ನಟಿ ರಶ್ಮಿಕಾ ಮಂದಣ್ಣ ಬಾಡಿ ಸೂಟ್‌ನಲ್ಲಿ ಕಾಣಿಸಿಕೊಳ್ಳುವ ವೈರಲ್ ವೀಡಿಯೋ ಡೀಪ್‌ಫೇಕ್ ಆಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ನವೆಂಬರ್ 7 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ನಟಿ ರಶ್ಮಿಕಾ ಮಂದಣ್ಣ ಬಾಡಿ ಸೂಟ್‌ನಲ್ಲಿ ಕಾಣಿಸಿಕೊಳ್ಳುವ ವೈರಲ್ ವೀಡಿಯೋ ಡೀಪ್‌ಫೇಕ್ ಆಗಿದೆ

ವೀಡಿಯೋದಲ್ಲಿರುವ ಮಹಿಳೆ ರಶ್ಮಿಕಾ ಮಂದಣ್ಣ ಎಂದು ಹೇಳಿಕೊಳ್ಳುವ ಪೋಷ್ಟ್‌ ನ ಸ್ಕ್ರೀನ್‌ಶಾಟ್‌ಗಳು. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ.)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಮೂಲ ವೀಡಿಯೋ ಬ್ರಿಟಿಷ್ ಭಾರತೀಯ ಮಹಿಳೆ ಜಾರಾ ಪಟೇಲ್ ಅನ್ನು ತೋರಿಸುತ್ತದೆ. ನಟಿ ರಶ್ಮಿಕಾ ಮಂದಣ್ಣ ಅವರಂತೆ ಕಾಣುವಂತೆ ಕ್ಲಿಪ್ ಅನ್ನು ಏಐ ಬಳಸಿ ಎಡಿಟ್ ಮಾಡಲಾಗಿದೆ.

ಕ್ಲೈಮ್ ಐಡಿ 94650291

ಇಲ್ಲಿನ ಹೇಳಿಕೆ?
ಭಾರತೀಯ ನಟಿ ರಶ್ಮಿಕಾ ಮಂದಣ್ಣ ಕಪ್ಪು ಯೋಗಾದ ಬಾಡಿಸೂಟ್‌ನಲ್ಲಿ ಲಿಫ್ಟ್‌ಗೆ ಪ್ರವೇಶಿಸುತ್ತಿರುವುದಾಗಿ ತೋರಿಸುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋವನ್ನು ಹಂಚಿಕೊಳ್ಳುತ್ತಾ, ಫೇಸ್‌ಬುಕ್‌ ಬಳಕೆದಾರರೊಬ್ಬರು ಹೀಗೆ ಬರೆದಿದ್ದರೆ, (ಇಲ್ಲಿ ಆರ್ಕೈವ್ ಮಾಡಲಾಗಿದೆ) "ಓಎಂಜಿ ರಶ್ಮಿಕಾ ಮಂದಣ್ಣ ನಂಬಲು ಸಾಧ್ಯವಿಲ್ಲ." ಇದೇ ರೀತಿಯ ಪೋಷ್ಟ್ ಗಳ ಇತರ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ರಶ್ಮಿಕಾ ಮಂದಣ್ಣ ಅವರನ್ನು ವೀಡಿಯೋ ತೋರಿಸುತ್ತದೆ ಎಂಬ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ.)

ಆದರೆ, ಲಾಜಿಕಲಿ ಫ್ಯಾಕ್ಟ್ಸ್ ಈ ವೀಡಿಯೋ ಡೀಪ್‌ಫೇಕ್ ಎಂದು ಮತ್ತು ಕೃತಕ ಬುದ್ಧಿಮತ್ತೆ (ಏಐ) ಬಳಸಿ ರಚಿಸಲಾಗಿದೆ ಎಂದು ಕಂಡುಹಿಡಿದಿದೆ.

ಇದರ ಸತ್ಯಾಂಶಗಳೇನು?
ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್ ವೀಡಿಯೋವಿನಲ್ಲಿ ವಿವಿಧ ವ್ಯತ್ಯಾಸಗಳನ್ನು ಗಮನಿಸಬಹುದು. ಉದಾಹರಣೆಗೆ, ವೈರಲ್ ಕ್ಲಿಪ್‌ನ ಆರಂಭದಲ್ಲಿ, ನಾವು ಬೇರೆ ಮಹಿಳೆಯ ಮುಖವನ್ನು ನೋಡಬಹುದು. ಇದು ನಂತರ ಮಂದಣ್ಣನ ಅವರ ಮುಖವಾಗಿ ಮಾರ್ಫ್ ಆಗುತ್ತದೆ. ಅಲ್ಲದೆ, ವಿಡಿಯೋದಲ್ಲಿರುವ ಮಹಿಳೆಯು "ನಾನು ಎಲಿವೇಟರ್ ಅನ್ನು ತಪ್ಪಿಸಿಕೊಳ್ಳಲು ಬಯಸಲಿಲ್ಲ" ಎಂದು ಹೇಳಿದಾಗ ತುಟಿ ಚಲನೆಗಳು ಆಡಿಯೋಗೆ ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ. ಇದು ಈ ವೀಡಿಯೋ ತುಣುಕನ್ನು ಡಿಜಿಟಲ್ ಆಗಿ ಎಡಿಟ್ ಮಾಡಲಾಗಿದೆ ಎಂದು ಸೂಚಿಸುತ್ತದೆ.

ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಮೂಲ ಕ್ಲಿಪ್‌ ಅಕ್ಟೋಬರ್ ೯, ೨೦೨೩ ರಂದು 'ಜಾರಾ ಪಟೇಲ್' ಎಂಬ ಹೆಸರಿನ ಖಾತೆಯಿಂದ ಇನ್ಸ್ಟಾಗ್ರಾಮ್ ನಲ್ಲಿ ಪೋಷ್ಟ್ ಮಾಡಲಾದ ವೀಡಿಯೋದತ್ತ ನಮ್ಮನ್ನು ಕರೆದೊಯ್ಯಿತು. ಆ ಪೋಷ್ಟ್ ನ ಶೀರ್ಷಿಕೆ ಹೀಗಿದೆ, "POV: ನೀವು ಮತ್ತೆ ನನ್ನ ಮೇಲೆ ಎಲಿವೇಟರ್ ಬಾಗಿಲನ್ನು ಮುಚ್ಚುತ್ತೀರಿ ...(ಕನ್ನಡಕ್ಕೆ ಅನುವಾದಿಸಿದಾಗ).” ತಮ್ಮ ಇನ್ಸ್ಟಾಗ್ರಾಮ್ ಬಯೋದಲ್ಲಿ, ಬಳಕೆದಾರರು ಸ್ವತಃ ತನ್ನನ್ನು "ಬ್ರಿಟಿಷ್ ಭಾರತೀಯ ಮಗು" ಎಂದು ಗುರುತಿಸಿಕೊಂಡಿದ್ದಾರೆ.

ಅಕ್ಟೋಬರ್‌ನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಮೂಲ ವೀಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. (ಮೂಲ: ಸ್ಕ್ರೀನ್‌ಶಾಟ್/ಇನ್ಸ್ಟಾಗ್ರಾಮ್/zaarapatellll)

ನಾವು ವೈರಲ್ ವೀಡಿಯೋ ಮತ್ತು ಮೂಲ ವೀಡಿಯೋವನ್ನು ಹೋಲಿಸಿ ನೋಡಿದ್ದೇವೆ ಮತ್ತು ಪಟೇಲ್ ಅವರು ಪೋಷ್ಟ್ ಮಾಡಿದ ವೀಡಿಯೋದಲ್ಲಿ ಮಂದಣ್ಣ ಅವರ ಮುಖವನ್ನು ತೋರಿಸಲು ಡಿಜಿಟಲ್ ಆಗಿ ಎಡಿಟ್ ಮಾಡಲಾಗಿದೆ ಎಂದು ಕಂಡುಕೊಂಡಿದ್ದೇವೆ.

ವೈರಲ್ ವೀಡಿಯೋವನ್ನು ಉದ್ದೇಶಿಸಿ ರಶ್ಮಿಕಾ ಮಂದಣ್ಣ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅವರ ಹೇಳಿಕೆಯನ್ನು ಪೋಷ್ಟ್ ಮಾಡಿದ್ದಾರೆ. "ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ ಮತ್ತು ಆನ್‌ಲೈನ್‌ನಲ್ಲಿ ಹರಡುತ್ತಿರುವ ನನ್ನ ಡೀಪ್‌ಫೇಕ್ ವೀಡಿಯೋದ ಬಗ್ಗೆ ಮಾತನಾಡಬೇಕಾಗಿದೆ. ಪ್ರಾಮಾಣಿಕವಾಗಿ, ಈ ರೀತಿಯ ತಂತ್ರಜ್ಞಾನದ ದುರುಪಯೋಗವು ನನಗೆ ಮಾತ್ರವಲ್ಲ, ಹಾನಿಗೆ ಗುರಿಯಾಗುವ ನಮ್ಮಲ್ಲಿನ ಪ್ರತಿಯೊಬ್ಬರಿಗೂ ಅತ್ಯಂತ ಭಯಾನಕವಾಗಿದೆ, ”ಎಂದು ಅವರು ಬರೆದಿದ್ದಾರೆ. " ನಮ್ಮಲ್ಲಿ ಹೆಚ್ಚಿನವರು ಅಂತಹ ಗುರುತಿನ ಕಳ್ಳತನಕ್ಕೆ ಪ್ರಭಾವಿತರಾಗುವ ಮೊದಲು ನಾವು ಇದನ್ನು ಒಂದು ಸಮುದಾಯವಾಗಿ ಮತ್ತು ತುರ್ತಾಗಿ ಪರಿಹರಿಸಬೇಕಾಗಿದೆ," ಎಂದು ಕೂಡ ಸೇರಿಸಿದರು.

ರಶ್ಮಿಕಾ ಮಂದಣ್ಣ ಅವರು ಇನ್ಸ್ಟಾಗ್ರಾಮ್ ಮತ್ತು ಎಕ್ಸ್ ನಲ್ಲಿ ಪೋಷ್ಟ್ ಮಾಡಿದ ಹೇಳಿಕೆ. (ಮೂಲ: ಇನ್ಸ್ಟಾಗ್ರಾಮ್/ಎಕ್ಸ್/ಸ್ಕ್ರೀನ್‌ಶಾಟ್)

ಲಾಜಿಕಲಿ ಫ್ಯಾಕ್ಟ್ಸ್ ಇದಕ್ಕೆ ಸಮಾನವಾದ ಡೀಪ್‌ಫೇಕ್ ವೀಡಿಯೋಗಳನ್ನು ಫ್ಯಾಕ್ಟ್-ಚೆಕ್ ಮಾಡಿರುವುದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ರಚಿಸಲಾದ ಡೀಪ್‌ಫೇಕ್ ಚಿತ್ರಗಳು ಮತ್ತು ವೀಡಿಯೋಗಳನ್ನು ಪತ್ತೆಹಚ್ಚುವ ಕುರಿತು ನಮ್ಮ ವಿವರವಾದ ಲೇಖನವನ್ನು ಸಹ ನೀವು ಇಲ್ಲಿ ಓದಬಹುದು.

ತೀರ್ಪು
ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ರಶ್ಮಿಕಾ ಮಂದಣ್ಣ ಅವರ ವೀಡಿಯೋ ಡೀಪ್‌ಫೇಕ್ ಆಗಿದೆ. ಆದ್ದರಿಂದ, ನಾವು ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.