ಇಲ್ಲ, ಪ್ರಧಾನಿ ಮೋದಿ ಸಂಸತ್ತಿನ ಭಾಷಣದಲ್ಲಿ ಮೀಸಲಾತಿಯನ್ನು ವಿರೋಧಿಸಲಿಲ್ಲ; ವೈರಲ್ ವೀಡಿಯೋ ಎಡಿಟ್ ಮಾಡಲಾಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್
ಮಾರ್ಚ್ 21 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಪ್ರಧಾನಿ ಮೋದಿ ಸಂಸತ್ತಿನ ಭಾಷಣದಲ್ಲಿ ಮೀಸಲಾತಿಯನ್ನು ವಿರೋಧಿಸಲಿಲ್ಲ; ವೈರಲ್ ವೀಡಿಯೋ ಎಡಿಟ್ ಮಾಡಲಾಗಿದೆ

ವೈರಲ್ ಪೋಷ್ಟ್ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪತ್ರವನ್ನು ಉಲ್ಲೇಖಿಸಿ ಪ್ರಧಾನಿ ಮೋದಿಯವರ ಹೇಳಿಕೆಯ ವೀಡಿಯೊವನ್ನು ಸಂದರ್ಭಾನುಸಾರವಾಗಿ ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ.

ಕ್ಲೈಮ್ ಐಡಿ 5917e393

ಹೇಳಿಕೆ ಏನು?
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರೀತಿಯ ಮೀಸಲಾತಿಗೆ ವಿರೋಧವನ್ನು ವ್ಯಕ್ತಪಡಿಸುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ೩೩ ಸೆಕೆಂಡ್‌ಗಳ ವೈರಲ್ ಕ್ಲಿಪ್‌ನಲ್ಲಿ, ಮೋದಿ ಅವರು "ನಾನು ಯಾವುದೇ ರೀತಿಯ ಮೀಸಲಾತಿಗೆ, ನಿರ್ದಿಷ್ಟವಾಗಿ ಉದ್ಯೋಗ ಮೀಸಲಾತಿಗೆ ಒಲವು ತೋರುವುದಿಲ್ಲ. ಕೌಶಲ್ಯರಹಿತ ಕಾರ್ಮಿಕರನ್ನು ಪೋಷಿಸುವ ಮತ್ತು ಗುಣಮಟ್ಟವನ್ನು ಕುಗ್ಗಿಸುವ ಯಾವುದೇ ಕ್ರಮಗಳನ್ನು ನಾನು ವಿರೋಧಿಸುತ್ತೇನೆ. ಅದಕ್ಕಾಗಿಯೇ ನಾನು ಜಾತಿಯ ವಿರೋಧಿ ಎಂದು ಹೇಳುತ್ತೇನೆ. ಎಸ್ ಸಿ, ಎಸ್ ಟಿ, ಮತ್ತು ಓಬಿಸಿ  ಸಮುದಾಯಗಳು ಮೀಸಲಾತಿಯ ಆಧಾರದ ಮೇಲೆ ಉದ್ಯೋಗಗಳನ್ನು ಪಡೆಯುತ್ತವೆ, ನಂತರ ಸರ್ಕಾರಿ ಕೆಲಸದ ಗುಣಮಟ್ಟವು ಕುಸಿಯಬಹುದು (ಹಿಂದಿಯಿಂದ ಅನುವಾದಿಸಲಾಗಿದೆ)," ಜನರು ಹಿನ್ನೆಲೆಯಲ್ಲಿ "ಅವಮಾನ, ನಾಚಿಕೆ" ಎಂದು ಕೂಗುವುದನ್ನು ಕೇಳಬಹುದು.

ಈ ವೀಡಿಯೋವನ್ನು ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಪ್ಯಾನಲಿಸ್ಟ್ ಸುರೇಂದ್ರ ರಜಪೂತ್ ಹಂಚಿಕೊಂಡಿದ್ದಾರೆ. ಪೋಷ್ಟ್ ನ  ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಈ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿಯೂ ಸಹ ಹಂಚಿಕೊಳ್ಳಲಾಗಿದೆ ಮತ್ತು ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಪೋಷ್ಟ್ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಮೋದಿಯವರ ಈ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ಅವರ ಮಾತುಗಳನ್ನು ಸಂದರ್ಭರಹಿತ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಅವರು ಸಂಸತ್ತಿನ ಭಾಷಣದಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಉಲ್ಲೇಖಿಸಿದರು ಮತ್ತು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಲಿಲ್ಲ.

ನಾವು ಕಂಡುಹಿಡಿದದ್ದು ಏನು?
ಈ ಹೇಳಿಕೆಯನ್ನು ಗೂಗಲ್ ನಲ್ಲಿ ಹುಡುಕಾಡಿದಾಗ ಮೀಸಲಾತಿ ಕುರಿತು ಸಂಸತ್ತಿನಲ್ಲಿ ಮೋದಿ ಮಾಡಿದ ಭಾಷಣದ ಕುರಿತು ಹಲವಾರು ಮಾಧ್ಯಮ ವರದಿಗಳು ಕಂಡುಬಂದವು.  ಜವಾಹರಲಾಲ್ ನೆಹರು ಅವರು ಅಂದಿನ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಮೋದಿ ಉಲ್ಲೇಖಿಸಿದ್ದಾರೆ ಮತ್ತು ಸಂಸತ್ತಿನಲ್ಲಿ ಅನುವಾದಿತ ಆವೃತ್ತಿಯನ್ನು ಓದಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

ಫೆಬ್ರವರಿ ೭, ೨೦೨೪ ರಂದು ಸಂಸದ್ ಟಿವಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಸಂಸತ್ ಅಧಿವೇಶನದ ಪೂರ್ಣ ವೀಡಿಯೋವನ್ನು ನಾವು ಪ್ರವೇಶಿಸಿದ್ದೇವೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮೋದಿ ಅವರು ರಾಜ್ಯಸಭೆಯಲ್ಲಿ ಭಾಷಣ ಮಾಡಿದರು ಎಂದು ನಾವು ಕಂಡುಕೊಂಡಿದ್ದೇವೆ. ವಿವಿಧ ವಿಷಯಗಳಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್‌ ಅನ್ನು ಗುರಿಯಾಗಿಸಿಕೊಂಡು ಮಾತನಾಡಿದರು. 

ವೀಡಿಯೋದಲ್ಲಿ ಸರಿಸುಮಾರು ೨೯ ನಿಮಿಷಗಳ  ಮಾರ್ಕ್ ನಲ್ಲಿ ಮೋದಿಯವರು ಮೀಸಲಾತಿ ವಿಷಯವನ್ನು ಪ್ರಸ್ತಾಪಿಸಿ, ಮುಖ್ಯಮಂತ್ರಿಗಳಿಗೆ ನೆಹರು ಬರೆದ ಪತ್ರವನ್ನು ಪ್ರಸ್ತಾಪಿಸಿದರು. ೩೧ ನಿಮಿಷಗಳ ಅವಧಿಯಲ್ಲಿ, ಮೋದಿ ಸ್ಪಷ್ಟಪಡಿಸುತ್ತಾರೆ, "ಪಂಡಿತ್ ನೆಹರೂ ಜಿ ಅವರು ರಾಷ್ಟ್ರದ ಮುಖ್ಯಮಂತ್ರಿಗಳಿಗೆ ಬರೆದ ಈ ಪತ್ರವು ದಾಖಲೆಯಲ್ಲಿದೆ. 'ನಾನು ಯಾವುದೇ ಮೀಸಲಾತಿಯ ಪರವಾಗಿಲ್ಲ, ವಿಶೇಷವಾಗಿ ಉದ್ಯೋಗದಲ್ಲಿ. ಕೌಶಲ್ಯರಹಿತ ಕಾರ್ಮಿಕರನ್ನು ಪ್ರೋತ್ಸಾಹಿಸುವ ಮತ್ತು ಗುಣಮಟ್ಟವನ್ನು ಕಡಿಮೆ ಮಾಡುವ ಯಾವುದೇ ಹೆಜ್ಜೆ ನಾನು ವಿರೋಧಿಸುವ ವಿಷಯ. ಅದಕ್ಕಾಗಿಯೇ ನಾನು ಜಾತಿಯನ್ನು ವಿರೋಧಿಸುತ್ತೇನೆ. ಎಸ್ ಸಿ, ಎಸ್ ಟಿ  ಮತ್ತು ಓಬಿಸಿ  ಸಮುದಾಯಗಳು ಮೀಸಲಾತಿಯ ಮೂಲಕ ಉದ್ಯೋಗಗಳನ್ನು ಪಡೆದರೆ, ಸರ್ಕಾರಿ ಸೇವೆಯ ಗುಣಮಟ್ಟ ಕುಸಿಯಬಹುದು. ಈ ಪತ್ರ ಪಂಡಿತ್ ನೆಹರೂ ಅವರಿಂದ ಮುಖ್ಯಮಂತ್ರಿಗಳಿಗೆ ಬಂದಿತ್ತು." ಎಂದು ಹೇಳಿದ್ದಾರೆ. 

ಈ ಸಂದರ್ಭವು ನೆಹರೂ ಅವರ ಹೇಳಿಕೆಯನ್ನು ಮೋದಿ ಉಲ್ಲೇಖಿಸಿದ್ದರು ಎಂದು ಬಹಿರಂಗಪಡಿಸುತ್ತದೆ ಮತ್ತು ವೈರಲ್ ವೀಡಿಯೋ ಈ ನಿರ್ಣಾಯಕ ಮಾಹಿತಿಯನ್ನು ತಪ್ಪಾಗಿ ಬಿಟ್ಟು ಹಂಚಿಕೊಳ್ಳಲಾಗಿದೆ. 

ನೆಹರೂ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರ
ನೆಹರೂ ಅವರು ಆಗಿನ ಪ್ರಾಂತೀಯ ಸರ್ಕಾರಗಳ ನಾಯಕರೊಂದಿಗೆ ನಿಯಮಿತವಾಗಿ ಪತ್ರವ್ಯವಹಾರ ನಡೆಸುತ್ತಿದ್ದರು, ಈ ಅಭ್ಯಾಸವನ್ನು ಅವರು ತಮ್ಮ ಮರಣದ ಸ್ವಲ್ಪ ಮೊದಲು ಉಳಿಸಿಕೊಂಡರು. ಅವರ ಸಂವಹನಗಳನ್ನು ‘ಲೆಟರ್ಸ್ ಫಾರ್ ಎ ನೇಷನ್: ಫ್ರಮ್ ಜವಾಹರಲಾಲ್ ನೆಹರೂ ಅವರ ಮುಖ್ಯಮಂತ್ರಿಗಳಿಗೆ ೧೯೪೭-೧೯೬೩ರಲ್ಲಿ ಸಂಕಲಿಸಲಾಗಿದೆ.’ ಜೂನ್ ೨೭, ೧೯೬೧ ರಂದು ಸಂಸತ್ತಿನಲ್ಲಿ ಮೋದಿ ಉಲ್ಲೇಖಿಸಿದ ಪತ್ರವನ್ನು ಈ ಸಂಗ್ರಹದಲ್ಲಿ ಸೇರಿಸಲಾಗಿದೆ.

೧೯೬೧ ರ ಪತ್ರದಲ್ಲಿ ನೆಹರು ಅವರು ಹೀಗೆ ಬಡೆದಿದ್ದರು, “ನಾನು ಮೇಲೆ ದಕ್ಷತೆ ಮತ್ತು ನಮ್ಮ ಸಾಂಪ್ರದಾಯಿಕ ಹಳಿಗಳಿಂದ ಹೊರಬರುವುದನ್ನು ಉಲ್ಲೇಖಿಸಿದ್ದೇನೆ. ಇದು ನಾವು ಈ ಜಾತಿ ಅಥವಾ ಆ ಗುಂಪಿಗೆ ನೀಡಲಾಗುತ್ತಿರುವ ಮೀಸಲಾತಿ ಮತ್ತು ನಿರ್ದಿಷ್ಟ ಸವಲತ್ತುಗಳ ಹಳೆಯ ಅಭ್ಯಾಸದಿಂದ ಹೊರಬರುವುದು ಅಗತ್ಯವಾಗಿದೆ. ನಾವು ಇತ್ತೀಚೆಗೆ ಇಲ್ಲಿ ಮುಖ್ಯಮಂತ್ರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ರಾಷ್ಟ್ರೀಯ ಏಕೀಕರಣವನ್ನು ಪರಿಗಣಿಸಿ, ಆರ್ಥಿಕ ಪರಿಗಣನೆಯಲ್ಲಿ ಸಹಾಯವನ್ನು ನೀಡಬೇಕೇ ಹೊರತು ಜಾತಿಯ ಮೇಲೆ ಅಲ್ಲ ಎಂದು ಹೇಳಿತು. ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳಿಗೆ ಸಹಾಯ ಮಾಡುವ ಬಗ್ಗೆ ನಾವು ಕೆಲವು ನಿಯಮಗಳು ಮತ್ತು ಸಂಪ್ರದಾಯಗಳೊಂದಿಗೆ ಕಟ್ಟಿಕೊಂಡಿದ್ದೇವೆ ಎಂಬುದು ನಿಜ. ಅವರು ಸಹಾಯಕ್ಕೆ ಅರ್ಹರು, ಆದರೆ, ಹಾಗಿದ್ದರೂ, ನಾನು ಯಾವುದೇ ರೀತಿಯ ಮೀಸಲಾತಿಯನ್ನು ಇಷ್ಟಪಡುವುದಿಲ್ಲ, ವಿಶೇಷವಾಗಿ ಸೇವೆಗಳಲ್ಲಿ. ಅಸಮರ್ಥತೆ ಮತ್ತು ಎರಡನೇ ದರ್ಜೆಯ ಮಾನದಂಡಗಳಿಗೆ ಕಾರಣವಾಗುವ ಯಾವುದಾದರೂ ವಿರುದ್ಧ ನಾನು ಬಲವಾಗಿ ಪ್ರತಿಕ್ರಿಯಿಸುತ್ತೇನೆ. ನನ್ನ ದೇಶವು ಎಲ್ಲದರಲ್ಲೂ ಪ್ರಥಮ ದರ್ಜೆಯ ದೇಶವಾಗಬೇಕೆಂದು ನಾನು ಬಯಸುತ್ತೇನೆ. ನಾವು ಎರಡನೇ ದರವನ್ನು ಪ್ರೋತ್ಸಾಹಿಸುವ ಕ್ಷಣ, ನಾವು ಕಳೆದುಹೋಗುತ್ತೇವೆ."

ನೆಹರೂ ಅವರ ಈ ಪತ್ರದ ಆಯ್ದ ಭಾಗಗಳನ್ನು ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಓದಿದ್ದರು. ನೆಹರು ತಮ್ಮ ಪತ್ರದಲ್ಲಿ ಯಾವುದೇ ಹಿಂದುಳಿದ ಗುಂಪಿಗೆ ಸಹಾಯ ಮಾಡುವ ಏಕೈಕ ಮಾರ್ಗವೆಂದರೆ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶಗಳನ್ನು ಒದಗಿಸುವುದು. ಈ ಪತ್ರವನ್ನು ಓದಲು ಇಲ್ಲಿ ಲಭ್ಯವಿದೆ.

ತೀರ್ಪು
ಪ್ರಸ್ತುತಪಡಿಸಿದ ಪುರಾವೆಗಳು ಮೋದಿ ಮೀಸಲಾತಿಯ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ; ಬದಲಿಗೆ, ಅವರು ೧೯೬೧ ರಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಬರೆದ ಪತ್ರವನ್ನು ಓದುತ್ತಿದ್ದರು. ಪರಿಣಾಮವಾಗಿ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.