ಕರ್ನಾಟಕದ ಶಾಲೆಯಲ್ಲಿ ನಡೆದ ಬಕ್ರೀದ್ ಆಚರಣೆಯ ವೀಡಿಯೋವನ್ನು ತಪ್ಪು ಕೋಮು ಸ್ಪಿನ್ ಜೊತೆ ವೈರಲ್ ಮಾಡಲಾಗಿದೆ

ಮೂಲಕ: ರಜಿನಿ ಕೆ.ಜಿ
ಸೆಪ್ಟೆಂಬರ್ 19 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕರ್ನಾಟಕದ ಶಾಲೆಯಲ್ಲಿ ನಡೆದ ಬಕ್ರೀದ್ ಆಚರಣೆಯ ವೀಡಿಯೋವನ್ನು ತಪ್ಪು ಕೋಮು ಸ್ಪಿನ್ ಜೊತೆ ವೈರಲ್ ಮಾಡಲಾಗಿದೆ

ಕರ್ನಾಟಕದ ಶಾಲೆಯೊಂದರಲ್ಲಿ ಬಕ್ರೀದ್ ಆಚರಣೆಯನ್ನು ವೀಡಿಯೋ ತೋರಿಸುತ್ತದೆ. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಕರ್ನಾಟಕ ಸರ್ಕಾರವು ಶಾಲೆಗಳಲ್ಲಿ ಕುರಾನ್ ಪದ್ಯಗಳನ್ನು ಕಡ್ಡಾಯವಾಗಿ ಪಠಿಸಲು ಯಾವುದೇ ಆದೇಶವನ್ನು ಹೊರಡಿಸಿಲ್ಲ.

ಕ್ಲೈಮ್ ಐಡಿ 4aba247f

ನಿರೂಪಣೆ ಏನು?

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿದ್ಯಾರ್ಥಿಗಳು ಸ್ಕಿಟ್ ಅನ್ನು ಪ್ರದರ್ಶಿಸುವ  ಮತ್ತು ಖುರಾನ್‌ನ ಪದ್ಯಗಳನ್ನು ಪಠಿಸುವ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಿದ್ದಾರೆ, ಭಾರತದ ಕರ್ನಾಟಕದಲ್ಲಿ ಸರ್ಕಾರವು ಶಾಲೆಗಳಿಗೆ ಇಸ್ಲಾಂ ಧರ್ಮದ ಬೋಧನೆಗಳನ್ನು ನೀಡುವುದನ್ನು ಕಡ್ಡಾಯಗೊಳಿಸಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. 

ವೀಡಿಯೋವು ಓರ್ವ ವಿದ್ಯಾರ್ಥಿ ಬಕ್ರೀದ್ ಎಂದೂ ಕರೆಯಲ್ಪಡುವ ಈದ್ ಉಲ್-ಅಧಾ ಅರ್ಥವನ್ನು ಚರ್ಚಿಸುತ್ತಿರುವುದನ್ನು ಮತ್ತು ಇತರ ವಿದ್ಯಾರ್ಥಿಗಳು ಸ್ಕಿಟ್ ಅನ್ನು ಪ್ರದರ್ಶಿಸುತ್ತಿರುವುದನ್ನು ತೋರಿಸುತ್ತದೆ. ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತಿದ್ದಂತೆ ಇತರ ಮಕ್ಕಳು ಹಜಾರದಲ್ಲಿ ಕೈಗಳನ್ನು ಮಡಚಿ ಕುಳಿತುಕೊಳ್ಳುತ್ತಾರೆ. ನಂತರ ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ.

ಎಕ್ಸ್ ನಲ್ಲಿ ವೀಡಿಯೋವನ್ನು ಹಂಚಿಕೊಂಡ ಬಳಕೆದಾರರು, "ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಎಲ್ಲಾ ಶಾಲೆಗಳಲ್ಲಿ ಖುರಾನ್ ಬೋಧನೆಯನ್ನು ಕಡ್ಡಾಯಗೊಳಿಸಿದೆ * *ಉಚಿತ ಉಚಿತ* *ಉಚಿತ ಟಿಕೆಟ್ ಮತ್ತು ೨೦೦ ಯೂನಿಟ್ ಉಚಿತ ವಿದ್ಯುತ್ ಕಾರಣಕ್ಕಾಗಿ ಹಿಂದೂಗಳು ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ* (sic)." ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಮೂಲತಃ ಹಿಂದಿಯಲ್ಲಿ ಬರೆಯಲಾಗಿದೆ, ಪ್ರಕಟಿಸುವ ಸಮಯದಲ್ಲಿ ೧೩,೦೦೦ ವೀಕ್ಷಣೆಗಳನ್ನು ಗಳಿಸಿದೆ. ಇತರ ರೀತಿಯ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಈ ವಿಡಿಯೋವನ್ನು ಕೋಮುವಾದದ ಛಾಯೆಯೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು, ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರವು ಮುಸ್ಲಿಮರ ಪರ ಒಲವು ತೋರುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.

ವೈರಲ್ ಹೇಳಿಕೆಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಹೇಳಿಕೆ ತಪ್ಪು.

  • ಮೊದಲನೆಯದಾಗಿ, ಈ ವೀಡಿಯೋ ಕರ್ನಾಟಕದ ಹಾಸನ ಜಿಲ್ಲೆಯ ಜ್ಞಾನಸಾಗರ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನದ್ದು ಮತ್ತು ವಿದ್ಯಾರ್ಥಿಗಳು ಬಕ್ರೀದ್ ಆಚರಿಸುತ್ತಿರುವುದನ್ನು ತೋರಿಸುತ್ತದೆ.

  • ಎರಡನೆಯದಾಗಿ, ಶಾಲೆಯು ಎಲ್ಲಾ ಧರ್ಮಗಳ ಹಬ್ಬಗಳನ್ನು ಆಚರಿಸುತ್ತದೆ ಮತ್ತು ಅದೇ ರೀತಿ ತೋರಿಸುವ ಹಲವಾರು ಹಳೆಯ ಫೋಟೋಗಳನ್ನು ಅವರ ಫೇಸ್‌ಬುಕ್ ಪುಟದಲ್ಲಿ ನಾವು ಕಂಡುಕೊಂಡಿದ್ದೇವೆ.

  • ಅಂತಿಮವಾಗಿ, ಕರ್ನಾಟಕ ಸರ್ಕಾರದ ಯಾವುದೇ ಅಧಿಕೃತ ಆದೇಶವು ಕುರಾನ್ ಅನ್ನು ಶಾಲೆಗಳಲ್ಲಿ ಕಲಿಸಲು ಆದೇಶಿಸಿಲ್ಲ.

ನಾವು ಕಂಡುಕೊಂಡದ್ದು

೦:೨೫ ಟೈಮ್‌ಸ್ಟ್ಯಾಂಪ್‌ನಲ್ಲಿ, ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಬ್ಯಾನರ್‌ನಲ್ಲಿ ನಾವು "ಜ್ಞಾನಸಾಗರ" ಪಠ್ಯವನ್ನು ಗುರುತಿಸಿದ್ದೇವೆ. ಕರ್ನಾಟಕದ ಹಾಸನ ಜಿಲ್ಲೆಯ ಜ್ಞಾನಸಾಗರ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವೈರಲ್ ಸ್ಕಿಟ್ ಅನ್ನು ಪ್ರದರ್ಶಿಸಲಾಗಿದೆ ಎಂದು ಕಂಡುಹಿಡಿಯಲು ಈ ಸುಳಿವು ನಮಗೆ ಸಹಾಯ ಮಾಡಿತು.


ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಬ್ಯಾನರ್‌ನಲ್ಲಿ ಶಾಲೆಯ ಹೆಸರು ಗೋಚರಿಸುತ್ತದೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಜುಲೈ ೧ ರಂದು ಪ್ರಕಟವಾದ ಟಿವಿ ೯ ಕನ್ನಡ ಸುದ್ದಿ ವರದಿಯ ಪ್ರಕಾರ ವಿದ್ಯಾರ್ಥಿಗಳು ಕುರಾನ್ ಪಠಣ ಮಾಡುವ ವೀಡಿಯೋ ವೈರಲ್ ಆದ ನಂತರ, ಬಲಪಂಥೀಯ ಹಿಂದೂ ಸಂಘಟನೆಯ ಸದಸ್ಯರು ಜೂನ್ ೩೦ ರಂದು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನಂತರ, ಶಾಲಾ ಆಡಳಿತವು ಮಾಧ್ಯಮಗಳಿಗೆ ಸ್ಪಷ್ಟೀಕರಣವನ್ನು ನೀಡಿತು, ಮುಸ್ಲಿಂ ಸಮುದಾಯದ ಮೂವರು ಮಕ್ಕಳು ಮಾತ್ರ ಶ್ಲೋಕಗಳನ್ನು ಪಠಿಸಿದರು ಮತ್ತು ಇತರ ಮಕ್ಕಳು ಕೇವಲ ಕಣ್ಣು ಮುಚ್ಚಿ ಕೈಗಳನ್ನು ಮಾಡಿಚ್ಚಿದ್ದರು.

ಲಾಜಿಕಲಿ ಫ್ಯಾಕ್ಟ್ಸ್ ನೊಂದಿಗೆ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಸುಜಾ ಫಿಲಿಪ್, "ನಾವು ಶಾಲೆಯಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ; ಇದು (ಸ್ಕಿಟ್) ಸಹ ಅದರ ಭಾಗವಾಗಿತ್ತು. ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಸ್ಕಿಟ್‌ನಲ್ಲಿ ಭಾಗವಹಿಸಿ ಕುರಾನ್ ಪಠಿಸಿದರು, ಇತರ ವಿದ್ಯಾರ್ಥಿಗಳಲ್ಲ." ಶಾಲೆಯಲ್ಲಿ ವೀಡಿಯೋ ತೆಗೆಯಲಾಗಿದೆ ಎಂದು ಪ್ರಾಂಶುಪಾಲರು ಖಚಿತಪಡಿಸಿದ್ದಾರೆ ಮತ್ತು ಬಕ್ರೀದ್ ಆಚರಿಸಲು ಜೂನ್ ೩೦ ರಂದು ಸ್ಕಿಟ್ ಅನ್ನು ರೂಪಿಸಲಾಗಿದೆ ಎಂದು ಹೇಳಿದರು. "ನಾವು ಇತರ ಧಾರ್ಮಿಕ ಹಬ್ಬಗಳನ್ನು ಸಹ ಆಚರಿಸುತ್ತೇವೆ" ಎಂದು ಅವರು ಹೇಳಿದರು.

ಇತರ ಧಾರ್ಮಿಕ ಹಬ್ಬಗಳನ್ನು ಆಚರಿಸಲಾಗುತ್ತದೆ

ನಾವು ಶಾಲೆಯ ಅಧಿಕೃತ ಫೇಸ್‌ಬುಕ್ ಪುಟವನ್ನು ಪರಿಶೀಲಿಸಿದ್ದೇವೆ ಮತ್ತು ಸೆಪ್ಟೆಂಬರ್ ೬ ರಂದು ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ (ಹಿಂದೂ ಹಬ್ಬ) ಆಚರಿಸಿರುವುದನ್ನು ತೋರಿಸುವ ಪೋಷ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ವಿದ್ಯಾರ್ಥಿಗಳು ಹಿಂದೂ ದೇವತೆಗಳಾದ ಕೃಷ್ಣ ಮತ್ತು ರಾಧೆಯ ವೇಷ ಧರಿಸಿದ್ದರು. ಸೆಪ್ಟೆಂಬರ್ ೨೦೧೯ ರಂದು ಜನ್ಮಾಷ್ಠಮಿ ಆಚರಣೆಗಳ ಫೋಟೋಗಳನ್ನು ಸಹ ನಾವು ನೋಡಿದ್ದೇವೆ. 


೨೦೨೩ ಮತ್ತು ೨೦೧೯ ರಲ್ಲಿ ಜ್ಞಾನಸಾಗರ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್)

ಜನವರಿ ೧೬ ರಂದು, ಶಾಲೆಯಲ್ಲಿ ಮತ್ತೊಂದು ಹಿಂದೂ ಹಬ್ಬವಾದ ಮಕರ ಸಂಕ್ರಾಂತಿಯನ್ನು ಆಚರಿಸಲಾಯಿತು. ಶಾಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿನ 'ನಮ್ಮ ಬಗ್ಗೆ (About  Us )' ಪುಟದಲ್ಲಿ ಯಕ್ಷಗಾನದ ವೇಷಭೂಷಣಗಳನ್ನು ಧರಿಸಿರುವ ವಿದ್ಯಾರ್ಥಿಗಳ ಚಿತ್ರವೂ ಇದೆ. ಯಕ್ಷಗಾನವು ಕರಾವಳಿ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಜಾನಪದ ನೃತ್ಯವಾಗಿದೆ.


ಜ್ಞಾನಸಾಗರ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್ ಜನವರಿ ೧೬ ರಂದು ಮಕರ ಸಂಕ್ರಾಂತಿಯನ್ನು ಆಚರಿಸಿತು. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್‌ಗಳು)

ಡಿಸೆಂಬರ್ ೨೦೨೧ ರ ಕ್ರಿಸ್ಮಸ್ ಆಚರಣೆಗಳ ಫೋಟೋಗಳನ್ನು ಸಹ ನಾವು ಫೇಸ್‌ಬುಕ್ ಪುಟದಲ್ಲಿ ಕಂಡುಕೊಂಡಿದ್ದೇವೆ.


ಜ್ಞಾನಸಾಗರ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಕ್ರಿಸ್ಮಸ್ ಆಚರಣೆಯ ಫೋಟೋಗಳು. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್‌ಗಳು)

ನ್ಯೂಸ್ ೧೮ ಕನ್ನಡದೊಂದಿಗೆ ಮಾತನಾಡಿದ ಶಾಲೆಯ ವಿದ್ಯಾರ್ಥಿಯೊಬ್ಬರ ಪಾಲಕ ಮಂಜುನಾಥ್ ರವರು, "ಶಾಲೆಯಲ್ಲಿ ಪರಿಸರ ದಿನಾಚರಣೆ, ತಾಯಂದಿರ ದಿನ ಹೀಗೆ ಎಲ್ಲ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದ್ದು, ಈ (ಬಕ್ರೀದ್) ಹಬ್ಬವನ್ನು ಆಚರಿಸಿದ್ದಾರೆ ಇದರ ಬಗ್ಗೆ ತಿಳಿವಳಿಕೆ ಮೂಡಿಸಲು."

ಶಾಲೆಯು ಈ ಹಬ್ಬವನ್ನು (ಬಕ್ರೀದ್) ಮಾತ್ರ ಆಚರಿಸಿದ್ದರೆ ಪೋಷಕರು ಆಕ್ಷೇಪಿಸಬಹುದಿತ್ತು, ಆದರೆ ಶಾಲೆಯು ಎಲ್ಲಾ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳನ್ನು ಆಚರಿಸುತ್ತದೆ ಎಂದು ಅವರು ಹೇಳಿದರು.

ಕುರಾನ್ ಆದೇಶದ ಬಗ್ಗೆ ಏನು?

ಶಾಲೆಗಳಲ್ಲಿ ಕುರಾನ್ ಬೋಧನೆಯನ್ನು ಕಡ್ಡಾಯಗೊಳಿಸುವ ಯಾವುದೇ ಆದೇಶದ ಬಗ್ಗೆ ತಮಗೆ ತಿಳಿದಿಲ್ಲ ಮತ್ತು ಅಂತಹ ಸೂಚನೆಗಳು ತನಗೆ ಬಂದಿಲ್ಲ ಎಂದು ಫಿಲಿಪ್ ಲಾಜಿಕಲ್ ಫ್ಯಾಕ್ಟ್ಸ್‌ಗೆ ತಿಳಿಸಿದರು.

ಹೆಚ್ಚುವರಿಯಾಗಿ, ಲಾಜಿಕಲಿ ಫ್ಯಾಕ್ಟ್ಸ್ ಕುರಾನ್‌ನ ಬೋಧನೆಗಳನ್ನು ನೀಡಲು ಶಾಲೆಗಳು ಅಥವಾ ಯಾವುದೇ ಶಿಕ್ಷಣ ಸಂಸ್ಥೆಗಳನ್ನು ಉದ್ದೇಶಿಸುವ ಯಾವುದೇ ಸರ್ಕಾರಿ ಆದೇಶವನ್ನು ಕಂಡುಕೊಂಡಿಲ್ಲ. ಅದೇ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳಿಲ್ಲ. ಅನಾಮಧೇಯರಾಗಿ ಉಳಿಯಲು ಬಯಸುವ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳು, ರಾಜ್ಯ ಸರ್ಕಾರ ಅಥವಾ ಇಲಾಖೆ ಇದುವರೆಗೆ ಅಂತಹ ಆದೇಶವನ್ನು ಹೊರಡಿಸಿಲ್ಲ ಎಂದು ನಮಗೆ ತಿಳಿಸಿದರು. 

ತೀರ್ಪು 

ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಕುರಾನ್ ಪಠಣವನ್ನು ಸರ್ಕಾರ ಕಡ್ಡಾಯಗೊಳಿಸಿದೆ ಎಂಬ ತಪ್ಪು ಹೇಳಿಕೆಯೊಂದಿಗೆ ಕರ್ನಾಟಕದ ಹಾಸನ ಜಿಲ್ಲೆಯ ಖಾಸಗಿ ಶಾಲೆಯೊಂದರ ಬಕ್ರೀದ್ ಆಚರಣೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಶಾಲೆಯು ಎಲ್ಲಾ ಧಾರ್ಮಿಕ ಹಬ್ಬಗಳನ್ನು ಆಚರಿಸುತ್ತದೆ ಮತ್ತು ಕರ್ನಾಟಕ ಸರ್ಕಾರವು ಕುರಾನ್ ಪಠಣವನ್ನು ಕಡ್ಡಾಯಗೊಳಿಸಲು ಯಾವುದೇ ಆದೇಶವನ್ನು ಹೊರಡಿಸಿಲ್ಲ.

ಅನುವಾದಿಸಿವರು: ರಜಿನಿ ಕೆ.ಜಿ 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.