ಮುಖಪುಟ ಇಲ್ಲ, ರಾಹುಲ್ ಗಾಂಧಿಯವರು ಕಾಂಗ್ರೆಸ್ ಅನ್ನು "ವಿಭಜಿಸುವ ಪಕ್ಷ" ಎಂದು ಕರೆದಿಲ್ಲ

ಇಲ್ಲ, ರಾಹುಲ್ ಗಾಂಧಿಯವರು ಕಾಂಗ್ರೆಸ್ ಅನ್ನು "ವಿಭಜಿಸುವ ಪಕ್ಷ" ಎಂದು ಕರೆದಿಲ್ಲ

ಮಾರ್ಚ್ 11 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ರಾಹುಲ್ ಗಾಂಧಿಯವರು ಕಾಂಗ್ರೆಸ್ ಅನ್ನು "ವಿಭಜಿಸುವ ಪಕ್ಷ" ಎಂದು ಕರೆದಿಲ್ಲ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್.(ಮೂಲ: ಎಕ್ಸ್/ ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ವೀಡಿಯೋ ಎಡಿಟ್ ಮಾಡಲಾಗಿದೆ. ಮೂಲ ವೀಡಿಯೋದಲ್ಲಿ ರಾಹುಲ್ ಗಾಂಧಿ ಬಿಜೆಪಿಯನ್ನು ವಿಭಜನೆಯ ಪಕ್ಷ ಎಂದು ಬಣ್ಣಿಸಿದ್ದಾರೆ.

ಸಂದರ್ಭ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ೨೦೨೪ ರ ಲೋಕಸಭೆ ಚುನಾವಣೆಗು ಮುನ್ನ ತಮ್ಮ 'ಭಾರತ್ ಜೋಡೋ ನ್ಯಾಯ್ ಯಾತ್ರೆ' (ಭಾರತೀಯ ಏಕತೆ ಮತ್ತು ನ್ಯಾಯದ ಮಾರ್ಚ್) ಭಾಗವಾಗಿ ೧೫ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಇದು ಜನವರಿ ೨೪, ೨೦೨೪, ರಂದು ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಪ್ರಾರಂಭವಾಯಿತು ಮತ್ತು ಅಧಿಕೃತ ಭಾರತ್ ಜೋಡೋ ನ್ಯಾಯ್ ಯಾತ್ರಾ ವೆಬ್‌ಸೈಟ್‌ನಲ್ಲಿ ವಿವರಿಸಿದಂತೆ ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. ರ‍್ಯಾಲಿಯ ಹಲವಾರು ಚಿತ್ರಗಳು ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನವನ್ನು ಸೆಳೆದಿವೆ. 

ಹೇಳಿಕೆ ಏನು?

ಈ ಹಿನ್ನಲೆಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ೧೭ ಸೆಕೆಂಡುಗಳ ವೀಡಿಯೋ ರಾಹುಲ್ ಗಾಂಧಿಯವರ ಹೇಳಿಕೆಯನ್ನು ತೋರಿಸುತ್ತದೆ, "ಕಾಂಗ್ರೆಸ್ ಪಕ್ಷವು ಧರ್ಮ, ಜಾತಿ ಮತ್ತು ರಾಜ್ಯದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದೆ, ಆದರೆ ಬಿಜೆಪಿ (ಭಾರತೀಯ ಜನತಾ ಪಕ್ಷ) ಇವುಗಳ ಮೇಲೆ ಜನರನ್ನು ಒಗ್ಗೂಡಿಸುತ್ತಿದೆ." (ಕನ್ನಡಕ್ಕೆ ಅನುವಾದಿಸಲಾಗಿದೆ)

ಈ ವೈರಲ್ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಪೋಷ್ಟ್ ನ  ಶೀರ್ಷಿಕೆ ಹೀಗಿದೆ, “ನೋಡಿ, ಸತ್ಯ ಯಾವಾಗಲೂ ಹೊರಬರುತ್ತದೆ (ಹಿಂದಿಯಿಂದ ಅನುವಾದಿಸಲಾಗಿದೆ). ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ವೈರಲ್ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿಯೂ ಹಂಚಿಕೊಳ್ಳಲಾಗಿದೆ, ಅದರ ಆರ್ಕೈವ್ ಆವೃತ್ತಿಯು ಇಲ್ಲಿ ಲಭ್ಯವಿದೆ.

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್.(ಮೂಲ: ಎಕ್ಸ್/ ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ. ಮೂಲ ಚಿತ್ರಣವು ವಾಸ್ತವವಾಗಿ  ರಾಹುಲ್ ಗಂಧಿಯವರು ವಿರುದ್ಧವಾದ ಭಾವನೆಯನ್ನು ವ್ಯಕ್ತಪಡಿಸುವುದನ್ನು ಚಿತ್ರಿಸುತ್ತದೆ.

ನಾವು ಕಂಡುಹಿಡಿದದ್ದು ಏನು?

ನಿಖರವಾಗಿ ವೀಡಿಯೋವನ್ನು ಪರಿಶೀಲಿಸಿದಾಗ ಮಧ್ಯದಲ್ಲಿ ಗಮನಾರ್ಹವಾದ ಕಟ್ ಗಳನ್ನು ನೋಡಬಹುದು ,ಇದು ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ತೋರಿಸುತ್ತದೆ.

ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಮಾರ್ಚ್ ೨, ೨೦೨೪ ರಂದು ಪೋಷ್ಟ್ ಮಾಡಲಾದ ರಾಹುಲ್ ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿನ ಎಡಿಟ್ ಮಾಡಲಾಗದ ವೀಡಿಯೋವನ್ನು ನಾವು ಕಂಡುಕೊಂಡೆವು. ಈ ವೀಡಿಯೋ ಮಧ್ಯಪ್ರದೇಶದ ಮೊರೆನಾದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಸಾರ್ವಜನಿಕ ಸಭೆ ಎಂದು ತಿಳಿದುಬಂದಿದೆ.

೪೪ ನಿಮಿಷಗಳ ವೀಡಿಯೋದಲ್ಲಿ ೦:೨೦ ನಿಮಿಷದಲ್ಲಿ, ದ್ವೇಷ ಮತ್ತು ಪ್ರೀತಿ, ಹಿಂಸೆ ಹಾಗು ಅಹಿಂಸೆಯ ನಡುವಿನ ದೇಶದ ಸೈದ್ಧಾಂತಿಕ ಯುದ್ಧವನ್ನು ಗಾಂಧಿ ಚರ್ಚಿಸುತ್ತಾರೆ. "ಒಂದು ಕಡೆ ಬಿಜೆಪಿ ಜನರನ್ನು ಧರ್ಮ, ಜಾತಿ ಮತ್ತು ರಾಜ್ಯದಿಂದ ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಎಲ್ಲರನ್ನೂ ಒಗ್ಗೂಡಿಸಲು ಶ್ರಮಿಸುತ್ತಿದೆ," ಎಂದು ಹೇಳುತ್ತಾರೆ.

ಅದಲ್ಲದೆ, ಅದೇ ದಿನಾಂಕ ಮತ್ತು ಘಟನೆಗೆ ಅನುಗುಣವಾಗಿ ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕಂಡುಬರುವ ಗಾಂಧಿಯವರ ಭಾಷಣದ ಪ್ರತಿಲೇಖನವು ಅವರ ಹೇಳಿಕೆಗಳನ್ನು ದೃಢೀಕರಿಸುತ್ತದೆ.

ಗಾಂಧಿಯವರ ಭಾಷಣದ ಆಯ್ದ ಭಾಗದ ಸ್ಕ್ರೀನ್‌ಶಾಟ್ ಕಾಂಗ್ರೆಸ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
(ಮೂಲ: ಕಾಂಗ್ರೆಸ್/ಸ್ಕ್ರೀನ್‌ಶಾಟ್)

ತೀರ್ಪು

ಬಿಜೆಪಿಯು ಧರ್ಮ, ಜಾತಿ ಮತ್ತು ರಾಜ್ಯದ ಆಧಾರದ ಮೇಲೆ ಜನರನ್ನು ಪ್ರತ್ಯೇಕಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷವು ಅವರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದೆ ಎಂದು ನಮ್ಮ ತನಿಖೆ ದೃಢಪಡಿಸುತ್ತದೆ. ಪ್ರಶ್ನೆಯಲ್ಲಿರುವ ವೀಡಿಯೋವನ್ನು ಬೇರೆ ರೀತಿಯಲ್ಲಿ ಸೂಚಿಸಲು ಎಡಿಟ್ ಮಾಡಲಾಗಿದೆ. ಆದರಿಂದ, ನಾವು ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ