ಆಂಧ್ರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಟಿಡಿಪಿ ನಾಯಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲು ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರೋಹಿತ್ ಗುಟ್ಟಾ
ಡಿಸೆಂಬರ್ 20 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆಂಧ್ರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಟಿಡಿಪಿ ನಾಯಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲು ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

೨೦೨೧ರ ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ವ್ಯಕ್ತಿ ವಿಶಾಖಪಟ್ಟಣಂ ನಿವಾಸಿ ಡಿ.ಚಿನ್ನಾ ರಾವ್ ಹಾಗು ಅವರು 'ಚಿನ್ನಾರಾವ್ ವೆಲ್ಫೇರ್ ಟ್ರಸ್ಟ್' ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕ್ಲೈಮ್ ಐಡಿ 0a936b87

ಇಲ್ಲಿನ ಹೇಳಿಕೆ ಏನು?

ಎಕ್ಸ್ ನಲ್ಲಿ ಹಂಚಿಕೊಳ್ಳಲಾಗುತ್ತಿರುವ ೩೯-ಸೆಕೆಂಡ್‌ಗಳ ವೀಡಿಯೋದಲ್ಲಿ ಜನರ ಗುಂಪೊಂದು ಓರ್ವ ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಿರುವುದನ್ನು ತೋರಿಸುತ್ತದೆ. ಈ ತುಣುಕನ್ನು ತೆಲುಗು ದೇಶಂ ಪಕ್ಷದ (ಟಿಡಿಪಿ) ಮೈಲವರಂ ಕನ್ವೀನರ್ ಎಂದು ಗುರುತಿಸಲಾಗಿರುವ ಪೂರ್ಣಾ ಚೌಧರಿ ಅವರಿಗೆ ಸಂಬಂಧಿಸಲಾಗುತ್ತಿದ್ದು, ಅವರ ಮೇಲೆ ಅಪ್ರಾಪ್ತ ಬಾಲಕಿಯ ಅತ್ಯಾಚಾರಾದ ಆರೋಪವನ್ನು ಹೇರಲಾಗುತ್ತಿದೆ. ಪೋಷ್ಟ್ ನ  ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ  ವೀಕ್ಷಿಸಬಹುದು.

ದಕ್ಷಿಣ ಭಾರತದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಟಿಡಿಪಿ ಪ್ರಮುಖ ವಿರೋಧ ಪಕ್ಷವಾಗಿದೆ. ಮೈಲವರಂ ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಹೇಳಿಕೆಗಳ ವಿರುದ್ಧವಾಗಿ, ವೀಡಿಯೋದಲ್ಲಿರುವ ವ್ಯಕ್ತಿ ಚೌಧರಿಯೂ ಅಲ್ಲ  ಟಿಡಿಪಿ ನಾಯಕರೂ ಅಲ್ಲ.

ವಾಸ್ತವಾಂಶಗಳು

ವೀಡಿಯೋದಲ್ಲಿರುವ ಜನರು ಮಾಸ್ಕ ಧರಿಸಿರುವುದನ್ನು ಗಮನಿಸಿದಾಗ, ಈ ದೃಶ್ಯಾವಳಿಯು ಇತ್ತೀಚಿನದಲ್ಲ ಮತ್ತು ಕೋವಿಡ್-೧೯ ಮುನ್ನೆಚ್ಚರಿಕೆಗಳನ್ನು ಇರಿಸಿದಾಗ ಸೆರೆಹಿಡಿಯಲಾಗಿರಬಹುದು ಎಂದು ಊಹಿಸಿದೆವು. 

ನಾವು ವೀಡಿಯೋದ ಕೀಫ್ರೇಮ್‌ ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದೇ ವೀಡಿಯೋ  ಹಾಗು ಸಂಬಂಧಿತ ಚಿತ್ರಗಳನ್ನು ಒಳಗೊಂಡಿರುವ ಸುದ್ದಿ ವರದಿಗಳಿಗೆ ನಮ್ಮನ್ನು ಕರೆದೊಯಿತು. 

ಬಿಬಿಸಿ ತೆಲುಗು, ಡಿಸೆಂಬರ್ ೭, ೨೦೨೧ ರ ವರದಿಯಲ್ಲಿ ವೈರಲ್ ವೀಡಿಯೋದ ಸ್ಕ್ರೀನ್ ಗ್ರ್ಯಾಬ್‌ಗಳನ್ನು ಒಳಗೊಂಡಿದೆ. ಈ ವರದಿಯ ಪ್ರಕಾರ, ಕ್ಲಿಪ್‌ನಲ್ಲಿ ಕಂಡುಬರುವ ವ್ಯಕ್ತಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿ ಡಿ. ಚಿನ್ನಾ ರಾವ್, ಅವರು 'ಚಿನ್ನಾರಾವ್ ವೆಲ್ಫೇರ್ ಟ್ರಸ್ಟ್' ಅನ್ನು ನಿರ್ವಹಿಸುತ್ತಿದ್ದರು. ಈ ಟ್ರಸ್ಟ್ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುತ್ತದೆ. ರಾವ್ ಅವರು ಹುಡುಗಿಯೊಬ್ಬಳಿಂದ ದುರ್ವರ್ತನೆಯ ಆರೋಪಗಳನ್ನು ಎದುರಿಸಿದ್ದರು, ಆಕೆಯ ಪೋಷಕರಿಗೆ ಅದು ತಿಳಿದು ಬಂದ ಮೇಲೆ ಚಿನ್ನಾ ರಾವ್ ಅವರು, ಹಲ್ಲೆಗೆ ಒಳಗಾಗಿದ್ದರು ಮತ್ತು ವಿಶಾಖಪಟ್ಟಣಂನ ಮಲ್ಕಪುರಂ ಪೊಲೀಸರಿಗೆ ಅವರನ್ನು ಹಸ್ತಾಂತರಿಸಲಾಗಿತ್ತು. 

ಅದೇ ರೀತಿ, ಡಿಸೆಂಬರ್ ೭, ೨೦೨೧ ರಂದು ಆಂಧ್ರಜ್ಯೋತಿ ತೆಲುಗು ದಿನಪತ್ರಿಕೆಯ ವರದಿಯು ವೀಡಿಯೋದ ದೃಶ್ಯಗಳನ್ನು ಒಳಗೊಂಡಿದ್ದು, ವಿಶಾಖಪಟ್ಟಣಂನ ಮಲಕ್‌ಪುರಂನ ಅಂಬೇಡ್ಕರ್ ಕಾಲೋನಿಯಿಂದ ಬಂದ ರಾವ್ ಅವರು ಜನರ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದಕ್ಕಾಗಿ ಪೋಷಕರಿಂದ ಹಲ್ಲೆಗೊಳಗಾಗಿದ್ದರು ಎಂದು ಖಚಿತಪಡಿಸುತ್ತದೆ.

ದಿ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯಾದ ಹೆಚ್ಚಿನ ವರದಿಗಳು ಈ ವಿವರಗಳನ್ನು ದೃಢೀಕರಿಸುತ್ತವೆ.

ವೀಡಿಯೋದಲ್ಲಿರುವ  ವ್ಯಕ್ತಿ ಚೌಧರಿ ಎಂದು ವೈರಲ್ ಪೋಷ್ಟ್ ಆರೋಪಿಸಿದ್ದರು, ಆ ವ್ಯಕ್ತಿ ವಿಶಾಖಪಟ್ಟಣಂ ಜಿಲ್ಲೆಯ ರಾವ್ ಎಂಬುದು ಸ್ಪಷ್ಟವಾಗಿದೆ. ರಾವ್ ಅವರ ರಾಜಕೀಯ ಸಂಬಂಧಗಳನ್ನು ಯಾವುದೇ ಸುದ್ದಿ ವರದಿಗಳು ಸೂಚಿಸಿಲ್ಲ. 

ಅವರ ರಾಜಕೀಯ ಸಂಪರ್ಕಗಳ ಬಗ್ಗೆ ಸ್ಪಷ್ಟನೆಗಾಗಿ ಮಲ್ಕಪುರಂ ಪೊಲೀಸರನ್ನು ಸಂಪರ್ಕಿಸಿದಾಗ, ಸರ್ಕಲ್ ಇನ್ಸ್‌ಪೆಕ್ಟರ್ ಜಿ. ದೇಮುಡು ಬಾಬು ಅವರು ಟಿಡಿಪಿ ಅಥವಾ ವೈಎಸ್‌ಆರ್‌ಸಿಪಿ (ಆಂಧ್ರಪ್ರದೇಶದ ಆಡಳಿತ ಪಕ್ಷ) ದೊಂದಿಗೆ ಯಾವುದೇ ಸಂಬಂಧವನ್ನು ರಾವ್ ಅವರು ಹೊಂದಿಲ್ಲ ಎಂದು ತಿಳಿಸಿದರು. ಟ್ರಸ್ಟ್ ಅನ್ನು ನಿರ್ವಹಿಸುತ್ತಿದ್ದ ರಾವ್ ಅವರನ್ನು ಪಿಓಎಸಸಿಓ (POSCO) ಕಾಯ್ದೆಯಡಿಯಲ್ಲಿ  ಬಂಧಿಸಲಾಗಿದ್ದು, ಪ್ರಸ್ತುತ ಪ್ರಕರಣವು ನ್ಯಾಯಾಲಯದಲ್ಲಿದೆ ಎಂದು ಲಾಜಿಕಲಿ ಫ್ಯಾಕ್ಟ್ಸ್ ಗೆ ಹೇಳಿದರು .

ತೀರ್ಪು

ಆಂಧ್ರಪ್ರದೇಶದ ಜನರು ಟಿಡಿಪಿ ನಾಯಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲು ೨೦೨೧ ರ ಸಂಬಂಧವಿಲ್ಲದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.