ಇಲ್ಲ, ಎಲ್.ಕೆ. ಅಡ್ವಾಣಿ ಅವರು ರಾಹುಲ್ ಗಾಂಧಿಯವರನ್ನು ಶ್ಲಾಘಿಸಿಲ್ಲ

ಮೂಲಕ: ರಾಹುಲ್ ಅಧಿಕಾರಿ
ಮೇ 13 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಎಲ್.ಕೆ. ಅಡ್ವಾಣಿ ಅವರು ರಾಹುಲ್ ಗಾಂಧಿಯವರನ್ನು ಶ್ಲಾಘಿಸಿಲ್ಲ

ಎಲ್‌.ಕೆ. ಅಡ್ವಾಣಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಷ್ಟ್‌ಗಳು ಹೇಳುತ್ತವೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಲಾಜಿಕಲಿ ಫ್ಯಾಕ್ಟ್ಸ್ ನೊಂದಿಗೆ ಮಾತನಾಡಿದ ಎಲ್.ಕೆ.ಅಡ್ವಾಣಿ ಅವರ ಆಪ್ತ ಸಹಾಯಕ ದೀಪಕ್ ಚೋಪ್ರಾ ಅವರು ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ ಮತ್ತು ಅದನ್ನು "ಫೇಕ್" ಎಂದು ಹೇಳಿದ್ದಾರೆ.

ಕ್ಲೈಮ್ ಐಡಿ 737bb441

ಹೇಳಿಕೆ ಏನು?

ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು "ಭಾರತದ ರಾಜಕೀಯದ ಭವಿಷ್ಯ" ಎಂದು ಕರೆದಿದ್ದಾರೆ ಎಂದು  ಸಾಮಾಜಿಕ ಮಾಧ್ಯಮದಲ್ಲಿ ಪೋಷ್ಟ್ ಗಳು ಹೇಳುತ್ತವೆ. 

ಅರುಣಾಚಲ ಕಾಂಗ್ರೆಸ್‌ನ ಅಧಿಕೃತ ಖಾತೆ ಸೇರಿದಂತೆ ಹಲವಾರು ಬಳಕೆದಾರರು ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಬರೆದಿದ್ದಾರೆ, "ರಾಹುಲ್ ಗಾಂಧಿ ಭಾರತೀಯ ರಾಜಕೀಯದ ಹೀರೋ: ಲಾಲ್ ಕೃಷ್ಣ ಅಡ್ವಾಣಿ (ಎಲ್‌ಕೆ ಅಡ್ವಾಣಿ) (sic)." ಪೋಷ್ಟ್ ಜೊತೆಗೆ ಒಂದು avadhboomi.com ಲಿಂಕ್ ಇದೆ. ಅಂತಹ ಪೋಷ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಹೇಳಿಕೆ ತಪ್ಪು ಎಂದು ನಾವು ಕಂಡುಕೊಂಡಿದ್ದೇವೆ. ಸಂಶಯಾಸ್ಪದ ಸೈಟ್‌ನಿಂದ ಪ್ರಕಟವಾದ ಸುದ್ದಿ ಲೇಖನದಿಂದ ಈ ಹೇಳಿಕೆ ಹುಟ್ಟಿಕೊಂಡಿದೆ ಮತ್ತು ಅಡ್ವಾಣಿ ಅಂತಹ ಯಾವುದೇ ಕಾಮೆಂಟ್ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ನಾವು ಸತ್ಯವನ್ನು ಹೇಗೆ ಕಂಡುಕೊಂಡೆವು?

ವೈರಲ್ ಪೋಷ್ಟ್‌ನ ಶೀರ್ಷಿಕೆಯು ಹೇಳಿಕೆಯನ್ನು avadhbhoomi.com ಹೆಸರಿನ ಪೋರ್ಟಲ್‌ ನಿಂದ ಬಂದಿರುವುದಾಗಿ ತೋರಿಸಿದೆ. ನಾವು ಸೈಟ್ ಅನ್ನು ನೋಡಿದ್ದೇವೆ ಮತ್ತು ಹಿಂದಿಯಲ್ಲಿ "ರಾಹುಲ್ ಗಾಂಧಿ ಭಾರತೀಯ ರಾಜಕೀಯದ ನಾಯಕ: ಎಲ್ ಕೆ ಅಡ್ವಾಣಿ" ಎಂಬ ಶೀರ್ಷಿಕೆಯ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. ಆರಂಭದಲ್ಲಿ ಮೇ ೮, ೨೦೨೪ ರಂದು ಪ್ರಕಟಿಸಲಾದ ಲೇಖನವನ್ನು ಈಗ ತೆಗೆದು ಹಾಕಲಾಗಿದೆ, ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. 

ಅಡ್ವಾಣಿ ಹೊಗಳಿ, ರಾಹುಲ್ ಗಾಂಧಿಯಂತಹ ಪ್ರಭಾವಿ ನಾಯಕನನ್ನು ನೋಡಿಲ್ಲ ಎಂದು ಹೇಳಿದ್ದಾರೆ ಎಂದು ವರದಿ ಹೇಳಿದೆ. ಕಾಮೆಂಟ್ ಅನ್ನು ಎಲ್ಲಿ ಮತ್ತು ಯಾವಾಗ ಮಾಡಲಾಗಿದೆ ಎಂಬುದರ ಕುರಿತು ಲೇಖನವು ವಿವರಗಳನ್ನು ಉಲ್ಲೇಖಿಸುವುದಿಲ್ಲ. ಇದಲ್ಲದೆ, ವೆಬ್‌ಸೈಟ್‌ನಲ್ಲಿ ಹಕ್ಕು ನಿರಾಕರಣೆ (ಇಲ್ಲಿ ಆರ್ಕೈವ್) ಹೀಗೆ ಹೇಳುತ್ತದೆ, "avadhbhumi.com ಈ ಮಾಹಿತಿಯ ಸಂಪೂರ್ಣತೆ, ವಿಶ್ವಾಸಾರ್ಹತೆ ಮತ್ತು ನಿಖರತೆಯ ಬಗ್ಗೆ ಯಾವುದೇ ವಾರಂಟಿಗಳನ್ನು ನೀಡುವುದಿಲ್ಲ."

ಮುಂದೆ, ವೆಬ್‌ಸೈಟ್‌ಗೆ ಲಿಂಕ್ ಮಾಡಲಾದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಮಾರ್ಚ್ ೩, ೨೦೨೪ ರ ನಂತರ ಫೇಸ್‌ಬುಕ್ ಪುಟ (ಇಲ್ಲಿ ಆರ್ಕೈವ್) ಯಾವುದೇ ನವೀಕರಣಗಳನ್ನು ಹೊಂದಿಲ್ಲ ಎಂದು ಕಂಡುಕೊಂಡಿದ್ದೇವೆ. ಅವರ ಇನ್ಸ್ಟಾಗ್ರಾಮ್ ಖಾತೆ (ಇಲ್ಲಿ ಆರ್ಕೈವ್ ಮಾಡಿ) ಸಂಬಂಧವಿಲ್ಲದ ಮತ್ತು ತೋರಿಕೆಯ ವೈಯಕ್ತಿಕ ವೀಡಿಯೋಗಳನ್ನು ಹೊಷ್ಟ್ ಮಾಡುತ್ತದೆ, ಆದರೆ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಯೂಟ್ಯೂಬ್ ಚಾನಲ್ (ಇಲ್ಲಿ ಆರ್ಕೈವ್) ಅನ್ನು ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ. ನಾವು ಪೋರ್ಟಲ್ ಅನ್ನು ಸಂಪರ್ಕಿಸಿದ್ದೇವೆ ಮತ್ತು ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದಾಗ ಕಥೆಯನ್ನು ನವೀಕರಿಸಲಾಗುತ್ತದೆ.

ಲಾಜಿಕಲಿ ಫ್ಯಾಕ್ಟ್ಸ್‌ನೊಂದಿಗೆ ಮಾತನಾಡುತ್ತಾ, ಅಡ್ವಾಣಿ ಅವರ ಆಪ್ತ ಸಹಾಯಕ ದೀಪಕ್ ಚೋಪ್ರಾ ಅವರು ಈ ಹೇಳಿಕೆಯನ್ನು ತಳ್ಳಿಹಾಕಿದರು ಮತ್ತು "ಸಂಪೂರ್ಣವಾಗಿ ಫೇಕ್. ಅಡ್ವಾಣಿ ಜಿ ಅವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದರು. ಈ ಹೇಳಿಕೆಯ ಬಗ್ಗೆ ನಮಗೆ ಯಾವುದೇ ನಂಬಲರ್ಹ ಸುದ್ದಿ ವರದಿಯೂ ಸಿಕ್ಕಿಲ್ಲ.

ತೀರ್ಪು

ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು, ರಾಹುಲ್ ಗಾಂಧಿ ಭಾರತದ ರಾಜಕೀಯದ ಭವಿಷ್ಯ ಎಂದು ಹೇಳಿಲ್ಲ. ಒಂದು avadhbhumi.com ಪ್ರಕಟಿಸಿದ ಈಗ ತೆಗೆದುಹಾಕಲಾದ ಲೇಖನದಿಂದ ಹೇಳಿಕೆ ಹುಟ್ಟಿಕೊಂಡಿದೆ. ಆದ್ದರಿಂದ, ನಾವು ಕ್ಲೈಮ್ ಅನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸದವರು: ರಜಿನಿ ಕೆ.ಜಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

অসমীয়া , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.