ವೈಎಸ್‌ಆರ್‌ಸಿಪಿ ನಾಯಕ ತನ್ನ ಚಿಕ್ಕಮ್ಮನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಬಂಧವಿಲ್ಲದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರೋಹಿತ್ ಗುಟ್ಟಾ
ಫೆಬ್ರವರಿ 6 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ವೈಎಸ್‌ಆರ್‌ಸಿಪಿ ನಾಯಕ ತನ್ನ ಚಿಕ್ಕಮ್ಮನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು  ಸಂಬಂಧವಿಲ್ಲದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ಕೇಬಲ್ ಆಪರೇಟರ್ ಒಬ್ಬರು ವಯಸ್ಸಾದ ಮಹಿಳೆಯನ್ನು ಕೊಲ್ಲಲು ಪ್ರಯತ್ನಿಸಿದ್ದನ್ನು ವೀಡಿಯೋ ತೋರಿಸುತ್ತದೆ, ವೈಎಸ್‌ಆರ್‌ಸಿಪಿ ನಾಯಕರಲ್ಲ.

ಕ್ಲೈಮ್ ಐಡಿ fe19cd6a

(ಪ್ರಚೋದಕ ಎಚ್ಚರಿಕೆ: ಈ ಕಥೆಯು ಆಕ್ರಮಣದ ಉಲ್ಲೇಖಗಳನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)

ಹೇಳಿಕೆ ಏನು?

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುಂಟಕಲ್ ನಲ್ಲಿ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ವಕ್ತಾರ ಯಗಂಟಿ ಸತ್ತಿ ರೆಡ್ಡಿ, ಅವರು ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡ ನಂತರ ತಮ್ಮ ಮಕ್ಕಳಿಲ್ಲದ ಚಿಕ್ಕಮ್ಮನಿಂದ ಆಭರಣಗಳನ್ನು ಕದಿಯಲು ಅವರ ಹತ್ಯೆಯನ್ನು ಯತ್ನಿಸುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳುವ ೧ ನಿಮಿಷ ಮತ್ತು ೨೭ ಸೆಕೆಂಡ್‌ಗಳ ವೀಡಿಯೋ ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಹರಿದಾಡುತ್ತಿದೆ. ಈ ತುಣುಕಿನಲ್ಲಿ ಒಬ್ಬ ವ್ಯಕ್ತಿ ವಯಸ್ಸಾದ ಮಹಿಳೆಯನ್ನು ಕತ್ತು ಹಿಸುಕಲು ಪ್ರಯತ್ನಿಸುತ್ತಿರುವುದನ್ನು ಚಿತ್ರಿಸುತ್ತದೆ.  ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. 

 

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈಎಸ್‌ಆರ್‌ಸಿಪಿ ವಕ್ತಾರರಿಗೆ ಸಂಬಂಧವಿಲ್ಲದ ವೀಡಿಯೊವನ್ನು ತಪ್ಪಾಗಿ ಲಿಂಕ್ ಮಾಡಲಾಗಿದೆ.

ನಾವು ಕಂಡುಹಿಡಿದದ್ದು ಏನು?

ಯಗಂಟಿ ಸತ್ತಿ ರೆಡ್ಡಿ ಎಂಬ ವೈಎಸ್‌ಆರ್‌ಸಿಪಿ ನಾಯಕ ತನ್ನ ಚಿಕ್ಕಮ್ಮನ ಮೇಲೆ ಹಲ್ಲೆ ನಡೆಸಿರುವ ಕುರಿತು ನಾವು ಸುದ್ದಿ ವರದಿಗಳನ್ನು ಹುಡುಕಿದೆವು, ಆದರೆ ಅಂತಹ ಯಾವುದೇ  ವರದಿಗಳು ಕಂಡುಬಂದಿಲ್ಲ. ಆ ಹೆಸರಿನ ಗುಂಟಕಲ್ ನ ವೈಎಸ್‌ಆರ್‌ಸಿಪಿ ನಾಯಕರನ್ನು ನಾವು ಹುಡುಕಿದೆವು ಆದರೆ ವೈಎಸ್‌ಆರ್‌ಸಿಪಿಗೆ ಸಂಬಂಧಿಸಿರುವ ಅಂತಹ ಯಾವುದೇ ನಾಯಕರ ಹೆಸರು ಕಂಡುಬಂದಿಲ್ಲ.

ನಂತರ, ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ವಿಶ್ಲೇಷಣೆಯು ಘಟನೆಯನ್ನು ಉಲ್ಲೇಖಿಸಿ  ಬರೆದ ವಿವಿಧ ಸುದ್ದಿ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು. ಈಟಿವಿ ಆಂಧ್ರಪ್ರದೇಶ, ತೆಲುಗು ಸುದ್ದಿ ವಾಹಿನಿಯು ಜನವರಿ ೨೯, ೨೦೨೪ ರಂದು ತಮ್ಮ ವರದಿಯಲ್ಲಿ 

ವೈರಲ್  ವೀಡಿಯೋವನ್ನು ಒಳಗೊಂಡಿದೆ. ಈ ವರದಿ  ಪ್ರಕಾರ, ಜನವರಿ ೨೬, ೨೦೨೪  ರಂದು ಈ ಘಟನೆ ಸಂಭವಿಸಿದೆ, ಗೋವಿಂದ್ ಎಂಬ ಕೇಬಲ್ ಆಪರೇಟರ್,  ನಾರಾಯಣಮ್ಮ ಎಂಬ ಹಿರಿಯ ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. 

ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ. ಮಹಿಳೆ ಧರಿಸಿದ್ದ ಚಿನ್ನಾಭರಣವನ್ನು ಟವೆಲ್ ನಿಂದ ಕತ್ತು ಹಿಸುಕಿ ದುಷ್ಕರ್ಮಿ ಕದಿಯಲು ಯತ್ನಿಸಿದ್ದಾನೆ ಎಂದು ಸೂಚಿಸಲಾಗಿದೆ. ಒಮ್ಮೆ ಆಕೆ ಪ್ರಜ್ಞೆ ತಪ್ಪಿದ ನಂತರ ಆತ ಆಭರಣದೊಂದಿಗೆ ಪರಾರಿಯಾಗಿದ್ದ ನಂತರ ನಾರಾಯಣಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಚೇತರಿಸಿಕೊಂಡಿದ್ದಾರೆ ಎಂದು ವರದಿ ವಿವರಿಸುತ್ತದೆ. 

ವರದಿಯಲ್ಲಿ ಸಿಸಿಟಿವಿ ಫೂಟೇಜ್ ಎಂದು ಗುರುತಿಸಲಾದ ಈ ವೈರಲ್ ವೀಡಿಯೋ, ಘಟನೆಯ ದಿನಾಂಕ ಮತ್ತು ಸಮಯವನ್ನು ಸಹ ಪ್ರದರ್ಶಿಸುತ್ತದೆ. ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಈನಾಡು ಮತ್ತು ಆಂಧ್ರಜ್ಯೋತಿಯಂತಹ ಹಲವಾರು ಇತರ ಪತ್ರಿಕೆಗಳಲ್ಲಿನ ವರದಿಗಳು ಈ ವಿವರಗಳನ್ನು ದೃಢೀಕರಿಸುತ್ತವೆ.

ಲಾಜಿಕಲಿ ಫ್ಯಾಕ್ಟ್ಸ್ ಕೂಡ ಅನಕಪಲ್ಲಿ ಟೌನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದು, ಅಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಜಿ. ಶಂಕರಯ್ಯ ಅವರು ಅನಕಪಲ್ಲಿ ಈ ಘಟನೆ ನಡೆದ ಸ್ಥಳವನ್ನು ಖಚಿತಪಡಿಸಿದ್ದು, ಆರೋಪಿಗೆ ವೈಎಸ್‌ಆರ್‌ಸಿಪಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳು ವರದಿ ಮಾಡಿದ ವಿವರಗಳನ್ನು ಪರಿಶೀಲಿಸಿದ ಅವರು, ಪ್ರಸ್ತುತ ಪ್ರಕರಣವು ತನಿಖೆಯಲ್ಲಿದೆ ಮತ್ತು ಆರೋಪಿಯು ಅಧಿಕಾರಿಗಳಿಗೆ ಶರಣಾಗಿದ್ದಾನೆ ಎಂದು ಹೇಳಿದರು.

ತೀರ್ಪು

ದರೋಡೆ ಮತ್ತು ಕೊಲೆ ಯತ್ನವನ್ನು ಚಿತ್ರಿಸುವ ಸಂಬಂಧವಿಲ್ಲದ ವೀಡಿಯೋವನ್ನು ವೈಎಸ್‌ಆರ್‌ಸಿಪಿ ನಾಯಕರೊಬ್ಬರು ತಮ್ಮ ಚಿಕ್ಕಮ್ಮನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಪ್ಪಾಗಿ ನಿರೂಪಿಸಲಾಗಿದೆ. ಸಂಶೋಧನೆಗಳ ಆಧಾರದ ಮೇಲೆ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.