ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬುರ್ಖಾ ಧರಿಸಿದ ಅಧಿಕಾರಿಯ ವೀಡಿಯೋವನ್ನು ಕರ್ನಾಟಕದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ರೋಹಿತ್ ಗುಟ್ಟಾ
ಸೆಪ್ಟೆಂಬರ್ 12 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬುರ್ಖಾ ಧರಿಸಿದ ಅಧಿಕಾರಿಯ ವೀಡಿಯೋವನ್ನು ಕರ್ನಾಟಕದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

(ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲಾ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷೆ ಸೈಮಾ ಪರ್ವೀನ್ ಲೋನ್ ಅವರನ್ನು ಈ ವೀಡಿಯೋ ತೋರಿಸುತ್ತದೆ.

ಕ್ಲೈಮ್ ಐಡಿ 920b2296

ಇಲ್ಲಿನ ಹೇಳಿಕೆಯೇನು?

ಫೇಸ್‌ಬುಕ್ ಬಳಕೆದಾರರೊಬ್ಬರು ಆಗಸ್ಟ್ ೨೪, ೨೦೨೩ ರಂದು ತೆಲುಗು ಭಾಷೆಯ ಶೀರ್ಷಿಕೆಯೊಂದಿಗೆ ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅದು ಕರ್ನಾಟಕದ ಐಎಎಸ್ ಅಧಿಕಾರಿಯೊಬ್ಬರು ಬುರ್ಖಾ ಧರಿಸಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳುತ್ತದೆ. ಫೇಸ್‌ಬುಕ್ ಬಳಕೆದಾರರು ಇದನ್ನು ೨೦೨೨ ರಲ್ಲಿ ಕರ್ನಾಟಕದಲ್ಲಿ ಭುಗಿಲೆದ್ದ ಹಿಜಾಬ್ ವಿವಾದಕ್ಕೆ ಲಿಂಕ್ ಮಾಡಿದ್ದಾರೆ ಮತ್ತು 'ಕರ್ನಾಟಕದಲ್ಲಿ ಈ ಹಿಂದೆ ಬುರ್ಖಾ ಧರಿಸಿದ ಕಾರಣದಿಂದ ಗಲಭೆಗಳು ನಡೆದಿವೆ' ಎಂದು ಹೇಳಿದ್ದಾರೆ.

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಮತ್ತೊಬ್ಬ ಬಳಕೆದಾರರು ಇದೇ ವೀಡಿಯೋವನ್ನು ಆಗಸ್ಟ್ ೨೯, ೨೦೨೩ ರಂದು ಹಿಂದಿ ಭಾಷೆಯ ಶೀರ್ಷಿಕೆಯೊಂದಿಗೆ ಸಮಾನವಾದ ಹೇಳಿಕೆಗಳೊಂದಿಗೆ ಪೋಷ್ಟ್ ಮಾಡಿದ್ದಾರೆ, 'ಹಿಂದೂಗಳ ಒಂದು ತಪ್ಪು ಮತವು ಈ ದೇಶವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಪರಿವರ್ತಿಸಬಹುದು' ಎಂದು ಶೀರ್ಷಿಕೆಯಲ್ಲಿ ಸೇರಿಸಿದ್ದಾರೆ. ಪ್ರಕಟಣೆಯ ಹೊತ್ತಿಗೆ ಪೋಷ್ಟ್ ೧,೩೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ೧೦೦ ಕ್ಕೂ ಹೆಚ್ಚು ಮರುಪೋಷ್ಟ್ ಗಳನ್ನು ಹೊಂದಿದೆ.

ಎಕ್ಸ್ ಮತ್ತು ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವಿಡಿಯೋ ಜಮ್ಮುಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯದ್ದು.

ಇದು ನಮಗೆ ಹೇಗೆ ತಿಳಿದುಬಂತು? 

ವೀಡಿಯೋದಲ್ಲಿ ಸುಮಾರು ೦೦:೧೮-೦೦:೧೯ ಸೆಕೆಂಡುಗಳಲ್ಲಿ, ಜನರು ಕುಳಿತುಕೊಳ್ಳಲು ಹಾಕಲಾದ ಪೆಂಡಾಲ್ ಒಂದರ  ಪೆವಿಲಿಯನ್‌ ಮೇಲೆ ಹಾಕಲಾದ ಬೋರ್ಡ್‌ ಒಂದರಲ್ಲಿ "ಕಿಶ್ತ್ವಾರ್" ಎಂಬ ಪಠ್ಯವನ್ನು ನಾವು ನೋಡಿದ್ದೇವೆ. ಹೆಚ್ಚುವರಿಯಾಗಿ, ವೈರಲ್‌ ವೀಡಿಯೋದ ೦೦:೨೬-೦:೨೭ ಟೈಮ್‌ಕೋಡ್‌ನಲ್ಲಿ, ಮಹಿಳೆ ಪ್ರಯಾಣಿಸುತ್ತಿರುವ ವಾಹನವನ್ನು ನಾವು ನೋಡಬಹುದು. ಈ ವಾಹನವು ವೇದಿಕೆಯನ್ನು ದಾಟಿ ಹೋಗುತ್ತಿದ್ದಂತೆ ಅದರ ಮೇಲೆ ಹಾಕಲಾದ ಬ್ಯಾನರ್‌ ನ ಮೇಲೆ  “ಜಿಲ್ಲಾ ಆಡಳಿತ ಕಿಶ್ತ್ವಾರ್” ಎಂದು ಕೆಳಗೆ ತೋರಿಸಿರುವ ಹಾಗೆ ನೋಡಬಹುದು.

ವೈರಲ್ ವೀಡಿಯೋದಲ್ಲಿ ಕಂಡುಬಂದ ಕಿಶ್ತ್ವಾರ್‌ ಜಿಲ್ಲಾ ಆಡಳಿತದ ಸ್ಕ್ರೀನ್‌ಶಾಟ್‌ಗಳು (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವೈರಲ್ ವೀಡಿಯೋ 'ಫಾಸ್ಟ್ ನ್ಯೂಸ್' ನ ಲೋಗೋವನ್ನು ಕೂಡ ಹೊಂದಿದೆ. ಫಾಸ್ಟ್ ನ್ಯೂಸ್ ನ ಫೇಸ್‌ಬುಕ್ ಪುಟದಲ್ಲಿ ಈ ವೀಡಿಯೋವಿನ ದೀರ್ಘ ಆವೃತ್ತಿಯನ್ನು ಕಂಡುಕೊಂಡಿದ್ದೇವೆ.

 ಆಗಸ್ಟ್ ೧೫, ೨೦೨೩ ರಂದು ಪೋಷ್ಟ್ ಮಾಡಲಾದ ಈ ವೀಡಿಯೋವಿನ ಶೀರ್ಷಿಕೆ ಹೀಗೆ ಹೇಳುತ್ತದೆ, “ಸ್ವಾತಂತ್ರ್ಯ ದಿನಾಚರಣೆ ೨೦೨೩:-ಸೈಮಾ ಪರ್ವೀನ್ ಏಕೈಕ ಉಪಾಧ್ಯಕ್ಷ ಕಿಶ್ತ್ವಾರ್ ಚೌಗನ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು ಮತ್ತು ಇತಿಹಾಸದಲ್ಲಿ ಮೊದಲ ಬಾರಿಗೆ ಉಪಾಧ್ಯಕ್ಷ ಕಿಶ್ತ್ವಾರ್ ಸೈಮಾ ಪರ್ವೀನ್ ಒಂಟಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಹಿಜಾಬ್ನೊಂದಿಗೆ ಕಿಶ್ತ್ವಾರ್. #ಬುರ್ಖಾ ಮಹಿಳೆ (ಕನ್ನಡಕ್ಕೆ ಅನುವಾದಿಸಲಾಗಿದೆ).”

 ಮಹಿಳೆಯನ್ನು ಇಬ್ಬರು ಪೊಲೀಸ್ ಅಧಿಕಾರಿಗಳು ಎಸ್ಕಾರ್ಟ್ ಮಾಡುವುದನ್ನು ನಾವು ನೋಡಬಹುದು. ಒಬ್ಬ ಪೊಲೀಸ್ ಅಧಿಕಾರಿಯು ತನ್ನ ಬಲಗೈಯಲ್ಲಿ ಕತ್ತಿಯನ್ನು ಕೂಡ ಹಿಡಿದಿದ್ದಾನೆ.

 ಸೈಮಾ ಪರ್ವೀನ್ ಲೋನ್ ಅವರನ್ನು ಪೊಲೀಸ್ ಅಧಿಕಾರಿಗಳು ಎಸ್ಕಾರ್ಟ್ ಮಾಡುವ ವೀಡಿಯೋ (ಮೂಲ: ಫೇಸ್‌ಬುಕ್/ಫಾಸ್ಟ್ ನ್ಯೂಸ್)

 ವೈರಲ್ ವೀಡಿಯೋವನ್ನು ಫಾಸ್ಟ್ ನ್ಯೂಸ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಷ್ಟ್ ಮಾಡಿದ ದೀರ್ಘ ವೀಡಿಯೋದ ೦೦:೦೩-೦೧:೦೧ ಸಮಯದಿಂದ ಎಡಿಟ್ ಮಾಡಿ ತೆಗೆದುಕೊಳ್ಳಲಾಗಿದೆ.

 ದೀರ್ಘವಾದ ವೀಡಿಯೋದಲ್ಲಿ ಮಕ್ಕಳು ಬ್ಯಾನರ್ ಹಿಡಿದು ಕಾರ್ಯಕ್ರಮಕ್ಕೆ ಹಾಜರಾಗುತ್ತಿರುವ ದೃಶ್ಯವೂ ನೋಡಬಹುದು. ವೀಡಿಯೋದ ೦೧:೦೨-೦೧:೦೩ ಸೆಕೆಂಡುಗಳಲ್ಲಿ ಬ್ಯಾನರ್ ನಲ್ಲಿ ಮುದ್ರಿತವಾಗಿರುವ ಜಿಲ್ಲಾಡಳಿತ ಕಿಶ್ತ್ವಾರ್ ಎಂಬುದನ್ನು ಸಹ ನಾವು ನೋಡಬಹುದು.

 ಜಿಲ್ಲಾ ಆಡಳಿತದ ಮಂಡಳಿ ಕಿಶ್ತ್ವಾರ್‌ ಎಂಬ ಬ್ಯಾನರ್ವೀ ಹೊಂದಿರುವ ವೀಡಿಯೋವಿನ ಸ್ಕ್ರೀನ್‌ಶಾಟ್ (ಮೂಲ: ಫೇಸ್‌ಬುಕ್/ಫಾಸ್ಟ್ ನ್ಯೂಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಈ ಫೇಸ್‌ಬುಕ್ ಪೋಷ್ಟ್, ವೀಡಿಯೋದಲ್ಲಿರುವ ಮಹಿಳೆಯನ್ನು ಕಿಶ್ತ್ವಾರ್ ಜಿಲ್ಲಾ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷೆ ಸೈಮಾ ಪ್ರವೀಣ್ ಲೋನ್ ಎಂದು ಗುರುತಿಸಿದೆ. ಫೆಬ್ರವರಿ ೧೮, ೨೦೨೧ ರ "Information & PR, Kishtwar" ಎಂಬ ಎಕ್ಸ್  ಹ್ಯಾಂಡಲ್‌ನ ಪೋಷ್ಟ್ ಒಂದರಲ್ಲಿ ಲೋನ್ ಡಿಡಿಸಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಸೈಮಾ ಪರ್ವೀನ್ ಲೋನ್ ಕುರಿತು ಎಕ್ಸ್  ನಲ್ಲಿ ಕಿಶ್ತ್ವಾರ್ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪೋಷ್ಟ್ ನ  ಸ್ಕ್ರೀನ್‌ಶಾಟ್, ಕಿಶ್ತ್ವಾರ್ (ಮೂಲ: ಸ್ಕ್ರೀನ್‌ಶಾಟ್/@DICKishtwar/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಜಮ್ಮು ಮತ್ತು ಕಾಶ್ಮೀರದ ಸಾರ್ವಜನಿಕ ಸಂಪರ್ಕ ಇಲಾಖೆಯ ವೆಬ್‌ಸೈಟ್ ಜಮ್ಮು ಮತ್ತು ಕಾಶ್ಮೀರದಲ್ಲಿ ೭೭ ನೇ ಸ್ವಾತಂತ್ರ್ಯ ದಿನಾಚರಣೆಯ ಕುರಿತು ವರದಿ ಮಾಡಿದೆ. ಕಿಶ್ತ್ವಾರ್‌ನಲ್ಲಿ ನಡೆದ ಸಮಾರಂಭದ ಬಗ್ಗೆ ಬರೆಯುವಾಗ, ವೆಬ್‌ಸೈಟ್ ಗಮನಿಸಿದ್ದು ಹೀಗೆ, “ಐತಿಹಾಸಿಕ ಚೌಗನ್ ಮೈದಾನದಲ್ಲಿ ಮುಖ್ಯ ಸಮಾರಂಭ ನಡೆಯಿತು. ಅಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಸೈಮಾ ಪರ್ವೀನ್ ಲೋನ್, ಎಸ್‌ಎಸ್‌ಪಿ ಖಲೀಲ್ ಅಹ್ಮದ್ ಪೋಸ್ವಾಲ್ ಅವರೊಂದಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಪೊಲೀಸ್, ಐಆರ್‌ಪಿ, ಸಿಆರ್‌ಪಿಎಫ್, ಸಿಐಎಸ್‌ಎಫ್, ಅರಣ್ಯ ಸಂರಕ್ಷಣಾ ಪಡೆ, ಹೋಮ್ ಗಾರ್ಡ್‌ಗಳು, ಎಸ್‌ಪಿಒ ಗ್ರೂಪ್, ಜಿಡಿಸಿ ಕಿಶ್ತ್ವಾರ್‌ನ ಎನ್‌ಸಿಸಿ ಬೆಟಾಲಿಯನ್, ಅಂಗನವಾರಿ ಕಾರ್ಯಕರ್ತೆಯರು ಮತ್ತು ಶಾಲಾ ಮಕ್ಕಳನ್ನು ಒಳಗೊಂಡ ತಂಡವನ್ನು ಒಳಗೊಂಡ ಮಾರ್ಚ್ ಪಾಸ್‌ನಲ್ಲಿ ಮೆರವಣಿಗೆ ಮತ್ತು ಗೌರವ ವಂದನೆ ಸ್ವೀಕರಿಸಲಾಯಿತು."

 ಈ ವೀಡಿಯೋದಲ್ಲಿ ಬುರ್ಖಾ ಧರಿಸಿರುವ ಮಹಿಳೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಸೈಮಾ ಪರ್ವೀನ್ ಲೋನ್ ಆಗಿದ್ದು, ಇದು ಕರ್ನಾಟಕದಲ್ಲಿನ ಐಎಎಸ್ ಆಫೀಸರ್ ಅಲ್ಲ ಎಂಬುದು ಸ್ಪಷ್ಟವಾಗಿದೆ.

 ತೀರ್ಪು 

ವೀಡಿಯೋ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಿಂದ ಬಂದಿದೆ ಮತ್ತು ಅಲ್ಲಿನ ಜಿಲ್ಲಾ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷರು ೭೭ ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುತ್ತಿರುವುದನ್ನು ತೋರಿಸುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ಅನುವಾದಿಸಿದವರು: ವಿವೇಕ್.ಜೆ 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.