ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈ ತತ್ತರಿಸುತ್ತಿರುವುದನ್ನು ತೋರಿಸಲು ಹಳೆಯ ಸಂಬಂಧವಿಲ್ಲದ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ಡಿಸೆಂಬರ್ 6 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈ ತತ್ತರಿಸುತ್ತಿರುವುದನ್ನು ತೋರಿಸಲು ಹಳೆಯ ಸಂಬಂಧವಿಲ್ಲದ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ

ಮೈಚಾಂಗ್ ಚಂಡಮಾರುತದಿಂದ ಉಂಟಾದ ಹಾನಿಯನ್ನು ತೋರಿಸಲು ಹಳೆಯ ದೃಶ್ಯಗಳನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸ್ಕ್ರೀನ್‌ಶಾಟ್. (ಮೂಲ: ಎಕ್ಸ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ದೃಶ್ಯಗಳು ಇತ್ತೀಚೆಗೆ ಚೆನ್ನೈನಲ್ಲಿ ಮೈಚಾಂಗ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಗೆ ಸಂಬಂಧಿಸಿಲ್ಲ.

ಕ್ಲೈಮ್ ಐಡಿ d02291d9

ಬಂಗಾಳಕೊಲ್ಲಿಯಲ್ಲಿ ಮೂಡಿದ ತೀವ್ರ ಚಂಡಮಾರುತ- ಮೈಚಾಂಗ್ ದಕ್ಷಿಣ ಭಾರತದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ೯,೫೦೦ ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ ಭಾರತದ ಪೂರ್ವ ಕರಾವಳಿಯಲ್ಲಿ ಭಾರೀ ಮಳೆಯನ್ನು ಪ್ರಚೋದಿಸುವ ಮೈಚಾಂಗ್, ತಮಿಳುನಾಡಿನ ಚೆನ್ನೈನಲ್ಲಿ ತೀವ್ರವಾದ ಮಳೆ ಮತ್ತು ಪ್ರವಾಹದಂತಹ ಪರಿಸ್ಥಿತಿಗೆ ಕಾರಣವಾಯಿತು. ಜೊತೆಗೆ ಇತರ ಕರಾವಳಿ ಪ್ರದೇಶಗಳ ಮೇಲೆ ಪರಿಣಾಮ  ಬೀರಿದೆ.

ಇಲ್ಲಿನ ಹೇಳಿಕೆ ಏನು?

ಚಂಡಮಾರುತದಿಂದ ಉಂಟಾದ ವಿನಾಶದ ಹಿನ್ನೆಲೆಯಲ್ಲಿ ಹಲವಾರು ವೀಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಚೆನ್ನೈ ವಿಮಾನ ನಿಲ್ದಾಣದ ಪ್ರಸ್ತುತ ಪರಿಸ್ಥಿತಿಯನ್ನು ತೋರಿಸಲು ಅಂತಹ ಒಂದು ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಹಲವಾರು ವಿಮಾನಗಳು ಭಾಗಶಃ ನೀರಿನಲ್ಲಿ ಮುಳುಗಿರುವ ಪ್ರವಾಹದ ವಿಮಾನ ನಿಲ್ದಾಣವನ್ನು ಚಿತ್ರ ತೋರಿಸುತ್ತದೆ. ಒಬ್ಬ ಬಳಕೆದಾರರು ಚಿತ್ರವನ್ನು ಹಂಚಿಕೊಂಡು ಹೀಗೆ  ಬರೆದಿದ್ದಾರೆ, "ಇದು ಇಂದು ಚೆನ್ನೈ ವಿಮಾನ ನಿಲ್ದಾಣವಾಗಿದೆ ಎಂದು ಅರ್ಥಮಾಡಿಕೊಳ್ಳಿ. ಸಮುದ್ರವು ಅದನ್ನು ತೆಗೆದುಕೊಂಡಂತೆ ತೋರುತ್ತಿದೆ. ಮತ್ತು ವಿಮಾನಯಾನ ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ಸಂಬಳದ ಸಿಬ್ಬಂದಿ ಸಾಮಾನ್ಯವಾಗಿ ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತಿದ್ದಾರೆ. 👏👍(ಕನ್ನಡಕ್ಕೆ ಅನುವಾದಿಸಲಾಗಿದೆ)" ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ವೀಕ್ಷಿಸಬಹುದು.

ಎಕ್ಸ್‌ ನಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಮೈಚಾಂಗ್‌ನಿಂದ ಉಂಟಾದ ಭಾರೀ ಮಳೆಯ ನಂತರ ಚೆನ್ನೈನಲ್ಲಿ ಮುಳುಗಿದ ಬೀದಿಯನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದೆ. ವೈರಲ್ ಕ್ಲಿಪ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಮುಳುಗಿದ ದ್ವಿಚಕ್ರ ವಾಹನವನ್ನು ಹೆಚ್ಚು ನೀರಿನಿಂದ ತುಂಬಿರುವ ರಸ್ತೆಯ ಮಧ್ಯೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ನೀರಿನ ಮಟ್ಟವು ಅವನ ಸೊಂಟದವರೆಗೆ ತಲುಪಿದೆ. ಎಕ್ಸ್‌ (ಹಿಂದೆ ಟ್ವಿಟರ್) ನಲ್ಲಿನ ಪೋಷ್ಟ್ ನ ಶೀರ್ಷಿಕೆಯು ಮೂಲತಃ ತಮಿಳಿನಲ್ಲಿ, "ಚೆನ್ನೈನಲ್ಲಿನ ಪರಿಸ್ಥಿತಿ...(ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ಹೇಳುತ್ತದೆ, ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಬರೆಯುವ ಸಮಯದಲ್ಲಿ ೧೫೩,೦೦೦ ವೀಕ್ಷಣೆಗಳು ಮತ್ತು ೧,೮೦೦ ಲೈಕ್‌ಗಳನ್ನು ಗಳಿಸಿದೆ.

ಎಕ್ಸ್‌ ನಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಮೈಚಾಂಗ್‌ನಿಂದ ಉಂಟಾದ ಮಳೆಯ ನಂತರ ಮತ್ತೊಂದು ಕ್ಲಿಪ್ ಅನ್ನು ಚೆನ್ನೈಗೆ ಲಿಂಕ್ ಮಾಡಲಾಗುತ್ತಿದೆ. ಭಾಗಶಃ ಮುಳುಗಿರುವ ಸೇತುವೆಯನ್ನು ಬಳಸಿಕೊಂಡು ಮೋಟರ್‌ ಸವಾರಕನು ನದಿಯನ್ನು ದಾಟಲು ಪ್ರಯತ್ನಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಒಬ್ಬ ಬಳಕೆದಾರರು ಎಕ್ಸ್‌ ನಲ್ಲಿ ವೀಡಿಯೋವನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ, "ಅವನನ್ನು ನೀರಿನಲ್ಲಿ ಹೋಗುವುದನ್ನು ಯಾರು ತಡೆಯುತ್ತಾರೆ... ಹೌದು ನೀವೂ ನೋಡಬಹುದು 👀...👇 #ChennaiRains #ChennaiRains2023 #chennairainupdate #cyclonemichaung 🌀#Cyclones #CycloneAlert #RainAlert #Chennai.” ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಎಕ್ಸ್‌ ನಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವಾಸ್ತವಾಂಶಗಳು

ಮೇಲೆ ತಿಳಿಸಿದ ಚಿತ್ರಗಳು  ಮತ್ತು ವೈರಲ್ ವೀಡಿಯೋಗಳ ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿದೆವು. ಯಾವುದೇ ವೈರಲ್ ದೃಶ್ಯಗಳು ಪ್ರಸ್ತುತ ಚೆನ್ನೈನಲ್ಲಿ ಮೈಚಾಂಗ್‌ನಿಂದ ಉಂಟಾದ ಪ್ರವಾಹದಂತಹ ಪರಿಸ್ಥಿತಿಗೆ ಸಂಬಂಧಿಸಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ.

ಪ್ರವಾಹಕ್ಕೆ ಸಿಲುಕಿದ ವಿಮಾನ ನಿಲ್ದಾಣದ ಚಿತ್ರ

ವೈರಲ್ ಚಿತ್ರವು ೨೦೧೫ ರದ್ದು. ಚಿತ್ರವನ್ನು ವಿಕಿಪೀಡಿಯಾದಲ್ಲಿ ಡಿಸೆಂಬರ್ ೨, ೨೦೧೫ ರಂದು ಪ್ರಕಟಿಸಲಾಗಿದೆ. ಚಿತ್ರದ ವಿವರಣೆಯು, "ಡಿಸೆಂಬರ್ ೨೦೧೫ ರ ತಮಿಳುನಾಡಿನಲ್ಲಿ ಭಾರೀ ಮಳೆಯ ನಂತರ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಸೆರೆಹಿಡಿದ ಮುಳುಗಿದ ಚೆನ್ನೈ ವಿಮಾನ ನಿಲ್ದಾಣದ ವೈಮಾನಿಕ ನೋಟ."

ಮೂಲ ಚಿತ್ರವನ್ನು ೨೦೧೫ ರಲ್ಲಿ ಸೆರೆಹಿಡಿಯಲಾಗಿದೆ. (ಮೂಲ: ವಿಕಿಪೀಡಿಯಾ)

ಚಿತ್ರವು ಡಿಸೆಂಬರ್ ೩, ೨೦೧೫ ರ ಬಿಬಿಸಿ ಸುದ್ದಿ ವರದಿಯಲ್ಲಿ ಕಾಣಿಸಿಕೊಂಡಿದೆ. ವರದಿಯು ಫೋಟೋಕ್ಕಾಗಿ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆ ಎ ಎಫ್ ಪಿ ಗೆ ಮನ್ನಣೆ ನೀಡಿದೆ. ಬಿಬಿಸಿ ವರದಿಯ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಿತ್ತ  ಈ ಪ್ರವಾಹದಲ್ಲಿ ೨೬೯ ಜೀವಗಳ ದುರಂತ ನಷ್ಟಕ್ಕೆ ಕಾರಣವಾಗಿತ್ತು. ನವೆಂಬರ್ ಮೊದಲ ವಾರದಲ್ಲಿ ಮಳೆ ಪ್ರಾರಂಭವಾಗಿದ್ದು ಅದರ ಪ್ರಭಾವವು ಡಿಸೆಂಬರ್ ಮಧ್ಯದವರೆಗೆ ಮುಂದುವರೆಯಿತ್ತು.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಪ್ರವಾಹದ ಸಂದರ್ಭವನ್ನು ಹೇಗೆ ತಡೆಹಿಡಿಯಬಹುದು ಎಂದು ಅಧಿಕಾರಿಗಳು  ವಿಚಾರಿಸುತ್ತಿರುವ ಯೋಜನೆಗಳ ಬಗ್ಗೆ ವಿವರಿಸುವ ದಿ ಹಿಂದೂ ವರದಿಯಲ್ಲಿ ಅದೇ ಫೋಟೋವನ್ನು ಪ್ರಕಟಿಸಲಾಗಿದೆ. ಶೀರ್ಷಿಕೆಯ ಪ್ರಕಾರ, ಫೋಟೋವನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಿಂದ ತೆಗೆದುಕೊಳ್ಳಲಾಗಿದೆ ಮತ್ತು ಇದನ್ನು ಎ ಎಫ್ ಪಿ ಮತ್ತು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಗೆ ಸಲ್ಲುತ್ತದೆ.

ಜಲಾವೃತಗೊಂಡ ರಸ್ತೆಯ ವೈರಲ್ ವೀಡಿಯೋ

ನಾವು ೧೭ ಸೆಕೆಂಡ್‌ಗಳ ವೈರಲ್ ವೀಡಿಯೋದ ಕೀಫ್ರೇಮ್‌ನ ಮೇಲೆ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದು ನಮ್ಮನ್ನು ೧:೦೬-ನಿಮಿಷದ ವೀಡಿಯೋಗೆ ಕರೆದೊಯಿತು. ಅದರ ಶೀರ್ಷಿಕೆ, "ಚೆನ್ನೈ ತಮಿಳುನಾಡಿನ ಕ್ರೋಮ್‌ಪೆಟ್‌ನಲ್ಲಿ ಭಾರೀ ಮಳೆ | ಚೆನ್ನೈ ಮಳೆ | ಜುಲೈನಲ್ಲಿ ಅತ್ಯಧಿಕ ಮಳೆ." ಎಂದು ಹೇಳುತ್ತದೆ.  ಜುಲೈ ೨೯, ೨೦೨೦ ರಂದು ಯೂಟ್ಯೂಬ್ ಚಾನೆಲ್ 'ಟಿ ಎಫ್ ಪಿ ಸಿ' ಈ ವೀಡಿಯೋವನ್ನು ಪ್ರಕಟಿಸಿದೆ ಮತ್ತು ಪ್ರವಾಹಕ್ಕೆ ಒಳಗಾದ ಬೀದಿಗಳನ್ನು ತೋರಿಸುವ ಹಲವಾರು ಕ್ಲಿಪ್‌ಗಳ ಸಂಕಲನವನ್ನು ಒಳಗೊಂಡಿದೆ. ವೈರಲ್ ಕ್ಲಿಪ್ ನ ದೃಶ್ಯಗಳು ಯೂಟ್ಯೂಬ್  ವೀಡಿಯೋದ ಮೊದಲ ೧೭ ಸೆಕೆಂಡುಗಳಿಗೆ ಹೊಂದಿಕೆಯಾಗುತ್ತವೆ.

ವೈರಲ್ ಕ್ಲಿಪ್ ಮತ್ತು ಯೂಟ್ಯೂಬ್ ವೀಡಿಯೋ ನಡುವಿನ ಹೋಲಿಕೆ.
(ಮೂಲ: ಎಕ್ಸ್‌/ಯೂಟ್ಯೂಬ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

೨೦೨೦ ರಲ್ಲಿ ಚೆನ್ನೈನ ಕ್ರೋಮ್‌ಪೇಟ್‌ನಲ್ಲಿ ಭಾರೀ ಮಳೆಯ ಸಮಯದಲ್ಲಿ ಅದು ಒಳಗೊಂಡಿರುವ ಕ್ಲಿಪ್‌ಗಳನ್ನು ಸೆರೆಹಿಡಿಯಲಾಗಿದೆ ಎಂದು ಯೂಟ್ಯೂಬ್ ವೀಡಿಯೋದ ಶೀರ್ಷಿಕೆ ಸೂಚಿಸುತ್ತದೆ. ಹೆಚ್ಚಿನ ಸಂಶೋಧನೆಯ ನಂತರ, ಯೂಟ್ಯೂಬ್ ಸಂಕಲನದಲ್ಲಿ ಹಂಚಿಕೊಂಡ ಕ್ಲಿಪ್ ಅನ್ನು ಜುಲೈ ೨೮, ೨೦೨೦ ರಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ಪೋಷ್ಟ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಮತ್ತು ಅದರ ಶೀರ್ಷಿಕೆ ಹೀಗಿದೆ, "#ಚೆನ್ನೈ ರೈನ್ಸ್ | ಮಳೆಯು ಭಾರೀ ಪ್ರವಾಹಕ್ಕೆ ಕಾರಣವಾಯಿತು ಚಂಡಮಾರುತ-ನೀರಿನ ಚರಂಡಿಗಳನ್ನು ಮುಚ್ಚಿದ್ದರಿಂದ ಚೆನ್ನೈನ ಕ್ರೋಮ್‌ಪೇಟೆ (sic)."

ದೃಶ್ಯಗಳು ಮತ್ತು ಅವುಗಳನ್ನು ಹಂಚಿಕೊಂಡಾಗ ಟೈಮ್‌ಲೈನ್‌ನಲ್ಲಿನ ಹೋಲಿಕೆಯು ಪ್ರವಾಹಕ್ಕೆ ಒಳಗಾದ ಬೀದಿಯ ವೈರಲ್ ಕ್ಲಿಪ್ ಅನ್ನು ೨೦೨೦ ರಲ್ಲಿ ಚೆನ್ನೈನಲ್ಲಿ ಸೆರೆಹಿಡಿಯಲಾಗಿದೆ ಎಂದು ಸೂಚಿಸುತ್ತದೆ. ಜುಲೈ ೩೦, ೨೦೨೦ರ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ತೀವ್ರವಾದ ಮಳೆಯು ಚೆನ್ನೈನ ಕ್ರೋಮ್‌ಪೇಟ್ ಮತ್ತು ಪಲ್ಲವರಂನ ಕೆಲವು ಭಾಗಗಳಲ್ಲಿ ಭಾರೀ ಜಲಾವೃತಕ್ಕೆ ಕಾರಣವಾಯಿತು.

ನದಿಯನ್ನು ದಾಟುತ್ತಿರುವ ಮೋಟಾರ್ ಸೈಕಲ್ ಸವಾರ

ಇತ್ತೀಚೆಗೆ ಸುರಿದ ಮಳೆಗೆ ಚೆನ್ನೈ ಮಳೆಯ ಬಹಳ ಹಿಂದೆಯೇ ಮೋಟರ್‌ ಸೈಕಲ್ ಸವಾರ ನದಿಯನ್ನು ದಾಟಲು ಪ್ರಯತ್ನಿಸುತ್ತಿರುವ ವೈರಲ್ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಪೋಷ್ಟ್ ಮಾಡಲಾಗಿದೆ. ನಾವು ಆನ್‌ಲೈನ್‌ನಲ್ಲಿ ಕಂಡುಹಿಡಿದ ವೀಡಿಯೋದ ಆರಂಭಿಕ ಆವೃತ್ತಿಯನ್ನು ಎಕ್ಸ್‌ ಬಳಕೆದಾರ 'MotorOctane' ಅವರು ಏಪ್ರಿಲ್ ೬ ರಂದು ಪೋಷ್ಟ್ ಮಾಡಿದ್ದಾರೆ. ವೀಡಿಯೋ ತಕ್ಷಣವೇ ವೈರಲ್ ಆಗಿತ್ತು, ಟೈಮ್ಸ್ ನೌ ಮತ್ತು ಇಂಡಿಯಾ ಟಿವಿ ನ್ಯೂಸ್ ಸೇರಿದಂತೆ ಹಲವಾರು ಮುಖ್ಯವಾಹಿನಿಯ ಸುದ್ದಿ ಸಂಸ್ಥೆಗಳು ಅದರ ಬಗ್ಗೆ ಲೇಖನಗಳನ್ನು ಪ್ರಕಟಿಸಿದ್ದವು. 

ವೈರಲ್ ವೀಡಿಯೋದ ಮೂಲವನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಇತ್ತೀಚಿನ ಸೈಕ್ಲೋನಿಕ್ ಚಂಡಮಾರುತವು ಪ್ರದೇಶವನ್ನು ಅಪ್ಪಳಿಸುವ ಮೊದಲೇ ಆನ್‌ಲೈನ್‌ನಲ್ಲಿ ಲಭ್ಯವಿದ್ದ ಕಾರಣ ಮೈಚಾಂಗ್ ಸೈಕ್ಲೋನ್‌ಗೆ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಾವು ಎಕ್ಸ್‌ ಬಳಕೆದಾರರನ್ನು ಸಂಪರ್ಕಿಸಿದ್ದೇವೆ ಮತ್ತು  ಪ್ರತಿಕ್ರಿಯೆಯನ್ನು ಸ್ವೀಕರಿಸಿದಾಗ ಫ್ಯಾಕ್ಟ್ ಚೆಕ್ ಅನ್ನು ನವೀಕರಿಸಲಾಗುತ್ತದೆ.

ಜಲಾವೃತವಾಗಿರುವ ರಸ್ತೆಯಲ್ಲಿ ಮೊಸಳೆಯನ್ನು ತೋರಿಸುವ ಮತ್ತೊಂದು ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಚೆನ್ನೈನ ಜಲಾವೃತ ಬೀದಿಗಳಲ್ಲಿ ಈ ಜೀವಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ವೀಡಿಯೋ  ಹಿಂದೆ ಅನೇಕ ಬಾರಿ ಕಾಣಿಸಿಕೊಂಡಿದೆ, ಇದು ಪ್ರವಾಹದಂತಹ ಸಂದರ್ಭಗಳಿಗೆ ಹೊಂದಿಕೆಯಾಗಿದೆ. ಲಾಜಿಕಲಿ ಫ್ಯಾಕ್ಟ್ಸ್ ಈ ವೀಡಿಯೋವನ್ನು ಈ ಹಿಂದೆಯೇ ೨೦೨೨ ರ ಆಗಸ್ಟ್‌ನಲ್ಲಿ ೮ ಅಡಿ ಉದ್ದದ ಮೊಸಳೆಯು ವಸತಿ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ ಬೀದಿಗೆ ಪ್ರವೇಶಿಸಿದಾಗ ವೈರಲ್ ವೀಡಿಯೋವನ್ನು ಮಧ್ಯಪ್ರದೇಶದ ಶಿವಪುರಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ದೃಢಪಡಿಸಿದೆ.

೨೦೨೩ ರ ಚೆನ್ನೈ ಮಳೆ

ಚಂಡಮಾರುತದಿಂದ ಉಂಟಾದ ಭಾರೀ ಮಳೆಯು ಚೆನ್ನೈನಲ್ಲಿ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ, ಇದು ಜಲಾವೃತಗೊಂಡ ಬೀದಿಗಳಿಗೆ ಮತ್ತು ಗಮನಾರ್ಹ ಹಾನಿಗೆ ಕಾರಣವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ನಗರದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ಚೆನ್ನೈನಲ್ಲಿ ಪ್ರವಾಹದಂತಹ ಪರಿಸ್ಥಿತಿಯನ್ನು ತೋರಿಸುವ ಕೆಲವು ಚಿತ್ರಗಳು ಇಲ್ಲಿವೆ.

ತೀರ್ಪು
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೋಗಳು ಮತ್ತು ಫೋಟೋಗಳು ಮೈಚಾಂಗ್ ಚಂಡಮಾರುತಕ್ಕೆ ಸಂಬಂಧಿಸಿಲ್ಲ. ಚೆನ್ನೈನ ಇತ್ತೀಚಿನ ದೃಶ್ಯಗಳಂತೆ ಹಳೆಯ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.