ಇಲ್ಲ, ಭಾರತಕ್ಕೆ ಆಗಮಿಸಿದ ಪಾಕಿಸ್ತಾನ್ ಕ್ರಿಕೆಟ್ ತಂಡದ ವಿರುದ್ಧ 'ಪಾಕಿಸ್ತಾನ್ ಮುರ್ದಾಬಾದ್' ಎಂಬ ಘೋಷಣೆಗಳನ್ನು ನೀಡಲಾಗಿಲ್ಲ

ಮೂಲಕ: ರಾಹುಲ್ ಅಧಿಕಾರಿ
ಅಕ್ಟೋಬರ್ 4 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಭಾರತಕ್ಕೆ ಆಗಮಿಸಿದ ಪಾಕಿಸ್ತಾನ್ ಕ್ರಿಕೆಟ್ ತಂಡದ ವಿರುದ್ಧ 'ಪಾಕಿಸ್ತಾನ್ ಮುರ್ದಾಬಾದ್' ಎಂಬ ಘೋಷಣೆಗಳನ್ನು ನೀಡಲಾಗಿಲ್ಲ

ಪಾಕಿಸ್ತಾನ್ ಮುರ್ದಾಬಾದ್' ಎಂಬ ಘೋಷಣೆಗಳೊಂದಿಗೆ ಪಾಕಿಸ್ತಾನಿ ಕ್ರಿಕೆಟ್ ತಂಡವನ್ನು ಭಾರತದಲ್ಲಿ ಸ್ವಾಗತಿಸಲಾಯಿತು ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಪಾಕಿಸ್ತಾನ್ ಮುರ್ದಾಬಾದ್ ಘೋಷಣೆಗಳೊಂದಿಗೆ ವೈರಲ್ ಕ್ಲಿಪ್ ಅನ್ನು ಎಡಿಟ್ ಮಾಡಲಾಗಿದೆ.

ಕ್ಲೈಮ್ ಐಡಿ 8ca68f82

ಮುಂಬರುವ ಐಸಿಸಿ ಓಡಿಐ ಪುರುಷರ ೨೦೨೩ರ ವಿಶ್ವಕಪ್  ಗಾಗಿ ಪಾಕಿಸ್ತಾನಿ ಕ್ರಿಕೆಟ್ ತಂಡವು ಸೆಪ್ಟೆಂಬರ್ ೨೭ ರಂದು ಭಾರತಕ್ಕೆ ಆಗಮಿಸಿತು. ಬಹು ನಿರೀಕ್ಷಿತ ಕ್ರಿಕೆಟ್ ಪಂದ್ಯಾವಳಿಯು ಅಕ್ಟೋಬರ್ ೫ ರಂದು ಪ್ರಾರಂಭವಾಗಿ ನವೆಂಬರ್ ೧೯ ರಂದು ಮುಕ್ತಾಯಗೊಳ್ಳಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪಾಕಿಸ್ತಾನಿ ತಂಡವು ಏಳು ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದೆ. 

ಇಲ್ಲಿನ ಹೇಳಿಕೆಯೇನು?
ಪಾಕಿಸ್ತಾನಿ ತಂಡವು ಹೈದರಾಬಾದ್‌ಗೆ ಆಗಮಿಸಿದಾಗ 'ಪಾಕಿಸ್ತಾನ್ ಮುರ್ದಾಬಾದ್' ಎಂಬ ಘೋಷಣೆಗಳನ್ನು ಕೂಗಲಾಯಿತು ಎಂದು ಹೇಳುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ನಾಯಕ ಬಾಬರ್ ಆಜಮ್, ಶಾಹೀನ್ ಶಾ ಆಫ್ರಿದಿ, ಮೊಹಮ್ಮದ್ ನವಾಜ್ ಮತ್ತು ಇಮಾಮ್-ಉಲ್-ಹಕ್ ಸೇರಿದಂತೆ ಹಲವಾರು ಪಾಕಿಸ್ತಾನಿ ಕ್ರಿಕೆಟಿಗರು ಪೊಲೀಸ್ ಅಧಿಕಾರಿಗಳೊಂದಿಗೆ ವಿಮಾನ ನಿಲ್ದಾಣದಿಂದ ಹೊರನಡೆಯುತ್ತಿರುವುದನ್ನು ವೈರಲ್ ವೀಡಿಯೋ ತೋರಿಸುತ್ತದೆ. ಹಿನ್ನೆಲೆಯಲ್ಲಿ ಯಾರೋ 'ಪಾಕಿಸ್ತಾನ್ ಮುರ್ದಾಬಾದ್' ಘೋಷಣೆಗಳನ್ನು ಕೂಗುತ್ತಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಪಾಕಿಸ್ತಾನಿ ಕ್ರಿಕೆಟಿಗರ ವೀಡಿಯೋವನ್ನು ಚಿತ್ರೀಕರಿಸುವುದನ್ನೂ ಸಹ ನೋಡಬಹುದು. 

ಆಪಾದಿತ ಪಾಕಿಸ್ತಾನ ವಿರೋಧಿ ಘೋಷಣೆಗಳೊಂದಿಗೆ ವೀಡಿಯೋವನ್ನು ಹಂಚಿಕೊಳ್ಳುವ ಮೂಲಕ ಎಕ್ಸ್‌ (ಹಿಂದೆ ಟ್ವಿಟ್ಟರ್) ನಲ್ಲಿ ಒಬ್ಬ ಬಳಕೆದಾರರು ಹೀಗೆ ಬರೆದಿದ್ದರೆ, "ಪಾಕಿಸ್ತಾನ ಟೆರರಿಸ್ಟ್ ತಂಡವು ಭಾರತಕ್ಕೆ ಆಗಮಿಸಿದಾಗ ಪಾಕಿಸ್ತಾನ ಮುರ್ದಾಬಾದ್ ಘೋಷಣೆಗಳನ್ನು ಕೂಗಲಾಯಿತು ನಾನು  #ಪಾಕಿಸ್ಥಾನ್ಕ್ರಿಕೆಟಲಾಮ್ ಅವರಿಗೆ ತಲೆಬಾಗುತ್ತೇನೆ." ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್ ಚೆಕ್ ಅನ್ನು ಪ್ರಕಟೊಸುವ ಸಮಯದಲ್ಲಿ ಈ ಪೋಷ್ಟ್ ೪೪,೦೦೦ ವೀಕ್ಷಣೆಗಳನ್ನು ಗಳಿಸಿದೆ. 

ಇದೇ ರೀತಿಯ ಹೇಳಿಕೆಗಳೊಂದಿಗೆ ವೀಡಿಯೋ ಫೇಸ್‌ಬುಕ್‌ನಲ್ಲಿಯೂ ಹರಿದಾಡುತ್ತಿದೆ. ಅಂತಹ ಒಂದು ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. 

ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ ವೈರಲ್ ಹೇಳಿಕೆಯು ತಪ್ಪಾಗಿದೆ. ಪಾಕಿಸ್ತಾನ್ ಮುರ್ದಾಬಾದ್' ಘೋಷಣೆಗಳನ್ನು ಒಳಗೊಂಡಂತೆ ವೀಡಿಯೋವನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ. 

ವಾಸ್ತವಾಂಶಗಳೇನು?
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನಿ ಕ್ರಿಕೆಟ್ ತಂಡದ ವೀಡಿಯೋವಿನ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡೆವು, ಅದರಿಂದ ವೈರಲ್ ಕ್ಲಿಪ್ ಅನ್ನು ಶೇರ್ ಮಾಡಲಾಗಿದೆ. ಎಕನಾಮಿಕ್ ಟೈಮ್ಸ್ (ಇಟಿ)  ವೈರಲ್ ಕ್ಲಿಪ್ ನ ಪೂರ್ಣ ಆವೃತ್ತಿಯನ್ನು ಯೂಟ್ಯೂಬ್‌ನಲ್ಲಿ ಸೆಪ್ಟೆಂಬರ್ ೨೭ ರಂದು ಹಂಚಿಕೊಂಡಿದೆ ಮತ್ತು ಆದರೆ ಶೀರ್ಷಿಕೆ, "ಕ್ರಿಕೆಟ್ ವಿಶ್ವಕಪ್ ೨೦೨೩: ಪಾಕಿಸ್ತಾನ ಕ್ರಿಕೆಟ್ ತಂಡ ಹೈದರಾಬಾದ್ ಏರ್‌ಪೋರ್ಟ್‌ಗೆ ಆಗಮಿಸಿತು" ಎಂದು ಬರೆದು ಪ್ರಕಟಿಸಿದೆ. ೧೨೬ ಸೆಕೆಂಡ್‌ಗಳ  ವೀಡಿಯೋದಲ್ಲಿ ಪಾಕಿಸ್ತಾನಿ ಪಡೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿ ನಂತರ ಬಸ್‌ ಹತ್ತುವುದನ್ನು ನಾವು ನೋಡಬಹುದು. ಈಟಿ ತನ್ನ ವೀಡಿಯೋ ವರದಿಗೆ ಕೆಲವು ಹೆಚ್ಚುವರಿ ಸಂಗೀತವನ್ನು ಸೇರಿಸಿದೆ, ಆದರೆ ರೆಕಾರ್ಡಿಂಗ್‌ನಿಂದ ಮೂಲ ಆಡಿಯೊ ಸ್ಪಷ್ಟವಾಗಿ ಕೇಳಬಲ್ಲದು ಮತ್ತು ಪಾಕಿಸ್ತಾನ ವಿರೋಧಿ ಘೋಷಣೆಗಳು ಕಂಡುಬಂದಿಲ್ಲ. 

ಇಟಿ ವೀಡಿಯೋದಲ್ಲಿ ೧:೨೧ ಟೈಮ್‌ಸ್ಟ್ಯಾಂಪ್‌ನ ಸುತ್ತಲೂ ಮತ್ತು  ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ವೈರಲ್ ಕ್ಲಿಪ್‌ನ ೦:೦೪ ನಿಮಿಷಗಳ ಮಾರ್ಕ್‌ನಲ್ಲಿ ಕಂಡುಬರುವಂತೆ ಅದೇ ವ್ಯಕ್ತಿ ಕ್ಯಾಮರಾ ಕಡೆಗೆ ನೋಡುತ್ತಿರುವದನ್ನು ಗುರುತಿಸಬಹುದು. 

ವೈರಲ್ ವೀಡಿಯೋ ಮತ್ತು  ಎಕನಾಮಿಕ್ ಟೈಮ್ಸ್ (ಇಟಿ)  ಪ್ರಕಟಿಸಿದ ಯೂಟ್ಯೂಬ್ ವೀಡಿಯೋ ನಡುವಿನ ಹೋಲಿಕೆ (ಮೂಲ: ಎಕ್ಸ್‌/ಯೂಟ್ಯೂಬ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಒಂದು ಸೆಕೆಂಡಿನ ನಂತರ, ಇಟಿ ವೀಡಿಯೋದಲ್ಲಿ ಪಾಕಿಸ್ತಾನಿ ಆಟಗಾರರು ಸರದಿಯಲ್ಲಿ ನಿಂತಿರುವುದನ್ನು ತೋರಿಸುತ್ತದೆ-ಇದು ವೈರಲ್ ಕ್ಲಿಪ್‌ನ ೦:೦೫ ಮಾರ್ಕ್‌ನಲ್ಲಿ ಕಂಡುಬರುವ ದೃಶ್ಯವನ್ನು ಹೋಲುತ್ತದೆ, ಇದು ಎರಡೂ ವೀಡಿಯೋಗಳು ಒಂದೇ ಎಂದು ದೃಢೀಕರಿಸುತ್ತದೆ.

ವೈರಲ್ ವೀಡಿಯೋ ಮತ್ತು  ಎಕನಾಮಿಕ್ ಟೈಮ್ಸ್ (ಇಟಿ)  ಪ್ರಕಟಿಸಿದ ಯೂಟ್ಯೂಬ್ ವೀಡಿಯೋ ನಡುವಿನ ಹೋಲಿಕೆ (ಮೂಲ: ಎಕ್ಸ್‌/ಯೂಟ್ಯೂಬ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಪ್ರಶ್ನೆಯಲ್ಲಿರುವ ವೈರಲ್ ಕ್ಲಿಪ್ 'ಪಾಕಿಸ್ತಾನ್ ಮುರ್ದಾಬಾದ್' ಘೋಷಣೆಯನ್ನು ಹೊಂದಿದೆ, ಆದರೆ ಇಟಿ ವೀಡಿಯೋದಲ್ಲಿ ಇಲ್ಲ. ಈ ಸಂಪೂರ್ಣ ವ್ಯತಿರಿಕ್ತತೆಯು ವೈರಲ್ ವೀಡಿಯೋವನ್ನು ಕುಶಲತೆಯಿಂದ ಮತ್ತು ಪಾಕಿಸ್ತಾನದ ವಿರೋಧಿ ಘೋಷಣೆಗಳ ಆಡಿಯೊವನ್ನು ಡಿಜಿಟಲ್ ಆಗಿ ಸೇರಿಸಲಾಗಿದೆ ಎಂದು ಸೂಚಿಸುತ್ತದೆ.

ಹೆಚ್ಚಿನ ಭದ್ರತೆಯ ನಡುವೆ ಭಾರತಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡ ಆಗಮಿಸಿದ ವೀಡಿಯೋವನ್ನು ಹಿಂದೂಸ್ತಾನ್ ಟೈಮ್ಸ್  ಕೂಡಾ ಪ್ರಕಟಿಸಿದೆ. ಈ ವೀಡಿಯೋವನ್ನು ವಿಭಿನ್ನ ಕೋನದಿಂದ ಸೆರೆಹಿಡಿಯಲಾಗಿದೆ ಆದರೆ ಅದೇ ಘಟನೆಯನ್ನು ತೋರಿಸುತ್ತದೆ. ನಾವು ಈ  ವೀಡಿಯೋವನ್ನು ವೈರಲ್ ಕ್ಲಿಪ್‌ನೊಂದಿಗೆ ಹೋಲಿಸಿದ್ದೇವೆ ಮತ್ತು ಅದೇ ಪಾಕಿಸ್ತಾನಿ ಕ್ರಿಕೆಟಿಗರು ಮತ್ತು ಅವರೊಂದಿಗೆ ಪೊಲೀಸ್ ಅಧಿಕಾರಿಗಳನ್ನು ಗುರುತಿಸಿದ್ದೇವೆ. 'ಪಾಕಿಸ್ತಾನ ಮುರ್ದಾಬಾದ್' ಘೋಷಣೆಗಳನ್ನು ಎತ್ತುತ್ತಿರುವವರ ಬಗ್ಗೆ ವರದಿಯಲ್ಲಿ ಏನನ್ನೂ ಉಲ್ಲೇಖಿಸಿಲ್ಲ.

ಸುದ್ದಿ ಸಂಸ್ಥೆ ಎಎನ್‌ಐ ಪಾಕಿಸ್ತಾನಿ ಆಟಗಾರರು ಹೈದರಾಬಾದ್ ವಿಮಾನ ನಿಲ್ದಾಣದಿಂದ ಹೊರಟು ಬಸ್ ಹತ್ತಿರುವ ವೀಡೀಯೋವನ್ನೂ ಸಹ ಬಿಡುಗಡೆ ಮಾಡಿದೆ. ಸ್ಪಷ್ಟವಾದ ಆಡಿಯೊ ಮತ್ತು ಯಾವುದೇ ಬಾಹ್ಯ ಸಂಗೀತವನ್ನು ಹೊಂದಿಲ್ಲ. ವೈರಲ್ ಕ್ಲಿಪ್‌ನಂತೆ ವೀಡಿಯೋ ಸಹ ಒಂದೇ ರೀತಿಯ ದೃಶ್ಯಗಳನ್ನು ತೋರಿಸುತ್ತದೆ. ಅದಲ್ಲದೆ, ಎಎನ್‌ಐ ವೀಡಿಯೋದಲ್ಲಿಯೂ ಸಹ ತಂಡವು ವಿಮಾನ ನಿಲ್ದಾಣದಿಂದ ನಿರ್ಗಮಿಸುವಾಗ 'ಪಾಕಿಸ್ತಾನ ಮುರ್ದಾಬಾದ್' ಘೋಷಣೆಗಳನ್ನು ಎತ್ತಿದ ಯಾವುದೇ ನಿದರ್ಶನಗಳನ್ನು ತೋರಿಸುವುದಿಲ್ಲ. 

ಸೈಬರಾಬಾದ್ ಮೆಟ್ರೋಪಾಲಿಟನ್ ಪೊಲೀಸರು ಹೈದರಾಬಾದ್‌ಗೆ ಕ್ರೀಡಾಪಟುಗಳ ಆಗಮನದ ಸಂದರ್ಭದಲ್ಲಿ 'ಪಾಕಿಸ್ತಾನ ಮುರ್ದಾಬಾದ್' ಘೋಷಣೆಗಳನ್ನು ಕೂಗಲಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಆರ್‌ಜಿಐ ಏರ್‌ಪೋರ್ಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆರ್ ಶ್ರೀನಿವಾಸ್, “ಅಂತಹ ಯಾವುದೇ ಘಟನೆ ನಡೆದಿಲ್ಲ, ಯಾರೂ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿಲ್ಲ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಯಾಗಿರುವ ಬಶೀರ್ ಎಂಬ ವ್ಯಕ್ತಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದರು, ಅವರ ದೇಶಕ್ಕೆ ಬೆಂಬಲವಾಗಿ ಅವರು ವಿಶ್ವಕಪ್‌ಗೆ ಬಂದಿದ್ದರು."

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಚಾಚಾ ಬಶೀರ್ ಎಂದು ಕರೆಯಲ್ಪಡುವ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿ ಬಶೀರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರೊಂದಿಗಿನ ಬಾಂಧವ್ಯದಿಂದಾಗಿ ಚಾಚಾ ಬಶೀರ್ ಭಾರತ ಮತ್ತು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳಲ್ಲಿ ಪ್ರಸಿದ್ಧರಾಗಿದ್ದಾರೆ.

ತೀರ್ಪು 
ಪಾಕಿಸ್ತಾನಿ ಕ್ರಿಕೆಟ್ ತಂಡವು ಹೈದರಾಬಾದ್ ವಿಮಾನ ನಿಲ್ದಾಣದಿಂದ ಹೊರಟಿರುವ ವೀಡಿಯೋವನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದ್ದು, ತಂಡವು ಭಾರತಕ್ಕೆ ಆಗಮಿಸಿದಾಗ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಲಾಗಿತ್ತು ಎಂದು ತಪ್ಪಾಗಿ ಹೇಳಲಾಗಿದೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.

ಅನುವಾದಿಸಿದವರು: ಅಂಕಿತಾ ಕುಲಕರ್ಣಿ 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.