೨೦೧೯ರ ವೀಡಿಯೋವನ್ನು ರಾಹುಲ್ ಗಾಂಧಿಯವರ ಇತ್ತೀಚಿನ ವಯನಾಡ್ ರ‍್ಯಾಲಿಯಲ್ಲಿ 'ಮುಸ್ಲಿಂ ಲೀಗ್ ಧ್ವಜಗಳು' ಕಂಡುಬಂದವು ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ಏಪ್ರಿಲ್ 15 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೧೯ರ ವೀಡಿಯೋವನ್ನು ರಾಹುಲ್ ಗಾಂಧಿಯವರ ಇತ್ತೀಚಿನ ವಯನಾಡ್ ರ‍್ಯಾಲಿಯಲ್ಲಿ 'ಮುಸ್ಲಿಂ ಲೀಗ್ ಧ್ವಜಗಳು' ಕಂಡುಬಂದವು ಎಂದು ಹಂಚಿಕೊಳ್ಳಲಾಗಿದೆ

ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋ ೨೦೧೯ ರಲ್ಲಿ ಕಾಸರಗೋಡಿನಲ್ಲಿ ಐಯುಎಂಎಲ್ ಧ್ವಜಗಳನ್ನು ತೋರಿಸುತ್ತದೆ. ಗಾಂಧಿಯವರ ಇತ್ತೀಚಿನ ರ‍್ಯಾಲಿಗೆ ಸಂಬಂಧವಿಲ್ಲ.

ಕ್ಲೈಮ್ ಐಡಿ 71b10dfd

ಹೇಳಿಕೆ ಏನು?
ರ‍್ಯಾಲಿಯಲ್ಲಿ ವ್ಯಕ್ತಿಗಳು ಹಸಿರು ಬಾವುಟವನ್ನು ಬೀಸುತ್ತಿರುವುದನ್ನು ಚಿತ್ರಿಸುವ ೪೬ ಸೆಕೆಂಡುಗಳ ವೀಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ, ಮುಂಬರುವ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಕೇರಳದ ವಯನಾಡ್‌ನಲ್ಲಿ ರಾಹುಲ್ ಗಾಂಧಿ ಅವರ ಇತ್ತೀಚಿನ ರೋಡ್‌ಶೋನಲ್ಲಿ “ಮುಸ್ಲಿಂ ಲೀಗ್ ಧ್ವಜಗಳು" ಕಂಡುಬಂದವು ಎಂದು ಹೇಳಲಾಗುತ್ತಿದೆ. 

ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಅಂತಹ ಒಂದು ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) “ಕೇರಳದ ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರ‍್ಯಾಲಿಯಲ್ಲಿ ಮುಸಲ್ಮಾನರ ಬಾವುಟ. ಕಾಂಗ್ರೆಸ್ ಸಾಬ್ರು ಪಕ್ಷ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?ಭಾರತದಲ್ಲಿ ಕಾಂಗ್ರೆಸ್ ಅನ್ನು ಬಹಿಷ್ಕರಿಸದ ಹೊರತು ಹಿಂದೂಗಳಿಗೆ ಇಲ್ಲಿ ಉಳಿಗಾಲವಿಲ್ಲ ಅನ್ನಿಸ್ತಿದೆ...ಹಿಂದೂಗಳೇ ಎಚ್ಚೆತ್ತುಕೊಳ್ಳಿ,”ಎಂದು ಆರೋಪಿಸಿದೆ. 

ಬಿಜೆಪಿಗೆ ಸಂಬಂಧಿಸಿದ ಹಲವಾರು ಖಾತೆಗಳು ಎಕ್ಸ್ ನಲ್ಲಿ ಒಂದೇ ರೀತಿಯ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿವೆ ಮತ್ತು ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಗಾಂಧಿಯವರು ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಮತ್ತು ಸಿಪಿಐ (ಎಂ) ನಾಯಕಿ ಅನ್ನಿ ರಾಜಾ ವಿರುದ್ಧ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಯುಡಿಎಫ್ (ಕೇರಳದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್-ಮೈತ್ರಿಕೂಟ) ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ರೋಡ್‌ಶೋ ನಂತರ ಅವರು ಏಪ್ರಿಲ್ ೩ ರಂದು ತಮ್ಮ ನಾಮಪತ್ರವನ್ನು ಸಲ್ಲಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೀಡಿಯೋ ೨೦೧೯ ರದ್ದು ಮತ್ತು ಕಾಸರಗೋಡಿನಲ್ಲಿ ಸೆರೆಹಿಡಿಯಲಾಗಿದೆ ಹಾಗು ವಯನಾಡಿನಲ್ಲಿ ಗಾಂಧಿಯವರ ಇತ್ತೀಚಿನ ರ‍್ಯಾಲಿಗೆ  ಸಂಬಂಧವಿಲ್ಲ.

ವಾಸ್ತವಾಂಶಗಳು

ವೈರಲ್ ಕ್ಲಿಪ್‌ನ ಸ್ಕ್ರೀನ್‌ಶಾಟ್‌ನ ರಿವರ್ಸ್ ಇಮೇಜ್ ಸರ್ಚ್,  ಮೇ ೨೪, ೨೦೧೯, ರಂದು ಹಂಚಿಕೊಂಡ ಫೇಸ್‌ಬುಕ್ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು, ಅದು ನಿಖರವಾದ ವೀಡಿಯೋವನ್ನು ಹೊಂದಿದೆ. ಹಿಂದಿಯಲ್ಲಿನ ಶೀರ್ಷಿಕೆಯು "ವೈನಾಡಿನಲ್ಲಿ ವಿಜಯೋತ್ಸವದ ಆಚರಣೆ" ಎಂದು ಅನುವಾದಿಸುತ್ತದೆ. ಇದು ೨೦೨೪ ರ ಲೋಕಸಭೆ ಚುನಾವಣಾ ಪ್ರಚಾರದ ಮೊದಲೇ ವೀಡಿಯೋ ಆನ್‌ಲೈನ್‌ನಲ್ಲಿತ್ತು ಎಂಬುದನ್ನು ತೋರಿಸುತ್ತದೆ.

ವೀಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ೦:೩೨ ಸೆಕೆಂಡ್‌ಗಳ ಟೈಮ್‌ಸ್ಟ್ಯಾಂಪ್‌ನಲ್ಲಿ, "ಅರಮಾನ ಸಿಲ್ಕ್ಸ್ ಬಜಾರ್" ಹೆಸರಿನ ಅಂಗಡಿಯು ಗೋಚರಿಸುತ್ತದೆ. ನಾವು ಅಂಗಡಿಯನ್ನು ಜಿಯೋಲೊಕೇಟ ಮಾಡಿದ್ದೇವೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಎಂಜಿ ರಸ್ತೆಯಲ್ಲಿ ಅದನ್ನು ಕಂಡುಕೊಂಡಿದ್ದೇವೆ. ಗೂಗಲ್ ಮ್ಯಾಪ್‌ನಲ್ಲಿ ಸುತ್ತಮುತ್ತಲಿನ ಕಟ್ಟಡಗಳನ್ನು ವೈರಲ್ ಕ್ಲಿಪ್‌ನೊಂದಿಗೆ ಹೋಲಿಸಿ, ವೀಡಿಯೋವನ್ನು ಸೆರೆಹಿಡಿದಿರುವುದು  ಕಾಸರಗೋಡಿನಲ್ಲಿ ಮತ್ತು ವಯನಾಡಿನಲ್ಲಿ ಅಲ್ಲ ಎಂದು ನಾವು ಖಚಿತಪಡಿಸಿಕೊಂಡೆವು. 

ವೈರಲ್ ಕ್ಲಿಪ್ ಮತ್ತು ಗೂಗಲ್ ಮ್ಯಾಪ್ಸ್ ನಡುವಿನ ಹೋಲಿಕೆ. (ಮೂಲ: ಎಕ್ಸ್/ಗೂಗಲ್ ಮ್ಯಾಪ್ಸ್/ಸ್ಕ್ರೀನ್‌ಶಾಟ್)

ವೈರಲ್ ವೀಡಿಯೋದಲ್ಲಿ, ಯುಡಿಎಫ್ ಮತ್ತು ಗಾಂಧಿಯನ್ನು ಶ್ಲಾಘಿಸುವ ಘೋಷಣೆಗಳನ್ನು ನಾವು ಕೇಳಬಹುದು, ಜನಸಮೂಹವು ಸಿಪಿಐ(ಎಂ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ವಿರುದ್ಧ ರಾಜಕೀಯ ಗೇಲಿ ಮಾಡುತ್ತಿರುವುದನ್ನೂ ಸಹ ಕೇಳಬಹುದು. 

ವೈರಲ್ ಕ್ಲಿಪ್‌ನಲ್ಲಿರುವ ಹಸಿರು ಧ್ವಜವು ಯುಡಿಎಫ್ ಮೈತ್ರಿಕೂಟದ ಪ್ರಮುಖ ಪಾಲುದಾರರಲ್ಲಿ ಒಂದಾದ ಐಯುಎಂಎಲ್ (ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್) ಗೆ ಸೇರಿದೆ ಎಂದು ಹೆಚ್ಚಿನ ಸಂಶೋಧನೆಯು ಬಹಿರಂಗಪಡಿಸಿದೆ.

ಆದರೆ , ಗಾಂಧಿಯವರ ಇತ್ತೀಚಿನ ರೋಡ್‌ಶೋನಲ್ಲಿ ಐಯುಎಂಎಲ್ ಮತ್ತು ಕಾಂಗ್ರೆಸ್ ಧ್ವಜಗಳು ಕಂಡುಬಂದಿಲ್ಲ ಎಂಬುದು ಗಮನಾರ್ಹವಾಗಿದೆ, ಇದು ಸಿಪಿಐ(ಎಂ) ಮತ್ತು ಬಿಜೆಪಿಯಿಂದ ಟೀಕೆಗೆ ಒಳಗಾಯಿತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪಕ್ಷಕ್ಕೆ ಸಾರ್ವಜನಿಕವಾಗಿ ಧ್ವಜಗಳನ್ನು ಪ್ರದರ್ಶಿಸಲು ಧೈರ್ಯವಿಲ್ಲ ಎಂದು ಟೀಕಿಸಿದರು.

ಏಪ್ರಿಲ್ ೩, ೨೦೨೪ ರಂದು ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರವಾದ ರೋಡ್‌ಶೋನ ಪೂರ್ಣ ವೀಡಿಯೋವನ್ನು ನಾವು  ಕಂಡುಕೊಂಡೆವು. ರ‍್ಯಾಲಿಯಲ್ಲಿ ಜನರು ಗಾಂಧಿಯವರ ಚಿತ್ರಗಳು ಮತ್ತು ತ್ರಿವರ್ಣ ಬಲೂನ್‌ಗಳನ್ನು ಹಿಡಿದಿರುವುದನ್ನು ಕಾಣಬಹುದು; ಯಾವುದೇ ಹಸಿರು ಧ್ವಜಗಳು ಗೋಚರಿಸುವುದಿಲ್ಲ. ದಿ ಇಂಡಿಯನ್ ಎಕ್ಸ್‌ಪ್ರೆಸ್, ಇಂಡಿಯಾ ಟುಡೇ, ಮತ್ತು ಎಬಿಪಿ ನ್ಯೂಸ್‌ನಂತಹ ಹಲವಾರು ಮಾಧ್ಯಮಗಳು ಈ ವಿವರಗಳನ್ನು ದೃಢಪಡಿಸಿವೆ. ೨೦೧೯ ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಐಯುಎಂಎಲ್ ಧ್ವಜಗಳು ಪಾಕಿಸ್ತಾನಿ ಧ್ವಜಗಳು ಎಂದು ತಪ್ಪಾಗಿ ಆರೋಪಿಸಿದ ವಿವಾದದಿಂದಾಗಿ ಈ ಬಾರಿ ಕಾಂಗ್ರೆಸ್ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

೨೦೧೯ ರ ಯುಡಿಎಫ್ ರ‍್ಯಾಲಿಯಲ್ಲಿ ಪಾಕಿಸ್ತಾನದ ಧ್ವಜಗಳನ್ನು ಹಾರಿಸಲಾಗಿತ್ತು ಎಂಬ ಹೇಳಿಕೆಯನ್ನು ಇಂಡಿಯಾ ಟುಡೇ ಈ ಹಿಂದೆ ಫ್ಯಾಕ್ಟ್- ಚೆಕ್ ಮಾಡಿದ್ದು, ಅದು 

ಕಾಸರಗೋಡು ಜಿಲ್ಲೆಯ ಐಯುಎಂಎಲ್‌ನ ಅಧ್ಯಕ್ಷ ಎಂ.ಸಿ.ಕಮರುದ್ದೀನ್ ಅವರ ಹೇಳಿಕೆಯನ್ನು ಒಳಗೊಂದಿದೆ. ೨೦೧೯ ರ ಸಾರ್ವಜನಿಕ ಚುನಾವಣಾ ಪ್ರಚಾರದ ‘ಕೊಟ್ಟಿಕಳಸಂ’ ಸಮಯದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವೀಡಿಯೋ ಸೆರೆಹಿಡಿಯಲಾಗಿತ್ತು ಎಂದು ಅವರು ಖಚಿತಪಡಿಸಿದ್ದರು. 

ಆ ವರ್ಷ ಕಾಸರಗೋಡಿನಿಂದ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ರಾಜಮೋಹನ್ ಉನ್ನಿತಾನ್ ಅವರನ್ನು ಜನರು ಹುರಿದುಂಬಿಸುತ್ತಿದ್ದಾಗ ಯುಡಿಎಫ್ ಮತ್ತು ಗಾಂಧಿಯನ್ನು ಬೆಂಬಲಿಸುವ ಘೋಷಣೆಗಳು ರ‍್ಯಾಲಿಯಲ್ಲಿ ಕಂಡುಬಂದಿದ್ದವು ಎಂದು ಕಮರುದ್ದೀನ್ ಹೇಳಿದ್ದಾರೆ.

ತೀರ್ಪು

೨೦೧೯ರಲ್ಲಿ ಜನರು ಐಯುಎಂಎಲ್‌ ಧ್ವಜಗಳನ್ನು ಹಿಡಿದಿರುವ ರಾಜಕೀಯ ರ‍್ಯಾಲಿಯ ವೀಡಿಯೋವನ್ನು ಈಗ ವಯನಾಡಿನಲ್ಲಿ ರಾಹುಲ್ ಗಾಂಧಿಯವರ ಇತ್ತೀಚಿನ ರೋಡ್‌ಶೋಗೆ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ ಹಾಗು ಕಾಂಗ್ರೆಸ್ ಕೇವಲ ಮುಸ್ಲಿಂ ಸಮುದಾಯವನ್ನು ಬೆಂಬಲಿಸುತ್ತದೆ ಎಂದು ಪ್ರತಿಪಾದಿಸುತ್ತಿದೆ. ಆದರೆ, ಗಾಂಧಿಯವರ ೨೦೨೪ರ ನಾಮನಿರ್ದೇಶನ ರ‍್ಯಾಲಿಯು ಅದರ ಮೆರವಣಿಗೆಯಲ್ಲಿ ಯಾವುದೇ ಹಸಿರು ಬಾವುಟಗಳನ್ನು ಒಳಗೊಂಡಿರಲಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.