ಇಲ್ಲ, ರಾಹುಲ್ ಗಾಂಧಿ ಭಾರತದಲ್ಲಿ ಆರ್ಥಿಕವಾಗಿ ದುರ್ಬಲ ಮಹಿಳೆಯರಿಗೆ ಮಾಸಿಕ ೧ ಲಕ್ಷ ರೂ ನೀಡುವುದಾಗಿ ಭರವಸೆ ನೀಡಿಲ್ಲ

ಮೂಲಕ: ರಾಹುಲ್ ಅಧಿಕಾರಿ
ಮೇ 17 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ರಾಹುಲ್ ಗಾಂಧಿ ಭಾರತದಲ್ಲಿ ಆರ್ಥಿಕವಾಗಿ ದುರ್ಬಲ ಮಹಿಳೆಯರಿಗೆ ಮಾಸಿಕ ೧ ಲಕ್ಷ ರೂ ನೀಡುವುದಾಗಿ ಭರವಸೆ ನೀಡಿಲ್ಲ

ಭಾರತದ ಬಡವರಿಗೆ ತಿಂಗಳಿಗೆ ೧ ಲಕ್ಷ ರೂಪಾಯಿ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಷ್ಟ್‌ಗಳು ಹೇಳುತ್ತವೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಭಾರತದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರು ಮಾಸಿಕ ೮,೫೦೦ ರೂ ಗಳನ್ನು ಹೇಗೆ ಪಡೆಯುತ್ತಾರೆ ಎಂಬುದನ್ನು ಕಾಂಗ್ರೆಸ್ ನಾಯಕ ವಿವರಿಸುವುದನ್ನು ದೀರ್ಘ ವೀಡಿಯೋ ತೋರಿಸುತ್ತದೆ.

ಕ್ಲೈಮ್ ಐಡಿ e37b6566

ಹೇಳಿಕೆ ಏನು?

ಭಾರತದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ಜಮಾ ಮಾಡುವುದಾಗಿ ಭರವಸೆ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರ‍್ಯಾಲಿ ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ೧೯ ಸೆಕೆಂಡ್‌ಗಳ ವೈರಲ್ ವೀಡಿಯೋದಲ್ಲಿ, "ಭಾರತದ ಬಡ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿಗಳನ್ನು ವರ್ಗಾಯಿಸಲಾಗುತ್ತದೆ" ಎಂದು ಗಾಂಧಿ ಹೇಳುತ್ತಾರೆ.

ಹಲವಾರು ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, “ಭಾರತದ ಮಧ್ಯಮ ವರ್ಗದ ಕುಟುಂಬಗಳಲ್ಲಿ ಹೆಚ್ಚಿನವರು ವಾರ್ಷಿಕ ₹೧೨ ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಗಳಿಸುತ್ತಾರೆ. ಅವರು ತಮಗೆ ಮತ ನೀಡಬೇಕೆಂದು ರಾಹುಲ್ ಗಾಂಧಿ ಬಯಸುತ್ತಾರೆ, ಹೀಗಾಗಿ ಅವರಿಗೆ ಭಾರಿ ತೆರಿಗೆ ವಿಧಿಸಿದ ನಂತರ ಅವರು ನಿರುದ್ಯೋಗಿಗಳಿಗೆ ವಾರ್ಷಿಕ ₹ ೧೨ ಲಕ್ಷ ಪಾವತಿಸಬಹುದು. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಹೇಳಿಕೆ ಸಂದರ್ಭದಿಂದ ಹೊರಗಿಡಲಾಗಿದೆ. ವೀಡಿಯೋದ ದೀರ್ಘ ಆವೃತ್ತಿಯಲ್ಲಿ ಗಾಂಧಿಯವರು ಅಂಕಗಣಿತವನ್ನು ವಿವರಿಸುತ್ತಾರೆ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವರ್ಷಕ್ಕೆ ಒಟ್ಟು ಒಂದು ಲಕ್ಷ ರೂ ಜಮಾಮಾಡುವಿದಾಗಿ ಹೇಳುತ್ತಾರೆ.

ನಾವು ಸತ್ಯವನ್ನು ಹೇಗೆ ಕಂಡುಕೊಂಡೆವು?

ಮೇ ೧೫ ರಂದು ಪೂರ್ವ ಭಾರತದ ರಾಜ್ಯವಾದ ಒಡಿಶಾದ ಬೋಲಂಗಿರ್‌ನಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಿಂದ ವೈರಲ್ ಕ್ಲಿಪ್ ಅನ್ನು ತೆಗೆದುಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಗಾಂಧಿಯವರ ಭಾಷಣವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಯೂಟ್ಯೂಬ್ ಚಾನೆಲ್‌ನಲ್ಲಿ (ಇಲ್ಲಿ ಆರ್ಕೈವ್) ಲೈವ್‌ಸ್ಟ್ರೀಮ್ ಮಾಡಲಾಗಿದೆ.

ಈ ವೀಡಿಯೋದಲ್ಲಿ, ಚುನಾವಣಾ ಫಲಿತಾಂಶ ಪ್ರಕಟವಾದ ಜೂನ್ ೪ ರಂದು ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ, ಭಾರತದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ತಿಂಗಳಿಗೆ ೮,೫೦೦  ರೂಪಾಯಿಗಳನ್ನು ಪಡೆಯುತ್ತಾರೆ, ಒಟ್ಟು ಒಂದು ವರ್ಷದಲ್ಲಿ ಒಂದು ಲಕ್ಷ ರೂ.

೨೯:೧೫ ನಿಮಿಷಗಳ ೩೯ ನಿಮಿಷದ ವೀಡಿಯೋದಲ್ಲಿ, ರ‍್ಯಾಲಿಯಲ್ಲಿ ಹಾಜರಿದ್ದ ಮಹಿಳೆ ಸುಶ್ಮಿತಾ ಸಾಹು ಅವರ ಉದಾಹರಣೆಯನ್ನು ತೆಗೆದುಕೊಳ್ಳುತ್ತಾ, ಗಾಂಧಿ ಹೇಳಿದರು, “ಜುಲೈ ೪ ರಂದು, ಒಡಿಶಾದಲ್ಲಿ ಸುಶ್ಮಿತಾ ಸಾಹು ಅವರಂತಹ ಕೋಟಿ ಮಹಿಳೆಯರು, ಯುಪಿ, ತಮಿಳುನಾಡು ಮತ್ತು ಭಾರತದ ಪ್ರತಿಯೊಂದು ರಾಜ್ಯದಲ್ಲೂ ಎಚ್ಚೆತ್ತುಕೊಂಡು ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಾರೆ (2). ಜುಲೈ ೪ ರಂದು ಅವರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಒಂದು ತಿಂಗಳ ಕಂತು ೮,೫೦೦ ರೂಪಾಯಿಗಳನ್ನು ಜಮವಾಗಿರುವುದನ್ನು ಕಾಣುತ್ತಾರೆ.

ಅಂಕಗಣಿತವನ್ನು ವಿವರಿಸಿದ ಅವರು, ಪ್ರತಿ ತಿಂಗಳು ಅದೇ ಹಣವನ್ನು ವರ್ಗಾಯಿಸಲಾಗುವುದು ಮತ್ತು ಒಂದು ವರ್ಷದಲ್ಲಿ ಸಾಹು ಅವರಂತಹ ಮಹಿಳೆಯರಿಗೆ ಒಂದು ಲಕ್ಷ ನೀಡಲಾಗುವುದು ಎಂದು ಹೇಳಿದರು. "ಭಾರತದ ಬಡ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿಗಳನ್ನು ವರ್ಗಾಯಿಸಲಾಗುವುದು" ಎಂದು ಗಾಂಧಿ ಹೇಳಿದರು, ಈ ವರ್ಗಾವಣೆಗಳನ್ನು ಮಾಡುವ ಸ್ವರೂಪವನ್ನು ಅನುಕರಿಸಲು ಧ್ವನಿಗಳನ್ನು ಮಾಡಿದರು. "ಇದನ್ನು ಪ್ರಗತಿ ಎಂದು ಕರೆಯಲಾಗುತ್ತದೆ" ಎಂದು ಅವರು ಹೇಳಿದರು.

೩೦:೩೮-ನಿಮಿಷದಿಂದ ೩೦:೫೦-ನಿಮಿಷದ ಅವಧಿಯ ನಡುವಿನ ಭಾಗವನ್ನು, "ಭಾರತದ ಬಡ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿಗಳನ್ನು ವರ್ಗಾಯಿಸಲಾಗುವುದು" ಎಂದು ಗಾಂಧಿ ಹೇಳಿದ್ದನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

೨೦೨೪ ರ ಲೋಕಸಭಾ ಚುನಾವಣೆಯ ತಮ್ಮ ಪ್ರಣಾಳಿಕೆಯ ಭಾಗವಾಗಿಯೂ ಸಹ, ಕಾಂಗ್ರೆಸ್ ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ವರ್ಷ "ಪ್ರತಿ ಬಡ ಭಾರತೀಯ ಕುಟುಂಬ" ಕ್ಕೆ ಒಂದು ಲಕ್ಷ ರೂಪಾಯಿಗಳನ್ನು ಕುಟುಂಬದ ಹಿರಿಯ ಮಹಿಳೆಯ ಬ್ಯಾಂಕ್ ಖಾತೆಗೆ ವರ್ಗಾಯಿಸುವುದಾಗಿ ಭರವಸೆ ನೀಡಿದೆ. ಬೋಲಂಗಿರ್‌ನಲ್ಲಿ ಮಾಡಿದ ಭಾಷಣದಲ್ಲಿ, ಗಾಂಧಿಯವರು ತಮ್ಮ ಭರವಸೆಯನ್ನು ಪುನರುಚ್ಚರಿಸಿದರು, ಪ್ರತಿ ತಿಂಗಳು ಬಡ ಮಹಿಳೆಯರ ಖಾತೆಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ವರ್ಗಾಯಿಸುವ ಹೊಸ ಭರವಸೆಯನ್ನು ಮಾಡಲಿಲ್ಲ.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಸ್ಕ್ರೀನ್‌ಶಾಟ್. (ಮೂಲ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್/ಸ್ಕ್ರೀನ್‌ಶಾಟ್)

ತೀರ್ಪು

ರಾಹುಲ್ ಗಾಂಧಿ ಭಾಷಣದ ವೀಡಿಯೋವನ್ನು ಪ್ರಸಾರ ಮಾಡಲಾಗಿದ್ದು, ಭಾರತದ ಪ್ರತಿಯೊಬ್ಬ ಬಡ ಮಹಿಳೆಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದಾರೆ ಎಂದು ತೋರಿಸುತ್ತದೆ. ಆದರೆ ವೀಡಿಯೋದ ದೀರ್ಘ ಆವೃತ್ತಿಯು ೧೨ ತಿಂಗಳ ಅವಧಿಯಲ್ಲಿ ೧ ಲಕ್ಷ ವರ್ಗಾವಣೆಯನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ವಿವರಿಸುತ್ತದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.