೨೦೨೨ರ ವೀಡಿಯೋವೊಂದನ್ನು ಬಳಸಿ ಕರ್ನಾಟಕ ಚುನಾವಣೆಯಲ್ಲಿ ನಕಲಿ ಮತದಾನವನ್ನು ನಡೆಸಲಾಯಿತು ಎಂದು ತಪ್ಪಾಗಿ ಹೇಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 3 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೨ರ ವೀಡಿಯೋವೊಂದನ್ನು ಬಳಸಿ ಕರ್ನಾಟಕ ಚುನಾವಣೆಯಲ್ಲಿ ನಕಲಿ ಮತದಾನವನ್ನು ನಡೆಸಲಾಯಿತು ಎಂದು ತಪ್ಪಾಗಿ ಹೇಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಈ ವೈರಲ್ ವೀಡಿಯೋ ಫೆಬ್ರವರಿ ೨೦೨೨ ರಿಂದ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದ್ದು, ಇದು ಕೋಲ್ಕತ್ತಾದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಡೆದ ನಕಲಿ ಮತದಾನವನ್ನು ತೋರುತ್ತದೆ.

ಕ್ಲೈಮ್ ಐಡಿ 541be2c3

ಸಂಧರ್ಭ

೨೦೨೩ರ ಕರ್ನಾಟಕ ಚುನಾವಣೆಯಲ್ಲಿ ೨೨೪ ಸ್ಥಾನಗಳಲ್ಲಿ ೧೩೫ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿದ್ದ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಿತು. ಚುನಾವಣಾ ಫಲಿತಾಂಶದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಳಕೆದಾರರು ಚುನಾವಣೆಯಲ್ಲಿ ನಕಲಿ ಮತದಾನವನ್ನು ನಡೆಸಲಾಗಿತ್ತು ಎಂದು ಆರೋಪಿಸುತ್ತಿದ್ದಾರೆ. 

 ಇದೇ ನಿರೂಪಣೆಯೊಂದಿಗೆ ವೈರಲ್ ಆದ ವೀಡಿಯೋವೊಂದರಲ್ಲಿ ಚುನಾವಣಾ ಅಧಿಕಾರಿಯು ಕುಳಿತಿರುವುದನ್ನು ನಾವು ನೋಡಬಹುದು ಮತ್ತು ಟಿ ಶರ್ಟ್ ಧರಿಸಿದ ವ್ಯಕ್ತಿ ಓರ್ವ ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (ಇವಿಎಂ) ಬಳಿ ನಿಂತು ಮತದಾರರನ್ನು ನಿಲ್ಲಿಸಿ ಅವರ ಪರವಾಗಿ ಮತ ಚಲಾಯಿಸುತ್ತಿರುವುದನ್ನು ನಾವು ಕಾಣಬಹುದು. ಈ ವೀಡಿಯೋವನ್ನು ಹಂಚಿಕೊಂಡ ಪೋಷ್ಟ್ ಒಂದರ, ಹಿಂದಿಯಿಂದ ಅನುವಾದಿಸಲಾದ ಶೀರ್ಷಿಕೆ, "ಗುಟ್ಟಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಿದ ಮತ್ತು ಈ ವೀಡಿಯೋ ವೈರಲ್ ಮಾಡಿದ ಬಿಜೆಪಿ ಕಾರ್ಯಕರ್ತನಿಗೆ ಅಭಿನಂದನೆಗಳು. ದಯವಿಟ್ಟು ಈ ವೀಡಿಯೋವನ್ನು ಮೋದಿ ಜಿ, ಅಮಿತ್ ಶಾ ಜಿ ಮತ್ತು ರಕ್ಷಣಾ ಸಚಿವರಿಗೆ ಕಳುಹಿಸಿ. ಕರ್ನಾಟಕದ ಮತಗಟ್ಟೆಯಲ್ಲಿ ನಕಲಿ ಮತದಾನದ ಹಗರಣವನ್ನು ವೀಡಿಯೋ ಬಹಿರಂಗಪಡಿಸುತ್ತದೆ. ತನಿಖೆ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತದೆಯೇ ಎಂದು ಭಾರತ ಕೇಳುತ್ತದೆ." ಎಂದು ಹೇಳುತ್ತದೆ.

ಬಿಜೆಪಿ ಪಕ್ಷದ ಕಾರ್ಯಕರ್ತರು ವೀಡಿಯೋವನ್ನು ಸೆರೆಹಿಡಿದಿದ್ದಾರೆ ಮತ್ತು ವಿರೋಧ ಪಕ್ಷಗಳು ಮತಗಟ್ಟೆಯಲ್ಲಿ ದುಷ್ಕೃತ್ಯದಲ್ಲಿ ಭಾಗಿಯಾಗಿವೆ ಎಂದು ಪೋಷ್ಟ್ ಸೂಚಿಸುತ್ತದೆ. ವೈರಲ್ ಆದ ಪೋಷ್ಟ್ ೮೪,೦೦೦ ವೀಕ್ಷಣೆಗಳನ್ನು ಮತ್ತು ೩೨೮ ಲೈಕ್‌ಗಳನ್ನು ಗಳಿಸಿದೆ.

ವಾಸ್ತವವಾಗಿ

ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವೈರಲ್ ಪೋಷ್ಟ್ ನೀಡಿದ ಹೇಳಿಕೆಯು ತಪ್ಪು ಎಂದು ತಿಳಿದುಬಂದಿದೆ. ೨೦೨೨ರಲ್ಲಿ ಕೋಲ್ಕತ್ತಾದ ಡಮ್ ಡಮ್ ಮುನ್ಸಿಪಲ್ ಚುನಾವಣೆಯ ಸಂದರ್ಭದಲ್ಲಿ ವೀಡಿಯೋ ಕಾಣಿಸಿಕೊಂಡಿತ್ತು, ಇದು ವಾರ್ಡ್ ೩೩ರ ಲೇಕ್ ವ್ಯೂ ಸ್ಕೂಲ್ ನಲ್ಲಿ ಸೆರೆಹಿಡಿಯಲಾಗಿತ್ತು. ಫೆಬ್ರವರಿ ೨೭, ೨೦೨೨ ರಂದು ಪಶ್ಚಿಮ ಬಂಗಾಳದಾದ್ಯಂತ ೧೦೮ ಪುರಸಭೆಗಳಿಗೆ ಚುನಾವಣೆಗಳು ನಡೆದವು. ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ೧೦೨ ಪುರಸಭೆಗಳನ್ನು ಗೆಲ್ಲುವ ಮೂಲಕ ಚುನಾವಣೆಯನ್ನು ವಿಜಯಿಸಿತ್ತು. ಚುನಾವಣೆಯ ದಿನದಂದು, ಅಶಾಂತಿಯ ಅನೇಕ ಘಟನೆಗಳು ವರದಿಯಾಗಿದ್ದವು, ಅಲ್ಲದೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್, ಟಿಎಂಸಿ ಪಕ್ಷದ ವಿರುದ್ಧ ಮತ ತಿದ್ದುವಿಕೆಯ ಆರೋಪವನ್ನು ಮಾಡಿದರು.

ಬಿಜೆಪಿ ನಾಯಕ ಅಗ್ನಿಮಿತ್ರ ಪೌಲ್ ಅವರು ಈ ವೈರಲ್ ವೀಡಿಯೋವನ್ನು ಮೊದಲು ಹಂಚಿಕೊಡಿದ್ದರು. ಅದೇ ವೀಡಿಯೋವನ್ನು ಬಿಜೆಪಿ ಬಂಗಾಳದ ಟ್ವಿಟರ್ ಖಾತೆಯಿಂದಲೂ ಶೇರ್ ಮಾಡಲಾಗಿತ್ತು. 

 ಬೆಂಗಾಲಿ ಸುದ್ದಿ ವಾಹಿನಿ TV9 ಬಾಂಗ್ಲಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಫೆಬ್ರವರಿ ೨೭, ೨೦೨೨ ರಂದು ವೀಡಿಯೋವನ್ನು ಪ್ರಕಟಿಸಿತು ಮತ್ತು ಈ ಘಟನೆಯು ದಕ್ಷಿಣದ ಡಮ್ ಡಮ್ ಪ್ರಾಂತ್ಯದ ವಾರ್ಡ್ ನಂ. ೩೩ ರ ಬೂತ್ ಸಂಖ್ಯೆ ೧೦೮ ರಲ್ಲಿ ಸಂಭವಿಸಿದೆ ಎಂದು ಹೇಳಿತ್ತದೆ. "ಮತದಾರನು ಮತ ಚಲಾಯಿಸಲಿಲ್ಲ, ಏಜೆಂಟ್ ಮತ ಚಲಾಯಿಸಿದ್ದಾನೆ." ಎಂದು ಸೂಚಿಸಿದೆ. 

ಸುದ್ದಿ ಸಂಸ್ಥೆ ಎಡಿಟರ್ ಜಿ ಬಾಂಗ್ಲಾ ಕೂಡ ವೀಡಿಯೋವನ್ನು ಪ್ರಕಟಿಸಿದ್ದು, ದಕ್ಷಿಣದ ಡಮ್ ಡಮ್ ಪುರಸಭೆ ಚುನಾವಣೆಯಲ್ಲಿ ಚಲಾಯಿಸಲಾದ ನಕಲಿ ಮತಗಳನ್ನು ವೀಡಿಯೋ ತೋರುತ್ತದೆ ಎಂದು ವರದಿ ಮಾಡಿದೆ.

ಈ ವೀಡಿಯೋ ಕುರಿತು ಬಂಗಾಳದಲ್ಲಿ ಯಾವುದೇ ಸ್ಪಷ್ಟೀಕರಣವನ್ನು ನೀಡಲಾಗಿಲ್ಲವಾದರೂ, ವೀಡಿಯೋ ಕನಿಷ್ಠ ೨೦೨೨ರ ಹಿಂದಿನದ್ದು ಮತ್ತು ಕರ್ನಾಟಕ ಚುನಾವಣೆಗೆ ಸಂಭಂದಿಸಿಲ್ಲವೆಂದು ಸ್ಪಷ್ಟವಾಗುತ್ತದೆ. 

ಈ ಕ್ಲಿಪ್ ೨೦೨೨ ರ ಗುಜರಾತ್ ವಿಧಾನಸಭಾ ಚುನಾವಣೆಯ ಮುನ್ನವೂ ವೈರಲ್ ಆಗಿತ್ತು ಮತ್ತು ಸೂರತ್ ನಗರಿಯ ವರಚ್ಚ ಗ್ರಾಮದಲ್ಲಿ ನಕಲಿ ಮತಗಳನ್ನು ಚಲಾಯಿಸಲಾಯಿತು ಎಂದು ತಪ್ಪಾಗಿ ಹೇಳಲಾಗಿತ್ತು. ಲಾಜಿಕಲಿ ಫ್ಯಾಕ್ಟ್ಸ್ ೨೦೨೨ ರಲ್ಲೂ ಸಹ ಈ ವೀಡಿಯೋವನ್ನು ಪರಿಶೀಲಿಸಿತ್ತು.   

ತೀರ್ಪು

ಕನಿಷ್ಠ ಫೆಬ್ರವರಿ ೨೦೨೨ ರಿಂದ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ಇದು ಇತ್ತೀಚೆಗೆ ಮುಕ್ತಾಯಗೊಂಡ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ತಪ್ಪು ನಿರೂಪಣೆಯೊಂದಿಗೆ ಮತ್ತೆ ಶೇರ್ ಮಾಡಲಾಗಿದೆ. ಇದು ಸ್ಪಷ್ಟವಾಗಿ ಕರ್ನಾಟಕ ಚುನಾವಣೆಗೆ ಮುಂಚಿತವಾಗಿಯೇ ವೈರಲ್ ಆಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.