ಇವಿಎಂ ಧ್ವಂಸಗೊಳಿಸಿದ ವೈಎಸ್‌ಆರ್‌ಸಿಪಿ ಶಾಸಕನ ವಕೀಲ ಎಂದು ಪತ್ರಕರ್ತನನ್ನು ತಪ್ಪಾಗಿ ಗುರುತಿಸಲಾಗಿದೆ.

ಮೂಲಕ: ರಾಜೇಶ್ವರಿ ಪರಸ
ಮೇ 28 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇವಿಎಂ ಧ್ವಂಸಗೊಳಿಸಿದ ವೈಎಸ್‌ಆರ್‌ಸಿಪಿ ಶಾಸಕನ ವಕೀಲ ಎಂದು  ಪತ್ರಕರ್ತನನ್ನು ತಪ್ಪಾಗಿ ಗುರುತಿಸಲಾಗಿದೆ.

ಪಿನ್ನೆಲ್ಲಿ ರಾಮಕೃಷ್ಣ ಅವರ ವಕೀಲ ನಿರಂಜನ್ ರೆಡ್ಡಿ ಅವರನ್ನು ತಪ್ಪಾಗಿ ಗುರುತಿಸಿದ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಪ್ರಶ್ನೆಯಲ್ಲಿರುವ ವ್ಯಕ್ತಿ ತೆಲುಗು ಪೋಷ್ಟ್ ನ ಸಂಪಾದಕರಾಗಿದ್ದಾರೆ. ಇವಿಎಂ ಧ್ವಂಸ ಪ್ರಕರಣದಲ್ಲಿ ಶಾಸಕ ಪಿ.ರಾಮಕೃಷ್ಣ ರೆಡ್ಡಿ ಪರ ವಕಾಲತ್ತು ವಹಿಸುತ್ತಿರುವವರಲ್ಲ.

ಕ್ಲೈಮ್ ಐಡಿ 780460b0

ಹೇಳಿಕೆ ಏನು?

ಕೆಂಪು ಹಿನ್ನೆಲೆಯಲ್ಲಿ ನೀಲಿ ಶರ್ಟ್ ಧರಿಸಿರುವ ವ್ಯಕ್ತಿಯ ಚಿತ್ರವನ್ನು ಇತರ ಎರಡು ಚಿತ್ರಗಳೊಂದಿಗಿನ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ, ಆ ವ್ಯಕ್ತಿ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ, ದಕ್ಷಿಣ ಭಾರತದ ರಾಜ್ಯವಾದ ಆಂಧ್ರ ಪ್ರದೇಶನ ವೈಎಸ್‌ಆರ್ (ವೈಎಸ್‌ಆರ್‌ಸಿಪಿ) ಕಾಂಗ್ರೆಸ್ ಪಕ್ಷದ ಶಾಸಕಾಂಗ (ಎಂಎಲ್‌ಎ) ಅವರ ವಕೀಲರು ಎಂದು  ಹೇಳಲಾಗುತ್ತಿದೆ. ಮೇ ೧೩ ರಂದು, ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಮತ ಚಲಾಯಿಸಿದಾಗ ಮತ್ತು ನಡೆಯುತ್ತಿರುವ ಲೋಕಸಭೆ ಚುನಾವಣೆಗೆ ಕೆಲವು ಕ್ಷೇತ್ರಗಳಲ್ಲಿ ಮತ ಚಲಾಯಿಸಿದಾಗ, ಪಿನ್ನೆಲ್ಲಿ ಅವರು ಮತಗಟ್ಟೆಯಲ್ಲಿ ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಗಳನ್ನು (ಇವಿಎಂ) ಒಡೆಯುವಾಗ ಕ್ಯಾಮರಾದಲ್ಲಿ ಸಿಕ್ಕಿಬಿದ್ದರು.

ಈ ಹಿನ್ನೆಲೆಯಲ್ಲಿ ಕೋಲಾಜ್‌ನಲ್ಲಿರುವ ನೀಲಿ ಅಂಗಿ ತೊಟ್ಟಿರುವ ವ್ಯಕ್ತಿ ಶಾಸಕರ ಪರ ವಕಾಲತ್ತು ನಡೆಸುತ್ತಿರುವ ನಿರಂಜನ್ ರೆಡ್ಡಿಯವರನ್ನು ತೋರಿಸುತ್ತದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ (ಇಲ್ಲಿ  ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಲವಾರು ಪೋಷ್ಟ್ ಗಳು  ಹರಿದಾಡುತ್ತಿವೆ.

ಈ ವೈರಲ್ ಕೊಲಾಜ್‌ನಲ್ಲಿ ಆಂಧ್ರಪ್ರದೇಶ ಸರ್ಕಾರದ ಸಲಹೆಗಾರರಾದ ಸಜ್ಜಲಾ ರಾಮಕೃಷ್ಣ ರೆಡ್ಡಿ ಅವರು ಎಡಭಾಗದಲ್ಲಿ ಬಿಳಿ ಶರ್ಟ್‌ನಲ್ಲಿ ಮತ್ತು ತೆಲುಗು ಚಲನಚಿತ್ರ 'ಅಥಾಡು' ಚಿತ್ರದ ದೃಶ್ಯವನ್ನು ಒಳಗೊಂಡಿದ್ದು, ಕೆಳಭಾಗದಲ್ಲಿ ನಟರಾದ ಬ್ರಹ್ಮಾನಂದಂ ಮತ್ತು ತ್ರಿಷಾ ಕಾಣಿಸಿಕೊಂಡಿದ್ದಾರೆ. ಇವಿಎಂ ಮತ್ತು ವಿವಿಪ್ಯಾಟ್ ಯಂತ್ರವನ್ನು ಧ್ವಂಸಗೊಳಿಸುತ್ತಿರುವ ವೀಡಿಯೋವನ್ನು 'ನಕಲಿ' ಎಂದು ಪಿನ್ನೆಲ್ಲಿ ಅವರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು ಎಂದು ಸೂಚಿಸುವ ಶೀರ್ಷಿಕೆಯೊಂದಿಗೆ ಒಬ್ಬ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಕೊಲಾಜ್ ಅನ್ನು ಪೋಷ್ಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಪ್ರಶ್ನೆಯಲ್ಲಿರುವ ವ್ಯಕ್ತಿ ಪಿನ್ನೆಲ್ಲಿ ಅವರ ವಕೀಲರಲ್ಲ. ಇವರು ತೆಲಂಗಾಣ ಮೂಲದ ಹಿರಿಯ ಪತ್ರಕರ್ತರು.

ವಾಸ್ತವಾಂಶಗಳೇನು?

ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ನಮ್ಮನ್ನು ತೆಲುಗುಪೋಷ್ಟ್ ನ ವೆಬ್‌ಸೈಟ್‌ಗೆ ಕರೆದೊಯ್ಯಿತು, ತೆಲಂಗಾಣ ಮೂಲದ ಸುದ್ದಿ ಮತ್ತು ಫ್ಯಾಕ್ಟ್-ಚೆಕಿಂಗ್   ಔಟ್‌ಲೆಟ್. ವೆಬ್‌ಸೈಟ್‌ನ ಸಂಪಾದಕೀಯ ಸಿಬ್ಬಂದಿ ವಿಭಾಗದಲ್ಲಿ ವೈರಲ್ ಕೊಲಾಜ್‌ನಲ್ಲಿ ಬಳಸಿದ ವ್ಯಕ್ತಿಯ ನಿಖರವಾದ ಫೋಟೋವನ್ನು ನಾವು ಕಂಡುಕೊಂಡಿದ್ದೇವೆ. ವೆಬ್‌ಸೈಟ್ ಪ್ರಕಾರ, ಕೆಂಪು ಹಿನ್ನೆಲೆಯಲ್ಲಿ ನಿಂತಿರುವ ಛಾಯಾಚಿತ್ರದಲ್ಲಿರುವ ವ್ಯಕ್ತಿ ರವಿ ಬಚ್ಚೆಲಾ ಅವರು ಪತ್ರಿಕೋದ್ಯಮದಲ್ಲಿ ಸುಮಾರು ಮೂವತ್ತು ವರ್ಷಗಳ ಅನುಭವವನ್ನು ಹೊಂದಿರುವ ಸಂಪಾದಕರಾಗಿದ್ದಾರೆ ಎಂದು ಹೇಳಲಾಗಿದೆ.

ರವಿ ಬಚ್ಚಲಿ ಅವರ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ತೆಲುಗುಪೋಸ್ಟ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ (ಮೂಲ: ತೆಲುಗುಪೋಸ್ಟ್)

ಬಚ್ಚಲಿ ಅವರನ್ನು ಲಾಜಿಕಲಿ ಫ್ಯಾಕ್ಟ್ಸ್ ಸಂಪರ್ಕಿಸಿತು, ಅವರು ವೈರಲ್ ಕೊಲಾಜ್‌ನಲ್ಲಿ ತಪ್ಪಾಗಿ ಗುರುತಿಸಲ್ಪಟ್ಟಿದ್ದಾರೆ ಎಂದು ನಮಗೆ ತಿಳಿಸಿದರು. "ನಾನು ಎಂದಿಗೂ ಕಾನೂನು ಶಾಲೆಗೆ ಹೋಗಿಲ್ಲ ಅಥವಾ ಯಾವುದೇ ಕಾನೂನು ಸಂಬಂಧಿತ ಅನುಭವವನ್ನು ಹೊಂದಿಲ್ಲ. ನಾನು ಕಳೆದ ೩೦ ವರ್ಷಗಳಿಂದ ಕೇವಲ ಪತ್ರಕರ್ತನಾಗಿದ್ದೆ. ಫೋಟೋದ ತಪ್ಪು ಬಳಕೆಯ ಬಗ್ಗೆ ನಾವು ಎಕ್ಸ್ (ಟ್ವಿಟ್ಟರ್) ಗೆ ಸೂಚನೆ ನೀಡಿದ್ದೇವೆ," ಎಂದು ಹೇಳಿದರು.

ಟೈಮ್ಸ್ ಆಫ್ ಇಂಡಿಯಾದಂತಹ ಕೆಲವು ಸುದ್ದಿವಾಹಿನಿಗಳು ವೈಎಸ್‌ಆರ್‌ಸಿಪಿ ಶಾಸಕರ ವಿರುದ್ಧದ ಪ್ರಕರಣದ ಕುರಿತು ತಮ್ಮ ವರದಿಗಳಲ್ಲಿ ನಿರಂಜನ್ ರೆಡ್ಡಿ ಎಂಬ ವಕೀಲರನ್ನು ಉಲ್ಲೇಖಿಸಿವೆ, ಆದರೆ ವಕೀಲರ ಫೋಟೋ ಇನ್ನೂ ಸಾರ್ವಜನಿಕವಾಗಿ ಲಭ್ಯವಿಲ್ಲ. ನಾವು ನ್ಯಾಯಾಲಯದ ದಾಖಲೆಗಳನ್ನು ಪ್ರವೇಶಿಸಿದ್ದೇವೆ ಮತ್ತು ಇವಿಎಂ ನಾಶ ಪ್ರಕರಣದಲ್ಲಿ ವಕೀಲ ರಾಮಲಕ್ಷ್ಮಣ ರೆಡ್ಡಿ ಸಾನೆಪಲ್ಲಿಯವರು ಅಧಿಕೃತವಾಗಿ ಪಿನ್ನೆಲ್ಲಿಯನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಕಂಡುಬಂದಿದೆ.

ಹೆಚ್ಚಿನ ದೃಢೀಕರಣಕ್ಕಾಗಿ, ವೈಎಸ್‌ಆರ್‌ಸಿಪಿಗೆ ಸಂಬಂಧಿಸಿದ ಪ್ರಕರಣಗಳನ್ನು ಸಾಮಾನ್ಯವಾಗಿ ವ್ಯವಹರಿಸುವ ಆಂಧ್ರಪ್ರದೇಶ ಹೈಕೋರ್ಟ್ ವಕೀಲರಾದ ಆರ್ ಯೆಲ್ಲಾ ರೆಡ್ಡಿ ಅವರನ್ನು ಲಾಜಿಕಲಿ ಫ್ಯಾಕ್ಟ್ಸ್ ಸಂಪರ್ಕಿಸಿದೆ. ಈಗ ವೈರಲ್ ಆಗಿರುವ ಕೊಲಾಜ್‌ನಲ್ಲಿರುವ ವ್ಯಕ್ತಿ ನಿರಂಜನ್ ರೆಡ್ಡಿ ಅಥವಾ ರಾಮಲಕ್ಷಮಣ ರೆಡ್ಡಿ ಸಾನೆಪಲ್ಲಿ ವಕೀಲರಲ್ಲ ಎಂದು ಅವರು ದೃಢಪಡಿಸಿದರು.

ಶಾಸಕರ ವಿರುದ್ಧದ ಪ್ರಕರಣದ ಕುರಿತು ಮಾತನಾಡಿದ ಯಲ್ಲ ರೆಡ್ಡಿ, "ಹಿರಿಯ ವಕೀಲ ಟಿ.ನಿರಂಜನ್ ರೆಡ್ಡಿ ಅವರೇ ವಾದ ಮಂಡಿಸುತ್ತಿದ್ದಾರೆ," ಎಂದು ಹೇಳಿದರು. ಕೆಲವು ಪ್ರಕರಣಗಳಲ್ಲಿ, ಹಿರಿಯ ವಕೀಲರು ನ್ಯಾಯಾಲಯದಲ್ಲಿ ಪ್ರಕರಣವನ್ನು ವಾದಿಸುತ್ತಾರೆ, ಕಕ್ಷಿದಾರರ ಪರವಾಗಿ ಬೇರೆ ವಕೀಲರು ಅರ್ಜಿಯನ್ನು ಸಲ್ಲಿಸುತ್ತಾರೆ ಎಂದು ಅವರು ವಿವರಿಸಿದರು.

ಇವಿಎಂ ನಾಶದ ಪ್ರಕರಣ

ಮಾಚರ್ಲಾ ಕ್ಷೇತ್ರದ ಶಾಸಕರಾಗಿರುವ ವೈಎಸ್‌ಆರ್‌ಸಿಪಿಯ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರು ಮೇ ೧೩ ರಂದು ಕೊಠಡಿಗೆ ನುಗ್ಗಿ ಇವಿಎಂಗಳನ್ನು ಒಡೆದು ಹಾಕಿದ್ದರು ಎಂದು ಆರೋಪಿಸಲಾಗಿದೆ. ಘಟನೆಯ ನಂತರ ಪರಾರಿಯಾಗಿದ್ದ ಶಾಸಕರ ವಿರುದ್ಧ ಭಾರತೀಯ ಚುನಾವಣಾ ಆಯೋಗವು ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದೆ. ಅವರು ಶೀಘ್ರದಲ್ಲೇ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು ಮತ್ತು ಆಂಧ್ರ ಹೈಕೋರ್ಟ್ ಜೂನ್ ೬ ರವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತು ಎಂದು ದಿ ಹಿಂದೂ ವರದಿ ಮಾಡಿದೆ.

ಮಧ್ಯಂತರ ಜಾಮೀನಿನ ವಿಚಾರಣೆಯ ಸಂದರ್ಭದಲ್ಲಿ, ಪಿನ್ನೆಲ್ಲಿ ಅವರ ವಕೀಲ ನಿರಂಜನ್ ರೆಡ್ಡಿ ಅವರು ನ್ಯಾಯಾಲಯದ ಮುಂದೆ ವಾದಿಸಿದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ, ವೈಎಸ್‌ಆರ್‌ಸಿಪಿಯ ಪ್ರತಿಸ್ಪರ್ಧಿ ತೆಲುಗು ದೇಶಂ ಪಕ್ಷದ ನಾಯಕರೊಬ್ಬರು ಬಿಡುಗಡೆ ಮಾಡಿದ ವೀಡಿಯೋವನ್ನು ಆಧರಿಸಿ ಚುನಾವಣಾ ಆಯೋಗವು ಕ್ರಮಕ್ಕೆ ಒತ್ತಾಯಿಸಿತು ಮತ್ತು ಉದ್ದೇಶವನ್ನು ಪ್ರಶ್ನಿಸಿತು. ವಿರೋಧ ಪಕ್ಷದ ನಾಯಕರೊಬ್ಬರು ಬಿಡುಗಡೆ ಮಾಡಿದ ವೀಡಿಯೋವನ್ನು ಚುನಾವಣಾ ಸಮಿತಿಯು ಅವಲಂಬಿಸುವಂತಿಲ್ಲ, ಏಕೆಂದರೆ ಅದು 'ಮಾರ್ಫ್ ಆಗಿರಬಹುದು' ಎಂದು ಅವರು ವಾದಿಸಿದರು.

ತೀರ್ಪು

ಸಾಮಾಜಿಕ ಮಾಧ್ಯಮ ವೈರಲ್ ಪೋಷ್ಟ್ ಗಳಲ್ಲಿ ಹಿರಿಯ ತೆಲುಗು ಪತ್ರಕರ್ತ ರವಿ ಬಚ್ಚಲಿ ಅವರನ್ನು ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರ ವಕೀಲ ನಿರಂಜನ್ ರೆಡ್ಡಿ ಎಂದು ತಪ್ಪಾಗಿ ಗುರುತಿಸಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.