ಗುಜರಾತ್‌ನಲ್ಲಿ ನಡೆದ ಪ್ರತಿಭಟನೆಯ ಹಳೆಯ ಕ್ಲಿಪ್ ಅನ್ನು ಹರಿಯಾಣದಲ್ಲಿನ ಹಿಂಸಾಚಾರಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ಆಗಸ್ಟ್ 11 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಗುಜರಾತ್‌ನಲ್ಲಿ ನಡೆದ ಪ್ರತಿಭಟನೆಯ ಹಳೆಯ ಕ್ಲಿಪ್ ಅನ್ನು ಹರಿಯಾಣದಲ್ಲಿನ ಹಿಂಸಾಚಾರಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋವನ್ನು ೨೦೧೯ ರಲ್ಲಿ ಸೂರತ್‌ನಲ್ಲಿ ಗುಂಪು ಹತ್ಯೆಯ ಪ್ರತಿಭಟನೆಯ ವೇಳೆ ಸೆರೆಹಿಡಿಯಲಾಗಿತ್ತು.

ಕ್ಲೈಮ್ ಐಡಿ f66394ba

ಸಂದರ್ಭ 

ಉತ್ತರ ಭಾರತದ ಹರಿಯಾಣದ ನುಹ್ ಜಿಲ್ಲೆಯಲ್ಲಿ ಬಲಪಂಥೀಯ ಗುಂಪುಗಳ ಮೆರವಣಿಗೆಯನ್ನು ತಡೆಯಲು ಜನಸಮೂಹವೊಂದು ಯತ್ನಿಸಿದ ನಂತರ ಕೋಮು ಘರ್ಷಣೆಗಳು ನಡೆದವು. ಸುದ್ದಿ ವರದಿಗಳ ಪ್ರಕಾರ, ಹಿಂಸಾಚಾರದಲ್ಲಿ ಆರು ಜನರು ಮೃತಪಟ್ಟಿದ್ದು, ಹಲವಾರು ಜನ ಗಾಯಗೊಂಡರು. ಈ ಗಲಭೆಗಳು ರಾಜ್ಯದ ಇತರ ಭಾಗಗಳನ್ನೂ ಸಹ ತಲುಪಿತು.

ಕೋಮು ಉದ್ವಿಗ್ನತೆ ಹರಿಯಾಣದಲ್ಲಿ ಇನ್ನೂ ಉರಿಯುತ್ತಿದ್ದು, ಈ ನಡುವೆ ಗುಂಪೊಂದು ನೀಲಿ ಬಸ್‌ನ ಗಾಜುಗಳನ್ನು ಇಟ್ಟಿಗೆ ಮತ್ತು ಕಲ್ಲುಗಳಿಂದ ಒಡೆದು ಹಾಕುತ್ತಿರುವ ವೀಡಿಯೋ ವೈರಲ್ ಆಗಿದೆ. ಅದು ಹರಿಯಾಣದಿಂದ ಬಂದಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ೧೧೪ ಸೆಕೆಂಡುಗಳ ಅವಧಿಯ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ, ಟ್ವಿಟರ್‌ನಲ್ಲಿ ಬಳಕೆದಾರರು (ಈಗ ಎಕ್ಸ್ (X) ಎಂದು ಕರೆಯುತ್ತಾರೆ) ಹೀಗೆ ಬರೆದಿದ್ದಾರೆ: "ತೆರಿಗೆದಾರರು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಖರೀದಿಸಿದ ಆಸ್ತಿಯನ್ನು ಶಾಂತಿಯುತ ಸಮುದಾಯವು ಧ್ವಂಸಗೊಳಿಸುತ್ತಿದೆ." ಪೋಷ್ಟ್ ವೈರಲ್ ಹ್ಯಾಶ್‌ಟ್ಯಾಗ್‌ಗಳಾದ "#Gurugram", "#NuhVoilence," "#Haryana," "#Haryanaviolence" and "#Gurgaon" ಅನ್ನು ಸಹ ಬಳಸಲಾಗಿದೆ. ಕೋಮುವಾದದ  ನಿರೂಪಣೆಯನ್ನು ಹೊಂದಿರುವ ಪೋಷ್ಟ್ ೪೩,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ೧೦೦ ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಗಳಿಸಿದೆ.

ಸ್ಕ್ರೀನ್‌ಗ್ರಾಬ್ (ಮೂಲ: X/@vermamanisha55)

ಆದರೆ,  ಈ ವೀಡಿಯೋ ಹರಿಯಾಣದಲ್ಲಿ ಸೆರೆಹಿಡಿಯಲಾಗಿಲ್ಲ. 

ವಾಸ್ತವವಾಗಿ 

ವೀಡಿಯೋವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ೦:೫೪ ಟೈಮ್‌ಸ್ಟ್ಯಾಂಪ್‌ ನಲ್ಲಿ ಬಸ್‌ನ ನಂಬರ್ ಪ್ಲೇಟ್‌ನ ಸುತ್ತಲೂ ಮಸುಕಾದ 'ಜಿ' ಅನ್ನು ಗಮನಿಸಬಹುದು. ಎಡ ಹಿಂಬದಿಯ ಬಸ್‌ನಲ್ಲಿ 'ಸಿಟಿಲಿಂಕ್' ಎಂದು ಬರೆದಿರುವುದನ್ನು ಸಹ ನೋಡಬಹುದು. ಸಿಟಿಲಿಂಕ್' ಎಂಬ ಪದವು ಸಿಟಿಲಿಂಕ್ ಲಿಮಿಟೆಡ್ ಅನ್ನು ಉಲ್ಲೇಖಿಸುತ್ತದೆ ಎಂದು ನಾವು ಕಂಡುಕೊಂಡೆವು ಇದು ಗುಜರಾತ್‌ನ ಸೂರತ್‌ನಲ್ಲಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಯೋಜನೆಯ ಭಾಗವಾಗಿದೆ-ಇಲ್ಲಿ ಸಂಖ್ಯೆ ಫಲಕಗಳು 'ಜಿಜೆ' ಯಿಂದ ಪ್ರಾರಂಭವಾಗುತ್ತವೆ. 'ಸ್ಮಾರ್ಟ್ ಸಿಟೀಸ್' ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದಾಖಲೆಯ ಪ್ರಕಾರ - ವಸತಿ ಸಚಿವಾಲಯದ ಅಡಿಯಲ್ಲಿ ಸರ್ಕಾರಿ ಮಿಷನ್ ಮತ್ತು ನಗರ ವ್ಯವಹಾರಗಳು, ಸಿಟಿಲಿಂಕ್ ಲಿಮಿಟೆಡ್, ವಿಶೇಷ ಉದ್ದೇಶದ ವಾಹನ (SPV), ಸೂರತ್ ಮುನ್ಸಿಪಲ್ ಕಾರ್ಪೊರೇಶನ್‌ನ ಅಂಗಸಂಸ್ಥೆಯಾಗಿದೆ ಮತ್ತು ೨೦೧೩ ರಲ್ಲಿ ಕಂಪನಿಯಾಗಿ ಸಂಯೋಜಿಸಲ್ಪಟ್ಟಿದೆ ಎಂದು ಹೇಳುತ್ತದೆ. 

ಸ್ಕ್ರೀನ್‌ಗ್ರಾಬ್ (ಮೂಲ:X/@vermamanisha55)

ವೈರಲ್ ವೀಡಿಯೋದಲ್ಲಿ ಕಂಡುಬರುವ ಬಸ್‌ನ ಅದೇ ರೀತಿಯ ದೃಶ್ಯಗಳನ್ನು ಒಳಗೊಂಡಿರುವ ಸ್ಥಳೀಯ ಸುದ್ದಿವಾಹಿನಿಗಳ ಅನೇಕ  ವೀಡಿಯೋ ವರದಿಗಳನ್ನು ನಾವು  ನೋಡಬಹುದು. ಯಾವುದೇ ಸುದ್ದಿ ವರದಿಯಲ್ಲಿ ನಿಖರವಾದ ಕ್ಲಿಪ್ ಅನ್ನು ನಾವು ಗುರುತಿಸಲು ಸಾಧ್ಯವಾಗದಿದ್ದರೂ,  ವೈರಲ್ ಕ್ಲಿಪ್‌ನಲ್ಲಿರುವ ನೀಲಿ ಬಣ್ಣದ ಬಸ್ ಅನ್ನು ಟಿವಿ೯ ಗುಜರಾತಿ ವರದಿಯಲ್ಲಿ ೪:೦೩ ನಿಮಿಷಗಳ  ಟೈಮ್‌ಸ್ಟ್ಯಾಂಪ್‌ನ ಗುರುತಿಸಬಹುದು. ಜುಲೈ ೫, ೨೦೧೯ ರಂದು ಯೂಟ್ಯೂಬ್‌ನಲ್ಲಿ ವೀಡಿಯೋ ವರದಿಯನ್ನು ಅಪ್‌ಲೋಡ್ ಮಾಡಲಾಗಿದೆ, "ಗುಂಪು ಹತ್ಯೆ ಘಟನೆಗಳ ವಿರುದ್ಧದ ರ‍್ಯಾಲಿ ಸೂರತ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿತು, ಪೊಲೀಸ್ ಪಡೆ ನಿಯೋಜಿಸಲಾಗಿದೆ" ಎಂದು ಹೇಳಿರುತ್ತದೆ.

ಸ್ಕ್ರೀನ್‌ಗ್ರಾಬ್ (ಮೂಲ: ಯೂಟ್ಯೂಬ್‌/ಟಿವಿ೯ ಗುಜರಾತಿ)

ಲಾಜಿಕಲಿ ಫ್ಯಾಕ್ಟ್ಸ್ ವೈರಲ್ ವೀಡಿಯೋವನ್ನು ಚಿತ್ರೀಕರಿಸಿದ ಸ್ಥಳವನ್ನು ಜಿಯೋಲೊಕೇಟ್ ಮಾಡಲು ಸಾಧ್ಯವಾಯಿತು. ವೀಡಿಯೋದಲ್ಲಿನ ದೃಶ್ಯ ಸೂಚನೆಗಳನ್ನು ಮತ್ತು ಗೂಗಲ್ ಸ್ಟ್ರೀಟ್ ವ್ಯೂ  ಬಳಸಿದಾಗ-ಹಿನ್ನಲೆಯಲ್ಲಿ ಕಾಣುವ ಕಟ್ಟಡ ಮತ್ತು ಛಾವಣಿಯ ಮೇಲೆ ದುಂಡಗಿನ ಕೆಂಪು ಛತ್ರಿಯಂತಹ ರಚನೆಯಿಂದ,  ನಾವು ಕ್ಲಿಪ್ ಅನ್ನು ಸೂರತ್‌ನ ನಾನ್‌ಪುರ ಪ್ರದೇಶದ ಸ್ವಾಮಿ ವಿವೇಕಾನಂದ ವೃತ್ತದ ಸುತ್ತಲೂ ಚಿತ್ರೀಕರಿಸಲಾಗಿದೆ ಎಂದು ದೃಢಪಡಿಸಬಹುದು. ಇದರಿಂದ ವೈರಲ್ ವೀಡಿಯೋ ಸೂರತ್‌ನಲ್ಲಿ ಸೆರೆಹಿಡಿಯಲಾಗಿದೆ ಮತ್ತು ಹರಿಯಾಣದಲ್ಲಿ ಅಲ್ಲ ಎಂಬುದನ್ನು ಇದು ಖಚಿತಪಡಿಸುತ್ತದೆ.

ಸ್ಕ್ರೀನ್‌ಗ್ರಾಬ್ (ಮೂಲ: X/@vermamanisha55, ಗೂಗಲ್ ಸ್ಟ್ರೀಟ್ ವ್ಯೂ)

ಸ್ಕ್ರೀನ್‌ಗ್ರಾಬ್ (ಮೂಲ: X/@vermamanisha55, ಗೂಗಲ್ ಸ್ಟ್ರೀಟ್ ವ್ಯೂ)

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಜುಲೈ ೫, ೨೦೧೯ ರಂದು ಸೂರತ್‌ನಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆಗಳ ವಿರುದ್ಧ ಪ್ರತಿಭಟನಾ ರ‍್ಯಾಲಿ ಆಯೋಜಿಸಲಾಗಿತ್ತು. ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಗಳು ನನ್‌ಪುರ ಪ್ರದೇಶದಿಂದ ವರದಿಯಾಗಿದೆ. ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು ಮತ್ತು ಟಿಯರ್ ಗ್ಯಾಸ್ ಅನ್ನು ಪ್ರಯೋಗಿಸಲಾಗಿತ್ತು. ರ‍್ಯಾಲಿಯ ಸಂಘಟಕರನ್ನೂ ಸಹ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ವರದಿ ತಿಳಿಸಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯೂ ಈ ವಿವರಗಳನ್ನು ದೃಢಪಡಿಸಿದೆ.

ಹರಿಯಾಣದ ಪರಿಸ್ಥಿತಿಗೆ ಸಂಬಂಧಿಸಿದಂತೆ, ಇಲ್ಲಿಯವರೆಗೆ, ಹಿಂಸಾಚಾರದ ಮೇಲೆ ಒಟ್ಟು ೧೧೬ ಜನರನ್ನು ಬಂಧಿಸಲಾಗಿದೆ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ (CrPC) ಪ್ರಕಾರ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ರಾಜ್ಯದ ಹಲವಾರು ಭಾಗಗಳಲ್ಲಿ ಹೊರಡಿಸಲಾಗಿದೆ.

ತೀರ್ಪು

೨೦೧೯ ರಲ್ಲಿ ಸೂರತ್‌ನಲ್ಲಿ ನಡೆದ ಗುಂಪು ಹತ್ಯೆಗಳ ವಿರುದ್ಧದ ಪ್ರದರ್ಶನದಲ್ಲಿ ಭುಗಿಲೆದ್ದ ಘರ್ಷಣೆಯ ಹಳೆಯ ವೀಡಿಯೋವನ್ನು ಹರಿಯಾಣದಲ್ಲಿ ಇತ್ತೀಚಿನ ಹಿಂಸಾಚಾರಕ್ಕೆ ತಪ್ಪಾಗಿ ಜೋಡಿಸಲಾಗುತ್ತಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತಿದ್ದೇವೆ. 

 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.