ನ್ಯೂಜಿಲೆಂಡ್‌ನ 'ಗೃಹ ಸಚಿವರು' ಹಿಂದೂ ಧರ್ಮವನ್ನು ಒಪ್ಪಿಕೊಂಡಿದ್ದಾರೆ ಎಂದು ತಪ್ಪಾಗಿ ಹೇಳಲು ಯೋಗ ಶಿಕ್ಷಕರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್
ಫೆಬ್ರವರಿ 8 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ನ್ಯೂಜಿಲೆಂಡ್‌ನ 'ಗೃಹ ಸಚಿವರು' ಹಿಂದೂ ಧರ್ಮವನ್ನು ಒಪ್ಪಿಕೊಂಡಿದ್ದಾರೆ ಎಂದು ತಪ್ಪಾಗಿ ಹೇಳಲು ಯೋಗ ಶಿಕ್ಷಕರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋ ಬ್ರೆಂಟ್ ಗೋಬಲ್ ಎಂಬ ಅಮೇರಿಕನ್ ಮೂಲದ ಯೋಗ ಶಿಕ್ಷಕರನ್ನು ತೋರಿಸುತ್ತದೆ. ನ್ಯೂಜಿಲೆಂಡ್‌ ಗೃಹ ಸಚಿವರನ್ನಲ್ಲ.

ಕ್ಲೈಮ್ ಐಡಿ f22ecda8

ಹೇಳಿಕೆ ಏನು?

ನ್ಯೂಜಿಲೆಂಡ್‌ನ ಗೃಹ ಸಚಿವರು 'ಸನಾತನ ಧರ್ಮ' ಎಂದು ಕರೆಯಲ್ಪಡುವ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವ್ಯಕ್ತಿಯೊಬ್ಬ ಹಿಂದೂ ಆಚರಣೆಗಳನ್ನು ವೀಕ್ಷಿಸುತ್ತಿರುವ ಮತ್ತು ಪ್ರಾರ್ಥನೆ ಮಾಡುವ ವೀಡಿಯೋ ಒಂದು ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟ್ಟರ್) ಮತ್ತು ಫೇಸ್‌ಬುಕ್‌  ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಹಾಗು ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ಹೇಳಿಕೆ ತಪ್ಪಾಗಿದೆ. ವೀಡಿಯೋದಲ್ಲಿರುವ ವ್ಯಕ್ತಿ ನ್ಯೂಜಿಲೆಂಡ್‌ನ ಗೃಹ ಸಚಿವರಲ್ಲ. ವೀಡಿಯೋ ಬ್ರೆಂಟ್ ಗೋಬಲ್, ಅಮೇರಿಕನ್ ಮೂಲದ ಯೋಗ ಶಿಕ್ಷಕ ಮತ್ತು ಭಾರತೀಯ ಟಿವಿ ನಟ ಆಶ್ಕಾ ಗೊರಾಡಿಯಾ ಅವರ ಪತಿಯನ್ನು ತೋರಿಸುತ್ತದೆ.

ಸತ್ಯಾಂಶಗಳು

ನ್ಯೂಜಿಲೆಂಡ್‌ನ ಗೃಹ ಸಚಿವರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದರೆ, ಅದು ದೊಡ್ಡ ಸುದ್ದಿ ಮಾಡುತ್ತಿತ್ತು, ಆದರೆ ಅಂತಹ ಬೆಳವಣಿಗೆಯ ಕುರಿತು ಸುದ್ದಿ ವರದಿಗಳಿಗಾಗಿ ಗೂಗಲ್ ಹುಡುಕಾಟವು ಯಾವುದೇ ಫಲಿತಾಂಶವನ್ನು ನೀಡಲಿಲ್ಲ.

ಅದಕ್ಕಿಂತ ಮುಖ್ಯವಾಗಿ ನ್ಯೂಜಿಲೆಂಡ್‌ಗೆ ಗೃಹ ಸಚಿವ ಎಂಬ ಹುದ್ದೆ ಇಲ್ಲ. ನ್ಯೂಜಿಲೆಂಡ್ ಸರ್ಕಾರದ ಅಧಿಕೃತ ವೆಬ್‌ಸೈಟ್ ಪ್ರಕಾರ, ಆಂತರಿಕ ವ್ಯವಹಾರಗಳ ಸಚಿವಾಲಯವಿದೆ. ಸಚಿವಾಲಯದ ನೇತೃತ್ವವನ್ನು ಹೊನ್ ಬ್ರೂಕ್ ವ್ಯಾನ್ ವೆಲ್ಡೆನ್ ಅವರು ಕಾರ್ಯಸ್ಥಳದ ಸಂಬಂಧಗಳು ಮತ್ತು ಸುರಕ್ಷತಾ ಸಚಿವರೂ ಆಗಿದ್ದಾರೆ. ವ್ಯಾನ್ ವೆಲ್ಡೆನ್ ಒಬ್ಬ ಮಹಿಳೆ, ವೈರಲ್ ವೀಡಿಯೋ ಪುರುಷನನ್ನು ತೋರಿಸುತ್ತದೆ.

ನ್ಯೂಜಿಲೆಂಡ್ ಆಂತರಿಕ ವ್ಯವಹಾರಗಳ ಸಚಿವ ಬ್ರೂಕ್ ವ್ಯಾನ್ ವೆಲ್ಡೆನ್
(ಮೂಲ: ನ್ಯೂಜಿಲೆಂಡ್ ಸರ್ಕಾರದ ಅಧಿಕೃತ ವೆಬ್‌ಸೈಟ್)

ವೈರಲ್ ವೀಡಿಯೋದಲ್ಲಿರುವ ವ್ಯಕ್ತಿ ಯಾರು?

ವೈರಲ್ ವೀಡಿಯೋವನ್ನು ನಿಕಟವಾಗಿ ವಿಶ್ಲೇಷಿಸಿದ ನಂತರ, ನಾವು ಬಲಗೈ ಮೂಲೆಯಲ್ಲಿ ವಾಟರ್‌ಮಾರ್ಕ್ ಅನ್ನು ಗಮನಿಸಬಹುದು, ಅದರಲ್ಲಿ ಇನ್‌ಸ್ಟಾಗ್ರಾಮ್ ಖಾತೆ 'IBRENTGOBLE' ಎಂದು ಉಲ್ಲೇಖಿಸಲಾಗಿದೆ. ಇದು ಬ್ರೆಂಟ್ ಗೋಬಲ್ ಎಂಬ  ಇನ್‌ಸ್ಟಾಗ್ರಾಮ್ ಬಳಕೆದಾರರ ಹೆಸರು.

ಇನ್‌ಸ್ಟಾಗ್ರಾಮ್ ಖಾತೆಯು ನವೆಂಬರ್ ೨, ೨೦೨೩ ರಂದು ವೈರಲ್ ವೀಡಿಯೋವನ್ನು ಹಂಚಿಕೊಂಡಿದೆ. ವೀಡಿಯೋ ಶೀರ್ಷಿಕೆಯು ಹೀಗೆ ಹೇಳುತ್ತದೆ, "ಕಳೆದ ರಾತ್ರಿ ಅಲೆಕ್ಸ್ ಅವರ ನಾಮಕರಣ ಸಮಾರಂಭವಾಗಿತ್ತು. ಹಿಂದೂ ಧರ್ಮವು ನನ್ನ ಪಾಲನೆಯ ಭಾಗವಾಗಿಲ್ಲದಿದ್ದರೂ, ನನ್ನ ಹೆಂಡತಿ ಮತ್ತು ಅವರ ಮನೆಯವರಿಗೆ ಮುಖ್ಯವಾದ ಆಚರಣೆಗಳಲ್ಲಿ ಭಾಗವಹಿಸಲು ನಾನು ಇಷ್ಟಪಡುತ್ತೇನೆ. ನನ್ನ ಮಗನ ಜೀವನ ಸುಂದರವಾಗಿರಲಿ, ಅಗತ್ಯ ಸವಾಲುಗಳನ್ನು ಎದುರಿಸುತ್ತಾನೆ, ಉಗ್ರ ಉತ್ಸಾಹದಿಂದ ಹೋರಾಡುತ್ತಾನೆ ಮತ್ತು ತೆರೆದ ಹೃದಯದಿಂದ ಪ್ರೀತಿಸುತ್ತಾನೆ.

ಅವರ ಇನ್‌ಸ್ಟಾಗ್ರಾಮ್ ಬಯೋ ಪ್ರಕಾರ, ಗೋಬಲ್ ಅವರು ಯೋಗ ಶಿಕ್ಷಕರಾಗಿದ್ದು, 'ಪೀಸ್ ಆಫ್ ಬ್ಲೂ ಯೋಗ' ಎಂಬ ಯೋಗ ಕಾರ್ಯಾಗಾರವನ್ನು ನಡೆಸುತ್ತಿದ್ದಾರೆ. ಬಯೋ ವಿಭಾಗದಲ್ಲಿ, ಯೋಗದ ಕುರಿತು ಅವರ ಬ್ಲಾಗ್‌ಗೆ ಲಿಂಕ್ ಕೂಡ ಇದೆ. ಗೋಬಲ್ ಅವರ ಯೋಗ ತರಬೇತಿಗಾಗಿ ಶ್ಲಾಘಿಸಿದ ಅವರ ಶಿಷ್ಯರ ಪ್ರಶಂಸಾಪತ್ರಗಳು ಸಹ ಇದರಲ್ಲಿವೆ.

ಗೋಬಲ್ ಅಮೆರಿಕದಲ್ಲಿ ಬೆಳೆದಿದ್ದು,  ಈಗ ಭಾರತದ ಗೋವಾ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ, ಅಲ್ಲಿ ಅವರು ಜನರಿಗೆ ಯೋಗವನ್ನು ಕಲಿಸುತ್ತಾರೆ. ಬ್ರೆಂಟ್ ಭಾರತೀಯ ಟಿವಿ ನಟಿ ಆಶ್ಕಾ ಗೊರಾಡಿಯಾ ಅವರ ಪತಿ; ಅವರು ೨೦೧೭ ರಲ್ಲಿ ಆಶ್ಕಾ ಅವರನ್ನು ವಿವಾಹವಾದರು, ಮತ್ತು ಅಕ್ಟೋಬರ್ ೨೦೨೩ ರಲ್ಲಿ, ದಂಪತಿಗೆ ಗಂಡು ಮಗುವಾಯಿತು. ನಟ ಆಶ್ಕಾ ಗೊರಾಡಿಯಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗೋಬಲ್ ಅವರೊಂದಿಗಿನ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ತೀರ್ಪು

ನ್ಯೂಜಿಲೆಂಡ್‌ನ ಗೃಹ ಸಚಿವರು ಹಿಂದೂ ಧರ್ಮವನ್ನು ಸ್ವೀಕರಿಸುತ್ತಿರುವುದನ್ನು ವೈರಲ್ ವೀಡಿಯೋ ತೋರಿಸುತ್ತದೆ ಎಂಬ ಹೇಳಿಕೆ ತಪ್ಪು. ಕ್ಲಿಪ್ ಅಮೇರಿಕನ್ ಮೂಲದ ಯೋಗ ಶಿಕ್ಷಕ ಮತ್ತು ಭಾರತೀಯ ಟಿವಿ ನಟಿ ಆಶ್ಕಾ ಗೊರಾಡಿಯಾ ಅವರ ಪತಿ ಬ್ರೆಂಟ್ ಗೋಬಲ್ ಅವರನ್ನು ತೋರಿಸುತ್ತದೆ. ಅಲ್ಲದೆ, ನ್ಯೂಜಿಲೆಂಡ್ ಗೃಹ ಸಚಿವ ಎಂಬ ಹುದ್ದೆಯನ್ನು ಹೊಂದಿಲ್ಲ, ಮತ್ತು ಅದರ ಆಂತರಿಕ ಮಂತ್ರಿ (ಗೃಹ ಮಂತ್ರಿಯ ಸಮಾನ) ಒಬ್ಬ ಮಹಿಳೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.