂ ಮರೆಯಬಾರದು. ಎಎನ್‌ಐ ವೀಡಿಯೋ ೫೬ ಸೆಕೆಂಡ್‌ಗಳಷ್ಟು ಉದ್ದವಾಗಿದೆ ಮತ್ತು ಮೊದಲ ೩೬ ಸೆಕೆಂಡ್‌ಗಳನ್ನು ಬಳಸಿಕೊಂಡು ನಕಲಿ ಚುನಾವಣಾ ಪ್ರಚಾರ ಕ್ಲಿಪ್ ಅನ್ನು ರಚಿಸಲಾಗಿದೆ.

ವೀಡಿಯೋದ ಸುದೀರ್ಘ ಆವೃತ್ತಿ, ಸಿಂಗ್ ಅವರ ೨:೩೩ ನಿಮಿಷಗಳ ಸಂದರ್ಶನವನ್ನು ಎಎನ್‌ಐ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪ್ರಕಟಿಸಿದೆ. ವೈರಲ್ ಕ್ಲಿಪ್ ಅನ್ನು ಮೂಲ ವೀಡಿಯೋದಲ್ಲಿ ಸುಮಾರು ೧:೧೫  ರಿಂದ ೧:೫೧ ರವರೆಗೆ ನೋಡಬಹುದು.

ಸಿಂಗ್ ಮತ್ತು ಬಾಲಿವುಡ್ ನಟಿ ಕೃತಿ ಸನೋನ್ ಏಪ್ರಿಲ್ ೧೬ ರಂದು ವಾರಣಾಸಿಗೆ ಭೇಟಿ ನೀಡಿದಾಗ ಸಂದರ್ಶನವನ್ನು ಚಿತ್ರೀಕರಿಸಲಾಗಿದೆ. ನಟರು ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಗಂಗಾನದಿಯಲ್ಲಿ ವಿಹಾರ ಮಾಡಿದರು ಎಂದು ವರದಿಗಳು ಹೇಳುತ್ತವೆ.

ವೈರಲ್ ವೀಡಿಯೋವನ್ನು ಹೇಗೆ ರಚಿಸಲಾಗಿದೆ?

ಸಿಂಗ್ ಅವರ ಮೂಲ ಆಡಿಯೋದಲ್ಲಿ ಕೆಲವು ಪದಗಳನ್ನು ಬದಲಾಯಿಸುವ ಮೂಲಕ ವೈರಲ್ ಕ್ಲಿಪ್ ಅನ್ನು ರಚಿಸಲಾಗಿದೆ. ಸಿಂಗ್ ವಾಸ್ತವವಾಗಿ ಹೀಗೆ ಹೇಳಿದ್ದಾರೆ, “ಇದು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ನಮ್ಮ ಇತಿಹಾಸ ಮತ್ತು ನಮ್ಮ ಪರಂಪರೆಯನ್ನು ಆಚರಿಸುವುದು ಅವರ ಗುರಿಯಾಗಿತ್ತು,” ಆದರೆ ವೈರಲ್ ವೀಡಿಯೋದಲ್ಲಿ ಇದನ್ನು “ನಮ್ಮ ದುಃಖದ ಜೀವನ, ನಮ್ಮ ಭಯ, ಹಣದುಬ್ಬರ, ನಮ್ಮ ನಿರುದ್ಯೋಗವನ್ನು ಆಚರಿಸುವುದು ಅವರ ಗುರಿಯಾಗಿತ್ತು," ಎಂದು ಬದಲಾಯಿಸಲಾಗಿದೆ. 

ವೈರಲ್ ವೀಡಿಯೋದಲ್ಲಿರುವ ಆಡಿಯೋ ಸ್ಪಷ್ಟವಾಗಿ ಸಿಂಗ್ ಅವರ ತುಟಿ ಚಲನೆಗಳಿಗೆ ಹೊಂದಿಕೆಯಾಗುತ್ತಿಲ್ಲ, ಇದು ವೀಡಿಯೋದ ಆಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ತೋರಿಸುತ್ತದೆ.

ಇತ್ತೀಚೆಗೆ, ಬಾಲಿವುಡ್ ನಟ ಅಮೀರ್ ಖಾನ್ ಅವರ ಇದೇ ರೀತಿಯ ಎಡಿಟ್ ಮಾಡಲಾದ ವೀಡಿಯೋ ಕೂಡ ವೈರಲ್ ಆಗಿದ್ದು, ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಮತದಾರರನ್ನು ಉತ್ತೇಜಿಸಿದರು ಎಂದು ಹೇಳಲಾಗಿತ್ತು. 

ತೀರ್ಪು

ಮುಂಬರುವ ಲೋಕಸಭೆ ಚುನಾವಣೆಗೆ ನಟ ರಣವೀರ್ ಸಿಂಗ್ ಕಾಂಗ್ರೆಸ್ ಅನ್ನು ಅನುಮೋದಿಸಿದ್ದಾರೆ ಎಂದು ತಪ್ಪಾಗಿ ಹೇಳಲು ಎಐ ಧ್ವನಿಯನ್ನು ಬಳಸಿಕೊಂಡು ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ. ಮೂಲ ವೀಡಿಯೋದಲ್ಲಿ, ಅವರು  ಮೋದಿಯನ್ನು ಹೊಗಳುತ್ತಿರುವುದು ಕಂಡುಬಂದಿದೆ ಮತ್ತು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಆದರಿಂದ ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ. 

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.