ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಮುನ್ನಡೆ ಸಾಧಿಸಿದೆ ಎಂದು ಎಡಿಟ್ ಆಗಿರುವ ನ್ಯೂಸ್೧೮ ಅಭಿಪ್ರಾಯ ಸಮೀಕ್ಷೆ ಚಿತ್ರವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರೋಹಿತ್ ಗುಟ್ಟಾ
ಮಾರ್ಚ್ 18 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆಂಧ್ರಪ್ರದೇಶದಲ್ಲಿ  ವೈಎಸ್‌ಆರ್‌ಸಿಪಿ ಮುನ್ನಡೆ ಸಾಧಿಸಿದೆ ಎಂದು ಎಡಿಟ್ ಆಗಿರುವ   ನ್ಯೂಸ್೧೮ ಅಭಿಪ್ರಾಯ ಸಮೀಕ್ಷೆ ಚಿತ್ರವನ್ನು ಹಂಚಿಕೊಳ್ಳಲಾಗಿದೆ

ವೈರಲ್ ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ವೈಎಸ್‌ಆರ್‌ಸಿಪಿ ಮುಂಚೂಣಿಯಲ್ಲಿದೆ ಎಂದು ತಪ್ಪಾಗಿ ಪ್ರಸ್ತುತಪಡಿಸಲು ಎನ್‌ಡಿಎ ಮತ್ತು ವೈಎಸ್‌ಆರ್‌ಸಿಪಿ ಯ ಅಭಿಪ್ರಾಯ ಸಂಗ್ರಹ ಅಂಕಿಅಂಶಗಳನ್ನು ಬದಲಾಯಿಸಲಾಗಿದೆ.

ಕ್ಲೈಮ್ ಐಡಿ 50653ff6

ಹೇಳಿಕೆ ಏನು?

ಭಾರತದ ಲೋಕಸಭೆ ಚುನಾವಣೆಯ ಪೂರ್ವದಲ್ಲಿ, ನ್ಯೂಸ್೧೮ ಅಭಿಪ್ರಾಯ ಸಂಗ್ರಹದ ಪ್ರಸಾರದ ಸ್ಕ್ರೀನ್‌ಶಾಟ್ ಅನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಇದು ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಮುಂಚೂಣಿಯಲ್ಲಿದೆ ಎಂದು ತೋರಿಸುತ್ತದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಮಿತ್ರಪಕ್ಷಗಳು ಸೇರಿದಂತೆ ೪೧ ಪ್ರತಿಶತದೊಂದಿಗೆ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ (ಎನ್‌ಡಿಎ) ಅನ್ನು ಮೀರಿಸುವ ಮೂಲಕ ವೈಎಸ್‌ಆರ್‌ಸಿಪಿ ಶೇಕಡಾ ೫೦ ರಷ್ಟು ಮತಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಸ್ಕ್ರೀನ್‌ಶಾಟ್ ಸೂಚಿಸುತ್ತದೆ. ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಸ್ಕ್ರೀನ್‌ಶಾಟ್ ಅನ್ನು ಎಡಿಟ್ ಮಾಡಲಾಗಿದೆ; ಎನ್‌ಡಿಎ ಮತ್ತು ವೈಎಸ್‌ಆರ್‌ಸಿಪಿಗೆ ಶೇಕಡಾವಾರು ಮತಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

ನಾವು ಕಂಡುಹಿಡಿದದ್ದು ಏನು?

ನ್ಯೂಸ್ ೧೮ ಮಾರ್ಚ್ ೧೪, ೨೦೨೪ ರಂದು ತಮ್ಮ ಲೋಕಸಭಾ ಕ್ಷೇತ್ರಗಳ "ಮೆಗಾ ಅಭಿಪ್ರಾಯ ಸಮೀಕ್ಷೆಗಳ" ಫಲಿತಾಂಶಗಳನ್ನು ಬಿಡುಗಡೆ ಮಾಡಿತು. ಈ ಸಮೀಕ್ಷೆಯು ಬಿಜೆಪಿ ನೇತೃತ್ವದ ಎನ್‌ಡಿಎಗೆ ೫೪೩ ಸ್ಥಾನಗಳಲ್ಲಿ ೪೧೧ ಸ್ಥಾನಗಳನ್ನು ನಿರೀಕ್ಷಿಸಿದೆ, ಆದರೆ ಭಾರತೀಯ ಇಂಡಿಯನ್ ನ್ಯಾಷನಲ್ ದೆವೆಲೋಪ್ಮೆಂಟಲ್ ಇನ್ಕ್ಲ್ಯೂಸಿವ್ ಅಲಯನ್ಸ್   (ಐ.ಎನ್‌.ಡಿ.ಐ.ಎ), ಕಾಂಗ್ರೆಸ್ ನೇತೃತ್ವದ ೧೦೫ ಸ್ಥಾನಗಳನ್ನು ಪಡೆಯಲಿದೆ ಎಂದು ಊಹಿಸಿದೆ. ನ್ಯೂಸ್ ೧೮ ಪ್ರಸಾರ ಮತ್ತು ಅವರ ಅಧಿಕೃತ ಎಕ್ಸ್ (ಹಿಂದೆ ಟ್ವಿಟರ್) ಖಾತೆಯ ಪೋಷ್ಟ್ ಅನ್ನು ಪರಿಶೀಲಿಸಿದಾಗ ವ್ಯತ್ಯಾಸಗಳು ಕಂಡುಬಂದವು.

ಮೂಲ ಪ್ರಸಾರವು ಆಂಧ್ರಪ್ರದೇಶದಲ್ಲಿ ಎನ್‌ಡಿಎ ಶೇಕಡಾ ೫೦ ರಷ್ಟು ಮತಗಳನ್ನು (೧೮  ಸ್ಥಾನಗಳು) ಮತ್ತು ವೈಎಸ್‌ಆರ್‌ಸಿಪಿ ಶೇಕಡಾ ೪೧ (೭ ಸ್ಥಾನಗಳು) ಪಡೆಯಬಹುದು ಎಂದು ಹೇಳಲಾಗಿದೆ. ವೈರಲ್ ಸ್ಕ್ರೀನ್‌ಶಾಟ್‌ಗೆ ವ್ಯತಿರಿಕ್ತವಾಗಿ, ವೈಎಸ್‌ಆರ್‌ಸಿಪಿ ಪಟ್ಟಿಯಲ್ಲಿ ಎರಡನೆಯದಾಗಿ ಕಾಣಿಸಿಕೊಳ್ಳುತ್ತದೆ, ಅಧಿಕೃತ ವೀಡಿಯೋ ಅದನ್ನು ಮೊದಲು ಇರಿಸುತ್ತದೆ. ಪಕ್ಷಗಳ ಸ್ಥಾನಗಳನ್ನು ಬದಲಾಯಿಸಲಾಗಿದೆ ಮಾತ್ರವಲ್ಲ, ಮುಖ್ಯ ಪ್ರದರ್ಶನ ಮತ್ತು ಸುದ್ದಿ ಟಿಕ್ಕರ್ ಎರಡರಲ್ಲೂ ಅವರ ಮತ ಶೇಕಡಾವಾರು ಮತ್ತು ಯೋಜಿತ ಸ್ಥಾನಗಳ ಎಣಿಕೆಗಳನ್ನು ಬದಲಾಯಿಸಲಾಗಿದೆ.

ವೈರಲ್ ಸ್ಕ್ರೀನ್‌ಶಾಟ್ ಮತ್ತು ಮೂಲ ಪ್ರಸಾರದ ನಡುವಿನ ಹೋಲಿಕೆ.
(ಮೂಲ: ಎಕ್ಸ್/ನ್ಯೂಸ್ ೧೮/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಮಾರ್ಚ್ ೧೪, ೨೦೨೪ ರಂದು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನದಲ್ಲಿ, ನ್ಯೂಸ್ ೧೮ ಅವರ ಮೆಗಾ ಒಪಿನಿಯನ್ ಪೋಲ್ ಪ್ರಕಾರ, ಎನ್‌ಡಿಎ ಶೇಕಡಾ ೫೦ ರಷ್ಟು ಮತಗಳು ಮತ್ತು ೧೮ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ, ಆದರೆ ವೈಎಸ್‌ಆರ್‌ಸಿಪಿ ಆಂಧ್ರದಲ್ಲಿ ಶೇಕಡಾ ೪೧ ರಷ್ಟು ಮತಗಳು ಮತ್ತು ೭ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಲಾಗಿದೆ. 

ತೀರ್ಪು

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಮುನ್ನಡೆ ಸಾಧಿಸುತ್ತಿದೆ ಎಂದು ಹೇಳಲು ನ್ಯೂಸ್೧೮ ನಡೆಸಿದ ಅಭಿಪ್ರಾಯ ಸಂಗ್ರಹದ ಸಂಪಾದಿತ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳಲಾಗಿದೆ. ಆದರೆ, ಚಿತ್ರವನ್ನು ಡಿಜಿಟಲ್ ಆಗಿ  ಎಡಿಟ್ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.