೨೦೨೨ ರಲ್ಲಿ ಈದ್ ಹಬ್ಬವನ್ನು ಆಚರಿಸಲು ಸೇರಿದ ಜನರ ವೀಡಿಯೋವನ್ನು ಉತ್ತರಾಖಂಡದ ಇತ್ತೀಚಿನ ಅಶಾಂತಿಯೊಂದಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ: ಚಂದನ್ ಬೋರ್ಗೊಹೈನ್
ಫೆಬ್ರವರಿ 12 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೨ ರಲ್ಲಿ ಈದ್ ಹಬ್ಬವನ್ನು ಆಚರಿಸಲು ಸೇರಿದ ಜನರ ವೀಡಿಯೋವನ್ನು ಉತ್ತರಾಖಂಡದ ಇತ್ತೀಚಿನ ಅಶಾಂತಿಯೊಂದಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ವೈರಲ್ ಪೋಷ್ಟ್ ಗಳನ್ನು ತೋರಿಸುವ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ವೀಡಿಯೋ ಮೇ ೨೦೨೨ರಿಂದ ಆನ್‌ಲೈನ್‌ನಲ್ಲಿದೆ. ಸುದ್ದಿ ವರದಿಗಳು ಮತ್ತು ಪೊಲೀಸರ ಪ್ರಕಾರ, ಹರಿದ್ವಾರದಲ್ಲಿ ಈದ್-ಉಲ್-ಫಿತರ್ ಆಚರಿಸಲು ಜನರು ನೆರೆದಿರುವುದನ್ನು ಇದು ತೋರಿಸುತ್ತದೆ.

ಕ್ಲೈಮ್ ಐಡಿ a8e0e5ca

ಫೆಬ್ರವರಿ ೮ ರಂದು ಉತ್ತರಾಖಂಡದ ಉತ್ತರ ಭಾರತದ ಪಟ್ಟಣವಾದ ಹಲ್ದ್ವಾನಿಯಲ್ಲಿ  ಅಧಿಕಾರಿಗಳ ಅತಿಕ್ರಮಣ ಕಾರ್ಯಾಚರಣೆಯ ಸಮಯದಲ್ಲಿ ಮಸೀದಿ ಮತ್ತು ಮದ್ರಸಾವನ್ನು (ಉಚಿತ ಪ್ರಾಥಮಿಕ ಶಿಕ್ಷಣಕ್ಕಾಗಿ ಇಸ್ಲಾಮಿಕ್ ಕೇಂದ್ರ) ಕೆಡವಲಾಯಿತು, ಇದು ಇಬ್ಬರು ನಾಗರಿಕರ ಸಾವಿಗೆ ಕಾರಣವಾಯಿತು. ಈ ಹಿನ್ನಲೆಯಲ್ಲಿ ಅಶಾಂತಿಯು ಸಂಭವಿಸಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಹಿಮಾಲಯ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಅಶಾಂತಿಯನ್ನು ತೋರಿಸಲು ಘರ್ಷಣೆಯ ಅನೇಕ  ದೃಶ್ಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಹೇಳಿಕೆ ಏನು?
ರಸ್ತೆಯೊಂದರಲ್ಲಿ ಜನರ ದೊಡ್ಡ ಗುಂಪನ್ನು ತೋರಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಸ್ಲಾಂ  ಟೋಪಿಗಳನ್ನು ಧರಿಸಿರುವ ಮುಸ್ಲಿಂ ಪುರುಷರ ದೊಡ್ಡ ಸಭೆಯನ್ನು ವೀಡಿಯೋದಲ್ಲಿ ನೋಡಬಹುದು. ಕೋಮುವಾದಿ ನೀರೂಪಣೆಗಳೊಂದಿಗೆ, ಹಲವಾರು ಬಳಕೆದಾರರು ಹಲ್ದ್ವಾನಿಯಲ್ಲಿನ ಇತ್ತೀಚಿನ ಅಶಾಂತಿಗೆ ಲಿಂಕ್ ಮಾಡಿ ಹಂಚಿಕೊಂಡಿದ್ದಾರೆ.

ಎಕ್ಸ್ ನಲ್ಲಿ ವೀಡಿಯೋವನ್ನು ಹಂಚಿಕೊಳ್ಳುತ್ತಾ, ಬಳಕೆದಾರರು ಹೀಗೆ ಬರೆದಿದ್ದಾರೆ, "೨೦ ವರ್ಷಗಳ ಹಿಂದೆ #ಹಲ್ದ್ವಾನಿಯಲ್ಲಿ ೧% ಮುಸ್ಲಿಂ ಜನಸಂಖ್ಯೆ ಇತ್ತು. ಈಗ ಅದರ ಸುಮಾರು ೨೦%.  ಹಿಂದೂಗಳೇ ನಿಮಗೆ ತಡವಾಗುವ ಮೊದಲು ಎಚ್ಚರಗೊಳ್ಳಿ. # ಉತ್ತರಾಖಂಡ್ (sic.)"  ಈ ಲೇಖನ ಬರೆಯುವ ಸಮಯದಲ್ಲಿ ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ)  ೯೫,೫೦೦ ವೀಕ್ಷಣೆಗಳನ್ನು ಗಳಿಸಿದೆ.

ಅದಲ್ಲದೆ, ಫೆಬ್ರವರಿ ೭ ರಂದು ಉತ್ತರಾಖಂಡ ವಿಧಾನಸಭೆಯು ಅಂಗೀಕರಿಸಿದ ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆಗೆ (ಯುಸಿಸಿ)  ವೀಡಿಯೋವನ್ನು ಲಿಂಕ್ ಮಾಡಲಾಗಿದೆ. ವೀಡಿಯೋವನ್ನು ಹಂಚಿಕೊಂಡ ಫೇಸ್‌ಬುಕ್ ಬಳಕೆದಾರರು  ಉತ್ತರಾಖಂಡವನ್ನು ಮುಸ್ಲಿಂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎಂದು ಬರೆದಿದ್ದಾರೆ. ಯುಸಿಸಿ ಬಿಲ್ ಅನ್ನು ವಿರೋಧಿಸಿ ಕೆಲವು ಬಳಕೆದಾರರು ಹಲ್ದ್ವಾನಿಯಲ್ಲಿ ಇತ್ತೀಚಿನ ಹಿಂಸಾಚಾರದ ದೃಶ್ಯಗಳೊಂದಿಗೆ ವೈರಲ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್ ಪೋಷ್ಟ್ ಗಳನ್ನು ತೋರಿಸುವ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ವೀಡಿಯೋ ಇತ್ತೀಚಿನದಲ್ಲ. ಇದನ್ನು ಮೇ ೨೦೨೨ ರಲ್ಲಿ ಸೆರೆಹಿಡಿಯಲಾಗಿದೆ ಮತ್ತು ಹರಿದ್ವಾರದಲ್ಲಿ ಈದ್ ನ ಆಚರಣೆಯನ್ನು ತೋರಿಸುತ್ತದೆ.

ಸತ್ಯಾಂಶಗಳು
ವೀಡಿಯೋದ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಅದು ನಮ್ಮನ್ನು ಡಾ. ವಿಜಯ್ ಶರ್ಮಾ ಎಂಬ ಬಳಕೆದಾರರಿಂದ ಮೇ ೫, ೨೦೨೨ ರಂದು ಹಂಚಿಕೊಂಡ ಎಕ್ಸ್ ಪೋಷ್ಟ್ ಗೆ ಕರೆದೊಯ್ಯಿತು. ಪೋಷ್ಟ್ ನ ಪ್ರಕಾರ, ಮೂಲತಃ ಹಿಂದಿಯಲ್ಲಿ ಬರೆಯಲಾಗಿದೆ, "ಹರಿದ್ವಾರದ ಜ್ವಾಲಾಪುರ ಈದ್ಗಾದಲ್ಲಿ ನಮಾಜ್ (ಮುಸ್ಲಿಂ ಪ್ರಾರ್ಥನೆ) ಸಲ್ಲಿಸಿದ ನಂತರ ಜನರ ಸಭೆಯನ್ನು ವೀಡಿಯೋ ತೋರಿಸುತ್ತದೆ."  ಆದರೆ, ಇಸ್ಲಾಮೋಫೋಬಿಕ್ ಭಾವನೆಗಳನ್ನು ಪ್ರಚಾರ ಮಾಡಿದೆ  ಆದ್ದರಿಂದ ಲಿಂಕ್ ಅನ್ನು ಈ ಕಥೆಯ ಭಾಗವಾಗಿ ಸೇರಿಸಲಾಗಿಲ್ಲ.

ಮೇ ೩, ೨೦೨೨, ರಂದು ಹಂಚಿಕೊಂಡ  ಫೇಸ್‌ಬುಕ್ ಪೋಷ್ಟ್ ಅನ್ನು ಸಹ ನಾವು ಕಂಡುಕೊಂಡೆವು, ಅದು ಈಗ ವೈರಲ್ ಇರುವ ಕ್ಲಿಪ್ ಅನ್ನು ಹಂಚಿಕೊಂಡಿತ್ತು. ೨೦೨೨  ರಲ್ಲಿ, ಈದ್-ಉಲ್-ಫಿತರ್ ಮೇ ೨ ರ ಸಂಜೆ ಪ್ರಾರಂಭವಾಯಿತು ಮತ್ತು ಮೇ ೩ ರ ಸಂಜೆ ಕೊನೆಗೊಂಡಿತು ಎಂದು ಗಮನಿಸಬಹುದು.

ಈ ವಿವರಗಳನ್ನು ಸೂಚನೆಯಾಗಿ ಆಗಿ ತೆಗೆದುಕೊಂಡು, ನಾವು ಹಿಂದಿಯಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಹುಡುಕಾಟವನ್ನು ನಡೆಸಿದೆವು ಮತ್ತು ಸ್ಥಳೀಯ ಸುದ್ದಿ ಔಟ್ಲೆಟ್ ಭಾರತವರ್ಷ್ ೨೪ x ೭ ನ್ಯೂಸ್ ನ ವೀಡಿಯೋ ವರದಿಯನ್ನು ಕಂಡುಕೊಂಡೆವು. ವರದಿಯ ಪ್ರಕಾರ, ಉತ್ತರಾಖಂಡದ ಹರಿದ್ವಾರದಲ್ಲಿರುವ ಜ್ವಾಲಾಪುರ ಈದ್ಗಾದಲ್ಲಿ ಸಾವಿರಾರು ಜನರು ಈದ್-ಉಲ್-ಫಿತರ್ ಪ್ರಾರ್ಥನೆ ಸಲ್ಲಿಸಿದರು. ಮೇ ೩, ೨೦೨೨ ರಂದು ಹಂಚಿಕೊಳ್ಳಲಾದ ವರದಿಯಲ್ಲಿ ಕಂಡುಬರುವ ಗೇಟ್‌ನ ರಚನೆ ಮತ್ತು ಗೋಡೆಯು ವೈರಲ್ ವೀಡಿಯೋದಲ್ಲಿ  ನಾವು ಗಮನಿಸಬಹುದು.

ವೈರಲ್ ಕ್ಲಿಪ್ ಮತ್ತು ಭಾರತವರ್ಷ್ ೨೪ x ೭ ನ್ಯೂಸ್ ವೀಡಿಯೋ ವರದಿಯಿಂದ ದೃಶ್ಯಗಳ ಹೋಲಿಕೆ.
(ಮೂಲ: ಎಕ್ಸ್/ಭಾರತವರ್ಷ್ ೨೪ x ೭/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ನಾವು ಹರಿದ್ವಾರದ ಜ್ವಾಲಾಪುರ ಈದ್ಗಾವನ್ನು ಯಶಸ್ವಿಯಾಗಿ ಜಿಯೋಲೊಕೇಟ್ ಮಾಡಿದ್ದೇವೆ ಮತ್ತು ವೈರಲ್ ವೀಡಿಯೋವನ್ನು ಅದೇ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ ಎಂದು ಖಚಿತಪಡಿಸಿದ್ದೇವೆ. 

ಹರಿದ್ವಾರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಲಾಜಿಕಲಿ ಫ್ಯಾಕ್ಟ್ಸ್‌ಗೆ ಹೀಗೆ ದೃಢಪಡಿಸಿದ್ದಾರೆ, ವೈರಲ್ ವೀಡಿಯೋ ಜ್ವಾಲಾಪುರ ಈದ್ಗಾವನ್ನು ತೋರಿಸುತ್ತದೆ ಮತ್ತು ಇದನ್ನು ಮೇ ೨೦೨೨ ರಲ್ಲಿ ತೆಗೆದುಕೊಳ್ಳಲಾಗಿದೆ. ಗುರುತಿಸಲು ಇಚ್ಛಿಸದ ಅಧಿಕಾರಿ, ಹರಿದ್ವಾರ ಪೊಲೀಸರು ಮಾಡಿದ ಕಾಮೆಂಟ್‌ಗೆ ನಮಗೆ ನಿರ್ದೇಶಿಸಿದ್ದಾರೆ. ಎಕ್ಸ್  ಪೋಷ್ಟ್ ನಲ್ಲಿ "ಹಳೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ಮತ್ತು ಯುಸಿಸಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಈ ವೀಡಿಯೋ "ಈದ್ಗಾ ಜ್ವಾಲಾಪುರ್, ಹರಿದ್ವಾರ" ನಿಂದ ಬಂದಿದೆ ಮತ್ತು ೨೦೨೨ ರಲ್ಲಿ ಈದ್ ಸಂದರ್ಭದಲ್ಲಿ ಸೆರೆಹಿಡಿಯಲಾಗಿದೆ (ಹಿಂದಿಯಿಂದ ಅನುವಾದಿಸಲಾಗಿದೆ)" ಎಂದು ಹರಿದ್ವಾರ ಪೊಲೀಸರು ಬರೆದಿದ್ದಾರೆ. 'Kreately.in' ಮಾಡಿದ ಪೋಷ್ಟ್ ಗೆ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅದು ತಪ್ಪಾದ ಮಾಹಿತಿಯನ್ನು ಹರಡಲು ಹೆಸರುವಾಸಿಯಾದ ಬಲಪಂಥೀಯ ಖಾತೆ.

ವೀಡಿಯೋ ಮೇ ೨೦೨೨ ರದ್ದು ಎಂದು ಹರಿದ್ವಾರ ಪೊಲೀಸರು ದೃಢಪಡಿಸಿದ್ದಾರೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ತೀರ್ಪು
ವೈರಲ್ ಆಗಿರುವ ವೀಡಿಯೋ ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ  ಸಂಬಂಧಿಸಿಲ್ಲ. ಇದು ಮೇ ೨೦೨೨ ರಿಂದ ಆನ್‌ಲೈನ್‌ನಲ್ಲಿದೆ ಮತ್ತು ಈದ್-ಉಲ್-ಫಿತರ್ ಸಂದರ್ಭದಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿರುವ ಜ್ವಾಲಾಪುರ, ಈದ್ಗಾದಲ್ಲಿ ಸೇರಿದ ಜನರನ್ನು ತೋರಿಸುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.  

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.