ಆಂಧ್ರಪ್ರದೇಶದ ರಾಜಕಾರಣಿಯೊಬ್ಬರು ದರೋಡೆ ಯತ್ನದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲು ಎಡಿಟ್ ಮಾಡಿದ ಪತ್ರಿಕೆಯ ತುಣುಕನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರೋಹಿತ್ ಗುಟ್ಟಾ
ಮಾರ್ಚ್ 4 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆಂಧ್ರಪ್ರದೇಶದ ರಾಜಕಾರಣಿಯೊಬ್ಬರು ದರೋಡೆ ಯತ್ನದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲು ಎಡಿಟ್ ಮಾಡಿದ ಪತ್ರಿಕೆಯ ತುಣುಕನ್ನು ಹಂಚಿಕೊಳ್ಳಲಾಗಿದೆ

ಉದ್ದೇಶಿತ ಸುದ್ದಿ ವರದಿಯನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು . (ಮೂಲ: ಎಕ್ಸ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಪತ್ರಿಕೆ ವರದಿಯಲ್ಲಿ ಆರೋಪಿಯ ಹೆಸರನ್ನು ಬದಲಿಸಿ ಟಿಡಿಪಿ-ಜೆಎಸ್ಪಿ ಅಭ್ಯರ್ಥಿ ‘ಮಹಾಸೇನಾ’ ರಾಜೇಶ್ ಅವರ ಹೆಸರನ್ನು ಡಿಜಿಟಲ್ ಆಗಿ ಸೇರಿಸಲಾಗಿದೆ.

ಕ್ಲೈಮ್ ಐಡಿ 231ab573

ಹೇಳಿಕೆ ಏನು?

ದಕ್ಷಿಣ ಭಾರತದ ರಾಜ್ಯವಾದ ಆಂಧ್ರಪ್ರದೇಶದ ರಾಜಕೀಯ ನಾಯಕರಾದ 'ಮಹಾಸೇನಾ' ರಾಜೇಶ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸರಿಪೆಲ್ಲಾ ರಾಜೇಶ್ ಅವರ ಫೋಟೋದೊಂದಿಗೆ ತೆಲುಗು ಪತ್ರಿಕೆ ಆಂಧ್ರಜ್ಯೋತಿಯಿಂದ ಬಂದ ಸುದ್ದಿ ಲೇಖನದ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ತಮಿಳುನಾಡಿನ ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. 

ಕನ್ಯಾಕುಮಾರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶಿಸಿದ್ದ ಎಂಬುದು ವೈರಲ್ ಆಗಿರುವ ಲೇಖನದ ಸಾರಾಂಶ. ಆದರೆ, ಹಣ, ಚಿನ್ನಾಭರಣ ಸಿಗದೇ ಅಲ್ಲಿಂದ ತೆರಳಲು ನಿರ್ಧರಿಸಿದ್ದರು ಮತ್ತು ಹೊರಡುವಾಗ ಮೀನಿನ ಕರಿ ವಾಸನೆ ಬಂದಿದ್ದು, ಅಡುಗೆ ಮನೆಗೆ ಹೋಗಿ ಕರಿಬೇವನ್ನು ಸೇವಿಸಿ ಮನೆಯ ಟೆರೇಸ್‌ನಲ್ಲಿ ಮಲಗಲು ಹೋದಾಗ ಮರುದಿನ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಉದ್ದೇಶಿತ ಲೇಖನದ ಕೊನೆಯ ವಾಕ್ಯವು ಸರಿಪೆಲ್ಲಾ ರಾಜೇಶ್ ಮಾಲೀಕರು ಹಿಡಿದ ಕಳ್ಳ ಎಂದು ಆರೋಪಿಸುತ್ತದೆ. ಉದ್ದೇಶಿತ ಲೇಖನವನ್ನು ಹಂಚಿಕೊಳ್ಳುವ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಉದ್ದೇಶಿತ ಸುದ್ದಿ ವರದಿಯನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು .
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆಂಧ್ರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ವಾರದ ಮೊದಲು ವೈರಲ್  ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ದಲಿತ ರಾಜಕಾರಣಿ ರಾಜೇಶ್ ಅವರು ತೆಲುಗು ದಸಂ ಪಕ್ಷ (ಟಿಡಿಪಿ)-ಜನಸೇನಾ ಪಕ್ಷ (ಜೆಎಸ್‌ಪಿ) ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು (ವೈಎಸ್‌ಆರ್‌ಸಿಪಿ) ಅಧಿಕಾರದಿಂದ ಕಿತ್ತುಕೊಳ್ಳಲು ಟಿಡಿಪಿ ಮತ್ತು ಜೆಎಸ್‌ಪಿ ಚುನಾವಣೆಗೆ ಮುನ್ನ ಕೈಜೋಡಿಸಿದೆ.

ರಾಜೇಶ್ ಅವರ ಬಗ್ಗೆ ತಪ್ಪಾದ ಹೇಳಿಕೆಯನ್ನು ವೈರಲ್ ಮಾಡಲು ನಿಜವಾದ ಪತ್ರಿಕೆಯ ವರದಿಯ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ಲಾಜಿಕಲಿ ಫ್ಯಾಕ್ಟ್ಸ್ ಕಂಡುಹಿಡಿದಿದೆ.

ನಾವು ಕಂಡುಹಿಡಿದದ್ದು ಏನು?

ವೈರಲ್ ಸುದ್ದಿ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದರ ಕೊನೆಯ ಎರಡು ಸಾಲುಗಳ ಫಾಂಟ್, ಆಪಾದಿತ ಕಳ್ಳ ಎಂದು ಸರಿಪೆಲ್ಲ ರಾಜೇಶ್ ಅನ್ನು ಉಲ್ಲೇಖಿಸುತ್ತದೆ, ಲೇಖನದ ಉಳಿದ ಭಾಗಗಳಲ್ಲಿ ಬಳಸಲಾದ ಫಾಂಟ್‌ಗಿಂತ ಸ್ವಲ್ಪ ಭಿನ್ನವಾಗಿದೆ. ಲೇಖನದ ಉಳಿದ ಭಾಗಗಳಿಗೆ ಹೋಲಿಸಿದರೆ ಕೊನೆಯ ಎರಡು ಸಾಲುಗಳಲ್ಲಿನ ಫಾಂಟ್ ಸ್ವಲ್ಪ ದೊಡ್ಡದಾಗಿ, ಮತ್ತು ಸ್ವಲ್ಪ ಓರೆಯಾಗಿ ಕಾಣುತ್ತದೆ, ಇದು ವೃತ್ತಪತ್ರಿಕೆ ವರದಿಯ ಒಂದು ಭಾಗವನ್ನು ಎಡಿಟ್ ಮಾಡಲಾಗಿದೆ ಎಂದು ಸೂಚಿಸುತ್ತದೆ.

ಉದ್ದೇಶಿತ ಲೇಖನದಲ್ಲಿ ಕೊನೆಯ ಎರಡು ಸಾಲುಗಳಲ್ಲಿ  ಬಳಸಲಾದ ಫಾಂಟ್‌ನ ವ್ಯತ್ಯಾಸಗಳು. (ಮೂಲ: ಎಕ್ಸ್)

ನಾವು ನಂತರ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಮೂಲ ಸುದ್ದಿ ವರದಿಯನ್ನು ಹುಡುಕಿದೆವು. ಆಂಧ್ರಜ್ಯೋತಿ ಜೂನ್ ೧೬, ೨೦೨೦ ರಂದು ಕಳ್ಳತನದ ಯತ್ನದ ವರದಿಯನ್ನು ಪ್ರಕಟಿಸಿತ್ತು. ಲೇಖನದ ವಿಷಯವು ಕೊನೆಯ ಎರಡು ಸಾಲುಗಳನ್ನು ಹೊರತುಪಡಿಸಿ ಮೇಲಿನಂತೆಯೇ ಇದೆ. ವರದಿಯಲ್ಲಿ ಸತೀಶ್ (ಒಂದೇ ಹೆಸರು) ಎಂಬ ವ್ಯಕ್ತಿ ಕಳ್ಳತನಕ್ಕೆ ಯತ್ನಿಸಿದ ಆರೋಪಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ದರೋಡೆ ಯತ್ನವನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ದೃಶ್ಯಾವಳಿಗಳನ್ನು ಬಳಸಿಕೊಂಡು ಆರೋಪಿ ಕಳ್ಳನನ್ನು ಗುರುತಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಮಯಂ, ತೆಲುಗು ಸುದ್ದಿ ವೆಬ್‌ಸೈಟ್, ಜೂನ್ ೧೬, ೨೦೨೦ ರಂದು ಘಟನೆಯನ್ನು ವರದಿ ಮಾಡಿದೆ. ಇದು ವಿವರಗಳನ್ನು ದೃಢೀಕರಿಸುತ್ತದೆ. ಈ ವರದಿಯು ಕೂಡ ಆರೋಪಿಯನ್ನು ಸತೀಶ್ ಎಂದು ಗುರುತಿಸಿದ್ದು, ಆತನ ಫೋಟೋವನ್ನು ಸಿಸಿಟಿವಿ ದೃಶ್ಯಗಳಿಂದ ಗುರುತಿಸಲಾಗಿದೆ. ಜೂನ್ ೧೭, ೨೦೨೦ ರ ಈಟಿವಿ ಭಾರತ್ ವರದಿಯು ಆರೋಪಿ ಸತೀಶ್ ಕೇರಳದ ತಿರುವನಂತಪುರಂ ಜಿಲ್ಲೆಯ ನೆಡುಮ್ಕಾಡು ಮೂಲದವರು ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿದೆ.

ತಮಿಳುನಾಡಿನಲ್ಲಿ ದರೋಡೆಗೆ ಯತ್ನಿಸಿದ ಆರೋಪಿಯ ಚಿತ್ರ. (ಮೂಲ: ಈಟಿವಿ ಭಾರತ್/ಸ್ಕ್ರೀನ್‌ಶಾಟ್)

ಕನ್ಯಾಕುಮಾರಿ ಘಟನೆಯಲ್ಲಿ ದರೋಡೆ ಯತ್ನದ ಆರೋಪಿ 'ಮಹಾಸೇನಾ' ರಾಜೇಶ್ ಅಲ್ಲ ಎಂಬುದು ಈ ಮಾಧ್ಯಮ ವರದಿಗಳಿಂದ ಸ್ಪಷ್ಟವಾಗಿದೆ.

ತೀರ್ಪು

ಟಿಡಿಪಿ-ಜೆಎಸ್‌ಪಿ ಅಭ್ಯರ್ಥಿ ಸರಿಪೆಲ್ಲಾ ರಾಜೇಶ್ ತಮಿಳುನಾಡಿನ ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲು ಎಡಿಟ್ ಮಾಡಿದ ಸುದ್ದಿ ವರದಿಯನ್ನು ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.