ಪ್ರಧಾನಿ ನರೇಂದ್ರ ಮೋದಿಯವರು, ಧೀರೇಂದ್ರ ಶಾಸ್ತ್ರಿ ಅವರ ಭಾಷಣವನ್ನು ಟಿವಿಯಲ್ಲಿ ವೀಕ್ಷಿಸುತ್ತಿರುವ ವೀಡಿಯೋ ಎಡಿಟ್ ಮಾಡಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 11 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಪ್ರಧಾನಿ ನರೇಂದ್ರ ಮೋದಿಯವರು, ಧೀರೇಂದ್ರ ಶಾಸ್ತ್ರಿ ಅವರ ಭಾಷಣವನ್ನು ಟಿವಿಯಲ್ಲಿ ವೀಕ್ಷಿಸುತ್ತಿರುವ ವೀಡಿಯೋ ಎಡಿಟ್ ಮಾಡಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮೂಲ ವೀಡಿಯೋ ೨೦೧೯ ರದ್ದು ಮತ್ತು ಇದು ಮೋದಿಯವರು ಚಂದ್ರಯಾನ ೨ ರ ಉಡಾವಣೆ ವೀಕ್ಷಿಸುತ್ತಿರುವುದನ್ನು ತೋರಿಸುತ್ತದೆ.

ಕ್ಲೈಮ್ ಐಡಿ 02476ccb

ಸಂದರ್ಭ

ಬಾಗೇಶ್ವರ್ ಧಾಮ್ ಸರ್ಕಾರ್ ಎಂದೇ ಖ್ಯಾತರಾಗಿರುವ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಭಾಷಣವನ್ನು ಟಿವಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವೀಕ್ಷಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 

ವೀಡಿಯೋವನ್ನು ಹಿಂದಿಯಲ್ಲಿ ಬರೆದ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ, ಅದನ್ನು ಕನ್ನಡಕ್ಕೆ ಅನುವಾದಿಸಿದಾಗ, "ಪ್ರಧಾನಿ ಮೋದಿ ಅವರು ಬಾಗೇಶ್ವರ ಧಾಮದ ಪೀಠಾಧೀಶ್ವರ ಶ್ರೀ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ವೀಡಿಯೋವನ್ನು ವೀಕ್ಷಿಸುತ್ತಿದ್ದಾರೆ, ಅಲ್ಲಿ ಅವರು ಪೋಷಕರ ಬಗ್ಗೆ ಮಾತನಾಡುತ್ತಾರೆ. ಈ ಭೂಮಿಯಲ್ಲಿ ತಾಯಿಗಿಂತ ದೊಡ್ಡವರು ಯಾರೂ ಇಲ್ಲ ಅಥವಾ ಇರುವುದಿಲ್ಲ.” ಎಂದು ಹೇಳುತ್ತದೆ. ಈ ವರದಿಯನ್ನು ಬರೆಯುವ ಸಮಯದಲ್ಲಿ ಪೋಷ್ಟ್ ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸುಮಾರು ನೂರು ಲೈಕ್‌ಗಳನ್ನು ಸ್ವೀಕರಿಸಿದೆ. ಎಡಿಟ್ ಮಾಡಿದ ವೀಡಿಯೋವನ್ನು ಯೂಟ್ಯೂಬ್‌ನಲ್ಲಿಯೂ ಸಹ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಆದರೆ ಈ ವೀಡಿಯೋದ ಮೂಲ ಆವೃತ್ತಿಯು ೨೦೧೯ ರಲ್ಲಿ ಮೋದಿಯವರು ಚಂದ್ರಯಾನ ೨ರ ಉಡಾವಣೆಯನ್ನು ತಮ್ಮ ಟಿವಿಯಲ್ಲಿ ವೀಕ್ಷಿಸುತ್ತಿರುವುದನ್ನು ತೋರಿಸುತ್ತದೆ. 

ವಾಸ್ತವವಾಗಿ

ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಜುಲೈ ೨೨, ೨೦೧೯ ರಂದು ಯೂಟ್ಯೂಬ್‌ನಲ್ಲಿ ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ವೀಡಿಯೋವನ್ನು ನಾವು ಕಂಡುಕೊಂಡೆವು. ಈ ವೀಡಿಯೋ ಮೋದಿಯವರು ಚಂದ್ರಯಾನ ೨ ರ ನೇರ ಪ್ರಸಾರವನ್ನು ವೀಕ್ಷಿಸುತ್ತಿರುವುದನ್ನು ತೋರಿಸುತ್ತದೆ. ಇದೇ ದಿನಾಂಕದಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದೇಶದ ಚಂದ್ರಯಾನ್ ೨ರ ಉಡಾವಣೆಯನ್ನು ನಡೆಸಿತ್ತು. ಅದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಡೆಸಲಾಗಿತ್ತು. 

ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಜುಲೈ ೨೨, ೨೦೧೯ ರಂದು ಮೋದಿಯವರು ಉಡಾವಣೆಯನ್ನು ವೀಕ್ಷಿಸುತ್ತಿರುವ ವೀಡಿಯೋವನ್ನು ಅವರ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. 

ಎರಡೂ ವೀಡಿಯೋಗಳಲ್ಲಿ ಪ್ರಧಾನಿಯವರ ಬಟ್ಟೆ ಸೇರಿದಂತೆ ಹಲವಾರು ಸಾಮ್ಯತೆಗಳನ್ನು ಹೊಂದಿದ್ದವು. ಹಿಂದೂಸ್ತಾನ್ ಟೈಮ್ಸ್ ಪೋಷ್ಟ್ ಮಾಡಿದ ವೀಡಿಯೋದ ಹಲವಾರು ಕೀಫ್ರೇಮ್ಸ್ ಗಳನ್ನು ನಾವು ವೈರಲ್ ವೀಡಿಯೋದಲ್ಲಿಯೂ ಸಹ ನೋಡಬಹುದು. ಉದಾಹರಣೆಗೆ: ಸುಮಾರು ೧೯ ಸೆಕೆಂಡುಗಳಲ್ಲಿ, ಮೋದಿಯವರು ತಮ್ಮ ಕೈಯನ್ನು ಬಾಯಿಯ ಹತ್ತಿರ ಇಟ್ಟುಕೊಂಡು ಟಿವಿಯನ್ನು ಹತ್ತಿರದಿಂದ ನೋಡುವುದನ್ನು ಕಾಣಬಹುದು. ಇದೇ ಫ್ರೇಮ್ ವೈರಲ್ ವೀಡಿಯೋದಲ್ಲಿಯೂ ಕಂಡುಬಂದಿದೆ.

ಮೋದಿಯವರ ಅಧಿಕೃತ ಖಾತೆಯಲ್ಲಿ ೨೦೧೯ ರ ಟ್ವೀಟ್ ಅನ್ನು ನಾವು ಕಂಡುಕೊಂಡಿದ್ದೇವೆ, ಅಲ್ಲಿ ಅವರು ಚಂದ್ರಯಾನ ೨ ರ ಉಡಾವಣೆ ಅನ್ನು ವೀಕ್ಷಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಧೀರೇಂದ್ರ ಶಾಸ್ತ್ರಿ ಅವರ ವೀಡಿಯೋ ಬಗ್ಗೆ ಏನು?

ಮೋದಿಯವರ ವೀಕ್ಷಿಸುತ್ತಿದ್ದ ಟಿವಿಯ ಪರದೆ ಮೇಲೆ ಎಡಿಟ್ ಮಾಡಿ ಸೆರಿಸಲಾದ ಶಾಸ್ತ್ರಿಯವರ ವೀಡಿಯೋವನ್ನು ಮೇ ೨೨, ೨೦೨೩ ರಂದು ಬಾಗೇಶ್ವರ್ ಧಾಮ್ ಸರ್ಕಾರ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಷ್ಟ್ ಮಾಡಲಾಗಿದೆ. ವೈರಲ್ ವೀಡಿಯೋದಲ್ಲಿ ಕಂಡುಬರುವ ದೃಶ್ಯಗಳನ್ನು ೫:೨೩ ನಿಮಿಷಗಳಲ್ಲಿ ನೋಡಬಹುದು. ಜನವರಿ ೭, ೨೦೨೩ ರಂದು ಸಂಸ್ಕಾರ ಟಿವಿಯ ಯೂಟ್ಯೂಬ್ ಚಾನಲ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಿದ್ದರು. ದೃಶ್ಯಗಳನ್ನು ಸುಮಾರು ೧:೫೭:೨೩ ನಿಮಿಷಕ್ಕೆ ನೋಡಬಹುದು.

ಆದ್ದರಿಂದ, ಸ್ವಯಂಘೋಷಿತ ದೇವಮಾನವ ಬಾಗೇಶ್ವರ ಧಾಮ್ ಸರ್ಕಾರ್ ಅವರ ಭಾಷಣವನ್ನು ಪ್ರಧಾನಿ ಮೋದಿ ವೀಕ್ಷಿಸುತ್ತಿರುವಂತೆ ಕಾಣುವ ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. 

ತೀರ್ಪು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಂದ್ರಯಾನ ೨ ರ ಉಡಾವಣೆಯ ನೇರ ಪ್ರಸಾರವನ್ನು ವೀಕ್ಷಿಸುತ್ತಿರುವ ವೀಡಿಯೋವನ್ನು ಅವರು ಬಾಗೇಶ್ವರ ಧಾಮ್ ಎಂದು ಜನಪ್ರಿಯವಾಗಿರುವ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಭಾಷಣವನ್ನು ವೀಕ್ಷಿಸುತ್ತಿದ್ದಾರೆ ಎಂದು ಹೇಳಲು ಎಡಿಟ್ ಮಾಡಲಾಗಿದೆ. ಆದರಿಂದ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ. 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.