ಇಲ್ಲ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ‘ಮುಂದಿನ ಜನ್ಮದಲ್ಲಿ ಮುಸಲ್ಮಾನರಾಗಬೇಕು’ ಎಂದು ಹೇಳಿಲ್ಲ

ಮೂಲಕ: ರಜಿನಿ ಕೆ.ಜಿ
ಮಾರ್ಚ್ 15 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ‘ಮುಂದಿನ ಜನ್ಮದಲ್ಲಿ ಮುಸಲ್ಮಾನರಾಗಬೇಕು’ ಎಂದು ಹೇಳಿಲ್ಲ

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮೂಲ ವೀಡಿಯೋದಲ್ಲಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಯನ್ನು ಉಲ್ಲೇಖಿಸುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ವೈರಲ್ ವೀಡಿಯೋವನ್ನು ಕ್ಲಿಪ್ ಮಾಡಲಾಗಿದೆ.

ಕ್ಲೈಮ್ ಐಡಿ b4434703

ಹೇಳಿಕೆ ಏನು?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋವೊಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮನಾಗಿ ಮರುಜನ್ಮ ಪಡೆಯುವ ಬಯಕೆಯನ್ನು ವ್ಯಕ್ತಪಡಿಸುತ್ತಿರುವುದನ್ನು ತೋರಿಸುತ್ತಿದೆ. "ಸಿದ್ದರಾಮಯ್ಯ ಅವರು ಮುಂದಿನ ಜನ್ಮದಲ್ಲಿ ಮುಸಲ್ಮಾನರಾಗಿ ಹುಟ್ಟಲು ಬಯಸುತ್ತಾರೆ" ಎಂಬ ಶೀರ್ಷಿಕೆಯೊಂದಿಗೆ ಮಾರ್ಚ್ ೧೨, ೨೦೨೪ ರಂದು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ತಪ್ಪು ಮಾಹಿತಿಯನ್ನು ಹರಡಲು ಹೆಸರುವಾಸಿಯಾದ ರಿಷಿ ಬಾಗ್ರೀ ಅವರು ಈ ಹೇಳಿಕೆಯನ್ನು ಗಮನಾರ್ಹವಾಗಿ ಹಂಚಿಕೊಂಡಿದ್ದಾರೆ.

೨೦ ಸೆಕೆಂಡ್‌ಗಳ ಕಾಲ ನಡೆಯುವ ಈ ವೀಡಿಯೋ ತುಣುಕಿನಲ್ಲಿ ಸಿದ್ದರಾಮಯ್ಯ ಅವರು ಕನ್ನಡದಲ್ಲಿ ಮಾತನಾಡುತ್ತಿದ್ದು, “ಇನ್ನೊಂದು ಜನ್ಮವಿದ್ದರೆ ಮುಂದಿನ ಜನ್ಮದಲ್ಲಿ ನಾನು ಮುಸಲ್ಮಾನನಾಗಿ ಹುಟ್ಟಲು ಬಯಸುತ್ತೇನೆ” ಎಂದು ಅನುವಾದಿಸಿದ್ದಾರೆ. ವೀಡಿಯೋ ಆರಂಭದಲ್ಲಿ ೧೯,೨೦೦ ವೀಕ್ಷಣೆಗಳನ್ನು ಗಳಿಸಿದರೂ, ಅದನ್ನು ನಂತರ ತೆಗೆದುಹಾಕಲಾಯಿತು; ಆದರೆ, ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಪ್ರವೇಶಿಸಬಹುದಾಗಿದೆ. ಇತರ ಬಳಕೆದಾರರೂ ಈ ವೀಡಿಯೋವನ್ನು ಕನ್ನಡದಲ್ಲಿ ಹಂಚಿಕೊಂಡಿದ್ದು, ಸಿದ್ದರಾಮಯ್ಯನವರ ಹೇಳಿಕೆ ಲೋಕಸಭೆ ಚುನಾವಣೆಗೆ ಮುನ್ನ ಮುಸ್ಲಿಂ ಮತಗಳನ್ನು ಸೆಳೆಯುವ ಪ್ರಯತ್ನವಾಗಿದೆ ಎಂದು ಊಹಿಸಿದ್ದಾರೆ. ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.


ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರು ಪ್ರಾದೇಶಿಕ ಜನತಾ ದಳ (ಜಾತ್ಯತೀತ) (ಜೆಡಿ (ಎಸ್)) ಜೊತೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮೈತ್ರಿಯನ್ನು ಟೀಕಿಸಲು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೇಳಿಕೆಯನ್ನು ಉಲ್ಲೇಖಿಸಿದರು.

ನಾವು ಕಂಡು ಹಿಡಿದದ್ದು ಏನು?

ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮಾರ್ಚ್ ೧೦, ೨೦೨೪ ರಂದು ಮಂಡ್ಯ ಜಿಲ್ಲೆಯ ಸಾರ್ವಜನಿಕ ಸಮಾರಂಭದಲ್ಲಿ ಸಿದ್ದರಾಮಯ್ಯನವರು ಮಾಡಿದ ಮೂಲ, ದೀರ್ಘವಾದ ಭಾಷಣದ ವೀಡಿಯೋವನ್ನು ಕಂಡುಕೊಂಡೆವು. ಈ ಪೂರ್ಣ ಆವೃತ್ತಿಯನ್ನು ಕನ್ನಡ ಟಿವಿ ಚಾನೆಲ್ ಪವರ್ ಟಿವಿ ನ್ಯೂಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಿದೆ. 

ಮುಂಬರುವ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ಮೈತ್ರಿ ಮಾಡಿಕೊಂಡ ಜನತಾ ದಳ (ಜಾತ್ಯತೀತ) (ಜೆಡಿ ಎಸ್) ಅನ್ನು ಸಿದ್ದರಾಮಯ್ಯ ಟೀಕಿಸುತ್ತಿರುವುದನ್ನು ಮೂಲ ವೀಡಿಯೋ ಒಳಗೊಂಡಿದೆ. ಕರ್ನಾಟಕದಲ್ಲಿ ಜೆಡಿ(ಎಸ್) ಸರ್ಕಾರದ ಅವಧಿಯಲ್ಲಿ ನಡೆದ ಘಟನೆಗಳನ್ನು ಅವರು ಉಲ್ಲೇಖಿಸಿದ್ದಾರೆ. ೨೦೧೯ ರಲ್ಲಿ ಬಿಜೆಪಿ ಈ ಸರ್ಕಾರವನ್ನು ಪದಚ್ಯುತಗೊಳಿಸುವವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಹಿಂದೆ ಮೈತ್ರಿ ಮಾಡಿಕೊಂಡಿದ್ದವು ಮತ್ತು ೨೦೧೮ ರಲ್ಲಿ ಕರ್ನಾಟಕ ಸರ್ಕಾರದ ಭಾಗವಾಗಿದ್ದವು ಎಂಬುದನ್ನು ಗಮನಿಸುವುದು ಮುಖ್ಯ.

ವೀಡಿಯೋದಲ್ಲಿ ೧:೧೬:೨೦ ಸೆಕೆಂಡ್‌ನಿಂದ ೧:೧೬:೫೭ ರವರೆಗೆ , ಸಿದ್ದರಾಮಯ್ಯ ಅವರು ಹೇಳುವುದನ್ನು ನಾವು ಕೇಳಬಹುದು, “... ಎರಡೂ ಪಕ್ಷಗಳು ಒಟ್ಟಿಗೆ ಸೇರಿಕೊಂಡಿವೆ. ನಾನು ಎಂದಿಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದ ದೇವೇಗೌಡರು; ಇನ್ನೊಂದು ಜನ್ಮವಿದ್ದರೆ ಮುಂದಿನ ಜನ್ಮದಲ್ಲಿ ನಾನು ಮುಸಲ್ಮಾನನಾಗಿ ಹುಟ್ಟಬೇಕು ಏಕೆಂದರೆ ಬಿಜೆಪಿ ಕೋಮುವಾದಿ ಪಕ್ಷ. ನೀವು ಜೆಡಿಎಸ್ ಬಿಜೆಪಿಯನ್ನು ಎಂದಿಗೂ  ಬೆಂಬಲಿಸಲಿಲ್ಲ."

ನ್ಯೂಸ್ ೧೮ ಕನ್ನಡ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಷ್ಟ್ ಮಾಡಿದ ಸಾರ್ವಜನಿಕ ಸಭೆಯ ಸಂಪೂರ್ಣ ವೀಡಿಯೋದಲ್ಲಿ ವೈರಲ್ ಕ್ಲಿಪ್ ಕಾಣಿಸಿಕೊಳ್ಳುತ್ತದೆ, ಇದನ್ನು ೩:೦೧:೨೦ ರಲ್ಲಿ ನೋಡಬಹುದು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ ಫೆಬ್ರವರಿ ೨೦೨೪ ರಲ್ಲಿ ಎಚ್‌ಡಿ ದೇವೇಗೌಡರ ಹೇಳಿಕೆಯನ್ನು ಸಿದ್ದರಾಮಯ್ಯ ಅವರು ಉಲ್ಲೇಖಿಸಿದ್ದರು. ದೇವೇಗೌಡರ ನಿಖರವಾದ ಮಾತುಗಳು ಪತ್ತೆಯಾಗದಿದ್ದರೂ, ಜನವರಿ ೧೯, ೨೦೨೩ ರಂದು ನ್ಯೂಸ್ ೧೮ ಕನ್ನಡ ಅಪ್‌ಲೋಡ್ ಮಾಡಿದ ವೀಡಿಯೋದಲ್ಲಿ ಎಚ್‌ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಹೇಳಿಕೆಯನ್ನು ಉಲ್ಲೇಖಿಸಿರುವುದನ್ನು ಬಹಿರಂಗಪಡಿಸುತ್ತದೆ. 

ಜನವರಿ ೨೦೨೩ ರಲ್ಲಿ, ಕೋಲಾರದಲ್ಲಿ ನಡೆದ ಸಾಮೂಹಿಕ ವಿವಾಹದ ಸಂದರ್ಭದಲ್ಲಿ, ಪ್ರಜ್ವಲ್ ತನ್ನ ಅಜ್ಜನ ಹೇಳಿಕೆಯನ್ನು ಉಲ್ಲೇಖಿಸಿದರು. ೧:೦೫ ನಿಮಿಷದಲ್ಲಿ, ಪ್ರಜ್ವಲ್ ಅವರು ದೇವೇಗೌಡರು ಮುಸ್ಲಿಂ ಸಮುದಾಯದಲ್ಲಿ ಮರುಹುಟ್ಟು ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳುವುದು ಕೇಳಿಬರುತ್ತದೆ.

ತೀರ್ಪು

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್‌ಡಿ ದೇವೇಗೌಡರ ಹಿಂದಿನ ಹೇಳಿಕೆಯನ್ನು ಉಲ್ಲೇಖಿ ಮಾತನಾಡಿದ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ತಪ್ಪುದಾರಿಗೆಳೆಯುವ ನಿರೂಪಣೆಯ ಜೊತೆಗೆ ಹಂಚಿಕೊಳ್ಳಲಾಗಿದೆ. ಸಿದ್ದರಾಮಯ್ಯ ಅವರು 'ಮುಸ್ಲಿಮನಾಗಿ ಮರುಜನ್ಮ ಪಡೆಯುವ' ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಎಂದು ತಪ್ಪಾಗಿ ಹೇಳಲಾಗಿದೆ. ಆದರಿಂದ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.