ಭಾರತ ಮತ್ತು ಪಾಕಿಸ್ತಾನ ನಡುವೆ ಇತ್ತೀಚೆಗೆ ನಡೆದ ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕರು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದರು ಎಂದು ತೋರಿಸಲು ಹಳೆಯ ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಪ್ರವೀಣ್ ಕುಮಾರ್ ಹೆಚ್
ಅಕ್ಟೋಬರ್ 23 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಭಾರತ ಮತ್ತು ಪಾಕಿಸ್ತಾನ ನಡುವೆ ಇತ್ತೀಚೆಗೆ ನಡೆದ ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕರು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದರು ಎಂದು ತೋರಿಸಲು ಹಳೆಯ ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಿಂದ ೨೦೨೨ ರ ವೀಡಿಯೋವನ್ನು ಎಡಿಟ್ ಮಾಡಿದ ಆಡಿಯೊದೊಂದಿಗೆ ಮರುಹಂಚಿಕೊಳ್ಳಲಾಗಿದೆ, ಇದು ಇತ್ತೀಚಿನ ಪಾಕಿಸ್ತಾನ ಮತ್ತು ಭಾರತ ICC ODI ಪುರುಷರ ವಿಶ್ವಕಪ್ ೨೦೨೩ ರ ಪಂದ್ಯವು ಅಕ್ಟೋಬರ್ ೧೪, ೨೦೨೩ ರಂದು ನಡೆದಿದ್ದು, ಇದರಲ್ಲಿ ಇಡೀ ಪ್ರೇಕ್ಷಕರು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದರು.

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಅಕ್ಟೋಬರ್ ೧೪ ರ ಪಂದ್ಯದ ವೇಳೆ "ಜೈ ಶ್ರೀ ರಾಮ್" ಎಂದು ಪ್ರೇಕ್ಷಕರು ಕೂಗಿದ್ದರೂ, ಹಂಚಿಕೊಳ್ಳಲಾದ ಈ ವೈರಲ್ ವೀಡಿಯೋ ೨೦೨೨ ರದ್ದು.

ಕ್ಲೈಮ್ ಐಡಿ 6110a52c

ಸಂದರ್ಭ 

ಅಕ್ಟೋಬರ್ ೧೪ ರಂದು ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಪುರುಷರ ವಿಶ್ವಕಪ್ ೨೦೨೩ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ವಿಜಯವನ್ನು ಗಳಿಸಿತು.  ಪಂದ್ಯದ ನಂತರ ಕ್ರೀಡಾಂಗಣದಲ್ಲಿ ಚಿತ್ರೀಕರಿಸಲಾದ ವೀಡಿಯೋ ಎಂದು ಹೇಳುತ್ತಾ ಸಾಮಾಜಿಕ ಮಾಧ್ಯಮ ಬಳಕೆದಾರರು ಅನೇಕ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ನಿರೂಪಣೆ ಏನು?

ಅಂತಹ ಒಂದು ಪೋಷ್ಟ್ ನಲ್ಲಿ ಜನರಿಂದ ತುಂಬಿರುವ ಸ್ಟೇಡಿಯಂನಲ್ಲಿ “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುತ್ತಿರುವಂತೆ ತೋರಿಸುವ ೧೦ ಸೆಕೆಂಡ್ ಅವಧಿಯ ವೀಡಿಯೋ ವೈರಲ್ ಆಗಿದೆ. ಇತರ ಸಾಮಾನ್ಯ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಹೊರತುಪಡಿಸಿ, ಇದನ್ನು ಅಕ್ಟೋಬರ್ ೧೪ ರಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಎಕ್ಸ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಪೋಷ್ಟ್ ಮಾಡಿದ್ದಾರೆ, ಮತ್ತು ಅದರ ಶೀರ್ಷಿಕೆ, "ವಾಟ್ ಎ ವೈಬ್! ಭವ್ಯವಾದ #NarendraModiStadium #INDvsPAK #ICCCricketWorldCup23 #TeamIndia #JaiShreeRam #PrabhuShreeRam ನಲ್ಲಿ ಇಡೀ ಜನಸಮೂಹ ಜೈ ಶ್ರೀ ರಾಮ್ ಎಂದು ಹಾಡುತ್ತಿತ್ತು," ಎಂದು ಬರೆಯಲಾಗಿದೆ. 

ಹಲವಾರು ಸಾಮಾಜಿಕ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದು. ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ದೇವೇಂದ್ರ ಫಡ್ನವಿಸ್ ಮತ್ತು ಇತರರು ಹಂಚಿಕೊಂಡ ಪೋಷ್ಟ್ ನ  ಸ್ಕ್ರೀನ್‌ಶಾಟ್. (ಮೂಲ: ಎಕ್ಸ್‌/ಸ್ಕ್ರೀನ್‌ಶಾಟ್‌ಗಳು)

ಅದೇ ವೀಡಿಯೋವನ್ನು ಫೇಸ್‌ಬುಕ್‌ನಲ್ಲೂ ಹಂಚಿಕೊಂಡಿದ್ದಾರೆ. ಆರ್ಕೈವ್ ಮಾಡಿದ ಪೋಷ್ಟ್ ನ ಲಿಂಕ್ ಅನ್ನು ಇಲ್ಲಿ ಕಾಣಬಹುದು.

ಫೇಸ್‌ಬುಕ್‌ ನಲ್ಲಿ ಕಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ (ಮೂಲ: ಫೇಸ್‌ಬುಕ್‌/ ಸ್ಕ್ರೀನ್‌ಶಾಟ್‌ಗಳು)

ಆದರೆ ವೀಡಿಯೋ  ಹಳೆಯದಾಗಿದೆ ಮತ್ತು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ.

ವಾಸ್ತವಾಂಶಗಳು

ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮೇ ೨೮ ೨೦೨೨ ರಂದು ಆರ್ ಕೆ  ಸ್ಪೋರ್ಟ್ಜ್ ಫೌಂಡೇಶನ್ (ರ್ಕ್ ಸ್ಪೋರ್ಟ್ಜ್ ಫೌಂಡೇಶನ್)  ಖಾತೆಯಿಂದ ಯೂಟ್ಯೂಬ್ ನಲ್ಲಿ ಪೋಷ್ಟ್ ಮಾಡಿದ ವೈರಲ್ ವೀಡಿಯೋದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡೆವು. ವೀಡಿಯೋ ಶೀರ್ಷಿಕೆಯು, "ಗೂಸ್‌ಬಂಪ್ಸ್ ಗ್ಯಾರಂಟಿ🇮🇳 | ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ೧ ಲಕ್ಷ ಜನರಿಂದ ವಂದೇ ಮಾತರಂ. ವೀಡಿಯೋದಲ್ಲಿ ಪ್ರೇಕ್ಷಕರು ಎ ಆರ್ ರೆಹಮಾನ್ ಅವರ ವಂದೇ ಮಾತರಂ ಗೀತೆಗೆ ಕ್ರೀಡಾಂಗಣದಲ್ಲಿ ಹಾಡುವುದನ್ನು ಕೇಳಬಹುದು.

೧೦-ಸೆಕೆಂಡ್ ವೈರಲ್ ಕ್ಲಿಪ್ ಅನ್ನು ಯೂಟ್ಯೂಬ್ ವೀಡಿಯೋದ ೧:೨೦ ಮತ್ತು ೧:೩೦ ರ ಟೈಮ್‌ಸ್ಟ್ಯಾಂಪ್ ನಡುವೆ ಕಾಣಬಹುದು. ಮೈದಾನದಲ್ಲಿನ ಜಾಹೀರಾತುಗಳು/ಲೋಗೋಗಳು, ಪ್ರೇಕ್ಷಕರಲ್ಲಿರುವ ಜನರು ಮತ್ತು ಅವರ ಸ್ಥಾನಗಳಲ್ಲಿ ಹೋಲಿಕೆಗಳನ್ನು ನಾವು ನೋಡಬಹುದು. 

೨೦೨೨ ರಲ್ಲಿ ಆರ್ ಕೆ  ಸ್ಪೋರ್ಟ್ಜ್ ಫೌಂಡೇಶನ್ ಯೂಟ್ಯೂಬ್ ನಿಂದ ಗೆ ಅಪ್‌ಲೋಡ್ ಮಾಡಿದ ವೈರಲ್ ವೀಡಿಯೋ ಮತ್ತು ಅದರ ಹೋಲಿಕೆ. (ಮೂಲ: ಎಕ್ಸ್‌/ ಯೂಟ್ಯೂಬ್/ ಸ್ಕ್ರೀನ್‌ಶಾಟ್)

೨೦೨೨ ರಲ್ಲಿ ಆರ್ ಕೆ  ಸ್ಪೋರ್ಟ್ಜ್ ಫೌಂಡೇಶನ್ ಯೂಟ್ಯೂಬ್ ನಿಂದ ಗೆ ಅಪ್‌ಲೋಡ್ ಮಾಡಿದ ವೈರಲ್ ವೀಡಿಯೋ ಮತ್ತು ಅದರ ಹೋಲಿಕೆ. (ಮೂಲ: ಎಕ್ಸ್‌/ ಯೂಟ್ಯೂಬ್/ ಸ್ಕ್ರೀನ್‌ಶಾಟ್)

೨೦೨೨ ರಲ್ಲಿ ಆರ್ ಕೆ  ಸ್ಪೋರ್ಟ್ಜ್ ಫೌಂಡೇಶನ್ ಯೂಟ್ಯೂಬ್ ನಿಂದ ಗೆ ಅಪ್‌ಲೋಡ್ ಮಾಡಿದ ವೈರಲ್ ವೀಡಿಯೋ ಮತ್ತು ಅದರ ಹೋಲಿಕೆ. (ಮೂಲ: ಎಕ್ಸ್‌/ ಯೂಟ್ಯೂಬ್/ ಸ್ಕ್ರೀನ್‌ಶಾಟ್)

ಅದೇ ದಿನಾಂಕದಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್ ಆರ್) ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವೆಂದು ಸೂಚಿಸುವ ಶೀರ್ಷಿಕೆಗಳು ಮತ್ತು ಹ್ಯಾಶ್‌ಟ್ಯಾಗ್‌ಗಳೊಂದಿಗೆ ಅನೇಕ ಜನರು ಎಕ್ಸ್‌ ನಲ್ಲಿ  ಇದೇ ರೀತಿಯ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಮತ್ತು ಈ ಪಂದ್ಯವು ಮೇ ೨೭, ೨೦೨೨ ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಿತು ಎಂದು ದೃಢಪಡಿಸುತ್ತದೆ.

೨೦೨೨ ರಲ್ಲಿ ಏಕ್ಸ್ ಗೆ ಅಪ್‌ಲೋಡ್ ಮಾಡಿದ ವೀಡಿಯೋ ಮತ್ತು ವೈರಲ್ ವೀಡಿಯೋದ ಹೋಲಿಕೆ. 

ವಿವಿಧ ಕೋನಗಳಿಂದ ತೆಗೆದ ಈ ಎಲ್ಲಾ ವೀಡಿಯೋಗಳನ್ನು ಒಂದೇ ಪಂದ್ಯದಲ್ಲಿ ಸೆರೆಹಿಡಿಯಲಾಗಿದೆ ಎಂದು ಸ್ಥಾಪಿಸಲು, ನಾವು ಮೈದಾನದಲ್ಲಿನ ಜಾಹೀರಾತು ಮತ್ತು ವೈರಲ್ ವೀಡಿಯೋದಲ್ಲಿ ತೋರಿಸಿರುವ ಕ್ರೀಡಾಂಗಣದಲ್ಲಿನ ಪ್ರದರ್ಶನ, ವಿವಿಧ ಸಾಮಾಜಿಕ ಮಾಧ್ಯಮದ ವೀಡಿಯೋಗಳನ್ನು ಮತ್ತು  ಮೇ ೨೭, ೨೦೨೨ ರ  ಅಧಿಕೃತ ಐಪಿಎಲ್ ಹೈಲೈಟ್ಸ್ ದೃಶ್ಯಗಳೊಂದಿಗೆ ಹೋಲಿಸಿದೆವು ಮತ್ತು ಹಲವಾರು ಸಮಾನತೆಗಳನ್ನು ಕಂಡಿಕೊಂಡೆವು. 

ವೈರಲ್  ವೀಡಿಯೋ , ಅಧಿಕೃತ ಐಪಿಎಲ್ ಹೈಲೈಟ್ಸ್ ಮತ್ತು ೨೦೨೨ ರಲ್ಲಿ ಯೂಟ್ಯೂಬ್  ಗೆ ಅಪ್‌ಲೋಡ್ ಮಾಡಿದ ಇನ್ನೊಂದು ವೀಡಿಯೋದ ಹೋಲಿಕೆ. (ಮೂಲ: ಏಕ್ಸ್ /ಐಪಿಎಲ್/ಯೂಟ್ಯೂಬ್/ಸ್ಕ್ರೀನ್‌ಶಾಟ್)

 

೨೦೨೩ರ ಭಾರತ Vs ಪಾಕಿಸ್ತಾನ ಪಂದ್ಯದ ಅಧಿಕೃತ ಐಸಿಸಿ ಹೈಲೈಟ್ಸ್ ಮತ್ತು ಇತ್ತೀಚಿನ ಯೂಟ್ಯೂಬ್ ವೀಡಿಯೋದ ಹೋಲಿಕೆ. (ಮೂಲ: ಐಸಿಸಿ/ಯೂಟ್ಯೂಬ್/ಸ್ಕ್ರೀನ್‌ಶಾಟ್) 

ವೀಡಿಯೋದ ಆಡಿಯೋ ಬಗ್ಗೆ

ವೈರಲ್ ವೀಡಿಯೋದ ದೀರ್ಘ ಆವೃತ್ತಿಯಲ್ಲಿ ಮತ್ತು ೨೦೨೨ ರಲ್ಲಿ ಪೋಷ್ಟ್ ಆದ ಪದ್ಯದ ವೀಡಿಯೋಗಳಲ್ಲಿ ನಾವು ಯಾವುದೇ "ಜೈ ಶ್ರೀ ರಾಮ್"  ಘೋಷಣೆಗಳನ್ನು ಕೇಳಲು ಸಾಧ್ಯವಾಗಲಿಲ್ಲ. ಬದಲಿಗೆ, ಪ್ರೇಕ್ಷಕರು ವಂದೇ ಮಾತರಂ ಗೀತೆಯೊಂದಿಗೆ ಹಾಡುವುದನ್ನು ಮಾತ್ರ ನಾವು ಕೇಳಬಹುದು.

ಈ ಹೋಲಿಕೆಗಳ ಆಧಾರದ ಮೇಲೆ, ವೈರಲ್ ವೀಡಿಯೋದಲ್ಲಿನ ಆಡಿಯೋವನ್ನು ನಂತರ ಡಿಜಿಟಲ್ ಆಗಿ ಸೇರಿಸಲಾಗಿದೆ ಎಂದು ನಾವು ದೃಢಪಡಿಸಿದ್ದೇವೆ. ವೈರಲ್ ವೀಡಿಯೋದಲ್ಲಿ  ಬಳಸಲಾದ ಪಠಣದ ಆಡಿಯೋದ ಮೂಲವನ್ನು ಪತ್ತೆಹಚ್ಚಲು ಲಾಜಿಕಲಿ  ಫ್ಯಾಕ್ಟ್ಸ್ ಗೆ ಸಾಧ್ಯವಾಗಲಿಲ್ಲ.

ಅಕ್ಟೋಬರ್ ೧೪ ರ ವಿಶ್ವಕಪ್ ಪಂದ್ಯದ ವೇಳೆ 'ಜೈ ಶ್ರೀ ರಾಮ್' ಘೋಷಣೆ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಅಕ್ಟೋಬರ್ ೧೪ ರಿಂದ ಪೋಸ್ಟ್ ಮಾಡಲಾದ ವಿಭಿನ್ನ ವೀಡಿಯೊಗಳು ಕೆಲವು ಸುದ್ದಿ ವರದಿಗಳ ಜೊತೆಗೆ ಕ್ರೀಡಾಂಗಣದಲ್ಲಿ ಆಡಿದ ICC ODI 2023 ವಿಶ್ವಕಪ್ ಭಾರತ vs ಪಾಕಿಸ್ತಾನ ಪಂದ್ಯದಲ್ಲಿ "ಭಾರತ್ ಕಾ ಬಚ್ಚಾ ಜೈ ಶ್ರೀ ರಾಮ್ ಬೋಲೆಗಾ" ಹಾಡಿಗೆ ಪ್ರೇಕ್ಷಕರು ಹಾಡಿದ್ದಾರೆ ಎಂಬ ಅಂಶವನ್ನು ಸೂಚಿಸುತ್ತವೆ.  ಆದರೆ, ವೈರಲ್ ವೀಡಿಯೋದಲ್ಲಿ ಕಂಡುಬರುವ ರಾತ್ರಿಯ ರೆಕಾರ್ಡಿಂಗ್‌ಗೆ ವಿರುದ್ಧವಾಗಿ ಅಕ್ಟೋಬರ್ ೧೪ ರ ವೀಡಿಯೋಗಳನ್ನು ಕ್ರೀಡಾಂಗಣದಲ್ಲಿ ಹಗಲಿನ ಸಮಯದಲ್ಲಿ ಚಿತ್ರೀಕರಿಸಲಾಗಿದೆ. ಇದಲ್ಲದೆ, ಪ್ರಶ್ನೆಯಲ್ಲಿರುವ ವೈರಲ್ ಕ್ಲಿಪ್ ಇತ್ತೀಚಿನದ್ದಲ್ಲ, ಕನಿಷ್ಠ ೨೦೨೨ ರದ್ದು ಮತ್ತು  ಅಕ್ಟೋಬರ್ ೧೪ ರ ವಿಶ್ವಕಪ್ ಪಂದ್ಯಕ್ಕೆ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ತೀರ್ಪು

ಕನಿಷ್ಠ ಮೇ ೨೦೨೨ ರಿಂದ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ವೀಡಿಯೊವನ್ನು ಅಕ್ಟೋಬರ್ ೧೪ ರಂದು ನಡೆದ ICC ODI 2023 ವಿಶ್ವಕಪ್ ಭಾರತ ಮತ್ತು ಪಾಕಿಸ್ತಾನದ ಪಂದ್ಯ ಮತ್ತು ಇದು ಜನಸಮೂಹ 'ಜೈ ಶ್ರೀ ರಾಮ್' ಎಂದು ಜಪಿಸುವುದನ್ನು ತೋರಿಸುತ್ತದೆ ಎಂದು ತಪ್ಪಾಗಿ ಹೇಳಲು 'ಡಿಜಿಟಲಿ ಸೇರಿಸಲಾದ' ಆಡಿಯೊದೊಂದಿಗೆ ಕ್ರಾಪ್ ಮಾಡಲಾಗಿದೆ ಮತ್ತು ಮರುಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ. 

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.