ಬಿಜೆಪಿ ರಾಷ್ಟ್ರೀಯ ಮುಖ್ಯ ವಕ್ತಾರರಾಗಿ ಪ್ರಶಾಂತ್ ಕಿಶೋರ್ ಅವರನ್ನು ನೇಮಿಸಿರುವ ಫೇಕ್ ಪತ್ರ ವೈರಲ್ ಆಗಿದೆ

ಮೂಲಕ: ರೋಹಿತ್ ಗುಟ್ಟಾ
ಮೇ 24 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬಿಜೆಪಿ ರಾಷ್ಟ್ರೀಯ ಮುಖ್ಯ ವಕ್ತಾರರಾಗಿ ಪ್ರಶಾಂತ್ ಕಿಶೋರ್ ಅವರನ್ನು ನೇಮಿಸಿರುವ ಫೇಕ್ ಪತ್ರ ವೈರಲ್ ಆಗಿದೆ

ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಹೇಳುವ ಚಿತ್ರದೊಂದಿಗೆ ಸಾಮಾಜಿಕ ಮಾಧ್ಯಮ ಪೋಷ್ಟ್‌ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಲಾಜಿಕಲಿ ಫ್ಯಾಕ್ಟ್ಸ್ ನೊಂದಿಗೆ ಮಾತನಾಡುತ್ತಾ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ವೈರಲ್ ಪತ್ರವನ್ನು "ಫೇಕ್" ಎಂದು ಕರೆದಿದ್ದಾರೆ.

ಕ್ಲೈಮ್ ಐಡಿ 68598a6b

ಹೇಳಿಕೆ ಏನು? 

ಮೇ ೨೨, ೨೦೨೪ ರಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಪತ್ರಿಕಾ ಪ್ರಕಟಣೆಯ ಚಿತ್ರಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಬಿಜೆಪಿಯು ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್ ಅವರನ್ನು ತನ್ನ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವಾಟ್ಸಾಪ್‌ನಲ್ಲೂ ಈ ಪತ್ರ ಹರಿದಾಡುತ್ತಿದೆ.

ಅಂತಹ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಉದ್ದೇಶಿತ ಪತ್ರದ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಹಿಂದೆ ೨೦೧೪ ರಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಚುನಾವಣಾ ಪ್ರಚಾರದಲ್ಲಿ ಕೆಲಸ ಮಾಡಿದ್ದ ಕಿಶೋರ್, ಪ್ರಸ್ತುತ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದ್ದಾರೆ.

ಆದರೆ, ಬಿಜೆಪಿ ಕಿಶೋರ್ ಅವರನ್ನು ತಮ್ಮ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಿಲ್ಲ. ಪತ್ರವನ್ನು ಎಡಿಟ್ ಮಾಡಲಾಗಿದೆ.

ನಾವು ಏನು ಕಂಡುಕೊಂಡಿದ್ದೇವೆ?

ನಾವು ಬಿಜೆಪಿ ವೆಬ್‌ಸೈಟ್‌ನಲ್ಲಿ ಪತ್ರಿಕಾ ಪ್ರಕಟಣೆ ವಿಭಾಗ ಮತ್ತು ಅದರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನೋಡಿದ್ದೇವೆ ಮತ್ತು ಕಿಶೋರ್ ಅವರನ್ನು ಪಕ್ಷದ ವಕ್ತಾರರನ್ನಾಗಿ ನೇಮಕ ಮಾಡಿರುವುದನ್ನು ಪ್ರಕಟಿಸಿದ ಯಾವುದೇ ಪ್ರಕಟಣೆ ಕಂಡುಬಂದಿಲ್ಲ. ಮೇ ೨೨ ರಂದು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾದ ಎಲ್ಲಾ ಪತ್ರಿಕಾ ಪ್ರಕಟಣೆಗಳು ಚುನಾವಣಾ ಪ್ರಚಾರದ ಬಗ್ಗೆ ವಿವರಗಳನ್ನು ಹೊಂದಿದೆ. 

ಮಾರ್ಚ್ ೨೭ ರಿಂದ ರಾಜಕೀಯ ನೇಮಕಾತಿಯ ಕೊನೆಯ ಘೋಷಣೆಯಾಗಿದ್ದು, ಸಿ.ಆರ್ ಕೇಶವನ್ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ಘೋಷಿಸಲಾಗಿದೆ. ಅದೇ ದಿನ, ಪಕ್ಷವು ಚುನಾವಣೆಗೆ ರಾಜ್ಯ ಉಸ್ತುವಾರಿಗಳನ್ನು ಸಹ ಘೋಷಿಸಿತು.

ಬಿಜೆಪಿ ವೆಬ್‌ಸೈಟ್‌ನಲ್ಲಿರುವ ವಕ್ತಾರರ ವಿಭಾಗವು ಅದರ ಎಲ್ಲಾ ಗೊತ್ತುಪಡಿಸಿದ ರಾಷ್ಟ್ರೀಯ ಮತ್ತು ಮುಖ್ಯ ವಕ್ತಾರರನ್ನು ಪಟ್ಟಿ ಮಾಡುತ್ತದೆ. ಅವರ ಮುಖ್ಯ ವಕ್ತಾರ ಅನಿಲ್ ಬಲುನಿ, ಅವರ ಮಾಧ್ಯಮ ಉಸ್ತುವಾರಿ ಕೂಡ, ಅವರು ೨೯ ರಾಷ್ಟ್ರೀಯ ವಕ್ತಾರರನ್ನು ಹೊಂದಿದ್ದಾರೆ. ಅವರಲ್ಲಿ ಕಿಶೋರ್ ಒಬ್ಬರಲ್ಲ. 

ವೈರಲ್ ಪತ್ರಿಕಾ ಪ್ರಕಟಣೆಗೆ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಸಹಿ ಹಾಕಿದ್ದು, ಪತ್ರವು "ಫೇಕ್" ಎಂದು ನಮಗೆ ತಿಳಿಸಿದ್ದು, ಅದನ್ನು "ಫೋಟೋಶಾಪ್ ಮಾಡಲಾಗಿದೆ" ಎಂದು ಹೇಳಿದರು. ವೈರಲ್ ಪತ್ರದಲ್ಲಿ ಯಾವುದೇ ಸ್ಪಷ್ಟವಾದ ವ್ಯತ್ಯಾಸಗಳಿಲ್ಲದಿದ್ದರೂ, ಅದು ಕಿಶೋರ್ ಅವರ ಉಪನಾಮವನ್ನು 'Kishore' ಎಂದು ತಪ್ಪಾಗಿ ಬರೆದಿದೆ. 

ಕಿಶೋರ್ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸದಿದ್ದರೂ, ಅವರ ರಾಜಕೀಯ ಪ್ರಚಾರದ ಎಕ್ಸ್ (ಹಿಂದೆ ಟ್ವಿಟರ್) ಖಾತೆಯು ಜಾನ್ ಸೂರಾಜ್ ಪೋಷ್ಟ್ ಅನ್ನು ಹಾಕಿದೆ (ಇಲ್ಲಿ ಆರ್ಕೈವ್) ಕಾಂಗ್ರೆಸ್ ಪಕ್ಷವು ಈಗ ವೈರಲ್ ಪತ್ರವನ್ನು ಹಂಚಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

ಜಾನ್ ಸೂರಾಜ್ ಅವರ ಪೋಷ್ಟ್‌ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/@jansuraajonline)

ಕಿಶೋರ್ ೨೦೧೮ ರಲ್ಲಿ ಜನತಾ ದಳ (ಯುನೈಟೆಡ್) ಗೆ ಸೇರಿದರು ಮತ್ತು ಪಕ್ಷದ ಉಪಾಧ್ಯಕ್ಷರಾಗಿ ನೇಮಕಗೊಂಡರು ಎಂಬುದು ಗಮನಿಸಬೇಕಾದ ಸಂಗತಿ. ಅವರನ್ನು ೨೦೨೦ ರಲ್ಲಿ ಪಕ್ಷದಿಂದ ಹೊರಹಾಕಲಾಯಿತು. ಅವರು ರಾಜಕೀಯ ಸಲಹಾ ಸಂಸ್ಥೆ I-PAC ಅನ್ನು ನಡೆಸುತ್ತಿದ್ದಾಗ, ಅವರು ೨೦೨೧ ರಲ್ಲಿ ಕಂಪನಿಯೊಂದಿಗೆ ಬೇರ್ಪಟ್ಟರು ಮತ್ತು ಜನ್ ಸೂರಾಜ್ ಅನ್ನು ಪ್ರಾರಂಭಿಸಿದರು.

ತೀರ್ಪು

ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಫೇಕ್ ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಳ್ಳಲಾಗಿದೆ. ಬಿಜೆಪಿ ಅಂತಹ ಯಾವುದೇ ಘೋಷಣೆ ಮಾಡಿಲ್ಲ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.