೨೦೨೪ರ ಭಾರತೀಯ ಚುನಾವಣೆಗಳ ವೇಳಾಪಟ್ಟಿ ಎಂದು ಫೇಕ್ ಚಿತ್ರವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಉಮ್ಮೆ ಕುಲ್ಸುಮ್
ಫೆಬ್ರವರಿ 26 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೪ರ ಭಾರತೀಯ ಚುನಾವಣೆಗಳ ವೇಳಾಪಟ್ಟಿ ಎಂದು ಫೇಕ್ ಚಿತ್ರವನ್ನು ಹಂಚಿಕೊಳ್ಳಲಾಗಿದೆ

ವೈರಲ್ ಆಗಿರುವ ಮತದಾನ ವೇಳಾಪಟ್ಟಿಯ ಸ್ಕ್ರೀನ್‌ಶಾಟ್ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. (ಮೂಲ: ಎಕ್ಸ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಭಾರತೀಯ ಚುನಾವಣಾ ಆಯೋಗ (ಇಸಿಐ) ಮತದಾನದ ದಿನಾಂಕಗಳ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ ಎಂದು ಹೇಳಿದೆ.

ಕ್ಲೈಮ್ ಐಡಿ ca1da789

ಹೇಳಿಕೆ ಏನು?
ಭಾರತದ  ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ, ಮುಂಬರುವ ಮತದಾನದ ದಿನಾಂಕಗಳು, ನಾಮನಿರ್ದೇಶನದ ಗಡುವುಗಳು, ಮತ ಎಣಿಕೆಗೆ ಕಟ್ಆಫ್ ದಿನಾಂಕಗಳ ಕುರಿತು, ಹಾಗು ಯಾವ ಪಕ್ಷ ಅಥವಾ ಮೈತ್ರಿಯು ವಿಜಯಶಾಲಿಯಾಗಬಹುದು ಎಂಬುದನ್ನು ಊಹಿಸುವ ಹಲವಾರು ಪೋಷ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ  ಹರಿದಾಡುತ್ತಿವೆ. "೨೦೨೪ರ ಸಾರ್ವತ್ರಿಕ ಚುನಾವಣೆಯ ವಿವರಗಳು" ಎಂದು ಉಲ್ಲೇಖಿಸಲಾದ ಸರ್ಕಾರಿ ಅಧಿಕೃತ ಹೇಳಿಕೆ ಅಥವಾ ಬಿಡುಗಡೆಯ ಚಿತ್ರವು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಏಪ್ರಿಲ್ ೧೯ ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ ಮತ್ತು ಮೇ ೨೨ ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಚಿತ್ರ ಹೇಳುತ್ತದೆ. ಇದು ರಾಷ್ಟ್ರವ್ಯಾಪಿ ಚುನಾವಣಾ ಸಂಬಂಧಿತ ಪ್ರಕ್ರಿಯೆಗಳ ಇತರ ದಿನಾಂಕಗಳನ್ನು ಉಲ್ಲೇಖಿಸುತ್ತದೆ ಮತ್ತು ಮಾರ್ಚ್ ೨೩ ರಂದು ಚುನಾವಣೆಗಳನ್ನು ಅಧಿಸೂಚಿಸುತ್ತದೆ ಎಂದು ಹೇಳಲಾಗಿದೆ.

ಈ ನಿರೂಪಣೆಯು ಎಕ್ಸ್ (ಹಿಂದೆ ಟ್ವಿಟ್ಟರ್) ಮತ್ತು ಫೇಸ್‌ಬುಕ್‌ ನಲ್ಲಿ  ಹಂಚಿಕೊಳ್ಳಲಾಗುತ್ತಿದೆ. ಪ್ರಶ್ನೆಯಲ್ಲಿರುವ ಚಿತ್ರವನ್ನು ಹಂಚಿಕೊಳ್ಳುವ ಒಂದು ಎಕ್ಸ್ ಪೋಷ್ಟ್ ಬರೆಯುವ ಸಮಯದಲ್ಲಿ ೨,೮೨ ,೦೦೦  ವೀಕ್ಷಣೆಗಳನ್ನು ಹೊಂದಿದೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಆಗಿರುವ ಮತದಾನ ವೇಳಾಪಟ್ಟಿಯ ಸ್ಕ್ರೀನ್‌ಶಾಟ್ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ.
(ಮೂಲ: ಎಕ್ಸ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ಭಾರತೀಯ ಅಧಿಕಾರಿಗಳು ೨೦೨೪ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.

ನಾವು ಕಂಡುಹಿಡಿದದ್ದು ಏನು?

ಲಾಜಿಕಲಿ ಫ್ಯಾಕ್ಟ್ಸ್ ಭಾರತದ ಚುನಾವಣಾ ಆಯೋಗದ (ಇಸಿಐ) ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದೆ-ದೇಶದಲ್ಲಿ ಚುನಾವಣೆಗಳನ್ನು ನಡೆಸುವ ಪ್ರಮುಖ ನೋಡಲ್ ಏಜೆನ್ಸಿ- ಮತ್ತು ೨೦೨೪ ರ ಲೋಕಸಭೆ ಚುನಾವಣೆ ವೇಳಾಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಅಧಿಸೂಚನೆ, ಹೇಳಿಕೆ ಅಥವಾ ಪತ್ರಿಕಾ ಪ್ರಕಟಣೆಗಳು ಕಂಡುಬಂದಿಲ್ಲ. ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದರೆ ಇಸಿಐ ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತಿತ್ತು. ಅಧಿಕೃತ ಹೇಳಿಕೆಗಳು ಮತ್ತು ಸಂವಹನವನ್ನು ಹೊರತರುವ ನೋಡಲ್ ಭಾರತೀಯ ಸರ್ಕಾರಿ ಸಂಸ್ಥೆಯಾದ ಪತ್ರಿಕಾ ಮಾಹಿತಿ ಬ್ಯೂರೋನಿಂದಲೂ (ಪಿಐಬಿ) ಸಹ ದಿನಾಂಕಗಳನ್ನು ಪ್ರಕಟಿಸಲಾಗುತ್ತಿತ್ತು. ಆದರೆ, ಭಾರತ ಸರ್ಕಾರಕ್ಕೆ ಲಿಂಕ್ ಮಾಡಲಾದ ಯಾವುದೇ ಅಧಿಕೃತ ವೆಬ್‌ಸೈಟ್‌ನಲ್ಲಿ ಚುನಾವಣಾ ವೇಳಾಪಟ್ಟಿಯ ವಿವರಗಳು ಲಭ್ಯವಿಲ್ಲ, ವೈರಲ್ ಚಿತ್ರವು ತಪ್ಪಾದ ಹೇಳಿಕೆಗಳನ್ನು ನೀಡುತ್ತಿದೆ ಎಂದು ಸೂಚಿಸುತ್ತದೆ.

೨೦೨೪ ರ ಲೋಕಸಭಾ ಚುನಾವಣೆಯ ದಿನಾಂಕಗಳಿಗಾಗಿ ಗೂಗಲ್ ನಲ್ಲಿ ಹುಡುಕಾಡಿದಾಗ  ಯಾವುದೇ ವಿಶ್ವಾಸಾರ್ಹ ಸುದ್ದಿ ಔಟ್ಲೆಟ್ನಿಂದ ಯಾವುದೇ ವರದಿಗಳನ್ನು ಪ್ರಕಟಿಸಲಾಗಿಲ್ಲ. 

ವಾಸ್ತವವಾಗಿ, ಎಸಿಐ , ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ, ವೈರಲ್ ಆದ ಚುನಾವಣಾ ದಿನಾಂಕಗಳನ್ನು ನಿರಾಕರಿಸಿ ಹೇಳಿಕೆಯನ್ನು ನೀಡಿದೆ. ಈ ಹೇಳಿಕೆಯು ಕ್ಲೈಮ್‌ಗಳನ್ನು ನಿರ್ಣಾಯಕವಾಗಿ ತಳ್ಳಿಹಾಕುತ್ತದೆ ಮತ್ತು ಇಸಿಐನಿಂದ ಅಧಿಕೃತ ಪ್ರಕಟಣೆಯಾಗಿ ಪ್ರಸಾರವಾಗುವ ಚಿತ್ರವು ಮೋಸವಾಗಿದೆ ಎಂದು ಖಚಿತಪಡಿಸುತ್ತದೆ.

ಅಧಿಕೃತ ದಿನಾಂಕಗಳನ್ನು ಇಸಿಐ ಪತ್ರಿಕಾಗೋಷ್ಠಿಯ ಮೂಲಕ ಪ್ರಕಟಿಸಲಾಗುವುದು ಎಂದು ಪೋಷ್ಟ್ ಹೇಳಿದೆ.

ಜನವರಿಯಲ್ಲಿಯೂ ಸಹ, ಚುನಾವಣೆಯ ದಿನಾಂಕಗಳನ್ನು ಘೋಷಿಸಲಾಗಿದೆ ಮತ್ತು ಲೋಕಸಭೆ ಚುನಾವಣೆಯ ಮತದಾನವು ಏಪ್ರಿಲ್ ೧೬ ರಂದು ಪ್ರಾರಂಭವಾಗಲಿದೆ ಎಂದು ಹೇಳುವ ಪತ್ರವನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಆ ಸಮಯದಲ್ಲಿ, ದೆಹಲಿಯಲ್ಲಿರುವ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿ ದಿನಾಂಕವು ಕೇವಲ ತಾತ್ಕಾಲಿಕ ಉಲ್ಲೇಖವಾಗಿದೆ ಆದರೆ ಅಧಿಕೃತ ಪ್ರಕಟಣೆಯಲ್ಲ ಎಂದು ಸ್ಪಷ್ಟೀಕರಣವನ್ನು ನೀಡಿದರು. ಲಾಜಿಕಲಿ ಫ್ಯಾಕ್ಟ್ಸ್ ನ ಲೇಖನವನ್ನು ನೀವು ಇಲ್ಲಿ ಓದಬಹುದು.

ತೀರ್ಪು

ಭಾರತದ ಚುನಾವಣಾ ಆಯೋಗವು ೨೦೨೪ರ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಇನ್ನೂ ಪ್ರಕಟಿಸಿಲ್ಲ. ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಚಿತ್ರ ಫೇಕ್.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.