ಹುಲಿಯೊಂದು ಸ್ನಾನ ಮಾಡುತ್ತಿರುವ ವೈರಲ್ ವೀಡಿಯೋ ಕರ್ನಾಟಕದ ಕೂರ್ಗ್ ನಲ್ಲಿ ಸೆರೆಹಿಡಿದದ್ದಲ್ಲ

ಮೂಲಕ: ರಾಜೇಶ್ವರಿ ಪರಸ
ಆಗಸ್ಟ್ 16 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಹುಲಿಯೊಂದು ಸ್ನಾನ ಮಾಡುತ್ತಿರುವ ವೈರಲ್ ವೀಡಿಯೋ ಕರ್ನಾಟಕದ ಕೂರ್ಗ್ ನಲ್ಲಿ ಸೆರೆಹಿಡಿದದ್ದಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋದ ದೃಶ್ಯಗಳು ಜೂನ್ ೨೦೨೦ ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಉತ್ತರ ಕೆರೊಲಿನಾ ಪ್ರದೇಶದಲ್ಲಿ ಕಂಡುಬಂದಿತ್ತು.

ಕ್ಲೈಮ್ ಐಡಿ 18af51e9

ಸಂದರ್ಭ

ಕರ್ನಾಟಕ ರಾಜ್ಯದ ಕೂರ್ಗ್‌ನ ಕಾಫಿ ತೋಟದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ಹೇಳಿಕೆಯೊಂದಿಗೆ ರಬ್ಬರ್ ಟಬ್‌ನಲ್ಲಿ ಕುಳಿತಿರುವ ಹುಲಿಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಪೋಷ್ಟ್ ಅನ್ನು ಭಾರತೀಯ ನಟಿ ರಶ್ಮಿಕಾ ಮಂದಣ್ಣ ಅವರು ಮರು ಪೋಷ್ಟ್ ಮಾಡಿದ್ದಾರೆ ಮತ್ತು ಅವರು, "ಕೂರ್ಗ್‌ನಲ್ಲಿ ಏನು ಬೇಕಾದರೂ ಆಗಬಹುದು.. ಇದರಿಂದ ಸಾಬೀತಾಗಿದೆ" ಎಂದು ಬರೆದಿದ್ದಾರೆ.

ಎನ್‌ಡಿಟಿವಿ ಮತ್ತು ಏಷ್ಯಾನೆಟ್ ಸೇರಿದಂತೆ ಹಲವಾರು ಸುದ್ದಿ ಮತ್ತು ಮಾಧ್ಯಮ ವೆಬ್‌ಸೈಟ್‌ಗಳು ೨೦೨೦ ರಲ್ಲಿ ಇದೇ ವೀಡಿಯೋವನ್ನು ಭಾರತದ ಕೂರ್ಗ್‌ನಲ್ಲಿ ಸೆರೆಹಿಡಿಯಲಾಗಿದೆ ಎಂಬ ಹೇಳಿಕೆಗಳೊಂದಿಗೆ ಲೇಖನಗಳನ್ನು ಬರೆಯಲಾಗಿತ್ತು.

ಸ್ಕ್ರೀನ್‌ಗ್ರಾಬ್ (ಮೂಲ:ಎನ್‌ಡಿಟಿವಿ/ಏಷ್ಯಾನೆಟ್/ಲಾಜಿಕಲಿ ಫ್ಯಾಕ್ಟ್ಸ್ ಇಂದ ಆಲ್ಟೆರ್ ಮಾಡಲಾಗಿದೆ)

ಆದರೆ, ಈ ವೀಡಿಯೋ ಕೂರ್ಗ್‌ನದಲ್ಲ ಮತ್ತು ಇತ್ತೀಚಿನದಲ್ಲ. 

ವಾಸ್ತವವಾಗಿ

ಈ ನಿರ್ದಿಷ್ಟ  ಹೇಳಿಕೆ ಹೊಂದಿರುವ ಈ ವೀಡಿಯೋ ೨೦೨೦ ರಿಂದ ವೈರಲ್ ಆಗುತ್ತಿದೆ ಎಂದು ನಮ್ಮ ಸಂಶೋಧನೆಯು ದೃಢಪಡಿಸುತ್ತದೆ. 

ವೀಡಿಯೋದಿಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ X ಮಾಧ್ಯಮದಲ್ಲಿ, ಯುನೈಟೆಡ್ ಸ್ಟೇಟ್ಸ್ ಮೂಲದ ಕ್ಯಾರೊಲಿನಾ ಟೈಗರ್ ರೆಸ್ಕ್ಯೂ ಎಂಬ ಸಂಸ್ಥೆಯ ಪೋಷ್ಟ್ ಅನ್ನು ಕಂಡುಕೊಂಡೆವು. ಹುಲಿ ಸ್ನಾನ ಮಾಡುವ ಈ ವೀಡಿಯೋವನ್ನು ಸಂಸ್ಥೆಯು  ಜೂನ್ ೧೧, ೨೦೨೦ ರಂದು ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದೆ. ೨೦೨೦ ರ ಅವರ ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ಮಡೋನಾ ಟೈಗರ್ ನಿನ್ನೆ ತನ್ನ ಪೂಲ್ ಅನ್ನು ಸ್ವೀಕರಿಸಿತು ! ಬೇಸಿಗೆಯಲ್ಲಿ ಹುಲಿಗಳು ತಂಪಾಗಿರಲು ನಾವು ಸಹಾಯ ಮಾಡುವ ವಿಧಾನಗಳಲ್ಲಿ ಪೂಲ್‌ಗಳು ಒಂದಾಗಿದೆ ಮತ್ತು ಸ್ಪಷ್ಟವಾಗಿ ಅವುಗಳು ಅದನ್ನು ಪ್ರೀತಿಸುತ್ತಿವೆ. ಮಡೋನಾ ತನ್ನ ಅಡಗಿಕೊಳ್ಳುವಿಕೆ ಮತ್ತು ಹಿಂಬಾಲಿಸುವ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದರೂ, ಈಗ ಅದನ್ನು ಕಂಡುಹಿಡಿಯುವುದು ಸುಲಭವಾಗಿದೆ ಏಕೆಂದರೆ, ವಿಶ್ರಾಂತಿ ಪಡೆಯಲು ಈಗ ಬೇಸಿಗೆಯ ಟಬ್ ಅನ್ನು ಹೊಂದಿದೆ!" See the tweet below:

ಕ್ಯಾರೊಲಿನಾ ಟೈಗರ್ ರೆಸ್ಕ್ಯೂ ಯೂಟ್ಯೂಬ್ ಚಾನೆಲ್ ಇದೇ ಹುಲಿಯ ಇತರ ವೀಡಿಯೋಗಳನ್ನು ಹೊಂದಿದೆ. ಅದು ಈ ವರ್ಷ ಇತ್ತೀಚೆಗೆ ಅದರ  ನಿಧಾನವಾಯಿತು ಎಂದು ವೆಬ್ಸೈಟ್ ನ 'ಇನ್ ಮೆಮೋರಿಯಮ್' ಪುಟ  ಹೇಳುತ್ತದೆ. 

ಸ್ಕ್ರೀನ್‌ಗ್ರಾಬ್ (ಮೂಲ:carolinatigerescue.org)

ತೀರ್ಪು

ಬಾತ್ ಟಬ್ ನಲ್ಲಿ ಹುಲಿ ಸ್ನಾನ ಮಾಡುತ್ತಿರುವ ವೀಡಿಯೋ ನಾರ್ತ್ ಕೆರೊಲಿನಾದದ್ದು, ಕರ್ನಾಟಕದ ಕೂರ್ಗ್ ನ ಕಾಫಿ ತೋಟದಲ್ಲಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತಿದ್ದೇವೆ.

ಅನುವಾದಿಸಿದವರು: ಅಂಕಿತಾ ಕುಲಕರ್ಣಿ 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.