ಇಲ್ಲ, ಭಾರತೀಯ ನಟ ಮತ್ತು ಬಿಜೆಪಿ ನಾಯಕ ಸನ್ನಿ ಡಿಯೋಲ್ ಮುಂಬೈ ಬೀದಿಗಳಲ್ಲಿ ಕುಡಿದು ನಡೆಯುವುದನ್ನು ಈ ವೀಡಿಯೋ ತೋರಿಸುವುದಿಲ್ಲ

ಮೂಲಕ: ರಾಹುಲ್ ಅಧಿಕಾರಿ
ಡಿಸೆಂಬರ್ 7 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಭಾರತೀಯ ನಟ ಮತ್ತು ಬಿಜೆಪಿ ನಾಯಕ ಸನ್ನಿ ಡಿಯೋಲ್ ಮುಂಬೈ ಬೀದಿಗಳಲ್ಲಿ ಕುಡಿದು ನಡೆಯುವುದನ್ನು ಈ ವೀಡಿಯೋ ತೋರಿಸುವುದಿಲ್ಲ

ಬಾಲಿವುಡ್ ನಟ ಮತ್ತು ರಾಜಕಾರಣಿ ಸನ್ನಿ ಡಿಯೋಲ್ ಸಾರ್ವಜನಿಕ ಸ್ಥಳದಲ್ಲಿ ಕುಡಿದ ಅಮಲಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಹೇಳಿಕೊಂಡಿವೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಸನ್ನಿ ಡಿಯೋಲ್ ಅವರ ಮುಂಬರುವ ಚಿತ್ರ 'ಸಫರ್' ಚಿತ್ರೀಕರಣದ ಸಮಯದಲ್ಲಿ ಈ ವೀಡಿಯೋವನ್ನು ಚಿತ್ರೀಕರಿಸಲಾಗಿದೆ.

ಕ್ಲೈಮ್ ಐಡಿ aa02d999

ಇಲ್ಲಿನ ಹೇಳಿಕೆಯೇನು? 

ಬಾಲಿವುಡ್ ನಟ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕ ಸನ್ನಿ ಡಿಯೋಲ್ ಮುಂಬೈನ ಜುಹು ಸರ್ಕಲ್ ಪ್ರದೇಶದಲ್ಲಿ ಕುಡಿದ ಅಮಲಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಅವರ ವೀಡಿಯೋವೊಂದು ವೈರಲ್ ಆಗುತ್ತಿದೆ. ಡಿಯೋಲ್ ಆಟೋ ರಿಕ್ಷಾದತ್ತ ನಡೆದುಕೊಂಡು ಹೋಗುತ್ತಿರುವುದನ್ನು ವೈರಲ್ ವೀಡಿಯೋ ತೋರಿಸುತ್ತದೆ. ನಟನಿಗೆ ನೇರವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಎಂಬುದನ್ನು ನೋಡಿದ ಆಟೋ ಡ್ರೈವರ್ ಅವರನ್ನು ವಾಹನದೊಳಗೆ ಕುಳಿತುಕೊಳ್ಳಲು ಹೇಳುತ್ತಾರೆ. ಚಾಲಕನ ನೆರವಿನಿಂದ ಮಾತ್ರ ಡಿಯೋಲ್ ಹಾಗೆ ಮಾಡಲು ಸಾಧ್ಯವಾಗುತ್ತದೆ ಎಂದು ವೀಡಿಯೋ ತೋರುತ್ತದೆ.

ಹಲವಾರು ಬಳಕೆದಾರರು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಈ ವೀಡಿಯೋವನ್ನು ಇದು ಮುಂಬೈನ ಬೀದಿಗಳಲ್ಲಿ ಬಿಜೆಪಿ ಸಂಸದರನ್ನು ಕುಡಿದು ಅಮಲಿನಲ್ಲಿ ತೋರಿಸಿದೆ ಎಂದು ಹೇಳಿಕೊಂಡು ಹಂಚಿಕೊಂಡಿದ್ದಾರೆ. ಎಕ್ಸ್ ನಲ್ಲಿ ಅಂತಹ ಒಂದು ಪೋಷ್ಟ್  ಬರೆಯುವ ಸಮಯದಲ್ಲಿ ೮,೭೦೦ ವೀಕ್ಷಣೆಗಳನ್ನು ಗಳಿಸಿತು. ಈ ಪೋಷ್ಟ್ ನ ವೀಡಿಯೋದಲ್ಲಿ ಪಠ್ಯವು "ಸನ್ನಿ ಡಿಯೋಲ್ ಕುಡಿದು?" ಎಂದು ಹೇಳುತ್ತದೆ. ವೀಡಿಯೋವನ್ನು ಹಂಚಿಕೊಳ್ಳುತ್ತಾ, ಇನ್ನೊಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, "#SunnyDeol ರಾತ್ರಿಯಲ್ಲಿ ಕುಡಿದು ರಸ್ತೆಯಲ್ಲಿ ನೃತ್ಯ ಮಾಡುವುದನ್ನು ನೋಡಿದ್ದಾರೆ 😂👇👇" "ಸನ್ನಿ ಡಿಯೋಲ್‌ಗೆ ಏನಾಗಿದೆ?" ಎಂದು ಇನ್ನೊಂದು ಪೋಷ್ಟ್ ಪ್ರಶ್ನಿಸಿದೆ . ಇಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳು ಮತ್ತು ಇದೇ ರೀತಿಯ ಇತರ ಪೋಷ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ವೈರಲ್ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವೀಡಿಯೋವನ್ನು ಹಂಚಿಕೊಳ್ಳುವಾಗ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಸಂಸತ್ತಿನ ಸದಸ್ಯರಿಗೆ ಯೋಗ್ಯವಲ್ಲದ ವರ್ತನೆ ಎಂದು ಪ್ರತಿಪಾದಿಸಿದರು. "ಇವರು ಬಿಜೆಪಿ ಸಂಸದ ಸನ್ನಿ ಡಿಯೋಲ್... ಅವರು ತಮ್ಮ ಕ್ಷೇತ್ರ ಗುರುದಾಸ್‌ಪುರಕ್ಕೆ ಹೋಗುವುದಿಲ್ಲ ಅಥವಾ ಸಂಸತ್ತಿಗೆ ಬರುವುದಿಲ್ಲ. ಮುಂದಿನ ಬಾರಿ ಬುದ್ಧಿವಂತಿಕೆಯಿಂದ ಮತ ಚಲಾಯಿಸಿ(ಕನ್ನಡಕ್ಕೆ ಅನುವಾದಿಸಲಾಗಿದೆ),” ಎಂದು ಒಂದು ಎಕ್ಸ್ ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹೇಳಿಕೊಂಡಿದೆ. ಡಿಯೋಲ್ ಅವರು ಭಾರತದ ಉತ್ತರ ರಾಜ್ಯವಾದ ಪಂಜಾಬ್‌ನ ಗುರುದಾಸ್‌ಪುರದಿಂದ ಬಿಜೆಪಿ ಸಂಸದರಾಗಿದ್ದಾರೆ ಮತ್ತು ಕೊನೆಯದಾಗಿ ಹಿಂದಿ ಚಲನಚಿತ್ರ 'ಗದರ್ 2' ನಲ್ಲಿ ಕಾಣಿಸಿಕೊಂಡಿದ್ದಾರೆ. ಜೀ ನ್ಯೂಸ್ ಕನ್ನಡ ಕೂಡ ಅವರ ಫೇಸ್‌ಬುಕ್ ಮತ್ತು ಎಕ್ಸ್ ಖಾತೆಗಲ್ಲಿ ಸನ್ನಿ ಡಿಯೋಲ್ ಅವರ ಕುಡಿದ ಅಮಲಿನಲ್ಲಿ ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗಿರುವ ಬಗ್ಗೆ ಪೋಷ್ಟ್ ಗಳನ್ನು ಹಂಚಿಕೊಂಡಿದೆ.

ಆದರೆ, ಚಿತ್ರವೊಂದರ ಚಿತ್ರೀಕರಣದ ದೃಶ್ಯವನ್ನು ಈ ತುಣುಕಿನಲ್ಲಿ ತೋರಿಸಲಾಗಿದೆ ಮತ್ತು ಇದು ನಿಜವಾದ ಘಟನೆಯಲ್ಲ ಎಂದು ಡಿಯೋಲ್ ಅವರು ಸ್ಪಷ್ಟಪಡಿಸಿದ್ದಾರೆ.

ಅವರ ಬೇಜವಾಬ್ದಾರಿ ವರ್ತನೆಗಾಗಿ ಅವರನ್ನು ದೂಷಿಸುವ ವೀಡಿಯೋವನ್ನು ಪೋಷ್ಟ್ ಮಾಡಿದ ಹಲವಾರು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಕ್ಲಿಪ್‌ನ ಸಂದರ್ಭದ ಬಗ್ಗೆ ಸ್ಪಷ್ಟೀಕರಣಗಳನ್ನು ನೀಡಿದ್ದಾರೆ.

ನಾವು ಕಂಡುಹಿಡಿದದ್ದೇನು?

ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಊಹಾಪೋಹಗಳಿಗೆ ಕಾರಣವಾಗಿದ್ದು, ಕೆಲವರು ಅದನ್ನು ಪ್ರಚಾರದ ಸ್ಟಂಟ್ ಆಗಿ ನಂತರ ಬಹಿರಂಗಪಡಿಸಬಹುದು ಎಂದು ನಿರೀಕ್ಷಿಸಿದ್ದಾರೆ.

ಡಿಸೆಂಬರ್ ೬ ರಂದು, ಡಿಯೋಲ್ ಅವರು ವಿಷಯವನ್ನು ಸ್ಪಷ್ಟಪಡಿಸಲು ಎಕ್ಸ್ ನಲ್ಲಿ, ತಾನು ಕುಡುಕನಂತೆ ವರ್ತಿಸುತ್ತಿರುವ ಬೀಹೈನ್ಡ್ ದಿ ಸೀನ್ ದೃಶ್ಯಾವಳಿಗಳನ್ನು ಪೋಷ್ಟ್ ಮಾಡಿದ್ದಾರೆ. ವಿಭಿನ್ನ ಕೋನದಿಂದ ತೆಗೆದ ಈ ವೀಡಿಯೋ ತುಣುಕನ್ನು, ಅನೇಕ ಕ್ಯಾಮರಾಪರ್‌ಸನ್‌ಗಳು ಸೇರಿದಂತೆ ಹಲವಾರು ಸಿಬ್ಬಂದಿ ಸದಸ್ಯರು ಅವರನ್ನು ಸುತ್ತುವರೆದಿರುವುದನ್ನು ತೋರಿಸುತ್ತದೆ. ಅವರಲ್ಲಿ ಒಬ್ಬರು ಕ್ಯೂ ನೀಡುವುದನ್ನು ಕೇಳಬಹುದು. ಈ ವೀಡಿಯೋವನ್ನು ಹೊಂದಿರುವ ಹಿಂದಿಯಲ್ಲಿ ಬರೆಯಲಾದ ಡಿಯೋಲ್ ಅವರ ಪೋಷ್ಟ್, "ವದಂತಿಗಳ ಪ್ರಯಾಣವು ಇಲ್ಲಿಯವರೆಗೆ ಮಾತ್ರ" ಎಂದು ಸ್ಥೂಲವಾಗಿ ಕನ್ನಡಕ್ಕೆ ಅನುವಾದಿಸುತ್ತದೆ. ಈ ದೃಶ್ಯವು ಅವರ ಮುಂಬರುವ ಚಿತ್ರ ‘ಸಫರ್‌’ನಲ್ಲಿದೆ ಎಂದು ಅವರು ಶೀರ್ಷಿಕೆಯಲ್ಲಿ ಸುಳಿವು ನೀಡಿದ್ದಾರೆ.

ನಾವು ವೈರಲ್ ಕ್ಲಿಪ್ ಅನ್ನು ಡಿಯೋಲ್ ಹಂಚಿಕೊಂಡ ವೀಡಿಯೋದೊಂದಿಗೆ ಹೋಲಿಸಿದ್ದೇವೆ ಮತ್ತು ಅವರು ಎರಡರಲ್ಲೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸಿರುವುದನ್ನು ಗಮನಿಸಿದ್ದೇವೆ. ಎರಡೂ ವೀಡಿಯೋಗಳಲ್ಲಿ ಅವರು ಒಂದು ಕೈಯಲ್ಲಿ ಬ್ಯಾಂಡ್ ಮತ್ತು ಇನ್ನೊಂದು ಕೈಯಲ್ಲಿ ವಾಚ್ ಧರಿಸಿದ್ದರು. ಡಿಯೋಲ್ ಅವರ ಪೋಷ್ಟ್ ಸೂಚಿಸಿದಂತೆ ವೈರಲ್ ಆದ ಕ್ಲಿಪ್ ಅನ್ನು ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಇದು ಸೂಚಿಸುತ್ತದೆ.

ವೈರಲ್ ವೀಡಿಯೋ ಮತ್ತು ಸನ್ನಿ ಡಿಯೋಲ್ ಹಂಚಿಕೊಂಡ ದೃಶ್ಯಗಳ ನಡುವಿನ ಚಿತ್ರ ಹೋಲಿಕೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ದಿ ಪ್ರಿಂಟ್ ಪ್ರಕಟಿಸಿದ ಪಿಟಿಐ ಸುದ್ದಿ ವರದಿಯ ಪ್ರಕಾರ, ಎಚೆಲಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಸಫರ್' ಚಿತ್ರ ತಯಾರಾಗುತ್ತಿದೆ. ಈ ವೈರಲ್ ಕ್ಲಿಪ್ ಮುಂಬರುವ ಚಿತ್ರ 'ಸಫರ್'ನಲ್ಲಿನ ದೃಶ್ಯದ ಭಾಗವಾಗಿದೆ ಎಂದು ಪ್ರೊಡಕ್ಷನ್ ಹೌಸ್‌ನ ಉದ್ಯೋಗಿ ವಿಶಾಲ್ ರಾಣಾ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ. ವರದಿಯ ಪ್ರಕಾರ, ರಾಣಾ ಹೀಗೆ ಹೇಳಿದ್ದಾರೆ, “ಇದು ನಮ್ಮ ಮುಂಬರುವ ತಾತ್ಕಾಲಿಕವಾಗಿ ಹೆಸರಿಡಲಾದ ಚಿತ್ರ ‘ಸಫರ್’ ನ ದೃಶ್ಯವಾಗಿದ್ದು, ಇದಕ್ಕಾಗಿ ಸನ್ನಿ ಪಾಜಿ ರಾತ್ರಿಯ ವೇಳಾಪಟ್ಟಿಯನ್ನು ಚಿತ್ರೀಕರಿಸುತ್ತಿದ್ದರು. ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡದಂತೆ ಎಲ್ಲಾ ಅಭಿಮಾನಿಗಳಿಗೆ ವಿನಂತಿಸುತ್ತೇನೆ."

ತೀರ್ಪು 

ನಟ ಮತ್ತು ರಾಜಕಾರಣಿ ಸನ್ನಿ ಡಿಯೋಲ್ ಅವರು ರಸ್ತೆಯೊಂದರಲ್ಲಿ ದೃಶ್ಯವನ್ನು ಚಿತ್ರೀಕರಿಸುವ ವೀಡಿಯೋವನ್ನು ಮುಂಬೈನ ಜುಹು ಪ್ರದೇಶದಲ್ಲಿ ಅವರು ಕುಡಿದ ಅಮಲಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ನಟ ಈ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ ಮತ್ತು ಅವರು ತಮ್ಮ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.