ಚಂದ್ರನ ಮೇಲ್ಮೈಯನ್ನು ತೋರಿಸುವ ಅನಿಮೇಟೆಡ್ ವೀಡಿಯೋವನ್ನು ಚಂದ್ರಯಾನ-೩ ಕಳುಹಿಸಿದ ದೃಶ್ಯವೆಂದು ಹಂಚಿಕೊಳ್ಳಲಾಗಿದೆ

ಮೂಲಕ: ಉಮ್ಮೆ ಕುಲ್ಸುಮ್
ಆಗಸ್ಟ್ 23 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಚಂದ್ರನ ಮೇಲ್ಮೈಯನ್ನು ತೋರಿಸುವ ಅನಿಮೇಟೆಡ್ ವೀಡಿಯೋವನ್ನು ಚಂದ್ರಯಾನ-೩ ಕಳುಹಿಸಿದ ದೃಶ್ಯವೆಂದು ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ಕ್ಲಿಪ್ ನಿಜವಾದ ಚಂದ್ರನ ಮೇಲ್ಮೈಯನ್ನು ತೋರಿಸುವುದಿಲ್ಲ. ಇದನ್ನು 3D ಅನಿಮೇಷನ್ ಬಳಸಿ ರಚಿಸಲಾಗಿದೆ.

ಕ್ಲೈಮ್ ಐಡಿ b84362b8

ಸಂದರ್ಭ

ಭಾರತವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಬುಧವಾರ ತನ್ನ ಚಂದ್ರಯಾನ-೩ ರ ಬಹು ನಿರೀಕ್ಷಿತ ಸಾಫ್ಟ್ ಲ್ಯಾಂಡಿಂಗ್‌ಗೆ ಸಜ್ಜಾಗುತ್ತಿದ್ದಂತೆ ಬಾಹ್ಯಾಕಾಶದಲ್ಲಿ ಸೆರೆಹಿಡಿಯಲಾದ ಹಲವಾರು ಹಳೆಯ, ಸಂಬಂಧವಿಲ್ಲದ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ವೈರಲ್ ಆದ ೨೦ ಸೆಕೆಂಡ್ಗಳ ಕ್ಲಿಪ್ ಚಂದ್ರನ ಮೇಲ್ಮೈಯನ್ನು ತೋರಿಸುತ್ತದೆ ಮತ್ತು ಈ ದೃಶ್ಯಗಳನ್ನು ಚಂದ್ರಯಾನ-೩ ಸೆರೆಹಿಡಿದಿದೆ ಎಂಬ ಹೇಳಿಕೆಯೊಂದಿಗೆ  ಹಂಚಿಕೊಳ್ಳಲಗುತ್ತಿದೆ. 

ಎಕ್ಸ್ (X) ಪ್ಲಾಟ್ಫಾರ್ಮ್ ನಲ್ಲಿ ಈ ವೀಡಿಯೋವನ್ನು ಶೇರ್ ಮಾಡಿದ  ಪೋಷ್ಟ್ ಒಂದರ ಶೀರ್ಷಿಕೆ, "ಚಂದ್ರಯಾನ - ೩ ರಿಂದ ಬಂದ ಚಂದ್ರನ ದೃಶ್ಯಗಳು ಬೆರಗುಗೊಳಿಸುತ್ತದೆ! ಶಾಂತವಾಗಿರಲು ಸಾಧ್ಯವಿಲ್ಲ, ದಿನಾಂಕವನ್ನು ಮಾರ್ಕ್ ಮಾಡಿಕೊಳ್ಳಿ!ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವುದು ಕೇವಲ 3 ದಿನಗಳು - ೨೩ ಆಗಸ್ಟ್ ೧೭.೪೫ ಭಾರತೀಯ ಕಾಲಮಾನ. ರಷ್ಯಾದ ಲೂನಾ 25 ಚೇತರಿಸಿಕೊಳ್ಳಲು ಸಹ ಪ್ರಾರ್ಥನೆ!." ಪೋಷ್ಟ್ ವೈರಲ್ ಹ್ಯಾಶ್‌ಟ್ಯಾಗ್‌ಗಳಾದ '#ಚಂದ್ರಯಾನ_3' ಮತ್ತು '#ಲೂನಾ25' ಅನ್ನು ಹೊಂದಿದೆ. ಈ ಲೇಖನೆಯನ್ನು ಪ್ರಕಟಿಸುವ ಸಮಯದಲ್ಲಿ ಪೋಷ್ಟ್ ೪೦೦,೫೦೦ ವೀಕ್ಷಣೆಗಳನ್ನು ಮತ್ತು ೯೭೫ ಮರುಪೋಷ್ಟ್ ಗಳನ್ನು ಗಳಸಿದೆ.

ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರಯಾನ-೩ ಕಳುಹಿಸಿದ ದೃಶ್ಯಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಂಚಿಕೊಂಡ ಕೆಲವೇ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಈ ವೈರಲ್ ವೀಡಿಯೋ ಕಾಣಿಸಿಕೊಂಡಿದೆ. 

ಆನ್‌ಲೈನ್‌ನಲ್ಲಿ ಶೇರ್ ಮಾಡಲಾದ ಹೇಳಿಕೆಗಳು 
(ಮೂಲ: ಎಕ್ಸ್/@VishalVerma_9/ಲಾಜಿಕಲಿ ಫ್ಯಾಕ್ಟ್ಸ್ ಇಂದ ಆಲ್ಟೆರ್ ಮಾಡಲಾಗಿದೆ)

ಆದರೆ, ಈ ವೀಡಿಯೋ ಭಾರತದ ಇತ್ತೀಚಿನ ಚಂದ್ರನ ಕಾರ್ಯಾಚರಣೆಯಿಂದ ಸೆರೆಹಿಡಿಯಲಾದ ನೈಜ ದೃಶ್ಯಗಳಲ್ಲ.

ವಾಸ್ತವವಾಗಿ 

ರಿವರ್ಸ್ ಇಮೇಜ್ ಸರ್ಚ್ ನಡೆಸಿದ ನಂತರ, ಲಾಜಿಕಲಿ ಫ್ಯಾಕ್ಟ್ಸ್ ಅದೇ ವೀಡಿಯೋವನ್ನು ಸ್ಟಾಕ್ ಫೋಟೋಗಳು ಮತ್ತು ವೀಡಿಯೋಗಳನ್ನು ಮಾರಾಟ ಮಾಡುವ ವೆಬ್‌ಸೈಟ್ ಶಟರ್‌ಸ್ಟಾಕ್‌ನಲ್ಲಿ ಕಂಡುಕೊಂಡಿತು. ಕ್ಲಿಪ್‌ನ ವಿವರಣೆಯು, "ಚಂದ್ರನ ಟೆಕ್ಸ್ಚರ್ಡ್ ಮೇಲ್ಮೈ ಕ್ಲೋಸ್-ಅಪ್ ಇನ್ ಮೋಷನ್. 3d ಅನಿಮೇಷನ್. ಈ ಚಿತ್ರದ ಅಂಶಗಳು NASA ಒದಗಿಸಿದೆ."ಎಂದು ಹೇಳುತ್ತದೆ. ವೆಬ್‌ಸೈಟ್ 'ಫ್ಲ್ಯಾಶ್ ಮೂವಿ' ಅನ್ನು ವೀಡಿಯೋ ಕೊಡುಗೆದಾರರಾಗಿ ಪಟ್ಟಿಮಾಡಿದೆ.

ನಂತರ ನಾವು ಅದೇ ವೀಡಿಯೋವನ್ನು 'flashmovies.art.' ವೆಬ್‌ಸೈಟ್‌ನಲ್ಲಿ ಕಂಡುಕೊಂಡಿದ್ದೇವೆ.  ವೀಡಿಯೋ ಶೀರ್ಷಿಕೆಯು, "ಚಂದ್ರನ ಟೆಕ್ಸ್ಚರ್ಡ್ ಸರ್ಫೇಸ್ ಕ್ಲೋಸ್-ಅಪ್ ಇನ್ ಮೋಷನ್" ಎಂದು ಹೇಳುತ್ತದೆ. ವೀಡಿಯೋ ವಿವರಣೆಯು ಶಟರ್‌ಸ್ಟಾಕ್‌ನಲ್ಲಿ ಉಲ್ಲೇಖಿಸಿರುವಂತೆಯೇ ಇತ್ತು. ವೆಬ್‌ಸೈಟ್‌ನ 'ಅಬೌಟ್ ಸ್ಟೋರ್' ವಿಭಾಗವು ಅದರ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಲಿಂಕ್‌ಗಳನ್ನು ಒಳಗೊಂಡಿದೆ: ಟ್ವಿಟ್ಟರ್ ಐಕಾನ್ ನಮ್ಮನ್ನು 'ಆಂಡ್ರೆ ಮಾಸ್ಲೋವ್' ಹೆಸರಿನ X ಖಾತೆಗೆ ಮರುನಿರ್ದೇಶಿಸಿದೆ. ಈ ಖಾತೆಯ ಬಯೋ, "3D, CG, ಮೋಷನ್ ಡಿಸೈನ್" ಎಂದು ಸೂಚಿಸಿದೆ. ವೆಬ್‌ಸೈಟ್ ಮತ್ತು ಅದರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ವಿಶ್ಲೇಷಿಸಿದಾಗ ವೆಬ್‌ಸೈಟ್ ಅನೇಕ ವೇಳೆ 3D ಅನಿಮೇಷನ್‌ಗಳು ಮತ್ತು ಡಿಜಿಟಲ್ ವೀಡಿಯೋ ಕಲೆಯನ್ನು ಪ್ರಕಟಿಸುತ್ತದೆ ಎಂದು ತೋರಿಸುತ್ತದೆ. ವೈರಲ್ ಪೋಷ್ಟ್ ನಲ್ಲಿ ಬಳಸಲಾದ ವೀಡಿಯೋ 3D ಅನಿಮೇಷನ್ ಆಗಿದ್ದು, ಚಂದ್ರಯಾನಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಕ್ಕೆ ಇದು ದೃಢಪಡಿಸುತ್ತದೆ.

ಶಟರ್‌ಸ್ಟಾಕ್‌ ಮತ್ತು ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳ ಹೋಲಿಕೆ
(ಮೂಲ: ಶಟರ್‌ಸ್ಟಾಕ, ಎಕ್ಸ್/@VishalVerma_9)

ವೈರಲ್ ವೀಡಿಯೋದಲ್ಲಿ ಕಂಡ ಚಿತ್ರವನ್ನು ಡಿಸೆಂಬರ್ ೩, ೨೦೨೦ ರಂದು ಮತ್ತೊಂದು ಸ್ಟಾಕ್ ಫೋಟೋ ವೆಬ್‌ಸೈಟ್ ಐ-ಸ್ಟಾಕ್‌ನಲ್ಲಿ ಪೋಷ್ಟ್ ಮಾಡಲಾಗಿದೆ. ಇಲ್ಲಿಯೂ ಸಹ, ಫ್ಲ್ಯಾಶ್ ಮೂವಿಗೆ ಕ್ರೆಡಿಟ್ ನೀಡಲಾಗಿದೆ.

ತೀರ್ಪು

ಚಂದ್ರಯಾನ-೩ ಕಳುಹಿಸಿದ ದೃಶ್ಯಗಳನ್ನು ಬಿಂಬಿಸುತ್ತದೆ ಎಂಬ ತಪ್ಪಾದ ಹೇಳಿಕೆಯೊಂದಿಗೆ ಚಂದ್ರನ ಮೇಲ್ಮೈಯ 3D ಅನಿಮೇಟೆಡ್ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರಿಂದ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತಿದ್ದೇವೆ.

Translated by Ankita Kulkarni

 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.