ಇಲ್ಲ, ಟಿಡಿಪಿಯನ್ನು ಬೆಂಬಲಿಸಿದ್ದಕ್ಕಾಗಿ ನಟ ಅಲ್ಲು ಅರ್ಜುನ್ ಅಭಿಮಾನಿಗಳು ಹಾಸ್ಯನಟ ಆರ್‌ಪಿ ಅವರ ಹೋಟೆಲ್ ಮೇಲೆ 'ದಾಳಿ' ಮಾಡಿಲ್ಲ

ಮೂಲಕ: ರಾಜೇಶ್ವರಿ ಪರಸ
ಜೂನ್ 11 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಟಿಡಿಪಿಯನ್ನು ಬೆಂಬಲಿಸಿದ್ದಕ್ಕಾಗಿ ನಟ ಅಲ್ಲು ಅರ್ಜುನ್ ಅಭಿಮಾನಿಗಳು ಹಾಸ್ಯನಟ ಆರ್‌ಪಿ ಅವರ ಹೋಟೆಲ್ ಮೇಲೆ 'ದಾಳಿ' ಮಾಡಿಲ್ಲ

ಟಿಡಿಪಿಯನ್ನು ಬೆಂಬಲಿಸಿದ್ದಕ್ಕಾಗಿ ನಟ ಅಲ್ಲು ಅರ್ಜುನ್ ಅಭಿಮಾನಿಗಳು ಹಾಸ್ಯನಟ ಆರ್‌ಪಿ ಅವರ ಹೋಟೆಲ್ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿಕೊಂಡು ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಹಾಸ್ಯನಟ ಆರ್‌ಪಿ ಅವರ ಮಾಲೀಕತ್ವದ ಹೈದರಾಬಾದ್‌ನ ಗ್ರ್ಯಾಂಡ್ ಹೋಟೆಲ್‌ನಲ್ಲಿ ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿಗಳ ನಡುವಿನ ಜಗಳವನ್ನು ವೈರಲ್ ವೀಡಿಯೋ ತೋರಿಸುತ್ತದೆ.

ಕ್ಲೈಮ್ ಐಡಿ fc73ac09

ಹೇಳಿಕೆ ಏನು?

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ೪೫ ಸೆಕೆಂಡುಗಳ ವೀಡಿಯೋ, ತೆಲುಗು ಶೀರ್ಷಿಕೆಯೊಂದಿಗೆ, ಭಾರತೀಯ ನಟ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಆರ್‌ಪಿ ಎಂದೂ ಕರೆಯಲ್ಪಡುವ ಹಾಸ್ಯನಟ ರಟಕೊಂಡ ಪ್ರಸಾದ್ ಒಡೆತನದ ಹೋಟೆಲ್ ಮೇಲೆ 'ದಾಳಿ' ಮಾಡುವುದನ್ನು ಚಿತ್ರಿಸುತ್ತದೆ ಎಂದು ಹೇಳಲಾಗಿದೆ. ಟಿವಿ ಕಾರ್ಯಕ್ರಮ 'ಜಬರ್ದಸ್ತ್' ನಲ್ಲಿ ಕಿರಾಕ್ ಆರ್‌ಪಿ ಪಾತ್ರಕ್ಕಾಗಿ ಆರ್‌ಪಿ ಖ್ಯಾತಿಯನ್ನು ಗಳಿಸಿದರು ಮತ್ತು ಇತ್ತೀಚೆಗೆ ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ಸೇರಿಕೊಂಡರು ಹಾಗು ಸಕ್ರಿಯವಾಗಿ ಪ್ರಚಾರ ಮಾಡಿದರು, ಟಿಡಿಪಿ-ಜನಸೇನಾ-ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮೈತ್ರಿಯಾಗಿವೆ.

'ಪುಷ್ಪ'ದಂತಹ ಚಿತ್ರಗಳಿಗೆ ಹೆಸರಾದ ಅಲ್ಲು ಅರ್ಜುನ್, ಇತ್ತೀಚೆಗೆ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಅಭ್ಯರ್ಥಿ ರವಿಚಂದ್ರ ಕಿಶೋರ್‌ಗೆ ಬೆಂಬಲ ನೀಡಿದರು.

ಆರ್‌ಪಿ ಅವರು ಟಿಡಿಪಿಗೆ ಬೆಂಬಲ ನೀಡಿದ್ದರಿಂದ ಅರ್ಜುನ್ ಅವರ ಅಭಿಮಾನಿಗಳು ಆರ್‌ಪಿ ಅವರ ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ. ಈ ಹೇಳಿಕೆಯನ್ನು ಹಂಚಿಕೊಂಡ ಪೋಷ್ಟ್ ಗಳ ಆರ್ಕೈವ್ ಅವರುಟ್ಟಿಗಳನ್ನು  ಇಲ್ಲಿ, ಇಲ್ಲಿ ಮತ್ತು ಇಲ್ಲಿ  ನೋಡಬಹುದು.

ಗಮನಾರ್ಹವಾಗಿ, ಇತ್ತೀಚಿನ ಅಂದ್ರ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಸೋಲನ್ನು ಎದುರಿಸಿತು, ಟಿಡಿಪಿ, ಜನಸೇನಾ ಪಕ್ಷ ಮತ್ತು ಬಿಜೆಪಿ ಮೈತ್ರಿಕೂಟವು ರಾಜ್ಯದ ೧೭೫ ಸ್ಥಾನಗಳಲ್ಲಿ ೧೬೪ ಸ್ಥಾನಗಳನ್ನು ಗಳಿಸಿತು.

ಆದರೆ, ಈ ಹೇಳಿಕೆ ನಿರಾಧಾರವಾಗಿದೆ, ಏಕೆಂದರೆ ವೀಡಿಯೋ ವಿಧಾನಸಭೆ ಚುನಾವಣೆಗೂ  ಹಿಂದಿನದ್ದು ಮತ್ತು ಹಾಸ್ಯನಟ ಆರ್ ಪಿ ಒಡೆತನದ ಹೋಟೆಲ್‌ನಲ್ಲಿ ಮಾಣಿಗಳ ಸಿಬ್ಬಂದಿ ಮತ್ತು ಗ್ರಾಹಕರ ನಡುವಿನ ಜಗಳವನ್ನು ವಾಸ್ತವವಾಗಿ ಚಿತ್ರಿಸುತ್ತದೆ.

ಆನ್‌ಲೈನ್‌ನಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವಾಸ್ತವಾಂಶಗಳೇನು?

ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಟೈಮ್ಸ್ ನೌ ವರದಿಯನ್ನು ಕಂಡುಕೊಂಡೆವು, "ಹೈದರಾಬಾದ್ ಹೋಟೆಲ್/ವೀಡಿಯೋದಲ್ಲಿ ಹೋಟೆಲ್ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಘರ್ಷಣೆ ಉಂಟಾಗುತ್ತದೆ," ಇದು ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿದೆ. ಈ ವರದಿಯ ಪ್ರಕಾರ, ಘಟನೆಯು ಜನವರಿ ೧, ೨೦೨೪ ರಂದು ಹೈದರಾಬಾದ್‌ನ ಅಬಿಡ್ಸ್ ಪ್ರದೇಶದ ಗ್ರ್ಯಾಂಡ್ ಹೋಟೆಲ್‌ನಲ್ಲಿ ಸಂಭವಿಸಿದೆ.

ಹೈದರಾಬಾದ್ ಮೂಲದ ಪತ್ರಕರ್ತ ಸಾಯಿ ಶೇಖರ್ ಅಂಗಾರ ಅವರು ಜನವರಿ ೧, ೨೦೨೪ ರಂದು ತಮ್ಮ ಎಕ್ಸ್ ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ವೀಡಿಯೋವನ್ನು  ಹಂಚಿಕೊಂಡಿದ್ದಾರೆ, ಡಿಸೆಂಬರ್ ೩೧ ರಂದು ಗ್ರ್ಯಾಂಡ್ ಹೋಟೆಲ್ ವೇಟರ್‌ಗಳು ಗ್ರಾಹಕರ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿದಾಗ ವಾಗ್ವಾದ ನಡೆಯಿತು ಎಂದು ಹೇಳಿದ್ದಾರೆ.

ದಿ ನ್ಯೂಸ್ ಮಿನಿಟ್ ವರದಿಯ ಪ್ರಕಾರ, ಗ್ರಾಹಕರು ತಮ್ಮ ಮಟನ್ ಬಿರಿಯಾನಿಯಲ್ಲಿ ಬೇಯಿಸಿದ ಮಾಂಸದ ಬಗ್ಗೆ ದೂರು ನೀಡಿದ ನಂತರ ಸಂಘರ್ಷ ಭುಗಿಲೆದ್ದಿತ್ತು ಎಂದು ಹೇಳಿದೆ. ಗ್ರಾಹಕರು ಬಿಲ್ ಪಾವತಿಸಲು ನಿರಾಕರಿಸಿದಾಗ ವಿಷಯ ಉಲ್ಬಣಗೊಂಡಿತು, ವೇಟರ್‌ಗಳ ಸಿಬ್ಬಂದಿ ಮೇಲೆ ದಾಳಿ ಮಾಡಲು ಪ್ರೇರೇಪಿಸಿತ್ತು.

ಡೆಕ್ಕನ್ ಕ್ರಾನಿಕಲ್ ವರದಿಯ ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು , ಪೊಲೀಸರು ಹತ್ತು ಹೋಟೆಲ್ ಉದ್ಯೋಗಿಗಳನ್ನು ಬಂಧಿಸಿದ್ದಾರೆ.

ಈ ಘಟನೆಯು ವಿಧಾಸಭೆ ಚುನಾವಣೆಯ ಮೊದಲು ಸಂಭವಿಸಿದೆ ಮತ್ತು ಆರ್‌ಪಿ ಸ್ಥಾಪನೆಯನ್ನು ಗುರಿಯಾಗಿಸಿಕೊಂಡ ಅರ್ಜುನ್ ಅಭಿಮಾನಿಗಳನ್ನು ಒಳಗೊಂಡಿಲ್ಲ ಎಂಬುದನ್ನು ಈ ಸಾಕ್ಷ್ಯವು ತೋರಿಸುತ್ತದೆ.

ಇದಲ್ಲದೆ, ನಮ್ಮ ತನಿಖೆಯು ಗ್ರ್ಯಾಂಡ್ ಹೋಟೆಲ್ ಜಲೀಲ್ ಎಫ್ ರೂಜ್ ಅವರ ಮಾಲೀಕತ್ವದಲ್ಲಿದೆ, ಹಾಸ್ಯನಟ ಆರ್‌ಪಿ ಅಲ್ಲ ಎಂದು ಬಹಿರಂಗಪಡಿಸುತ್ತದೆ. ಸ್ಥಳೀಯ ಸುದ್ದಿವಾಹಿನಿ ತೆಲುಗು ಸಮಯಂ ಪ್ರಕಾರ, ಆರ್ ಪಿ ನೆಲ್ಲೂರು ಪೆದ್ದರೆಡ್ಡಿ ಚೇಪಾಲಾ ಪುಲುಸು ಹೆಸರಿನ ರೆಸ್ಟೋರೆಂಟ್ ಫ್ರ್ಯಾಂಚೈಸ್ ವ್ಯಾಪಾರವನ್ನು ಹೊಂದಿದ್ದಾರೆ, ಇದು ತೆಲುಗು ರಾಜ್ಯಗಳಾದ್ಯಂತ ಶಾಖೆಗಳನ್ನು ಹೊಂದಿದೆ. ಈ ಹೋಟೆಲ್ ಗಳು ಮೀನು ಆಧಾರಿತ ಭಕ್ಷ್ಯಗಳಿಗೆ ಹೆಸರುವಾಸಿಯಾಗಿದೆ.

ಆರ್‌ಪಿ ರೆಸ್ಟೋರೆಂಟ್ ಮೇಲೆ ಅಲ್ಲು ಅರ್ಜುನ್ ಅಭಿಮಾನಿಗಳು ದಾಳಿ ಮಾಡಿದ ಯಾವುದೇ ನಿದರ್ಶನ ಸೂಕ್ತ ಫಲಿತಾಂಶಗಳನ್ನು ಗೂಗಲ್ ಹುಡುಕಾಟವು ನೀಡಲಿಲ್ಲ.

ತೀರ್ಪು

ಜನವರಿ ೨೦೨೪ ರ ದಿನಾಂಕದ ವೀಡಿಯೋ, ಹೋಟೆಲ್ ಸಿಬ್ಬಂದಿ ಮತ್ತು ಗ್ರಾಹಕರ ನಡುವಿನ ಜಗಳವನ್ನು ಚಿತ್ರಿಸುತ್ತದೆ, ಇದು ನಟ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಹಾಸ್ಯನಟ ಆರ್‌ಪಿ ಅವರ ಹೋಟೆಲ್ ಮೇಲೆ ದಾಳಿ ಮಾಡುವುದನ್ನು ಚಿತ್ರಿಸುತ್ತದೆ ಎಂಬ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.