ಮತದಾನದ ಪಟ್ಟಿಯಲ್ಲಿ ಭಾರತೀಯರು ತಮ್ಮ ಹೆಸರು ಇಲ್ಲದಿದ್ದರೂ ಸಹ ಮತವನ್ನು ಚಲಾಯಿಸಬಹುದು ಎನ್ನುವ ವೈರಲ್ ವೀಡಿಯೋ ತಪ್ಪಾಗಿ ಹೇಳುತ್ತದೆ

ಮೂಲಕ: ರಾಜೇಶ್ವರಿ ಪರಸ
ಏಪ್ರಿಲ್ 12 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮತದಾನದ ಪಟ್ಟಿಯಲ್ಲಿ ಭಾರತೀಯರು ತಮ್ಮ ಹೆಸರು ಇಲ್ಲದಿದ್ದರೂ ಸಹ ಮತವನ್ನು ಚಲಾಯಿಸಬಹುದು ಎನ್ನುವ ವೈರಲ್ ವೀಡಿಯೋ ತಪ್ಪಾಗಿ ಹೇಳುತ್ತದೆ

ಸಾಮಾಜಿಕ ಮಾದ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ವಾಟ್ಸಾಪ್‌/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ.

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಭಾರತೀಯ ನಾಗರಿಕರು ಮತದಾರರಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಮತ ಚಲಾಯಿಸಲು ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕು.

ಕ್ಲೈಮ್ ಐಡಿ e1242371

ಹೇಳಿಕೆ ಏನು?
ಭಾರತದಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಕುರಿತು ಸುಮಾರು ಹೇಳಿಕೆಗಳೊಂದಿಗಿನ ವೀಡಿಯೋವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ ಮತ್ತು ವಾಟ್ಸಾಪ್‌ನಲ್ಲಿಯೂ ವೈರಲ್ ಆಗಿದೆ. ಭಾರತದ ಚುನಾವಣಾ ಆಯೋಗದ ಪ್ರಕಾರ ಏಪ್ರಿಲ್ ೧೯ ರಿಂದ ಜೂನ್ ೧, ೨೦೨೪ ರವರೆಗೆ ಭಾರತದಲ್ಲಿ ಸಂಸತ್ತಿನ ಚುನಾವಣೆಗಳು ಏಳು ಹಂತಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ, ೧:೩೨  ಸೆಕೆಂಡ್‌ಗಳ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ, ಅಲ್ಲಿ ಮಹಿಳೆಯೊಬ್ಬರು ತಾನು "ಮತದಾರರಿಗೆ ಸಂಬಂಧಿಸಿದಂತೆ ಬಹಳ ಮುಖ್ಯವಾದ ಮಾಹಿತಿಯನ್ನು" ಹಂಚಿಕೊಳ್ಳುತ್ತಿದ್ದೇನೆ ಮತ್ತು ಭಾರತದಲ್ಲಿನ ಮತದಾರರಿಗೆ ಕೆಲವು 'ನಿಬಂಧನೆಗಳನ್ನು' ಅದು ಪಟ್ಟಿಮಾಡುತ್ತದೆ. ಅಂತಹ ಒಂದು ಪೋಷ್ಟ್ ನ ಆರ್ಕೈವ್ ಲಿಂಕ್ ಅನ್ನು ಇಲ್ಲಿ ನೋಡಬಹುದು. 

 ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳು.
(ಮೂಲ: ಇನ್‌ಸ್ಟಾಗ್ರಾಮ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವೈರಲ್ ವೀಡಿಯೋದಲ್ಲಿ, ಮಹಿಳೆ ಈ ನಾಲ್ಕು ಹೇಳಿಕೆಗಳನ್ನು ಮಾಡುತ್ತಾರೆ:

೧. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದಿದ್ದರೆ, ಅವರು ತಮ್ಮ ಆಧಾರ್ ಕಾರ್ಡ್ ಅನ್ನು ಮತಗಟ್ಟೆಯಲ್ಲಿ ಸೆಕ್ಷನ್ 49A ಅಡಿಯಲ್ಲಿ ತೋರಿಸಬಹುದು ಮತ್ತು "ಚುನೌತಿ" (ಚಾಲೆಂಜ್ಡ್) ಮತ" ಕೇಳಬಹುದು.

೨. ಯಾರಾದರೂ ಈಗಾಗಲೇ ಯಾರೊಬ್ಬರ ಹೆಸರಿನಲ್ಲಿ ಮತ ಚಲಾಯಿಸಿದ್ದರೆ, ಅವರ ಅವಕಾಶವನ್ನು ಕಳೆದುಕೊಂಡವರು "ಟೆಂಡರ್" ಮತವನ್ನು ಕೇಳಬಹುದು.

೩. ಯಾವುದೇ ಮತಗಟ್ಟೆಯಲ್ಲಿ ಶೇ.೧೪ಕ್ಕಿಂತ ಹೆಚ್ಚು "ಟೆಂಡರ್" ಮತಗಳು ದಾಖಲಾಗಿದ್ದರೆ, ಆ ಮತಗಟ್ಟೆಯಲ್ಲಿ ಮತ್ತೊಮ್ಮೆ ಮತದಾನ ನಡೆಸಲಾಗುವುದು.

೪. ಮತದಾರರ ಚೀಟಿ ಹೊಂದಿಲ್ಲದಿದ್ದರೆ ಅಥವಾ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನಮೂದಿಸದಿದ್ದರೆ, ಅವರು ಎರಡು ಭಾವಚಿತ್ರಗಳು ಅಥವಾ ಯಾವುದೇ ಫೋಟೋ-ಐಡಿ ಪುರಾವೆಗಳೊಂದಿಗೆ ಮತದಾನದ ದಿನದಂದು ಮತಗಟ್ಟೆಗೆ ಹೋಗಿ ಫಾರಂ ನಂಬರ್ ೮ ಅನ್ನು ಭರ್ತಿ ಮಾಡಬಹುದು, ಅದು ಮತಗಟ್ಟೆಯಲ್ಲಿ ದೊರೆಯುತ್ತದೆ.

ಆದರೆ ವೀಡಿಯೋದಲ್ಲಿ ಎರಡನೇ ಹೇಳಿಕೆ ಮಾತ್ರ ನಿಖರವಾಗಿದೆ ಮತ್ತು ಉಳಿದವುಗಳು ತಪ್ಪಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಸತ್ಯ ಏನು?
ವೀಡಿಯೋದಲ್ಲಿ ಮಾಡಿದ ಪ್ರತಿ ಹೇಳಿಕೆಯ ಸತ್ಯಾಸತ್ಯತೆಯನ್ನು ನಿರ್ಧರಿಸಲು ಲಾಜಿಕಲಿ ಫ್ಯಾಕ್ಟ್ಸ್ ಭಾರತೀಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿತು ಮತ್ತು  ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿರುವ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿದೆ.

ಹೇಳಿಕೆ ೧
ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ನಾಗರಿಕರು ತಮ್ಮ ಆಧಾರ್ ಕಾರ್ಡ್ ಅನ್ನು ಮತಗಟ್ಟೆಯಲ್ಲಿ ತೋರಿಸಿ ಸೆಕ್ಷನ್ 49A ಅಡಿಯಲ್ಲಿ 'ಚುನೌತಿ (ಚಾಲೆಂಜ್ಡ್)' ಮತ ಕೇಳಬಹುದು ಎಂಬ ಹೇಳಿಕೆ ತಪ್ಪು. ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ, ಮತದಾನ ಮಾಡಲು ನಾಗರಿಕರ ಹೆಸರು ಮತದಾನ ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕು.

ತೆಲಂಗಾಣದ ಜಾಯಿಂಟ್ ಮುಖ್ಯ ಚುನಾವಣಾಧಿಕಾರಿ ಸರ್ಫರಾಜ್ ಅಹ್ಮದ್ ಅವರು, "ಮತದಾನ ಪಟ್ಟಿಯಲ್ಲಿ ಮತದಾರರ ಹೆಸರು ತಪ್ಪಿದಲ್ಲಿ ಮತ ಚಲಾಯಿಸಲು ಯಾವುದೇ ಅವಕಾಶವಿಲ್ಲ, ಆದರೆ, ಮತದಾರರ ಕಾರ್ಡ್ ಅಥವಾ ಮತದಾರರ ಫೋಟೋ ಗುರುತಿನ ಚೀಟಿ (ಇಪಿಐಸಿ) ಕಾಣೆಯಾಗಿದ್ದರೆ ಮತದಾನ ಮಾಡಬಹುದು. , ಆದರೆ ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರಬೇಕು. ಈ ಸಂದರ್ಭಗಳಲ್ಲಿ, ಅವರು ಪಟ್ಟಿ ಮಾಡಲಾದ ೧೪ ಫೋಟೋ ಗುರುತಿನ ಚೀಟಿಗಳಲ್ಲಿ ಯಾವುದನ್ನಾದರೂ ತೋರಿಸಬಹುದು ಮತ್ತು ಮತ ಚಲಾಯಿಸಬಹುದು. ಪ್ರತ್ಯೇಕ ಭಾವಚಿತ್ರಗಳನ್ನು ತೋರಿಸುವ ಅಗತ್ಯವಿಲ್ಲ. ಆದರೆ, ಇದು ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದಾಗ ಮಾತ್ರ ."

'ಚುನೌತಿ' ಮತ ಅಥವಾ "ಚಾಲೆಂಜ್ಡ್" ಮತವನ್ನು ಚಲಾಯಿಸುವ ಪ್ರಕರಣವು, ಮತಗಟ್ಟೆ ಅಧಿಕಾರಿಗೆ ಮತದಾರರ ಗುರುತನ್ನು ಮನವರಿಕೆ ಮಾಡದಿದ್ದಾಗ ಉದ್ಭವಿಸುತ್ತದೆ ಮತ್ತು ಚುನಾವಣಾ ನೀತಿ ನಿಯಮಗಳು, ೧೯೬೧ ನ ಪಾಯಿಂಟ್ ೩೬ರ ಅಡಿಯಲ್ಲಿ ಹೇಳಿದಂತೆ ಅದನ್ನು ಸಾಬೀತುಪಡಿಸಲು ಅವರಿಗೆ 'ಸವಾಲು' ಹಾಕುತ್ತದೆ.

ಚುನಾವಣಾ ಆಯೋಗದ ಹ್ಯಾಂಡ್‌ಬುಕ್ ಫಾರ್ ರಿಟರ್ನಿಂಗ್ ಆಫೀಸರ್ಸ್ ೨೦೨೩ರ ಪ್ರಕಾರ, "ಪೋಲಿಂಗ್ ಏಜೆಂಟ್‌ಗಳು ಅಂತಹ ಪ್ರತಿ ಸವಾಲಿಗೆ ರೂ ೨ ಮೊತ್ತವನ್ನು ನಗದು ರೂಪದಲ್ಲಿ ಠೇವಣಿ ಮಾಡುವ ಮೂಲಕ ನಿರ್ದಿಷ್ಟ ಮತದಾರರೆಂದು ಹೇಳಿಕೊಳ್ಳುವ ವ್ಯಕ್ತಿಯ ಗುರುತನ್ನು ಪ್ರಶ್ನಿಸಬಹುದು."

ಇದಲ್ಲದೆ, ೧೯೬೧ ರ ಚುನಾವಣಾ ನಿಯಮಗಳ ನಡವಳಿಕೆಯ ಸೆಕ್ಷನ್ 49A, ಎಲೆಕ್ಟ್ರಾನಿಕ್ ಮತಯಂತ್ರಗಳ ವಿನ್ಯಾಸವನ್ನು ಚರ್ಚಿಸುತ್ತದೆ ಮತ್ತು "ಚಾಲೆಂಜ್ಡ್" ಮತಗಳಿಗೆ ಸಂಬಂಧಿಸಿಲ್ಲ.

ಹೇಳಿಕೆ ೨
ನಿಮ್ಮ ಹೆಸರಿನಲ್ಲಿ ಯಾರಾದರೂ ಈಗಾಗಲೇ ಮತ ಹಾಕಿದ್ದರೆ ನೀವು "ಟೆಂಡರ್" ಮತವನ್ನು ಕೇಳಬಹುದು.

ಈ ಹೇಳಿಕೆ ನಿಜವಾಗಿದೆ.

ಟೆಂಡರ್ ಮತ ಚಲಾಯಿಸುವ ವಿಧಾನವನ್ನು ವಿವರಿಸಿದ ಅಹ್ಮದ್, "ನಿಮ್ಮ ಪರವಾಗಿ ಯಾರಾದರೂ ಮತ ಚಲಾಯಿಸಿದ್ದರೆ, ನೀವು ಯಾವಾಗಲೂ ಟೆಂಡರ್ ಮತವನ್ನು ಕೇಳಬಹುದು, ಈ ಬಗ್ಗೆ ಫಾರ್ಮ್ ಅನ್ನು ಭರ್ತಿ ಮಾಡಬೇಕು. ನಂತರ, ಅವರಿಗೆ ಬ್ಯಾಲೆಟ್ ಪೇಪರ್ ನೀಡಲಾಗುವುದು. ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಲು, ಅಡ್ಡ ಗುರುತು ಬಳಸಿ, ಅದನ್ನು ಮಡಚಿ ಅಧ್ಯಕ್ಷರಿಗೆ ಹಸ್ತಾಂತರಿಸಬೇಕು. ಅವರು ಇಲ್ಲಿ ಇವಿಎಂಗಳನ್ನು (ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು) ಬಳಸಿ ಮತ ಚಲಾಯಿಸುವುದಿಲ್ಲ."

"ಟೆಂಡರ್" ಮತಕ್ಕೆ ಸಂಬಂಧಿಸಿದಂತೆ, ಚುನಾವಣಾ ಆಯೋಗದ ಕೈಪಿಡಿಯು ಹೀಗೆ ಉಲ್ಲೇಖಿಸುತ್ತದೆ: "ಒಬ್ಬ ವ್ಯಕ್ತಿಯು ತನ್ನನ್ನು ಮತದಾನ ಕೇಂದ್ರದಲ್ಲಿ ಹಾಜರುಪಡಿಸಿದಾಗ, ಇನ್ನೊಬ್ಬ ವ್ಯಕ್ತಿಯು ಈಗಾಗಲೇ ಅವರ ಮತದಾರರಾಗಿ ಮತ ಚಲಾಯಿಸಿದ್ದರೆ, ಅವರು ನಿರ್ದಿಷ್ಟ ಮತದಾರರಾಗಲು ಪ್ರತಿನಿಧಿಸುವ ಮತವನ್ನು ಬಯಸಿದರೆ, ಪ್ರೆಸಿಡಿಂಗ್ ಆಫೀಸರ್ ಸಂಬಂಧಪಟ್ಟ ಮತದಾರರ ಗುರುತಿನ ಬಗ್ಗೆ ಸ್ವತಃ ವಿಚಾರಣೆಯನ್ನು ಮಾಡಿ, ಆಫೀಸರ್ ಕೇಳುವ ಮತದಾರರ ಗುರುತಿನ ಬಗ್ಗೆ ತೃಪ್ತಿಕರವಾಗಿ ಉತ್ತರಿಸಿದರೆ ಅವನು/ಅವಳು ಟೆಂಡರ್ ಮಾಡಿದ ಮತಪತ್ರದ ಮೂಲಕ ಮತ ಚಲಾಯಿಸಲು ಸಂಬಂಧಪಟ್ಟ ಮತದಾರರಿಗೆ ಅವಕಾಶ ನೀಡಬೇಕು, ಆದರೆ ಮತ ಯಂತ್ರದ ಮೂಲಕ ಅಲ್ಲ. (sic)"

ಹೇಳಿಕೆ ೩
ನಿರ್ದಿಷ್ಟ ಬೂತ್‌ನಲ್ಲಿ ಶೇಕಡಾ ೧೪ ಕ್ಕಿಂತ ಹೆಚ್ಚು "ಟೆಂಡರ್" ಮತಗಳು ದಾಖಲಾಗಿದ್ದರೆ ಅಲ್ಲಿ ಮರುಮತದಾನವನ್ನು ಘೋಷಿಸಲಾಗುವುದು ಎಂಬ ಹೇಳಿಕೆ ತಪ್ಪು. ಇಸಿಐ ಅಧಿಕಾರಿಗಳ ಪ್ರಕಾರ, ಮತಗಟ್ಟೆಯಲ್ಲಿ ಮರು ಮತದಾನ ಮಾಡಲು "ಟೆಂಡರ್" ಮತಗಳ ಶೇಕಡದ 'ಬೆಂಚ್ಮಾರ್ಕಿಂಗ್' ಇಲ್ಲ.

"ಟೆಂಡರ್ ಮಾಡಿದ ಮತಗಳ ಸಂಖ್ಯೆ ಹೆಚ್ಚಾದಾಗ, ಚುನಾವಣಾ ವೀಕ್ಷಕರು ಅದನ್ನು ವಿಶೇಷ ಸಂದರ್ಭಗಳಲ್ಲಿ ಮರುಮತದಾನಕ್ಕೆ ಶಿಫಾರಸು ಮಾಡಲು ಒಂದು ಆಧಾರವಾಗಿ ಪರಿಗಣಿಸಬಹುದು. ಈ ಸಂಗತಿಗಳು ಸಾಮಾನ್ಯವಾಗಿ ತುಂಬಾ ಕಡಿಮೆಯಾಗಿದೆ. ನನ್ನ ಅವಲೋಕನದ ಪ್ರಕಾರ, ಹೆಚ್ಚಿನ ಸಂದರ್ಭಗಳಲ್ಲಿ, ಅನೇಕ ಕ್ಷೇತ್ರಗಳಲ್ಲಿ ಟೆಂಡರ್ ಮಾಡಲಾದ ಮತಗಳು ಸಾಮಾನ್ಯವಾಗಿ ಶೇಕಡಾ ಒಂದಕ್ಕಿಂತ ಕಡಿಮೆಯಿರುತ್ತವೆ," ಎಂದು ಅಹ್ಮದ್ ಹೇಳಿದರು.

ಹೇಳಿಕೆ ೪
ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ನಾಗರಿಕರು ಎರಡು ಭಾವಚಿತ್ರ ಅಥವಾ ಫೋಟೋ ಗುರುತಿನ ಚೀಟಿ ಸಲ್ಲಿಸಿ ಮತಗಟ್ಟೆಯಲ್ಲಿ ನಮೂನೆ ಸಂಖ್ಯೆ ೮ ಅನ್ನು ಭರ್ತಿ ಮಾಡಿ ಮತ ಚಲಾಯಿಸಬಹುದು ಎಂಬ ಹೇಳಿಕೆಯೂ ತಪ್ಪು.

ಮೊದಲೇ ಹೇಳಿದಂತೆ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದಿದ್ದಲ್ಲಿ ಮತದಾನ ಮಾಡಲು ಅವಕಾಶವಿಲ್ಲ. ನಮೂನೆ ೮ ಹೊಸ ಹೆಸರುಗಳ ಸೇರ್ಪಡೆಗೆ ಸಂಬಂಧಿಸಿಲ್ಲ ಆದರೆ ಹೆಸರುಗಳನ್ನು ತಿದ್ದುಪಡಿ ಮಾಡುವುದು, ಮತದಾರರನ್ನು ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಬದಲಾಯಿಸುವುದು ಮತ್ತು ಚುನಾವಣಾ ಪಟ್ಟಿಯಲ್ಲಿ ವಿಕಲಚೇತನರ ವರ್ಗವನ್ನು ನವೀಕರಿಸುವುದನ್ನು ಮಾಡಬಹುದು. ಫಾರ್ಮ್ ೮ ಅನ್ನು ಸಾಮಾನ್ಯವಾಗಿ ಈ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂದು ಜಾಯಿಂಟ್ ಸಿಇಒ ಅಹ್ಮದ್ ಲಾಜಿಕಲಿ ಫ್ಯಾಕ್ಟ್ಸ್ ಗೆ ತಿಳಿಸಿದರು.

ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಫಾರ್ಮ್ ೮ ರ ಸ್ಕ್ರೀನ್‌ಶಾಟ್ ಲಭ್ಯವಿದೆ.


ತೀರ್ಪು
ಭಾರತದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಜನರು ಇನ್ನೂ ಸೂಕ್ತವಾದ ಪರಿಹಾರ ಕ್ರಮಗಳನ್ನು ಅನುಸರಿಸುವ ಮೂಲಕ ತಮ್ಮ ಮತವನ್ನು ಚಲಾಯಿಸಬಹುದು ಎಂದು ವೈರಲ್ ವೀಡಿಯೋದಲ್ಲಿ ಮಾಡಿದ ಹೇಳಿಕೆಗಳು ತಪ್ಪು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸದಿದ್ದರೆ ಭಾರತೀಯ ಚುನಾವಣೆಗಳಲ್ಲಿ ಮತ ಚಲಾಯಿಸಲು ಯಾವುದೇ ಅವಕಾಶವಿಲ್ಲ. ಕ್ಲಿಪ್‌ನಲ್ಲಿ ಮಾಡಲಾದ ಹಲವಾರು ಇತರ ಹೇಳಿಕೆಗಳು, ಒಂದನ್ನು ಹೊರತುಪಡಿಸಿ,  ಎಲ್ಲಾ ತಪ್ಪಾಗಿವೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.  

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.