ಕಾಂಗ್ರೆಸ್ ಆಡಳಿತದಲ್ಲಿ ಅಡುಗೆ ಮಾಡಲು ಬಳಸುವ ಅನಿಲದ ಬೆಲೆ ಹೆಚ್ಚಿಸಲಾಯಿತು ಎಂಬ ಹೇಳಿಕೆ ಸಂದರ್ಭದಿಂದ ಹೊರಗಿಡಲಾಗಿದೆ

ಮೂಲಕ: ರೋಹಿತ್ ಗುಟ್ಟಾ
ಸೆಪ್ಟೆಂಬರ್ 7 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕಾಂಗ್ರೆಸ್ ಆಡಳಿತದಲ್ಲಿ ಅಡುಗೆ ಮಾಡಲು ಬಳಸುವ ಅನಿಲದ ಬೆಲೆ ಹೆಚ್ಚಿಸಲಾಯಿತು ಎಂಬ ಹೇಳಿಕೆ ಸಂದರ್ಭದಿಂದ ಹೊರಗಿಡಲಾಗಿದೆ

ಎಕ್ಸ್‌ ನಲ್ಲಿ ವೈರಲ್‌ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ:ಎಕ್ಸ್‌/@himantabiswa/@MrSinha_ /ಲಾಜಿಕಲಿ ಫ್ಯಾಕ್ಟ್ಸ್ ಇಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ವೈರಲ್ ಪೋಷ್ಟ್ ಗಳಲ್ಲಿ ಉಲ್ಲೇಖಿಸಲಾದ ವೆಚ್ಚವು ಸಬ್ಸಿಡಿ ರಹಿತ ಸಿಲಿಂಡರ್ ಆಗಿದೆ. ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಸಬ್ಸಿಡಿ ಗ್ಯಾಸ್ ಬೆಲೆಗಳು ಪ್ರಸ್ತುತ ವೆಚ್ಚಕ್ಕಿಂತ ಕಡಿಮೆಯಾಗಿತ

ಕ್ಲೈಮ್ ಐಡಿ 9f3dfa29

ಕಳೆದ ವಾರ, ಭಾರತ ಸರ್ಕಾರವು ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ₹೨೦೦ ರಷ್ಟು ಕಡಿತಗೊಳಿಸಿತು. ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಯೋಜನೆಯ ಫಲಾನುಭವಿಗಳು ಈಗಾಗಲೇ ₹೨೦೦ ಸಬ್ಸಿಡಿಯನ್ನು ಪಡೆಯುತ್ತಿರುವವರಿಗೆ ಈ ಕ್ರಮವು ಪ್ರತಿ ಸಿಲಿಂಡರ್‌ಗೆ ಒಟ್ಟು  ಸುಮಾರು ₹೪೦೦ ಕಡಿತಗೊಳುತ್ತದೆ. 

ಇಲ್ಲಿನ ಹೇಳಿಕೆ ಏನು?
ಸರ್ಕಾರದ ಘೋಷಣೆಯ ನಂತರ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧಿಕೃತ ಖಾತೆ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ೧೪.೨ ಕೆಜಿ ಸಿಲಿಂಡರ್‌ನ ಬೆಲೆ ಈಗ ₹೯೦೩ ಎಂದು ಪೋಷ್ಟ್ ಮಾಡಲಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಜನವರಿ ೨೦೧೪ ರಲ್ಲಿ ಅದರ ಬೆಲೆಗಿಂತ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಶರ್ಮಾ ಮತ್ತು ಬಿಜೆಪಿಯ ಎಕ್ಸ್ (ಹಿಂದೆ ಟ್ವಿಟರ್) ಪೋಷ್ಟ್ ನ ಪ್ರಕಾರ, ಒಂಬತ್ತು ವರ್ಷಗಳ ಹಿಂದೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ನ ಬೆಲೆ ₹೧,೨೪೧ ಆಗಿತ್ತು. 

ಶರ್ಮಾ ಅವರ ಪೋಷ್ಟ್ ೧.೪ ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಈ ಫ್ಯಾಕ್ಟ್ ಚೆಕ್ ಅನ್ನು ಪ್ರಕಟಿಸುವ ಸಮಯದಲ್ಲಿ ೫,೧೦೦ ಕ್ಕೂ ಹೆಚ್ಚು ಮರು ಪೋಷ್ಟ್ ಗಳನ್ನು ಗಳಿಸಿದೆ. 

ಮತ್ತೊಬ್ಬ ಎಕ್ಸ್‌ ಬಳಕೆದಾರರು, ''Mr ಸಿನ್ಹಾ,' ತಪ್ಪು ಮಾಹಿತಿಯನ್ನು ಹರಡಿರುವ ಇತಿಹಾಸಹೊಂದಿರುವ ಖಾತೆಯು ಇದೇ ರೀತಿಯ ನಿರೂಪಣೆಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ, ಬಿಜೆಪಿ ಸರ್ಕಾರದ ಕ್ರಮದ ನಂತರ ದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ ) ಸಿಲಿಂಡರ್‌ನ ಬೆಲೆ ₹೧,೦೫೦ ಆಗಿತ್ತು. “...೯ ವರ್ಷಗಳ ನಂತರವೂ ಬಿಜೆಪಿ ಸರ್ಕಾರವು ಕಾಂಗ್ರೆಸ್‌ಗಿಂತ ಕಡಿಮೆ ದರದಲ್ಲಿ ಸಿಲಿಂಡರ್‌ಗಳನ್ನು ನೀಡುತ್ತಿದೆ!” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಎಕ್ಸ್‌ ನಲ್ಲಿ  ವೈರಲ್‌ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ:ಎಕ್ಸ್‌/@himantabiswa/@BJP4India/@MrSinha_/ಲಾಜಿಕಲಿ ಫ್ಯಾಕ್ಟ್ಸ್ ಇಂದ ಮಾರ್ಪಡಿಸಲಾಗಿದೆ)

ಆದರೆ, ಇಂತಹ ವೈರಲ್ ಪೋಷ್ಟ್ ಗಳ ಹೇಳಿಕೆಯು ಸಂದರ್ಭದಿಂದ ಹೊರಗಿವೆ. 

ಅಧಿಕೃತ ಡೇಟಾ ಏನು ಹೇಳುತ್ತದೆ?
ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಓಸಿಎಲ್) ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ವೈರಲ್ ಪೋಷ್ಟ್ ನಲ್ಲಿ ಉಲ್ಲೇಖಿಸಲಾದ ೨೦೧೪ ರ ವೆಚ್ಚವು ₹೧,೨೪೧- ಸಬ್ಸಿಡಿ ರಹಿತ ಎಲ್‌ಪಿಜಿ  ಗ್ಯಾಸ್ ಸಿಲಿಂಡರ್‌ನ ಬೆಲೆಯಾಗಿತ್ತು- ಜನವರಿ ೧, ೨೦೧೪ ರಂದು ದೆಹಲಿಯಲ್ಲಿ. ಜನವರಿ ೧, ೨೦೧೪ ರಂದು ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾದ ವರದಿಯು ೨೦೧೪ ರ ಜನವರಿಯಲ್ಲಿ ದೆಹಲಿಯಲ್ಲಿ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬೆಲೆ ₹ ೪೧೪ ಆಗಿತ್ತು ಎಂದು ಸೂಚಿಸುತ್ತದೆ. 

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪೆಟ್ರೋಲಿಯಂ ಬೆಲೆ ಮತ್ತು ವಿಶ್ಲೇಷಣಾ ಕೋಶದ (ಪಿಪಿಎಸಿ) ೨೦೧೮ವರದಿಯಲ್ಲಿ ಪ್ರಕಟವಾದ ಸರ್ಕಾರದ ಸ್ವಂತ ಡೇಟಾದಿಂದ ಈ ಅಂಕಿಅಂಶಗಳು ದೃಢೀಕರಿಸಲ್ಪಟ್ಟಿವೆ. ಪಿಪಿಎಸಿ ವರದಿಯ ಪ್ರಕಾರ, ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್‌ನ ಬೆಲೆ ಡಿಸೆಂಬರ್ ೧೧, ೨೦೧೩ ರಂದು ದೆಹಲಿಯಲ್ಲಿ ₹೧,೦೨೧ ಮತ್ತು ಜನವರಿ ೪, ೨೦೧೪ ರಂದು ₹೧,೨೪೧ ಆಗಿದ್ದರೆ, ಗ್ರಾಹಕರು ಸಬ್ಸಿಡಿ ಸಿಲಿಂಡರ್‌ಗಳಿಗೆ ₹೪೧೪ ಪಾವತಿಸಬೇಕಾಗಿತ್ತು.

ಭಾರತೀಯ ಸರ್ಕಾರವು ೨೦೦೨ ರಿಂದ ಐಓಸಿಎಲ್ ನಂತಹ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ನಷ್ಟವನ್ನು ಸರಿದೂಗಿಸುವ ಮೂಲಕ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿಗಳನ್ನು ಒದಗಿಸುತ್ತಿದೆ. ಅಂತರರಾಷ್ಟ್ರೀಯ ಅನಿಲ ಬೆಲೆಗಳನ್ನು ಅವಲಂಬಿಸಿ, ದೇಶದಲ್ಲಿ ಸಬ್ಸಿಡಿ ಮೊತ್ತವು ವರ್ಷಗಳಲ್ಲಿ ಬದಲಾಗುತ್ತಿವೆ. 

ಕಾಂಗ್ರೆಸ್ ಮತ್ತು ಬಿಜೆಪಿ ಅಡಿಯಲ್ಲಿಯ ಎಲ್‌ಪಿಜಿಯ ಸಬ್ಸಿಡಿ
೨೦೦೨  ರಿಂದ ಪ್ರಾರಂಭವಾಗಿ, ಎಲ್‌ಪಿಜಿ ಸಬ್ಸಿಡಿಯನ್ನು ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಸಿಲಿಂಡರ್‌ಗಳಿಗೆ ಒದಗಿಸಲಾಯಿತು ಮತ್ತು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ಜನವರಿ ೨೦೧೩  ರಲ್ಲಿ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯ ಮಿತಿಯನ್ನು ಒಂಬತ್ತಕ್ಕೆ ಏರಿಸಿತ್ತು. ಆದರೆ ಜೂನ್ ೨೦೧೩ ರಿಂದ, ಎಲ್‌ಪಿಜಿ ಸಬ್ಸಿಡಿಗಾಗಿ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯನ್ನು ಪರಿಚಯಿಸಲಾಗಿತ್ತು ಇದರ ಅಡಿಯಲ್ಲಿ ಗ್ರಾಹಕರು ಸಿಲಿಂಡರ್‌ಗಾಗಿ ಒಟ್ಟು ಸಬ್ಸಿಡಿ ರಹಿತ ಮೊತ್ತವನ್ನು ಅಂಗಡಿಯಲ್ಲಿ ಪಾವತಿಸುತ್ತಾರೆ ಮತ್ತು ಸಬ್ಸಿಡಿ ಮೊತ್ತವನ್ನು ನಂತರ ಅವರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಜಮಾ ಮಾಡಲಾಗುತ್ತದೆ. 

ಪರಿಣಾಮಕಾರಿಯಾಗಿ, ಪಿಪಿಸಿಎ ವರದಿಯ ಪ್ರಕಾರ, ಕಾಂಗ್ರೆಸ್ ಆಡಳಿತದಲ್ಲಿ ಪ್ರತಿ ಮನೆಯ ಒಂಬತ್ತು ಸಬ್ಸಿಡಿ ಸಿಲಿಂಡರ್‌ಗಳ ಬೆಲೆಯು ಜೂನ್ ೨೦೧೩  ರಿಂದ ಕನಿಷ್ಠ ಜನವರಿ ೨೦೧೪  ರವರೆಗೂ ದೆಹಲಿಯಲ್ಲಿ ₹೪೧೦ ರಿಂದ ₹೪೧೪  ರ ನಡುವೆ ಇತ್ತು.

ಮೇ ೨೦೧೪ ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಸುಮಾರು ಎರಡು ವರ್ಷಗಳ ನಂತರ, ಇದು ಪಿಎಂಯುವೈ ಯೋಜನೆಯನ್ನು ಪರಿಚಯಿಸಿತು, ಅದರ ಅಡಿಯಲ್ಲಿ ಆದಾಯ, ಸ್ಥಳ, ಇತ್ಯಾದಿ ವಿವಿಧ ನಿಯತಾಂಕಗಳಿಂದ ನಿರ್ಧರಿಸಲ್ಪಟ್ಟ ಉದ್ದೇಶಿತ ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಯಿತು. ಪಿಎಂಯುವೈ ಫಲಾನುಭವಿಗಳು ಯಾವ ಸಿಲಿಂಡರ್‌ಗಳನ್ನು ಪಡೆಯಬಹುದೆಂದು ಡಿಬಿಟಿ ಮೂಲಕ ಸಬ್ಸಿಡಿಯನ್ನು ಒಂಬತ್ತರಿಂದ ೧೨ಕ್ಕೆ ಹೆಚ್ಚಿಸಲಾಗಿದೆ.

ಆದರೆ, ಸರ್ಕಾರವು ಜೂನ್ ೨೦೨೦ ರಲ್ಲಿ ಎಲ್‌ಪಿಜಿ ಸಬ್ಸಿಡಿಗಳನ್ನು ನೀಡುವುದನ್ನು ನಿಲ್ಲಿಸಿತು, ಎಲ್ಲಾ ಕುಟುಂಬಗಳು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಲು ಒತ್ತಾಯಿಸಿತು. ರಷ್ಯಾ-ಉಕ್ರೇನ್ ಯುದ್ಧದ ನಂತರ ಇಂಧನ ಬೆಲೆಗಳು ಏರಿದಾಗ ಮೇ ೨೦೨೨ ರಲ್ಲಿ ಪಿಎಂಯುವೈ ಫಲಾನುಭವಿಗಳಿಗೆ ಮಾತ್ರ ₹೨೦೦ ಸಬ್ಸಿಡಿಯನ್ನು ನೀಡಲಾಯಿತು. ಈ ಬೆಳವಣಿಗೆಗಳನ್ನು ರಾಷ್ಟ್ರೀಯ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿದ್ದವು.

ಎಲ್‌ಪಿಜಿ ಬೆಲೆಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವೆಂದರೆ ಫ್ರೀ-ಆನ್-ಬೋರ್ಡ್ (ಎಫ್ಓಬಿ) ಅರಬ್ ಗಲ್ಫ್ ಬೆಲೆ, ಇದು ಮೂಲದಲ್ಲಿರುವ ಅನಿಲದ ಬೆಲೆಯಾಗಿದೆ (ಭಾರತದ ಎಲ್‌ಪಿಜಿ ಮೀಸಲು ಗಮನಾರ್ಹವಾಗಿ ಆಮದು-ಚಾಲಿತವಾಗಿದೆ). ಇದಕ್ಕೆ, ಸರಕು ಸಾಗಣೆ, ಸಂಗ್ರಹಣೆ, ವಿತರಣೆ, ಬಾಟ್ಲಿಂಗ್, ಒಳನಾಡಿನ ವಿತರಣಾ ಶುಲ್ಕ, ಡೀಲರ್ ಕಮಿಷನ್ ಮತ್ತು ಜಿಎಸ್‌ಟಿಗೆ ಸಂಬಂಧಿಸಿದ ವೆಚ್ಚಗಳನ್ನು ಮಾರುಕಟ್ಟೆ ಬೆಲೆಗೆ ಬರಲು ಸೇರಿಸಲಾಗುತ್ತದೆ. ಸರ್ಕಾರದ ಸಬ್ಸಿಡಿಗಳಲ್ಲಿ ಈ ಮಾರುಕಟ್ಟೆ ಬೆಲೆಯನ್ನು ಕಡಿತಗೊಳಿಸಲಾಗುತ್ತದೆ. ಮಾರುಕಟ್ಟೆ ಬೆಲೆ ಮತ್ತು ಅಂತಿಮ ಗ್ರಾಹಕರು ಪಾವತಿಸುವ ಪರಿಣಾಮಕಾರಿ ವೆಚ್ಚದ ನಡುವಿನ ಈ ವ್ಯತ್ಯಾಸವನ್ನು ಸರ್ಕಾರ ಮತ್ತು ತೈಲ ಕಂಪನಿಗಳು ಅನುಸರಿಸುತ್ತವೆ. ಒಳನಾಡಿನ ಸರಕು ಸಾಗಣೆ ಶುಲ್ಕಗಳು, ವಿತರಣಾ ಶುಲ್ಕಗಳು ಮತ್ತು ವಿತರಕರ ಆಯೋಗದಂತಹ ಅಂಶಗಳನ್ನು ಅವಲಂಬಿಸಿ ಗ್ರಾಹಕರಿಗೆ ಪರಿಣಾಮಕಾರಿ ವೆಚ್ಚವು ವಿವಿಧ ರಾಜ್ಯಗಳಲ್ಲಿ ಬದಲಾಗುತ್ತದೆ.

ವರ್ಷಗಳಲ್ಲಿ ಎಫ್ಓಬಿ ಬೆಲೆಗಳಲ್ಲಿ ಬದಲಾವಣೆಗಳು
ಮೊದಲೇ ಹೇಳಿದಂತೆ, ಎಲ್‌ಪಿಜಿ ಸಿಲಿಂಡರ್‌ಗಳ ಮಾರುಕಟ್ಟೆ ಬೆಲೆಯನ್ನು ನಿರ್ಧರಿಸುವ ಪ್ರಮುಖ ಅಂಶವೆಂದರೆ (ಎಫ್ಓಬಿ) FOB. ಕೆಳಗಿನ ಟೇಬಲ್ ೨೦೧೨-೨೦೧೩ ರಿಂದ ೨೦೨೨-೨೦೨೩  (ಜುಲೈ) ವರೆಗಿನ ಎಫ್ಓಬಿ ಬೆಲೆಗಳನ್ನು ಪಟ್ಟಿ ಮಾಡುತ್ತದೆ.

ಪೆಟ್ರೋಲಿಯಂ ಬೆಲೆ ಮತ್ತು ವಿಶ್ಲೇಷಣೆ ಸೆಲ್ ಪ್ರಕಟಿಸಿದ ಆವರ್ತಕ ರೆಡಿ ರೆಕನರ್ ವರದಿಗಳಿಂದ ಪಡೆದ ಡೇಟಾ.

ಈ ಟೇಬಲ್ ದಿಂದ ಸ್ಪಷ್ಟವಾಗುವಂತೆ, ಎಲ್‌ಪಿಜಿ ಗಾಗಿ ಎಫ್ಓಬಿ ಬೆಲೆಗಳು ೨೦೧೨ ಮತ್ತು ೨೦೧೪ ರ ನಡುವೆ-ಕಾಂಗ್ರೆಸ್ ಸರ್ಕಾರದ ಕೊನೆಯ ಎರಡು ವರ್ಷಗಳ ನಡುವೆ ಬಹಳ ಹೆಚ್ಚಾಗಿತ್ತು. ಅಂದಿನಿಂದ, ಅವುಗಳು ತುಲನಾತ್ಮಕವಾಗಿ ತುಂಬಾ ಕಡಿಮೆ  ಉಳಿದಿವೆ. ಜುಲೈ ೨೦೨೩ ರ ಎಫ್ಓಬಿ ೨೦೧೩-೧೪ ರಲ್ಲಿ ಎಫ್ಓಬಿ ಯ ಕೇವಲ ೪೩.೭ ಪ್ರತಿಶತವಾಗಿದೆ. ೨೦೧೪ರ ಜನವರಿಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ₹೧,೨೪೧ಕ್ಕೆ ತಲುಪಿದ್ದು, ಜುಲೈ-ಆಗಸ್ಟ್ ೨೦೨೩ರಲ್ಲಿ (ಸರ್ಕಾರದ ಇತ್ತೀಚಿನ ಪ್ರಕಟಣೆಯ ಮೊದಲು) ₹೧,೧೦೩ ರಷ್ಟಿದ್ದ ಸಬ್ಸಿಡಿ ರಹಿತ ಸಿಲಿಂಡರ್‌ನ ಬೆಲೆ ಹೀಗೆ ಹೆಚ್ಚಾಗಿದೆ.

ತೀರ್ಪು
ವೈರಲ್ ಪೋಷ್ಟ್ ನಲ್ಲಿ ಉಲ್ಲೇಖಿಸಲಾದ ವೆಚ್ಚವು ಜನವರಿ ೨೦೧೪ ರಲ್ಲಿ ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿ ರಹಿತ ಬೆಲೆಯಾಗಿದೆ. ಸಬ್ಸಿಡಿ ಸಿಲಿಂಡರ್‌ಗಳಿಗೆ ಪಾವತಿಸಿದ ಪರಿಣಾಮಕಾರಿ ಬೆಲೆ (ಒಂಬತ್ತು ಯೂನಿಟ್‌ಗಳಿಗೆ ಸೀಮಿತವಾಗಿದೆ) ಪ್ರತಿ ಸಿಲಿಂಡರ್‌ಗೆ ಕೇವಲ ₹೪೧೪ ರಂತೆ ಕಡಿಮೆಯಾಗಿದೆ. ಪ್ರಸ್ತುತ ಗ್ಯಾಸ್ ಬೆಲೆಯು ಕೆಲವು ಫಲಾನುಭವಿಗಳಿಗೆ ₹೭೦೩ ಮತ್ತು ಉಳಿದವರಿಗೆ ₹೯೦೩ ಆಗಿದೆ, ಇದು ೨೦೧೪ ರಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ  ದರಗಳಿಗಿಂತ ಕಡಿಮೆಯಾಗಿದೆ.  ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

ಅನುವಾದಿಸಿದವರು: ಅಂಕಿತಾ ಕುಲಕರ್ಣಿ 

 

ಈ ವಾಸ್ತವಾಂಶವನ್ನು ಪರಿಶೀಲಿಸಿ

অসমীয়া , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.