ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಒತ್ತಡದ ನಡುವೆ ಕೆನಡಾ ಭಾರತಕ್ಕೆ ಪ್ರಯಾಣ ಸಲಹೆಯನ್ನು ನವೀಕರಿಸಿದೆ ಎಂದು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಸೆಪ್ಟೆಂಬರ್ 21 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಒತ್ತಡದ ನಡುವೆ ಕೆನಡಾ ಭಾರತಕ್ಕೆ ಪ್ರಯಾಣ ಸಲಹೆಯನ್ನು ನವೀಕರಿಸಿದೆ ಎಂದು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ

ಕೆನಡಾದ ನವೀಕೃತ ಪ್ರಯಾಣ ಸಲಹೆಯು ಭಾರತಕ್ಕೆ ಪ್ರಯಾಣಿಸುವುದರ ವಿರುದ್ಧ ಎಚ್ಚರಿಕೆ ನೀಡಿದೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿರುವುದರ ಸ್ಕ್ರೀನ್‌ಶಾಟ್‌ಗಳು. (ಮೂಲ: ವಿಕಿಮೀಡಿಯಾ ಕಾಮನ್ಸ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಪ್ರಸ್ತುತ ಮಾರ್ಗದರ್ಶನವು ಎರಡು ವರ್ಷಗಳಿಂದ ಕೆನಡಾದ ಸರ್ಕಾರದ ವೆಬ್‌ಸೈಟ್‌ನ ಪ್ರಯಾಣ ಮತ್ತು ಪ್ರವಾಸೋದ್ಯಮ ವಿಭಾಗದಲ್ಲಿ ಕಾಣಿಸಿಕೊಂಡಿದೆ.

ಕ್ಲೈಮ್ ಐಡಿ 9071a080

ಭಾರತ ಮತ್ತು ಕೆನಡಾ ನಡುವಿನ ಹದಗೆಟ್ಟ ಸಂಬಂಧಗಳ ನಡುವೆ, ಕೆನಡಾ ನಾಗರಿಕರಿಗೆ "ಹೆಚ್ಚಿನ ಮಟ್ಟದ ಎಚ್ಚರಿಕೆಯನ್ನು" ಮತ್ತು "ಜಮ್ಮು ಮತ್ತು ಕಾಶ್ಮೀರಕ್ಕೆ ಎಲ್ಲಾ ಪ್ರಯಾಣವನ್ನು ತಪ್ಪಿಸಿ" ಎಂದು ಕೋರಿಕೊಳ್ಳುವ ಹೊಸ ಪ್ರಯಾಣ ಸಲಹೆಯನ್ನು ಬಿಡುಗಡೆ ಮಾಡಿದೆ ಎಂದು ಹಲವಾರು ಸುದ್ದಿ ಸಂಸ್ಥೆಗಳು ತಪ್ಪಾಗಿ ವರದಿ ಮಾಡಿವೆ.

ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಸೆಪ್ಟೆಂಬರ್ ೧೮ ರ ಭಾಷಣದ ನಂತರ ಪ್ರಮುಖ ಸುದ್ದಿ ಸಂಸ್ಥೆಗಳು ತಪ್ಪು ಹೇಳಿಕೆಯನ್ನು ವರದಿ ಮಾಡಿವೆ. ಅಲ್ಲಿ ಅವರು, ಜೂನ್ ೧೮ ರಂದು ವ್ಯಾಂಕೋವರ್ ಉಪನಗರದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಅವರ ಸಾವಿನಲ್ಲಿ ಭಾರತವು ಭಾಗಿಯಾಗಿರುವ ಬಗ್ಗೆ "ವಿಶ್ವಾಸಾರ್ಹ ಆರೋಪಗಳನ್ನು" ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದರು. .

ಸೆಪ್ಟೆಂಬರ್ ೧೯ ರಂದು, ಭಾರತೀಯ ಸುದ್ದಿ ಸಂಸ್ಥೆ ಎಏನ್ಐ ಈ ಆಪಾದಿತ ಪ್ರಯಾಣ ಸಲಹೆಯ ಕುರಿತು ವರದಿಯನ್ನು ಎಕ್ಸ್ ನಲ್ಲಿ ಪೋಷ್ಟ್ ನ ಮೂಲಕ ಹಂಚಿಕೊಂಡಿದೆ. "ಅನಿರೀಕ್ಷಿತ ಭದ್ರತಾ ಪರಿಸ್ಥಿತಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಎಲ್ಲಾ ಪ್ರಯಾಣವನ್ನು ತಪ್ಪಿಸಿ. ಭಯೋತ್ಪಾದನೆ, ಉಗ್ರಗಾಮಿತ್ವ, ನಾಗರಿಕ ಅಶಾಂತಿ ಮತ್ತು ಅಪಹರಣದ ಬೆದರಿಕೆ ಇದೆ. ಈ ಸಲಹೆಯು ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಅಥವಾ ಅದರೊಳಗೆ ಪ್ರಯಾಣಿಸುವುದನ್ನು ಹೊರತುಪಡಿಸುತ್ತದೆ. ಭಾರತಕ್ಕಾಗಿ ಕೆನಡಾದ ನವೀಕರಿಸಿದ ಪ್ರಯಾಣ ಸಲಹೆ, (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ಅದರ ಎಕ್ಸ್ ಪೋಷ್ಟ್ ಹೇಳಿದೆ. ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಕೆನಡಾ ತನ್ನ ಇತ್ತೀಚಿನ ಭಾರತ ಪ್ರವಾಸ ಸಲಹೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸುವುದರ ವಿರುದ್ಧ ಎಚ್ಚರಿಕೆಯನ್ನು ಸೇರಿಸಿದೆ ಎಂದು ಆರೋಪಿಸಿರುವ ಎಏನ್ಐ ನ  ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಹಿಂದೂಸ್ತಾನ್ ಟೈಮ್ಸ್, ಡೆಕ್ಕನ್ ಕ್ರಾನಿಕಲ್, ದಿ ಎಕನಾಮಿಕ್ ಟೈಮ್ಸ್, ಔಟ್‌ಲುಕ್, ಇಂಡಿಯಾ ಟುಡೇ, ಎನ್‌ಡಿಟಿವಿ, ದಿ ಇಂಡಿಯನ್ ಎಕ್ಸ್‌ಪ್ರೆಸ್, ಮನಿ ಕಂಟ್ರೋಲ್, ವಿಯಾನ್, ಟೈಮ್ಸ್ ನೌ ಮತ್ತು ಇನ್‌ಶಾರ್ಟ್ಸ್‌ ನಂತಹ ಹಲವಾರು ಮಾಧ್ಯಮಗಳು ಕೆನಡಾ ತನ್ನ ಪ್ರಯಾಣ ಸಲಹೆಯನ್ನು ನವೀಕರಿಸಿದೆ ಮತ್ತು ನಾಗರಿಕರನ್ನು ಜಾಗರೂಕರಾಗಿರಿ ಇರಲು ಕೇಳಿಕೊಂಡಿದೆ ಎಂದು ವರದಿ ಮಾಡಿವೆ. ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸದಂತೆ ನಿರ್ದಿಷ್ಟವಾಗಿ ಎಚ್ಚರಿಸಿದೆ ಎಂದು ಕೂಡ ವರದಿ ಮಾಡಿವೆ.

ಭಾರತಕ್ಕೆ ಪ್ರಯಾಣದ ಮಾಡುವುದರ ವಿರುದ್ಧ ಕೆನಡಾದ ಅಪ್‌ಡೇಟ್ ಮಾಡಲಾದ ಪ್ರಯಾಣ ಸಲಹಾ ಎಚ್ಚರಿಕೆಯ ಕುರಿತು ವರದಿ ಮಾಡುವ ಸುದ್ದಿವಾಹಿನಿಗಳ ಸ್ನ್ಯಾಪ್‌ಶಾಟ್. (ಮೂಲ: ಎನ್‌ಡಿಟಿವಿ/ಹಿಂದೂಸ್ತಾನ್ ಟೈಮ್ಸ್/ಡೆಕ್ಕನ್ ಕ್ರಾನಿಕಲ್/ಔಟ್‌ಲುಕ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಕೆನಡಾ ಇತ್ತೀಚೆಗೆ ಭಾರತ ಅಥವಾ ನಿರ್ದಿಷ್ಟವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತನ್ನ ಪ್ರಯಾಣ ಸಲಹೆಯನ್ನು ಪರಿಷ್ಕರಿಸಿಲ್ಲ. ಪ್ರಸ್ತುತ ಮಾರ್ಗದರ್ಶನವು ಎರಡು ವರ್ಷಗಳಿಂದ ಕೆನಡಾದ ಸರ್ಕಾರದ ವೆಬ್‌ಸೈಟ್‌ನ ಪ್ರಯಾಣ ಮತ್ತು ಪ್ರವಾಸೋದ್ಯಮ ವಿಭಾಗದಲ್ಲಿದೆ.

ಇದರ ವಾಸ್ತವಾಂಶಗಳೇನು?

ಪ್ರವೇಶದ ಅವಶ್ಯಕತೆಗಳು, ಆರೋಗ್ಯ ಪರಿಗಣನೆಗಳು ಮತ್ತು ಸುರಕ್ಷತಾ ಸಲಹೆಗಳು ಸೇರಿದಂತೆ ವಿವಿಧ ದೇಶಗಳು ಮತ್ತು ಪ್ರದೇಶಗಳ ಸುರಕ್ಷತೆ ಮತ್ತು ಭದ್ರತಾ ಪರಿಸ್ಥಿತಿಗಳ ಬಗ್ಗೆ ತನ್ನ ನಾಗರಿಕರಿಗೆ ತಿಳಿಸಲು ಕೆನಡಾ ಪ್ರಯಾಣ ಸಲಹೆಗಳನ್ನು ನೀಡುತ್ತದೆ.

ಸೆಪ್ಟೆಂಬರ್ ೧೮ ರಂತೆ, ಭಾರತಕ್ಕೆ ಪ್ರಯಾಣಿಸುವಾಗ "ಹೆಚ್ಚಿನ ಮಟ್ಟದ ಎಚ್ಚರಿಕೆಯನ್ನು" ಜಾಗರೂಕರಾಗಿ ಇರಲು ಕೆನಡಾ ತಮ್ಮ ನಾಗರಿಕರಿಗೆ ಶಿಫಾರಸು ಮಾಡುತ್ತದೆ. ಸಲಹೆಯು ಭಾರತದೊಳಗಿನ ಪ್ರದೇಶಗಳಿಗೆ ನಿರ್ದಿಷ್ಟ ಶಿಫಾರಸುಗಳನ್ನು ಒಳಗೊಂಡಿದೆ - ಈಶಾನ್ಯ ಭಾರತದ ಭಾಗಗಳು (ಅಗತ್ಯವಲ್ಲದ ಪ್ರಯಾಣವನ್ನು ತಪ್ಪಿಸಿ), ಜಮ್ಮು ಮತ್ತು ಕಾಶ್ಮೀರ (ಎಲ್ಲಾ ಪ್ರಯಾಣವನ್ನು ತಪ್ಪಿಸಿ), ಮತ್ತು ಪಾಕಿಸ್ತಾನದೊಂದಿಗಿನ ಗಡಿ ಪ್ರದೇಶಗಳು (ಎಲ್ಲಾ ಪ್ರಯಾಣವನ್ನು ತಪ್ಪಿಸಿ) ಎಂದು ಪ್ರಯಾಣಿಕರಿಗೆ ಸಲಹೆ ನೀಡಿದೆ.

ಭಾರತೀಯ ಮಾಧ್ಯಮಗಳಲ್ಲಿ ಕಂಡುಬಂದ ವರದಿಗಳಿಗೆ ವಿರುದ್ಧವಾಗಿ, ಕೆನಡಾ ಭಾರತಕ್ಕೆ ಪ್ರಯಾಣದ ಸಲಹೆಯು ಜುಲೈ ೨೦೨೩, ಮೇ ೨೦೨೩, ಜನವರಿ ೨೦೨೨ ಮತ್ತು ಜುಲೈ ೨೦೨೧ ಮೊದಲಾದ ಸಮಯಗಳಲ್ಲಿ "ಅನಿರೀಕ್ಷಿತ ಭದ್ರತಾ ಪರಿಸ್ಥಿತಿಯಿಂದಾಗಿ" ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸದಂತೆ ಸತತವಾಗಿ ಸಲಹೆ ನೀಡುತ್ತಿದೆ ಎಂದು ನಾವು ಕಂಡುಕೊಂಡಿದ್ದೇವೆ. " ಸಲಹೆಗಳು ಈ ಪ್ರದೇಶದಲ್ಲಿ "ಭಯೋತ್ಪಾದನೆ, ಉಗ್ರಗಾಮಿತ್ವ, ನಾಗರಿಕ ಅಶಾಂತಿ ಮತ್ತು ಅಪಹರಣ" ದ ಬೆದರಿಕೆಯನ್ನು ಎತ್ತಿ ತೋರಿಸಿವೆ. ಇದಲ್ಲದೆ, ಇಂಟರ್ನೆಟ್ ಆರ್ಕೈವ್‌ಗಳು ಕೆನಡಾದ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸದಂತೆ ಸಲಹೆ ನೀಡಿದ್ದಾರೆ ಮತ್ತು ಕನಿಷ್ಠ ನವೆಂಬರ್ ೨೦೧೨ ರಿಂದ "ಎಲ್ಲಾ ಸಮಯದಲ್ಲೂ ದೇಶದಾದ್ಯಂತ ಭಯೋತ್ಪಾದಕ ದಾಳಿಗಳ ನಿರಂತರ ಬೆದರಿಕೆ"ಯಿಂದಾಗಿ "ಉನ್ನತ ಮಟ್ಟದ ಎಚ್ಚರಿಕೆ" ಯನ್ನು ಒತ್ತಾಯಿಸಿದ್ದಾರೆ ಎಂದು ತೋರಿಸುತ್ತದೆ.

ಸೆಪ್ಟೆಂಬರ್ ೧೮ ರ ಸಲಹೆಯಲ್ಲಿ ಈಶಾನ್ಯ ಭಾರತ ಮತ್ತು ಪಾಕಿಸ್ತಾನದ ಗಡಿ ಪ್ರದೇಶಗಳಿಗೆ ಪ್ರಯಾಣಿಸುವುದರ ಬಗ್ಗೆ ಹೇಳಿರುವ ವಿಭಾಗಗಳು ಜುಲೈ ೨೦೨೧ ರ ಸಲಹೆಗೆ ಹೊಂದಿಕೆಯಾಗುತ್ತದೆ.

ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಸಲಹೆಯಲ್ಲಿನ ಏಕೈಕ ನವೀಕರಣವನ್ನು ಮೇಲ್ಭಾಗದಲ್ಲಿ ಹೇಳಲಾಗಿದೆ - "ಆರೋಗ್ಯ ವಿಭಾಗವನ್ನು ನವೀಕರಿಸಲಾಗಿದೆ - ಪ್ರಯಾಣದ ಆರೋಗ್ಯ ಮಾಹಿತಿ (ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆ)." ಹಾಗೆಯೇ, ಸೆಪ್ಟೆಂಬರ್ ೧೮ ರ ಸಲಹೆಯ ಆರೋಗ್ಯ ವಿಭಾಗವು ಮೀಸಲ್ಸ್, ಜಿಕಾ ವೈರಸ್ ಮತ್ತು ಕೋವಿಡ್, ಮತ್ತು ಅಂತರರಾಷ್ಟ್ರೀಯ ಪ್ರಯಾಣದ ಕುರಿತು ಇತ್ತೀಚಿನ ಆರೋಗ್ಯ ಸೂಚನೆಗಳನ್ನು ಪ್ರತಿಬಿಂಬಿಸುತ್ತದೆ.

ಈ ವಾರ ಕೆನಡಾ ಸರ್ಕಾರವು ಹಿರಿಯ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದಾಗ ಉಭಯ ದೇಶಗಳ ನಡುವಿನ ಬಿರುಕು ತೀವ್ರಗೊಂಡಿರುವ ಮಧ್ಯೆ, ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಸೆಪ್ಟೆಂಬರ್ ೧೯ ರಂದು ದೇಶವನ್ನು ತೊರೆಯುವಂತೆ ಕೇಳಿಕೊಂಡಿದೆ. ಇದರ ಮಧ್ಯೆ ತಪ್ಪುದಾರಿಗೆಳೆಯುವ ನಿರೂಪಣೆಗಳೊಂದಿಗೆ  ಹಲವಾರು ಹೇಳಿಕೆಗಳು ಮತ್ತು ಸುದ್ದಿ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

"ಇಂತಹ ಆಧಾರರಹಿತ ಆರೋಪಗಳು ಕೆನಡಾದಲ್ಲಿ ಆಶ್ರಯ ಪಡೆದಿರುವ ಮತ್ತು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಹಾಕುತ್ತಿರುವ ಖಲಿಸ್ತಾನಿ ಭಯೋತ್ಪಾದಕರ ಮತ್ತು ಉಗ್ರಗಾಮಿಗಳ ಮೇಲಿನ ಗಮನವನ್ನು ಬದಲಾಯಿಸಲು  ಪ್ರಯತ್ನಿಸುತ್ತಿವೆ" ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ತೀರ್ಪು 

ಕೆನಡಾ ಭಾರತಕ್ಕೆ ತನ್ನ ಪ್ರಯಾಣ ಸಲಹೆಯನ್ನು ನವೀಕರಿಸಿದೆ ಎಂದು ಹಲವಾರು ಸುದ್ದಿ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ಕೆನಡಾದ ಪ್ರಯಾಣ ಸಲಹೆಯು ಭಾರತಕ್ಕೆ ಪ್ರಯಾಣಿಸುವಲ್ಲಿ "ಉನ್ನತ ಮಟ್ಟದ ಎಚ್ಚರಿಕೆ" ಯನ್ನು ಸತತವಾಗಿ ಒತ್ತಾಯಿಸಿದೆ ಮತ್ತು ಭದ್ರತಾ ಕಾಳಜಿಗಳ ಕಾರಣದಿಂದಾಗಿ ಜಮ್ಮು ಮತ್ತು ಕಾಶ್ಮೀರ ಪ್ರದೇಶಕ್ಕೆ ಪ್ರಯಾಣಿಸದಂತೆ ಸಲಹೆ ನೀಡಿದೆ.

ಅನುವಾದಿಸಿದವರು: ವಿವೇಕ್.ಜೆ 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.