ಇಲ್ಲ, ತೆಲಂಗಾಣ ಕಾಂಗ್ರೆಸ್ 'ಮುಸ್ಲಿಂ ಘೋಷಣೆ' ಧನಸಹಾಯಕ್ಕಾಗಿ ದೇವಾಲಯದ ಭೂಮಿಯನ್ನು ಹರಾಜು ಮಾಡುವುದಾಗಿ ಭರವಸೆ ನೀಡಲಿಲ್ಲ

ಮೂಲಕ: ರೋಹಿತ್ ಗುಟ್ಟಾ
ನವೆಂಬರ್ 17 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ತೆಲಂಗಾಣ ಕಾಂಗ್ರೆಸ್ 'ಮುಸ್ಲಿಂ ಘೋಷಣೆ' ಧನಸಹಾಯಕ್ಕಾಗಿ ದೇವಾಲಯದ ಭೂಮಿಯನ್ನು ಹರಾಜು ಮಾಡುವುದಾಗಿ ಭರವಸೆ ನೀಡಲಿಲ್ಲ

ಸಾಮಾಜಿಕ ಮಾಧ್ಯಮದಲ್ಲಿನ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ರೇವಂತ್ ರೆಡ್ಡಿಯವರ ಹೇಳಿಕೆಗಳು ಎಂಬ ಸ್ಕ್ರೀನ್‌ಶಾಟ್‌ಗಳು ಫೇಕ್. ಸ್ಕ್ರೀನ್‌ಶಾಟ್‌ ನಲ್ಲಿನ ಲೋಗೋ ಹೊಂದಿರುವ ಸುದ್ದಿವಾಹಿನಿಯು ಸುದ್ದಿಯನ್ನು ಪ್ರಕಟಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಕ್ಲೈಮ್ ಐಡಿ 5ed0b764

ಇಲ್ಲಿನ ಹೇಳಿಕೆಯೇನು?

ನವೆಂಬರ್ ೩೦, ೨೦೨೩ ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಮುನ್ನ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಎ ರೇವಂತ್ ರೆಡ್ಡಿ ಅವರು ನೀಡಿರುವ ಹೇಳಿಕೆಗಳದ್ದೆಂದು ತೋರಿಸುವ ಎರಡು ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅಧಿಕಾರಕ್ಕೆ ಬಂದರೆ ತೆಲಂಗಾಣದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸಲು ದೇವಸ್ಥಾನಗಳಿಗೆ ಮೀಸಲಿಟ್ಟಿರುವ ದತ್ತಿ ಇಲಾಖೆ ವ್ಯಾಪ್ತಿಯ ಭೂಮಿಯನ್ನು ಹರಾಜು ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿಕೊಂಡಿರುವುದಾಗಿ ಸ್ಕ್ರೀನ್‌ಶಾಟ್‌ಗಳು ತೋರಿಸುತ್ತವೆ.

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರೊಬ್ಬರು Way2News ಮತ್ತು NTV ತೆಲುಗು ಪ್ರಕಟಿಸಿರುವ ಸುದ್ದಿವರದಿಗಳದ್ದೆಂದು ತೋರಿಸುವ ಎರಡು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ರೆಡ್ಡಿ ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆಯನ್ನು ಮಾಡಿದ್ದಾರೆ ಎಂದು ತೋರಿಸುವಂತೆ ಇದನ್ನು ಹಂಚಿಕೊಳ್ಳಲಾಗಿದೆ(ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು).

ತೆಲುಗು ಸುದ್ದಿವಾಹಿನಿ Way2News ಪ್ರಕಟಿಸಿರುವ ಸುದ್ದಿ ಲೇಖನದ್ದು ಎಂದು ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬರುವ ಪಠ್ಯವು ಹೀಗೆ ಹೇಳುತ್ತದೆ: “ಮುಸ್ಲಿಮರಿಗೆ ಸಹಾಯ ಮಾಡಲು, ಅಗತ್ಯವಿದ್ದರೆ, ನಾವು ದತ್ತಿ ಜಮೀನುಗಳನ್ನು ಹರಾಜು ಮಾಡುತ್ತೇವೆ ಎಂದು ಟಿಪಿಸಿಸಿ ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ, ಅವರು ಮುಸ್ಲಿಂ ಘೋಷಣೆಗೆ ಹೇಗೆ ಧನಸಹಾಯ ಮಾಡುತ್ತಾರೆ ಎಂಬುದರ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು (ಕನ್ನಡಕ್ಕೆ ಅನುವಾದಿಸಲಾಗಿದೆ)."

ಇತರ ಚಿತ್ರಗಳು ತೆಲುಗು ಸುದ್ದಿ ವಾಹಿನಿ ಎನ್‌ಟಿವಿ ನ್ಯೂಸ್‌ನಿಂದ ಪ್ರಸಾರವಾದ ಸುದ್ದಿಯಾಗಿದೆ ಎಂದು ತೋರಿಸುತ್ತದೆ. ತೆಲುಗಿನಲ್ಲಿರುವ ಈ ಸ್ಕ್ರೀನ್‌ಶಾಟ್‌ಗಳ ಪಠ್ಯವು ಹೀಗಿದೆ: "ನಾವು ದತ್ತಿ ಭೂಮಿಯನ್ನು ಹರಾಜು ಮಾಡುವ ಮೂಲಕ ಮುಸ್ಲಿಮರಿಗೆ ಸಹಾಯ ಮಾಡುತ್ತೇವೆ. ಕಾಂಗ್ರೆಸ್ ಮಾತ್ರ ಮುಸ್ಲಿಮರನ್ನು ಎಲ್ಲ ರೀತಿಯಲ್ಲಿ ಬೆಂಬಲಿಸುತ್ತದೆ."

ಉದ್ದೇಶಿತ ಸ್ಕ್ರೀನ್‌ಶಾಟ್‌ಗಳನ್ನು ಫೇಸ್‌ಬುಕ್ ಮತ್ತು ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡ ಹಂಚಿಕೊಳ್ಳಲಾಗಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ).

ಸಾಮಾಜಿಕ ಮಾಧ್ಯಮದಲ್ಲಿನ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು (ಮೂಲ: ವಾಟ್ಸಾಪ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಸ್ಕ್ರೀನ್‌ಶಾಟ್‌ಗಳು ಫೇಕ್. ಸ್ಕ್ರೀನ್‌ಶಾಟ್‌ಗಳಲ್ಲಿ ಉಲ್ಲೇಖಿಸಲಾದ ಎರಡು ಸುದ್ದಿವಾಹಿನಿಗಳೂ ಅಂತಹ ಯಾವುದೇ ವರದಿಯನ್ನು ಪ್ರಕಟಿಸಿಲ್ಲ.

ನಾವು ಕಂಡುಹಿಡಿದದ್ದೇನು?

ತೆಲಂಗಾಣದಲ್ಲಿ ಕಾಂಗ್ರೆಸ್ 'ಅಲ್ಪಸಂಖ್ಯಾತ ಘೋಷಣೆ' ಎಂದು ಹೆಸರಿಟ್ಟಿರುವ ಈ ಯೋಜನೆಯನ್ನು ವಿವರಿಸಲು ಸ್ಕ್ರೀನ್‌ಶಾಟ್‌ಗಳು 'ಮುಸ್ಲಿಂ ಘೋಷಣೆ' ಎಂಬ ತೆಲುಗು ಪದವನ್ನು ಬಳಸುತ್ತವೆ. ತೆಲಂಗಾಣ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯ ಭಾಗವಾಗಿ ತೆಲಂಗಾಣದ ಅಲ್ಪಸಂಖ್ಯಾತ ಸಮುದಾಯಗಳಿಗೆ - ಬೌದ್ಧರು, ಕ್ರಿಶ್ಚಿಯನ್ನರು, ಸಿಖ್ಖರು, ಮುಸ್ಲಿಮರು ಮತ್ತು ಝೋರಾಸ್ಟ್ರಿಯನ್ನರಿಗೆ ಹಲವಾರು ಯೋಜನೆಗಳ ಭರವಸೆಯನ್ನು ನೀಡಿದೆ.

ನಿಜವಾದ ದಾಖಲೆಯು ಈ ಯೋಜನೆ ಮುಸ್ಲಿಮರಿಗೆ ಮಾತ್ರ ಎಂದು ನಿರ್ದಿಷ್ಟಪಡಿಸುವುದಿಲ್ಲ ಹಾಗೂ ಭೂಮಿ ಹರಾಜಿನ ಬಗ್ಗೆ ಯಾವುದೇ ಉಲ್ಲೇಖವನ್ನು ನೀಡುವುದಿಲ್ಲ. ರೆಡ್ಡಿಯವರ ಅಂತಹ ಪ್ರಕಟಣೆ ಅಥವಾ ಹೇಳಿಕೆಯ ಸುದ್ದಿ ವರದಿಗಳಿಗಾಗಿ ಹುಡುಕಿದಾಗ ಯಾವುದೇ ಸಂಬಂಧಿತ ವರದಿಗಳು ಕಂಡುಬರಲಿಲ್ಲ.

Way2News ಸ್ಕ್ರೀನ್‌ಶಾಟ್‌ನ ರಿವರ್ಸ್ ಇಮೇಜ್ ಹುಡುಕಾಟವು ನವೆಂಬರ್ ೧೪, ೨೦೨೩ ರಂದು ಈ ಪ್ರಕಟಣೆಯ ಪೋಷ್ಟ್ ಒಂದಕ್ಕೆ ನಮ್ಮನ್ನು ಕರೆದೊಯ್ಯಿತು. ಅವರು ಈ ಪೋಷ್ಟ್ ನಲ್ಲಿ ವೈರಲ್ ಆಗಿರುವ ಸುದ್ದಿ ವರದಿಯನ್ನು ಪ್ರಕಟಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈರಲ್ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಪ್ರಕಟಣೆಯು ಹೀಗೆ ಬರೆದಿದೆ, “ಇದು Way2News ಪ್ರಕಟಣೆಯಲ್ಲ. ಕೆಲವು ಕಿಡಿಗೇಡಿಗಳು ನಮ್ಮ ಲೋಗೋ ಬಳಸಿ ತಪ್ಪು ಮಾಹಿತಿ ಹರಡುತ್ತಿದ್ದು, 'ಅಟ್ಯಾಚ್ ಮಾಡಿರುವ ಪೋಷ್ಟ್' ವೈರಲ್ ಆಗಿದೆ. ಇದನ್ನು ನಮ್ಮಿಂದ ಪ್ರಕಟಿಸಲಾಗಿಲ್ಲ ಎಂದು ನಾವು ಖಚಿತಪಡಿಸುತ್ತೇವೆ (ಕನ್ನಡಕ್ಕೆ ಅನುವಾದಿಸಲಾಗಿದೆ)."

Way2News ಮೂಲಕ ಸ್ಪಷ್ಟೀಕರಣದ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/Way2News)

Way2News, ಅನೇಕ ಸಂದರ್ಭಗಳಲ್ಲಿ, ತಮ್ಮ ಲೋಗೋ ಮತ್ತು ಟೆಂಪ್ಲೇಟ್‌ ಬಳಸಿ ಹಂಚಿಕೊಳ್ಳಲಾದ ನಕಲಿ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ  ಹಂಚಿಕೊಂಡು ಸ್ಪಷ್ಟೀಕರಣ ನೀಡಿದೆ.

ತೆಲಂಗಾಣ ಕಾಂಗ್ರೆಸ್ ಕೂಡ, ನವೆಂಬರ್ ೧೪, ೨೦೨೩ ರಂದು ಎಕ್ಸ್ ಪೋಷ್ಟ್ ನಲ್ಲಿ ಈ ಸ್ಕ್ರೀನ್‌ಶಾಟ್‌ಗಳು ನಕಲಿ ಎಂದು ಸ್ಪಷ್ಟಪಡಿಸಿದೆ.

ತೆಲಂಗಾಣ ಕಾಂಗ್ರೆಸ್ ನೀಡಿದ ಸ್ಪಷ್ಟೀಕರಣದ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್)

ತೀರ್ಪು 

ತೆಲಂಗಾಣ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದ 'ಅಲ್ಪಸಂಖ್ಯಾತ ಘೋಷಣೆ'ಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ದತ್ತಿ ಇಲಾಖೆ ವ್ಯಾಪ್ತಿಯ ಭೂಮಿಯನ್ನು ಹರಾಜು ಮಾಡಲಿದೆ ಎಂದು ನಕಲಿ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.