ಭೋಪಾಲ್‌ನ ಬೇಗಂ ಅವರ ಚಿತ್ರವನ್ನು ಷಹಜಹಾನ್ ಅವರ ಪತ್ನಿ ಮುಮ್ತಾಜ್ ಮಹಲ್‌ ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ಅಜ್ರಾ ಅಲಿ
ಮಾರ್ಚ್ 5 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಭೋಪಾಲ್‌ನ ಬೇಗಂ ಅವರ ಚಿತ್ರವನ್ನು ಷಹಜಹಾನ್ ಅವರ ಪತ್ನಿ ಮುಮ್ತಾಜ್ ಮಹಲ್‌ ಎಂದು ಹಂಚಿಕೊಳ್ಳಲಾಗಿದೆ

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.(ಮೂಲ: ಎಕ್ಸ್/ಫೇಸ್‌ಬುಕ್‌/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ಚಿತ್ರವು ವಾಸ್ತವವಾಗಿ ಭೋಪಾಲ್‌ನ ಆಡಳಿತಗಾರರಾಗಿದ್ದ ಸುಲ್ತಾನ್ ಷಹಜಹಾನ್ ಬೇಗಂ ಅನ್ನು ಚಿತ್ರಿಸುತ್ತದೆ, ಮುಮ್ತಾಜ್ ಮಹಲ್ ಅಲ್ಲ.

ಕ್ಲೈಮ್ ಐಡಿ f0696c7b

ಹೇಳಿಕೆ ಏನು?

ಹೂವಿನ ದಾನಿಗಳಿಂದ ಅಲಂಕರಿಸಲ್ಪಟ್ಟ ಮೇಜಿನ ಪಕ್ಕದಲ್ಲಿ ಮಹಿಳೆಯೊಬ್ಬಳು ವಿಧ್ಯುಕ್ತವಾಗಿ ಬಟ್ಟೆ ಧರಿಸಿ ನಿಂತಿರುವ ಚಿತ್ರವು ಎಕ್ಸ್ (ಹಿಂದೆ ಟ್ವಿಟ್ಟರ್), ಫೇಸ್‌ಬುಕ್  ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹರಡಿದೆ. ಈ ವೈರಲ್ ಚಿತ್ರದ ಜೊತೆಗಿನ ಹೇಳಿಕೆಗಳು ಇದು ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಪತ್ನಿ ಮುಮ್ತಾಜ್ ಮಹಲ್ ಅನ್ನು ಚಿತ್ರಿಸುತ್ತದೆ ಎಂದು ಹೇಳಲಾಗುತ್ತಿದೆ, ಅವರಿಗಾಗಿ ತಾಜ್ ಮಹಲ್ ಅನ್ನು ೧೬೩೧ ರಲ್ಲಿ ಸ್ಮಾರಕವಾಗಿ ನಿಯೋಜಿಸಲಾಯಿತು ಎಂದು ಸೂಚಿಸಲಾಗಿದೆ. 

ಈ ಚಿತ್ರದೊಂದಿಗೆ ಸಾಮಾನ್ಯವಾಗಿ ಮಹಿಳೆಯನ್ನು ಗುರಿಯಾಗಿಸುವ ಅವಹೇಳನಕಾರಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಅಂತಹ ಪೋಷ್ಟ್ ಗಳ ಆರ್ಕೈವ್ ಆವೃತ್ತಿಯನ್ನು ಇಲ್ಲಿ, ಇಲ್ಲಿ, ಮತ್ತು ಇಲ್ಲಿ ಪ್ರವೇಶಿಸಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.(ಮೂಲ: ಎಕ್ಸ್/ಫೇಸ್‌ಬುಕ್‌/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ ವೈರಲ್ ಚಿತ್ರದಲ್ಲಿರುವ ಮಹಿಳೆ ಸುಲ್ತಾನ್ ಷಹಜಹಾನ್ ಬೇಗಂ, ಭೋಪಾಲ್‌ನ ಆಡಳಿತಗಾರ ಮತ್ತು ಮೂರನೇ ಬೇಗಂ (ಉನ್ನತ ಶ್ರೇಣಿಯ ಮುಸ್ಲಿಂ ಮಹಿಳೆ).

ನಾವು ಕಂಡುಹಿಡಿದದ್ದು ಏನು?

ನಾವು ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿದ್ದೇವೆ ಮತ್ತು ಹಲವಾರು ಐತಿಹಾಸಿಕ ಸಂಪನ್ಮೂಲಗಳನ್ನು ಸಂಪರ್ಕಿಸಿದ್ದೇವೆ. ತನಿಖೆಯು ವಿವಾದಿತ ಚಿತ್ರವನ್ನು ಒಳಗೊಂಡಿರುವ ಹಲವಾರು ಐತಿಹಾಸಿಕ ವೆಬ್‌ಸೈಟ್‌ಗಳಿಗೆ ನಮ್ಮನ್ನು ಕರೆದೊಯ್ಯಿತು. ಚಿತ್ರದಲ್ಲಿ ಇರುವುದು ಭೋಪಾಲ್‌ನ ಸುಲ್ತಾನ್ ಷಹಜಹಾನ್ ಬೇಗಂ ಎಂದು ಗುರುತಿಸಲಾಗಿದೆ, ಇವರು ಭಾರತದ ಮಧ್ಯಪ್ರದೇಶದ ಪ್ರಮುಖ ವ್ಯಕ್ತಿ.

ಯುನೈಟೆಡ್ ಕಿಂಗ್‌ಡಂನ ರಾಯಲ್ ಕಲೆಕ್ಷನ್ ಟ್ರಸ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಚಿತ್ರವನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಬ್ರಿಟಿಷ್ ರಾಜಮನೆತನದ ರಾಯಲ್ ಕಲೆಕ್ಷನ್ ಟ್ರಸ್ಟ್ ವಿಶ್ವದ ಅತಿದೊಡ್ಡ ಖಾಸಗಿ ಕಲಾ ಸಂಗ್ರಹವಾಗಿದೆ.

ವೆಬ್‌ಸೈಟ್‌ನಲ್ಲಿ ನೀಡಲಾದ ಚಿತ್ರದ ವಿವರಣೆಯ ಪ್ರಕಾರ, ಭೋಪಾಲ್‌ನ ಸುಲ್ತಾನ್ ಷಹಜಹಾನ್ ಬೇಗಂ ಮೇಜಿನ ಬಳಿ ಹೂವಿನ ಹೂದಾನಿ ಮುಂಭಾಗಕ್ಕೆ ಎದುರಾಗಿರುವ ಫೋಟೋವನ್ನು  ೧೮೭೫-೭೬ ರ ನಡುವೆ ತೆಗೆದದ್ದು.

ರಾಯಲ್ ಕಲೆಕ್ಷನ್ ಟ್ರಸ್ಟ್ ಯು.ಕೆ. ವೆಬ್‌ಸೈಟ್‌ನ ಸ್ಕ್ರೀನ್‌ಶಾಟ್. (ಮೂಲ: ರಾಯಲ್ ಕಲೆಕ್ಷನ್ ಟ್ರಸ್ಟ್ ಯು.ಕೆ)

೧೮೭೫-೭೬ ರ ನಡುವೆ ಭಾರತೀಯ ಉಪಖಂಡಕ್ಕೆ ವೇಲ್ಸ್ ರಾಜಕುಮಾರ ಆಲ್ಬರ್ಟ್ ಎಡ್ವರ್ಡ್ ಭೇಟಿ ನೀಡಿದ ಸಂದರ್ಭದಲ್ಲಿ ಭಾವಚಿತ್ರಗಳು, ಗುಂಪುಗಳು ಮತ್ತು ವೀಕ್ಷಣೆಗಳ ಛಾಯಾಚಿತ್ರ ಆಲ್ಬಮ್‌ಗಳನ್ನು ಸಂಕಲಿಸಲಾಗಿದೆ ಮತ್ತು ಸುಲ್ತಾನ್ ಷಹಜಹಾನ್ ಬೇಗಂ ಅವರ ಫೋಟೋವನ್ನು ಈ ಸಂಗ್ರಹದ ಭಾಗವಾಗಿ ತೆಗೆದುಕೊಳ್ಳಲಾಗಿದೆ.

"ಹರ್ ಹೈನೆಸ್ ಷಹಜಹಾನ್ ಬೇಗಂ, ಭೋಪಾಲ್‌ನ ಮೂರನೇ ಬೇಗಂ" ಎಂಬ ಶೀರ್ಷಿಕೆಯೊಂದಿಗೆ ಭಾರತ ಸರ್ಕಾರವು ನಿರ್ವಹಿಸುವ ಭಾರತೀಯ ಸಂಸ್ಕೃತಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಚಿತ್ರವನ್ನು ಸಹ ನಾವು ಕಂಡುಕೊಂಡಿದ್ದೇವೆ. ವೆಬ್‌ಸೈಟ್ ಸಂಸ್ಕೃತಿ ಸಚಿವಾಲಯದ ಉಪಕ್ರಮವಾಗಿದ್ದು, ವೆಬ್‌ಸೈಟ್‌ನ ಕೊನೆಯಲ್ಲಿ ಟಿಪ್ಪಣಿಯಲ್ಲಿ ನೋಡಿದಂತೆ “ಭಾರತದಾದ್ಯಂತ ವಿವಿಧ ರೆಪೊಸಿಟರಿಗಳು ಮತ್ತು ಸಂಸ್ಥೆಗಳಿಂದ ಸಾಂಸ್ಕೃತಿಕ ಪ್ರಸ್ತುತತೆಯ ಡೇಟಾವನ್ನು ಹೋಸ್ಟ್ ಮಾಡುತ್ತದೆ”.

ಭಾರತೀಯ ಸಂಸ್ಕೃತಿಯ ವೆಬ್ಸೈಟ್ ಪ್ರಕಾರ, ಚಿತ್ರವು ೧೯ ನೇ ಶತಮಾನದಲ್ಲಿ ಭೋಪಾಲ್ ಅನ್ನು ಆಳಿದ ಸುಲ್ತಾನ್ ಷಹಜಹಾನ್ ಬೇಗಂ (೧೮೩೮ - ೧೯೦೧) ಅನ್ನು ಚಿತ್ರಿಸುತ್ತದೆ. "ರೀಜೆಂಟ್ ರಾಣಿ ತನ್ನ ಪ್ರಜೆಗಳ ಸುಧಾರಣೆಗಾಗಿ ಅನೇಕ ನೀತಿಗಳನ್ನು ಮುನ್ನಡೆಸಿದಳು" ಎಂದು ವೆಬ್‌ಸೈಟ್‌ನಲ್ಲಿನ ಸಣ್ಣ ವಿವರಣೆಯು ಹೇಳುತ್ತದೆ.


ಭಾರತೀಯ ಸಂಸ್ಕೃತಿ ವೆಬ್‌ಸೈಟ್‌ನ ಸ್ಕ್ರೀನ್‌ಶಾಟ್.(ಮೂಲ: indianculture.gov.in)

ಆಗಸ್ಟ್ ೧೧, ೨೦೨೩ ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಬೇಗಂ ಷಹಜಹಾನ್ ೧೮೭೧ ರಲ್ಲಿ ಭೋಪಾಲ್‌ನಲ್ಲಿ ಅರಮನೆಯನ್ನು ತನ್ನ ನಿವಾಸವಾಗಿ ನಿರ್ಮಿಸಲು ನಿಯೋಜಿಸಿದಳು. ರಾಜ್ ಮಹಲ್ (ರಾಯಲ್ ಪ್ಯಾಲೇಸ್) ಎಂದು ಕರೆಯಲ್ಪಡುವ ಅರಮನೆಯನ್ನು ನಂತರ ಬ್ರಿಟಿಷರು ತಾಜ್ ಮಹಲ್ ಕೋಟೆ ಎಂದು ಮರುನಾಮಕರಣ ಮಾಡಿದರು, ಅವರು ಅರಮನೆಯ ವಾಸ್ತುಶಿಲ್ಪದ ವಿನ್ಯಾಸದಿಂದ ಪ್ರಭಾವಿತರಾದರು.

ತೀರ್ಪು

ಭೋಪಾಲ್‌ನ ಸುಲ್ತಾನ್ ಷಹಜಹಾನ್ ಬೇಗಂ ಅವರ ಚಿತ್ರವು ಮುಘಲ್ ಚಕ್ರವರ್ತಿ ಷಹಜಹಾನ್ ಅವರ ಪತ್ನಿ ಮುಮ್ತಾಜ್ ಮಹಲ್ ಅನ್ನು ತೋರಿಸುತ್ತದೆ ಮತ್ತು ಅವರ ನೆನಪಿಗಾಗಿ ವಿಶ್ವಪ್ರಸಿದ್ಧ ತಾಜ್ ಮಹಲ್ ಅನ್ನು ನಿರ್ಮಿಸಲಾಗಿದೆ ಎಂದು ತಪ್ಪು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.